»   » ಅಪ್ಪನ 'ಕಾರ್ ಚೇಸಿಂಗ್ ಸೀನ್' ನೋಡಲು ಬ್ಯಾಂಕಾಕ್ ಗೆ ಹಾರಿದ ಶಿವಣ್ಣನ ಮಗಳು!

ಅಪ್ಪನ 'ಕಾರ್ ಚೇಸಿಂಗ್ ಸೀನ್' ನೋಡಲು ಬ್ಯಾಂಕಾಕ್ ಗೆ ಹಾರಿದ ಶಿವಣ್ಣನ ಮಗಳು!

Posted By:
Subscribe to Filmibeat Kannada

ಶಿವರಾಜ್ ಕುಮಾರ್ ನಿರ್ದೇಶಕರ ನಟ. ಸಿನಿಮಾದ ಪಾತ್ರಕ್ಕಾಗಿ ಒಂದು ದೃಶ್ಯಕ್ಕಾಗಿ ಡೈರೆಕ್ಟರ್ ಏನೇ ಹೇಳಿದರೂ ಶಿವಣ್ಣ ಮಾಡುತ್ತಾರೆ. ಈಗ ಮತ್ತೊಮ್ಮೆ ಶಿವಣ್ಣ ಅಂತಹ ಒಂದು ಮೈನವಿರೇಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.

'ದಿ ವಿಲನ್' ಸಿನಿಮಾದ 'ಚೇಸಿಂಗ್ ಸೀನ್' ಶೂಟಿಂಗ್ ಬ್ಯಾಂಕಾಕ್ ನಲ್ಲಿ ನಡೆಯುತ್ತಿದೆ. ವಿಶೇಷ ಅಂದರೆ ಈ 'ಚೇಸಿಂಗ್ ಸೀನ್' ಕಣ್ಣಾರೆ ನೋಡುವುದಕ್ಕೆ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಮತ್ತು ಮಗಳು ನಿವೇದಿತಾ ಕೂಡ ಬ್ಯಾಂಕಾಕ್ ಗೆ ತೆರಳಿದ್ದಾರೆ. ಚಿತ್ರದ ರೋಮಾಂಚನಕಾರಿ ದೃಶ್ಯ ಇದಾಗಿದ್ದು, ಪ್ರೇಮ್ ಸಖತ್ ಪ್ಲಾನ್ ಮಾಡಿ ಈ ದೃಶ್ಯವನ್ನು ಶೂಟಿಂಗ್ ಮಾಡುತ್ತಿದ್ದಾರೆ. ಮುಂದೆ ಓದಿ...

'ಚೇಸಿಂಗ್ ಸೀನ್'

'ದಿ ವಿಲನ್' ಚಿತ್ರದ ಹೈಲೈಟ್ ಗಳಲ್ಲಿ ಒಂದಾದ ಕಾರ್ 'ಚೇಸಿಂಗ್ ಸೀನ್' ಶೂಟಿಂಗ್ ಸದ್ಯ ಬ್ಯಾಂಕಾಕ್ ನಲ್ಲಿ ನಡೆಯುತ್ತಿದ್ದು, ಶಿವಣ್ಣ ಜೊತೆಗೆ ಅವರ ಕುಟುಂಬ ಕೂಡ ಅಲ್ಲಿಗೆ ಹೋಗಿದೆ.

3.5 ಕೋಟಿ

ಎರಡು ದಿನ ನಡೆಯುವ ಚಿತ್ರದ ಈ ದೃಶ್ಯಕ್ಕೆ ಬರೋಬ್ಬರಿ 3.5 ಕೋಟಿ ಖರ್ಚಾಗಲಿದೆಯಂತೆ.

ಈ 7 ವಿಶೇಷತೆಗಳು 'ದಿ ವಿಲನ್' ಚಿತ್ರದಲ್ಲಿ ರಾಮ-ರಾವಣನ ಪವರ್ ಹೆಚ್ಚಿಸಿದೆ!

ಶಿವಣ್ಣ - ಸುದೀಪ್

ಈ 'ಚೇಸಿಂಗ್ ಸೀನ್' ಚಿತ್ರೀಕರಣದಲ್ಲಿ ಶಿವಣ್ಣನೊಂದಿಗೆ ಸುದೀಪ್ ಸಹ ಭಾಗಿಯಾಗಲಿದ್ದಾರೆ. ಜೊತೆಗೆ ನಟ ತಿಲಕ್ ಕೂಡ ಈ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ದಿ ವಿಲನ್' : ರಾಮನೊಳಗೊಬ್ಬ ರಾವಣ... ರಾವಣನೊಳಗೊಬ್ಬ ರಾಮ..!

ಮಾಸ್ ಮಾದ

ಈ ದೃಶ್ಯವನ್ನು ಸಾಹಸ ನಿರ್ದೇಶಕ ಮಾಸ್ ಮಾದ ಸಂಯೋಜನೆ ಮಾಡಿದ್ದು, ದುಬಾರಿ ಕಾರುಗಳನ್ನು ಬಳಸಿಕೊಳ್ಳಲಾಗಿದೆಯಂತೆ. ಜೊತೆಗೆ ವಿದೇಶಿ ಸಾಹಸ ಕಲಾವಿದರು ಸಹ ಈ ದೃಶ್ಯದಲ್ಲಿ ಭಾಗಿಯಾಗಲಿದ್ದಾರೆ.

ಚಿತ್ರಗಳು : ಚಿಕ್ಕಮಗಳೂರಿನಲ್ಲಿ ಹಾಟ್ ಮಲ್ಲಿಗೆ ಆಮಿ ಜಾಕ್ಸನ್

ಈ ವರ್ಷದ ಕೊನೆಗೆ ರಿಲೀಸ್ ಸಾಧ್ಯತೆ

ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಹೈಪ್ ಸೃಷ್ಟಿ ಮಾಡಿರುವ 'ದಿ ವಿಲನ್' ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

English summary
Shivarajkumar's 'The Villain' movie car chasing scene shooting to happen in Bangkok.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada