For Quick Alerts
  ALLOW NOTIFICATIONS  
  For Daily Alerts

  ''ಉಪೇಂದ್ರ ಇಲ್ಲದೆ ಅಂಡರ್ ವರ್ಲ್ಡ್ ಸಿನಿಮಾ ಇಲ್ಲ''- ದುನಿಯಾ ವಿಜಯ್

  |
  ಉಪೇಂದ್ರ ನನಗೆ ಗಾಡ್ ಫಾದರ್ ಅಂದ್ರು ದುನಿಯಾ ವಿಜಯ್| Salaga | duniya vijay | upendra | Dhananjay

  ''ಯಾರೇ ಅಂಡರ್ ವರ್ಲ್ಡ್ ಸಿನಿಮಾ ಮಾಡಿದರೂ 'ಓಂ' ಸಿನಿಮಾ ನೋಡಿಯೇ ಮಾಡಬೇಕು. ಅಂಡರ್ ವರ್ಲ್ಡ್ ಗೆ ಓಂಕಾರ ಹಾಕಿದ್ದು, ಉಪೇಂದ್ರ ಸರ್ ಇಂದಿಗೂ 'ಓಂ' ಸಿನಿಮಾದ ಶಿವಣ್ಣ ಎಂಟ್ರಿ ಸೀನ್ ನೋಡಿದರೆ ಮೈ ಜುಮ್ ಎನ್ನುತ್ತದೆ.'' ಹೀಗೆ ಹೇಳಿ ಉಪೇಂದ್ರ ಬಗ್ಗೆ ಮೆಚ್ಚುಗೆ ಮಾತನಾಡಿದ್ದು ದುನಿಯಾ ವಿಜಯ್.

  ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ 'ಸಲಗ' ಸಿನಿಮಾದ ಟೀಸರ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಟೀಸರ್ ಬಿಡುಗಡೆಯ ವೇಳೆ ಉಪೇಂದ್ರ ಬಗ್ಗೆ ದುನಿಯಾ ವಿಜಯ್ ಮಾತನಾಡಿದರು.

  ವಿಡಿಯೋ: ಹುಟ್ಟುಹಬ್ಬದ ದಿನ ಅಂಡರ್ ವರ್ಲ್ಡ್ ಅನಾವರಣ ಮಾಡಿದ ದುನಿಯಾ ವಿಜಯ್ವಿಡಿಯೋ: ಹುಟ್ಟುಹಬ್ಬದ ದಿನ ಅಂಡರ್ ವರ್ಲ್ಡ್ ಅನಾವರಣ ಮಾಡಿದ ದುನಿಯಾ ವಿಜಯ್

  ''ಉಪೇಂದ್ರ ಸರ್ ನನಗೆ ಗಾಡ್ ಫಾದರ್. ಅಂದು ಎಪಿಎಸ್ ಕಾಲೇಜಿನಲ್ಲಿ ಇರುವಾಗಲೇ ನಾನು ಅವರನ್ನು ನೋಡಿಕೊಂಡು ಬಂದಿದ್ದೇನೆ. ಅಂದು ಕಾಲೇಜಿನಲ್ಲಿ ಅವರು ಡೈಲಾಗ್ ಬರೆಯುವುದನ್ನು ಕಣ್ಣಾರೆ ನೋಡಿದ್ದೇನೆ. ನಾನು ಜೀವನದಲ್ಲಿ ಎದ್ದು ಬರಲು ಅವರೇ ಸ್ಫೂರ್ತಿ.'' ಎಂದು ವಿಜಿ ಹೇಳಿದರು.

  ''ಉಪೇಂದ್ರ ತನ್ನ ಕಾಲ ಮೇಲೆ ತಾನು ನಿಂತು ಸಾಧಿಸಿ ತೋರಿಸಿದವರು. ಅಂದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರು. ಅವರ ಹಾದಿ ನಮಗೆಲ್ಲ ಧೈರ್ಯ ತುಂಬಿತ್ತು. ಸರ್, ಏನೇ ಕೇಳಿದರೂ ಅವರ ಜೊತೆಗೆ ನಾವು ಇರುತ್ತೇವೆ.'' ಎಂದು ದುನಿಯಾ ವಿಜಯ್ ಸಂ

  ಹುಟ್ಟುಹಬ್ಬದಂದು ದುನಿಯಾ ವಿಜಿ ಮತ್ತೊಂದು ವಿವಾದ: ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಿದ ನಟಹುಟ್ಟುಹಬ್ಬದಂದು ದುನಿಯಾ ವಿಜಿ ಮತ್ತೊಂದು ವಿವಾದ: ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಿದ ನಟ

  'ಸಲಗ' ದುನಿಯಾ ವಿಜಯ್ ನಿರ್ದೇಶನದ ಸಿನಿಮಾವಾಗಿದೆ. ಭೂಗತ ಜಗತ್ತಿನ ಬಗ್ಗೆ ಸಿನಿಮಾದ ಕಥೆ ಇದೆ. ಫೆಬ್ರವರಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

  English summary
  There is no underworld movies without Upendra says Duniya Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X