»   » ನಟ ಮಹೇಶ್ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ

ನಟ ಮಹೇಶ್ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ

By: ಅನಂತರಾಮು, ಹೈದರಾಬಾದ್
Subscribe to Filmibeat Kannada
Actor Mahesh Babu
ಟಾಲಿವುಡ್ ನಲ್ಲಿ ಪ್ರಿನ್ಸ್ ಎಂದೇ ಖ್ಯಾತನಾಗಿರುವ ನಟ ಮಹೇಶ್ ಬಾಬು ಅವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ವಿಫಲವಾದ ಘಟನೆ ಬೆಳಕಿಗೆ ಬಂದಿದೆ. ಮಹೇಶ್ ಬಾಬು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರರಣವನ್ನು ದಾಖಲಿಸಿಕೊಂಡಿರುವ ಹೈದರಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಘಟನೆ ಹೈದರಾಬಾದಿನ ಜೂಬ್ಲಿ ಹಿಲ್ಸ್ ಪೊಲೀಸ್ ಸರಹದ್ದಿನಲ್ಲಿ ನಡೆದಿದೆ. ಜೂಬ್ಲಿ ಹಿಲ್ಸ್ ರೋಡ್ ನಂಬರ್ 81ರಲ್ಲಿ ಮಹೇಶ್ ಬಾಬು ಮನೆ ಇದೆ. ಬುಧವಾರ (ಆ.25) ಮುಂಜಾನೆ 2.30ರ ಸಮಯದಲ್ಲಿ ಮಹೇಶ್ ಬಾಬು ಅವರ ಮನೆಯ ಕಾಂಪೌಂಡ್ ಹಾರಿದ ಕಳ್ಳ ಕಿಟಕಿ ಗಾಜನ್ನು ಹೊಡೆದು ಮನೆಯ ಒಳಗೆ ಪ್ರವೇಶಿಸಿದ್ದಾನೆ.

ಮನೆಗೆ ಸೆಕ್ಯುರಿಟಿ ಇದ್ದರೂ ಕಳ್ಳ ಅದೇಗೋ ಏನೋ ಅವರ ಕಣ್ಣು ತಪ್ಪಿಸಿ ಪ್ರವೇಶಿಸಿದ್ದಾನೆ. ಮಹೇಶ್ ಅವರ ಬೆಡ್ ರೂಮಿಗೆ ಪ್ರವೇಶಿಸಿದ ಆತ ಕಳ್ಳತನಕ್ಕೆ ಯತ್ನಿಸಿದ್ದಾನೆ. ಏನೋ ಸದ್ದಾಗಿ ಬೆಚ್ಚಿಬಿದ್ದ ಮನೆಯ ಕೆಲಸದವರು ಜಾಗೃತರಾಗಿದ್ದಾರೆ. ಮಂಕಿ ಕ್ಯಾಪ್ ಧರಿಸಿದ್ದ ಕಳ್ಳನನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ.

ಆದರೆ ಕಳ್ಳ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಬಳಿಕ ಮಹೇಶ್ ಬಾಬು ಜೂಬ್ಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೆ ಮಹೇಶ್ ಬಾಬು ಮನೆಗೆ ಆಗಮಿಸಿದ ಪೊಲೀಸರು, ಬೆರಳಚ್ಚು ತಜ್ಞರು ತನಿಖೆ ನಡೆಸಿದ್ದಾರೆ. ಆದರೆ ಇದುವರೆಗೂ ಕಳ್ಳ ಪತ್ತೆಯಾಗಿಲ್ಲ.

English summary
A man wearing a monkey cap trying to theft at Mahesh Babu's house and failed. Police case is registered at Jubliee Hills Police station, Hyderabad.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada