For Quick Alerts
  ALLOW NOTIFICATIONS  
  For Daily Alerts

  ಪುನೀತ್ ಕೈಯಲ್ಲಿರುವ ಈ ಬ್ರೇಸ್ಲೆಟ್ ಹಿಂದಿದೆ ಒಂದು ಇಂಟ್ರೆಸ್ಟಿಂಗ್ ಕಥೆ.!

  By Harshitha
  |
  ಪುನೀತ್ ಸಕ್ಸಸ್ ಗೆ ಕಾರಣ ಅವರ ಕೈಯಲ್ಲಿರೋ ಆ ಬ್ಯಾಂಡ್ | Filmibeat Kannada

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದೀಗ 'ನಟ ಸಾರ್ವಭೌಮ' ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಷಯವೇ. 'ರಣ ವಿಕ್ರಮ' ಬಳಿಕ ಪವನ್ ಒಡೆಯರ್ ಹಾಗೂ ಪುನೀತ್ ರಾಜ್ ಕುಮಾರ್ ಒಂದಾಗಿರುವುದು ಈ ಚಿತ್ರದಲ್ಲಿಯೇ.!

  'ನಟ ಸಾರ್ವಭೌಮ' ಚಿತ್ರದಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಪುನೀತ್ ರಾಜ್ ಕುಮಾರ್ ನಟಿಸುತ್ತಿದ್ದಾರೆ. ಅಂದ್ಮೇಲೆ, ಅಪ್ಪು ಕೈಯಲ್ಲಿ ಸದಾ ಕ್ಯಾಮರಾ ಇರಲೇಬೇಕು. ಆದ್ರೆ, ಪವನ್ ಒಡೆಯರ್ ಈಗ ಬಿಡುಗಡೆ ಮಾಡಿರುವ 'ನಟ ಸಾರ್ವಭೌಮ' ಚಿತ್ರದ ಹೊಸ ಫೋಟೋ ನೋಡಿದ್ರೆ, ಅಪ್ಪು ಕೈಯಲ್ಲಿ ಬೇರೇನೋ ಇದೆ.!

  'ನಟ ಸಾರ್ವಭೌಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾತ್ರವೇನು.?'ನಟ ಸಾರ್ವಭೌಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾತ್ರವೇನು.?

  ಅಷ್ಟಕ್ಕೂ, ಅಪ್ಪು ಕೈಯಲ್ಲಿ ಇರುವುದು ಕಪ್ಪು ದಾರದಿಂದ ಸಿದ್ಧಪಡಿಸಿರುವ ಬ್ರೇಸ್ಲೆಟ್ ಅಥವಾ ಲಕ್ಕಿ ಚಾರ್ಮ್. ಇದರ ಬಗ್ಗೆ ಡೈರೆಕ್ಟರ್ ಪವನ್ ಒಡೆಯರ್ ರನ್ನ ಕೇಳಿದರೆ, ಅದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿಯೇ ಇದೆ ಅಂತಾರೆ.

  ಬ್ರೇಸ್ಲೆಟ್ ಅಥವಾ ಲಕ್ಕಿ ಚಾರ್ಮ್ ಕೇವಲ ಹೀರೋ ಪುನೀತ್ ರಾಜ್ ಕುಮಾರ್ ಲುಕ್ ಗಾಗಿ ತಯಾರು ಮಾಡಿರುವುದರಲ್ಲ. 'ನಟ ಸಾರ್ವಭೌಮ' ಚಿತ್ರದಲ್ಲಿ ಈ ಬ್ರೇಸ್ಲೆಟ್ ಹಿಂದೆ ಒಂದು ಕಥೆ ಇರುತ್ತದೆ. ಚಿತ್ರದಲ್ಲಿ ಆ ಬ್ರೇಸ್ಲೆಟ್ ಗೆ ಪ್ರಾಮುಖ್ಯತೆ ಇದೆ ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್.

  ಸದ್ಯ ಬೆಂಗಳೂರು ಹಾಗೂ ಮೈಸೂರು ಸುತ್ತ-ಮುತ್ತ 'ನಟ ಸಾರ್ವಭೌಮ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಮುಂದಿನ ಹಂತದ ಚಿತ್ರೀಕರಣ ಬಳ್ಳಾರಿಯಲ್ಲಿ ನಡೆಯಲಿದೆ. ಅಂದ್ಹಾಗೆ, ಈ ಚಿತ್ರದಲ್ಲಿ ಅಪ್ಪುಗೆ ರಚಿತಾ ರಾಮ್ ನಾಯಕಿ ಆಗಿದ್ದಾರೆ.

  English summary
  Director Pawan Wadeyar tells there is an interesting story behind Puneeth Rajkumar's wrist band in 'Nata Sarvabhauma'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X