»   » 'ಲಂಡನ್'ನಿಂದ ವಾಪಸ್ ಆಗ್ತಿರುವ 'ದಿ ವಿಲನ್'

'ಲಂಡನ್'ನಿಂದ ವಾಪಸ್ ಆಗ್ತಿರುವ 'ದಿ ವಿಲನ್'

Posted By:
Subscribe to Filmibeat Kannada

ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ 'ದಿ ವಿಲನ್' ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ನಡೆಯುತ್ತಿತ್ತು. ಸತತ ಒಂದು ವಾರದಿಂದ ಲಂಡನ್ ನಲ್ಲಿ ಬೀಡು ಬಿಟ್ಟಿದ್ದ ವಿಲನ್ ಬಳಗ ಈಗ ಲಂಡನ್ ನಿಂದ ಭಾರತಕ್ಕೆ ವಾಪಸ್ ಆಗಲಿದೆ.

ಹೌದು, ಲಂಡನ್ ನಲ್ಲಿ ನಡೆಯಬೇಕಿದ್ದ ಚಿತ್ರೀಕರಣವನ್ನ ಯಶಸ್ವಿಯಾಗಿ ಮುಗಿಸಿದ್ದು, ಈಗ ಜಾಲಿಮೂಡ್ ನಲ್ಲಿದೆ ಚಿತ್ರತಂಡ. ಈ ವಿಷ್ಯವನ್ನ ಖುದ್ದು ಸುದೀಪ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ.

ಚಿತ್ರಗಳು: ಲಂಡನ್ ನಲ್ಲಿ 'ದಿ ವಿಲನ್' ಕಾರುಬಾರು

The Villain Movie London Shooting Complete

ಇನ್ನು ಇದೇ ಭಾನುವಾರ ಇಂಗ್ಲೆಂಡ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನ ನೋಡಿಕೊಂಡು ಅಲ್ಲಿಂದ ಭಾರತಕ್ಕೆ ಮರಳುವುದಾಗಿ ಸುದೀಪ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಲಂಡನ್ ನಲ್ಲಿ 'ಡವ್‌'ಗಳಿಗೆ ಕಾಳು ಹಾಕಿದ ಸುದೀಪ್, ಶಿವಣ್ಣ

The Villain Movie London Shooting Complete

ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್, ಸುದೀಪ್ ಮತ್ತು ಆಮಿ ಜಾಕ್ಸನ್ ಅಭಿನಯಿಸುತ್ತಿದ್ದಾರೆ. ಈ ಮೂವರು ಲಂಡನ್ ನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇವರ ಜೊತೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್, ಮಗಳು ಅನುಪಮಾ ಕೂಡ ಲಂಡನ್ ಗೆ ತೆರಳಿದ್ದರು.

English summary
Kannada Actor Sudeep and Shiva rajKumar Starrer The villain Movie Completed London Sechdule. The Movie Directed by Jogi Prem.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada