twitter
    For Quick Alerts
    ALLOW NOTIFICATIONS  
    For Daily Alerts

    'ರಾಬರ್ಟ್' ಚಿತ್ರತಂಡಕ್ಕೆ ಕೈಮುಗಿದ ಚಿತ್ರಮಂದಿರ ಮಾಲೀಕ

    |

    ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಲಾಕ್‌ಡೌನ್‌ನಿಂದಾಗಿ ಡಬ್ಬಾದಲ್ಲಿಯೇ ಸಿಕ್ಕಿಹಾಕಿಕೊಂಡಿದೆ. ಲಾಕ್‌ಡೌನ್ ಇಲ್ಲದೇ ಹೋಗಿದ್ದಿದ್ದರೆ ಈ ಹೊತ್ತಿಗಾಗಲೇ ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳಾಗಿರುತ್ತಿತ್ತು.

    Recommended Video

    Ramesh Aravind ಕೊರೊನಾಗೆ ಹೊಂದಿಕೊಳ್ಳಲೇ ಬೇಕು ಎಂದು ಅದ್ಬುತವಾಗಿ ವಿವರಿಸಿದರು | Get Adjusted with Corona

    ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆ ಆಗದೇ ಇದ್ದರೂ ಸಹ ಅದರ ಬಗ್ಗೆ ಮಾತು-ಕತೆ ಮಾತ್ರ ಕಡಿಮೆ ಆಗಿಲ್ಲ. ರಾಬರ್ಟ್ ಟಿವಿ ಹಕ್ಕು ಮಾರಾಟ, ರಾಬರ್ಟ್ ಸಿನಿಮಾಕ್ಕೆ ಒಟಿಟಿ ನೀಡಿದ್ದ ಭಾರಿ ದೊಡ್ಡ ಆಫರ್ ಹಲವು ಕಾರಣಕ್ಕೆ ರಾಬರ್ಟ್ ಸುದ್ದಿಯಲ್ಲಿದೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಬಸವನ ಚಿಕಿತ್ಸೆಗೆ ನಟ ದರ್ಶನ್ ನೆರವುಅನಾರೋಗ್ಯದಿಂದ ಬಳಲುತ್ತಿದ್ದ ಬಸವನ ಚಿಕಿತ್ಸೆಗೆ ನಟ ದರ್ಶನ್ ನೆರವು

    ಹೊಸ ವಿಷಯವೆಂದರೆ ಕೆಲವು ಚಿತ್ರಮಂದಿರಗಳ ಮಾಲೀಕರುಗಳು ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದ ಚಿತ್ರತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕಾರಣವೇನು? ಮುಂದೆ ಓದಿ...

    ಚಿತ್ರಮಂದಿರ ಮಾಲೀಕರ ಮನಗೆದ್ದ ರಾಬರ್ಟ್ ಚಿತ್ರತಂಡ

    ಚಿತ್ರಮಂದಿರ ಮಾಲೀಕರ ಮನಗೆದ್ದ ರಾಬರ್ಟ್ ಚಿತ್ರತಂಡ

    ರಾಬರ್ಟ್ ಸಿನಿಮಾಕ್ಕಾಗಿ ಅಮೆಜಾನ್ ಪ್ರೈಂ ಬರೋಬ್ಬರಿ 70 ಕೋಟಿ ಆಫರ್ ನೀಡಿತ್ತು. ಆದರೆ ಅದನ್ನು ನಿರ್ಮಾಪಕರು ಸ್ವೀಕರಿಸಿಲ್ಲ. ಬದಲಿಗೆ ತಾವು ಚಿತ್ರಮಂದಿರದಲ್ಲಿಯೇ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇದು ಚಿತ್ರಮಂದಿರಗಳ ಮಾಲೀಕರ ಮನ ಗೆದ್ದಿದೆ.

    70 ಕೋಟಿ ಆಫರ್ ಬೇಡವೆಂದ ರಾಬರ್ಟ್ ಚಿತ್ರತಂಡ

    70 ಕೋಟಿ ಆಫರ್ ಬೇಡವೆಂದ ರಾಬರ್ಟ್ ಚಿತ್ರತಂಡ

    ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಮ್ಯಾನೇಜರ್ ನರಸಿಂಹ ಎಂಬುವರು, 'ರಾಬರ್ಟ್' ಸಿನಿಮಾದ ನಿರ್ಮಾಪಕರಿಗೆ ಕೈ ಎತ್ತಿ ಮುಗಿಯಬೇಕು. 70 ಕೋಟಿ ಆಫರ್ ಕೊಟ್ಟರೂ ಅವರು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅವರಿಗೆ ಧನ್ಯವಾದ' ಎಂದಿದ್ದಾರೆ.

    ಟ್ವೀಟ್ ಡಿಲೀಟ್ ಮಾಡಿದ ಸುದೀಪ್: ಭಯಬಿದ್ದು ಡಿಲೀಟ್ ಮಾಡಿದ್ದಾರೆ ಎಂದ ದರ್ಶನ್ ಫ್ಯಾನ್ಸ್ಟ್ವೀಟ್ ಡಿಲೀಟ್ ಮಾಡಿದ ಸುದೀಪ್: ಭಯಬಿದ್ದು ಡಿಲೀಟ್ ಮಾಡಿದ್ದಾರೆ ಎಂದ ದರ್ಶನ್ ಫ್ಯಾನ್ಸ್

    'ಚಿತ್ರಮಂದಿರ ಮಾಲೀಕರ, ನೌಕರರ ಕಷ್ಟ ಅರಿತುಕೊಂಡಿದ್ದಾರೆ'

    'ಚಿತ್ರಮಂದಿರ ಮಾಲೀಕರ, ನೌಕರರ ಕಷ್ಟ ಅರಿತುಕೊಂಡಿದ್ದಾರೆ'

    ರಾಬರ್ಟ್ ಸಿನಿಮಾ ನಿರ್ಮಾಪಕರು ಚಿತ್ರಮಂದಿರಗಳ ಮಾಲೀಕರು, ನೌಕರರ ಕಷ್ಟವನ್ನು ಅರ್ಥ ಮಾಡಿಕೊಂಡಿದ್ದಾರೆ. ಸಿನಿಮಾವನ್ನು ನೇರವಾಗಿ ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ನರಸಿಂಹ ಹೇಳಿದ್ದಾರೆ.

    ನಿರ್ಮಾಪಕ ಹೇಳಿದ್ದೇನು?

    ನಿರ್ಮಾಪಕ ಹೇಳಿದ್ದೇನು?

    ಭಾರಿ ಮೊತ್ತದ ಆಫರ್ ನೀಡಿದರೂ ಸಹ ಚಿತ್ರವನ್ನು ಒಟಿಟಿ ಗೆ ಮಾರದೆ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವ ನಿರ್ಣಯದ ಬಗ್ಗೆ ಮಾತನಾಡಿರುವ ರಾಬರ್ಟ್ ನಿರ್ಮಾಪಕ, 'ದರ್ಶನ್ ಅವರ ಅಭಿಮಾನಿಗಳು ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ' ಎಂದಿದ್ದಾರೆ.

    ಟಿವಿಯಲ್ಲೂ ದರ್ಶನ್ ಕಿಂಗ್: ಹೆಚ್ಚು ಮಂದಿ ನೋಡಿದ್ದು ಈ ಸಿನಿಮಾವನ್ನುಟಿವಿಯಲ್ಲೂ ದರ್ಶನ್ ಕಿಂಗ್: ಹೆಚ್ಚು ಮಂದಿ ನೋಡಿದ್ದು ಈ ಸಿನಿಮಾವನ್ನು

    ಹಲವು ಸಿನಿಮಾಗಳು ನೇರವಾಗಿ ಒಟಿಟಿ ಯಲ್ಲಿ ಬಿಡುಗಡೆ

    ಹಲವು ಸಿನಿಮಾಗಳು ನೇರವಾಗಿ ಒಟಿಟಿ ಯಲ್ಲಿ ಬಿಡುಗಡೆ

    ಹಲವು ಸಿನಿಮಾಗಳು ನೇರವಾಗಿ ಒಟಿಟಿ ಯಲ್ಲಿ ಬಿಡುಗಡೆ ಆಗುತ್ತಿವೆ. ಕನ್ನಡದ ಪ್ರೆಂಚ್ ಬಿರಿಯಾನಿ ಮತ್ತು ಲಾ ಸಿನಿಮಾಗಳೂ ಸಹ ನೇರವಾಗಿ ಒಟಿಟಿ ಯಲ್ಲಿ ಬಿಡುಗಡೆ ಆಗುತ್ತಿವೆ. ಇವೆರೆಡು ಪುನೀತ್ ಅವರ ಪಿಆರ್‌ಕೆ ಪ್ರೊಡಕ್ಷನ್‌ ನ ಸಿನಿಮಾ.

    'ರಾಬರ್ಟ್' ಸಿನಿಮಾಕ್ಕೆ ಕೋಟಿ-ಕೋಟಿ ಆಫರ್: ಡೀಲ್ ಬೇಡವೆಂದ ನಿರ್ಮಾಪಕ'ರಾಬರ್ಟ್' ಸಿನಿಮಾಕ್ಕೆ ಕೋಟಿ-ಕೋಟಿ ಆಫರ್: ಡೀಲ್ ಬೇಡವೆಂದ ನಿರ್ಮಾಪಕ

    English summary
    Theater owners praises Darshan's Robert movie team and producer decision of releasing the movie directly to theaters not to OTT.
    Monday, May 18, 2020, 20:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X