For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಚಿತ್ರದ ಎರಡನೇ ಹಾಡಿಗೆ ಶುರುವಾಯ್ತು ಕಾತುರ

  By Pavithra
  |
  TheVillain : ದಿ ವಿಲನ್ ಎರಡನೇ ಹಾಡಿನ ಸಾಲುಗಳು ಬೊಂಬಾಟ್...!! | Filmibeat Kannada

  'ದಿ ವಿಲನ್' ಸದಾ ಸುದ್ದಿಯಲ್ಲಿರುವ ಸಿನಿಮಾ. ಚಿತ್ರ ನೋಡುವ ಕಾತುರ ಕೆಲ ಅಭಿಮಾನಿಗಳಿಗೆ ಇನ್ನು ಕೆಲವರಿಗೆ ಮತ್ತೆ ಯಾವ ರೀತಿ ವಿವಾದ ಆಗುತ್ತೆ ಎನ್ನುವ ಚಿಂತೆ. ಒಟ್ಟಾರೆ ಒಂದಿಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಿರುವ ಚಿತ್ರ 'ದಿ ವಿಲನ್'

  ಕಳೆದ ವಾರ 'ದಿ ವಿಲನ್' ಸಿನಿಮಾ ಹಾಡನ್ನು ಬಿಡುಗಡೆ ಮಾಡಿದ ಚಿತ್ರದ ನಿರ್ದೇಶಕ ಪ್ರೇಮ್ ಎರಡನೇ ಹಾಡನ್ನು ರಿಲೀಸ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. 'ಬಿಡು ಬಿಡು ನಾನು ಅನ್ನೋದನ್ನ ಬಿಡು'.. ಎಂದು ಆರಂಭವಾಗುವ ಹಾಡು ಇದಾಗಿದ್ದು ಅಭಿಮಾನಿಗಳಿಗೆ ಈಗಾಗಲೇ ಹೇಗಿರಲಿದೆ ಹೊಸ ಸಾಂಗ್ ಎನ್ನುವ ಕಾತುರ ಆರಂಭವಾಗಿದೆ.

  ಧೂಳೆಬ್ಬಿಸುತ್ತಿದೆ 'ದಿ ವಿಲನ್' ಚಿತ್ರದ ಮೊದಲ ಹಾಡು ಧೂಳೆಬ್ಬಿಸುತ್ತಿದೆ 'ದಿ ವಿಲನ್' ಚಿತ್ರದ ಮೊದಲ ಹಾಡು

  ಕಳೆದ ಬಾರಿ ರಿಲೀಸ್ ಆಗಿದ್ದ 'I AM Villian....'' ಎಂದು ಶುರುವಾಗುವ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಸದ್ಯ ಬಿಡುಗಡೆ ಆಗಲು ಸಿದ್ದವಾಗಿರುವ 'ಬಿಡು ಬಿಡು ನಾನು ಅನ್ನೋದನ್ನ ಬಿಡು'.. ಹಾಡನ್ನು ಜೋಗಿ ಪ್ರೇಮ್ ಅವರೇ ಬರೆದಿದ್ದಾರೆ.

  ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಮಾರುಕಟ್ಟೆಯಲ್ಲಿ ಸೌಂಡ್ ಮಾಡುತ್ತಿವೆ. ಆಗಸ್ಟ್ ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿರುವ ಪ್ರೇಮ್ ಒಂದೊಂದೆ ಹಾಡನ್ನು ರಿಲೀಸ್ ಮಾಡುತ್ತಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ದಿ ವಿಲನ್' ಸಿನಿಮಾದಲ್ಲಿ ಆಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

  English summary
  The second song of Kannada movie 'The villain' will be released on July 21. Arjunjanya has composed the music for 'The Villain'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X