For Quick Alerts
  ALLOW NOTIFICATIONS  
  For Daily Alerts

  ದರ್ಶನ್, ಸುದೀಪ್, ಶಿವಣ್ಣಗೆ ಕೈ ಕೊಟ್ಟ ಚಿತ್ರಗಳು: ಮತ್ತೆ ಬರುತ್ತಾ ಆ ಕಾಲ.?

  By Bharath Kumar
  |

  ಪ್ರತಿಯೊಂದು ಚಿತ್ರವನ್ನ ನಟ ಆಗಲಿ ಅಥವಾ ನಿರ್ದೇಶಕ ಆಗಲಿ ತುಂಬಾ ಇಷ್ಟ ಪಟ್ಟು, ಕಷ್ಟ ಪಟ್ಟು ಮಾಡ್ತಾರೆ. ಆ ಕಥೆ ತುಂಬಾ ಇಷ್ಟ ಆಗ್ಬಿಟ್ರೆ ಅದಕ್ಕಾಗಿ ಅವರು ಎರಡು ಪಟ್ಟು ಶ್ರಮ ಹೆಚ್ಚು ಹಾಕ್ತಾರೆ. ಹೀಗೆ, ಬಹಳ ಇಷ್ಟದಿಂದ ಮಾಡಿದ ಚಿತ್ರಗಳು ನಿರೀಕ್ಷೆ ಮಟ್ಟ ತಲುಪದಿದ್ದಾಗ ನಿಜಕ್ಕೂ ಆ ನಿರ್ದೇಶಕ ಮತ್ತು ನಟನಿಗೆ ಮಾನಸಿಕವಾಗಿ ಸೋಲಾಗುತ್ತೆ.

  ಮತ್ತೊಮ್ಮೆ ಅಂತಹ ಸಿನಿಮಾಗಳನ್ನ ಮಾಡಬಾರದು ಎಂದು ನಿರ್ಧಾರ ಮಾಡಿಬಿಡ್ತಾರೆ. ವಿಪರ್ಯಾಸ ಅಂದ್ರೆ, ಕೆಲವು ತುಂಬಾ ಚೆನ್ನಾಗಿರುತ್ತೆ, ಆದ್ರೂ, ಪ್ರೇಕ್ಷಕರನ್ನ ಅದನ್ನ ಒಪ್ಪುವುದಿಲ್ಲ. ಗಳಿಕೆ ಚೆನ್ನಾಗಿರುತ್ತೆ, ಅಭಿಪ್ರಾಯ ಕೆಟ್ಟದಾಗಿ ಇರುತ್ತೆ. ಅಭಿಪ್ರಾಯ ಚೆನ್ನಾಗಿರುತ್ತೆ, ಆದರೂ ನಷ್ಟವಾಗುತ್ತೆ.

  ಇಂತಹ ಅನುಭವಗಳು ನಮ್ಮ ನಿರ್ದೇಶಕರಿಗೆ ಮತ್ತು ನಾಯಕನಟರಿಗೆ ಎದುರಾಗಿದೆ. ಹೊಸ ಪ್ರಯತ್ನಗಳಿಗೆ ಕೈಹಾಕಿ, ಕೈ ಸುಟ್ಟುಕೊಂಡು ಮತ್ತೆ ಅಂತಹ ಪ್ರಾಜೆಕ್ಟ್ ಗಳ ಕಡೆ ಮುಖ ಮಾಡದೇ ಇರೋ ನಮ್ಮ ಹೀರೋಗಳು ಇದ್ದಾರೆ. ಯಾವೆಲ್ಲಾ ಡೈರೆಕ್ಟರ್ ಮತ್ತು ಹೀರೋಗೆ ಇಂತಹ ಅನುಭವ ಆಗಿದೆ ಎಂದು ನೋಡಲು ಮುಂದೆ ಓದಿ.....

  'ಏಕಾಂಗಿ'ಯಾದ ರವಿಚಂದ್ರನ್

  'ಏಕಾಂಗಿ'ಯಾದ ರವಿಚಂದ್ರನ್

  ಕ್ರೇಜಿಸ್ಟಾರ್ ರವಿಚಂದ್ರನ್ ಅವರು 'ನಾನು ಏಕಾಂಗಿ' ಎಂದು ಯಾವಾಗಲೂ ಹೇಳುತ್ತಿರುತ್ತಾರೆ. ಅದಕ್ಕೆ ಕಾರಣ 2002ರಲ್ಲಿ ತೆರೆಕಂಡ 'ಏಕಾಂಗಿ' ಸಿನಿಮಾ. ಈ ಚಿತ್ರದ ಮೇಲೆ ರವಿಚಂದ್ರನ್ ಗೆ ಬಹುದೊಡ್ಡ ನಿರೀಕ್ಷೆ ಇತ್ತು. ಜನರು ಈ ಚಿತ್ರವನ್ನ ಒಪ್ಪಿಕೊಂಡು, ಮೆರವಣಿಗೆ ಮಾಡ್ತಾರೆ ಎಂಬ ಭರವಸೆಯಿಂದ ಮಾಡಿದ್ದರು. ತುಂಬಾ ಇಷ್ಟ ಪಟ್ಟು, ಅದಕ್ಕಾಗಿ ಬಹಳ ಹಾರ್ಡ್ ವರ್ಕ್ ಮಾಡಿ ತಯಾರಿಸಿದ್ದರು. ಅನೇಕರಿಗೆ ಇಷ್ಟವಾಗಿದ್ದರೂ ಈ ಸಿನಿಮಾ ಸೋಲು ಕಂಡಿತು. ''ನೀವು ಏಕಾಂಗಿಯನ್ನ ಗೆಲ್ಲಿಸಿದ್ದರೇ ನಾನು ಮತ್ತಷ್ಟು ಏಕಾಂಗಿ ಅಂತಹ ಚಿತ್ರಗಳನ್ನ ಮಾಡುತ್ತಿದ್ದೆ'' ಎಂದು ಆಗಾಗ ಹೇಳುತ್ತಾರೆ. 'ಏಕಾಂಗಿ' ಕಲಿಸಿದ ಪಾಠದಿಂದ ಕ್ರೇಜಿಸ್ಟಾರ್ ಮತ್ತೆ ಅಂತಹ ಸಾಹಸಕ್ಕೆ ಕೈಹಾಕುತ್ತಿಲ್ಲ.

  'ಸ್ವಸ್ತಿಕ್' ಮಾಡಿ ಹಿನ್ನೆಡೆ ಅನುಭವಿಸಿದ್ದ ಉಪೇಂದ್ರ

  'ಸ್ವಸ್ತಿಕ್' ಮಾಡಿ ಹಿನ್ನೆಡೆ ಅನುಭವಿಸಿದ್ದ ಉಪೇಂದ್ರ

  'ತರ್ಲೆ ನನ್ ಮಗ', 'ಶ್', 'ಓಂ', 'ಆಪರೇಷನ್ ಅಂತ' ಅಂತಹ ಚಿತ್ರಗಳನ್ನ ಮಾಡಿ ಸ್ಟಾರ್ ಆಗಿದ್ದ ಉಪೇಂದ್ರ 1998ರಲ್ಲಿ 'ಸ್ವಸ್ತಿಕ್' ಎಂಬ ಸಿನಿಮಾ ಮಾಡಿದ್ದರು. ರಿವರ್ಸ್ ಸ್ಕ್ರೀನ್ ಪ್ಲೇ ಶೈಲಿಯಲ್ಲಿ ಟೆರರಿಸ್ಟ್ ಕುರಿತು ಮಾಡಿದ್ದ ಈ ಚಿತ್ರವನ್ನ ಇಂದಿನ ಯುವ ಜನತೆ ನೋಡಿ ಶಬಾಶ್ ಎನ್ನುತ್ತಿದ್ದಾರೆ. ಆದ್ರೆ, ಆಗಿನ ಸಮಯದಲ್ಲಿ ಈ ಸಿನಿಮಾಗೆ ಹಿನ್ನಡೆಯಾಗಿತ್ತು ಎನ್ನುವುದು ಗಮನಿಸಬೇಕು. ಚಿತ್ರರಂಗದ ಇತಿಹಾಸ ಹೇಳುವ ಪ್ರಕಾರ, ಈ ಸಿನಿಮಾ ಅಂದುಕೊಂಡ ಮಟ್ಟಕ್ಕೆ ತಲುಪಲಿಲ್ಲ. ಒಂದು ವೇಳೆ ಚಿತ್ರದ ಗುರಿ ಮುಟ್ಟಿದ್ದರೇ ಉಪ್ಪಿ 'ಸ್ವಸ್ತಿಕ್' ಶೈಲಿಯಲ್ಲಿ ಮತ್ತಷ್ಟು ಚಿತ್ರಗಳನ್ನ ಮಾಡ್ತಿದ್ದರು ಅನಿಸುತ್ತೆ.

  ಸೂರಿಗೆ ಕೈಕೊಟ್ಟ 'ಇಂತಿ ನಿನ್ನ ಪ್ರೀತಿಯ'

  ಸೂರಿಗೆ ಕೈಕೊಟ್ಟ 'ಇಂತಿ ನಿನ್ನ ಪ್ರೀತಿಯ'

  2008ರಲ್ಲಿ ತೆರೆಕಂಡ 'ಇಂತಿ ನಿನ್ನ ಪ್ರೀತಿಯ' ಚಿತ್ರ ದುನಿಯಾ ಸೂರಿ ಪಾಲಿಗೆ ಹೊಸ ಪ್ರಯತ್ನ. ಸಿನಿಮಾವನ್ನ ಪ್ರೇಕ್ಷಕರು ಒಪ್ಪಿಕೊಂಡರು. ಆದ್ರೆ, ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಗಳಿಕೆ ಕಂಡಿಲ್ಲ ಎಂಬುದು ಚಿತ್ರಕ್ಕೆ ಹಿನ್ನಡೆಯಾಯಿತು. ಹೀಗಾಗಿ, ಸೂರಿ ಕಮರ್ಷಿಯಲ್ ಚಿತ್ರದ ಕಡೆಗೆ ಹೆಜ್ಜೆ ಇಟ್ಟರು. ಜಾಕಿ, ಅಣ್ಣಾ ಬಾಂಡ್, ಕಡ್ಡಿಪುಡಿ, ಟಗರು ಅಂತಹ ಮಾಸ್ ಹಿಟ್ ಸಿನಿಮಾ ಮಾಡಿದ್ರು. ಬಹುಶಃ ಇಂತಿ ನಿನ್ನ ಪ್ರೀತಿಯ ದೊಡ್ಡ ಯಶಸ್ಸು ಕಂಡಿದ್ದರೇ, ಆ ರೀತಿಯ ಚಿತ್ರಗಳು ಮತ್ತೆರೆಡು ಬರ್ತಿತ್ತು ಎನಿಸುತ್ತೆ.

  'ಕಬೀರ' ಮತ್ತು 'ಚಿಗರಿದ ಕನಸು'

  'ಕಬೀರ' ಮತ್ತು 'ಚಿಗರಿದ ಕನಸು'

  ಕೇವಲ ನಿರ್ದೇಶಕರು ಮಾತ್ರವಲ್ಲ, ನಟರು ಕೂಡ ಕೆಲವು ಪ್ರಯತ್ನಗಳನ್ನ, ಪ್ರಯೋಗಗಳನ್ನ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋ, ಮಾಸ್ ಕಿಂಗ್ ಶಿವರಾಜ್ ಕುಮಾರ್ 2003 ರಲ್ಲಿ 'ಚಿಗುರಿದ ಕನಸು' ಎಂಬ ಸಿನಿಮಾ ಮಾಡಿದರು. ಈ ಚಿತ್ರದ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿತು. ಆದ್ರೆ, ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಅಷ್ಟಾಗಿ ಸದ್ದು ಮಾಡಲ್ಲ. ಇನ್ನು ಇತ್ತೀಚಿಗೆ 'ಸಂತೆಯಲ್ಲಿ ನಿಂತ ಕಬೀರ' ಅಂತ ಇನ್ನೊಂದು ಸಿನಿಮಾ ಮಾಡಿದ್ದರು. ಈ ಚಿತ್ರವನ್ನ ಕೂಡ ಪ್ರೇಕ್ಷಕರು ಗೆಲ್ಲಿಸಿಲ್ಲ. ಹಾಗಂತ ಶಿವಣ್ಣ ಬೇಸರ ಪಡಲಿಲ್ಲ. ಒಮದು ವೇಳೆ ಈ ಸಿನಿಮಾಗಳನ್ನ ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದ್ದರೇ ಮತ್ತಷ್ಟು ಪ್ರಯತ್ನಕ್ಕೆ ಶಿವಣ್ಣ ಕೈ ಹಾಕುತ್ತಿದ್ದರು. ಹೀಗಿದ್ದರೂ, ಶಿವಣ್ಣ ಈಗ 'ಕವಚ' ಎಂಬ ಸಿನಿಮಾದಲ್ಲಿ 'ಕುರುಡ'ನ ಪಾತ್ರ ನಿರ್ವಹಿಸುತ್ತಿದ್ದಾರೆ.

  ನಮ್ಮ ಪ್ರೀತಿಯ ರಾಮು - ದರ್ಶನ್

  ನಮ್ಮ ಪ್ರೀತಿಯ ರಾಮು - ದರ್ಶನ್

  ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಅಫೀಸ್ ಸುಲ್ತಾನ್ ದರ್ಶನ್ ಸದ್ಯ ಮಾಸ್ ಸಿನಿಮಾಗಳ ಮಹಾರಾಜ. ಈ ಹಿಂದೆ 2003ರಲ್ಲಿ 'ನಮ್ಮ ಪ್ರೀತಿಯ ರಾಮು' ಚಿತ್ರದಲ್ಲಿ ಕುರುಡನ ಪಾತ್ರವನ್ನ ನಿರ್ವಹಿಸಿ ಅಪಾರ ಮೆಚ್ಚುಗೆ ಪಡೆದುಕೊಂಡಿದ್ದರು. ಈ ಚಿತ್ರದಿಂದ ಮೆಚ್ಚುಗೆ ಸಿಕ್ಕಿತ್ತೆ ಹೊರತು ನಿರ್ಮಾಪಕನಿಗೆ ದುಡ್ಡು ಸಿಗಲಿಲ್ಲ. ಇದರಿಂದ ದರ್ಶನ್ ಮುಂದಿನ ದಿನಗಳಲ್ಲಿ ಇಂತಹ ಪ್ರಾಜೆಕ್ಟ್ ಯಾವುದನ್ನ ಕೈಗೆತ್ತಿಕೊಂಡಿಲ್ಲ. ಬಹುಶಃ ಈ ಸಿನಿಮಾ ಸೂಪರ್ ಸಕ್ಸಸ್ ಕೊಟ್ಟಿದ್ರೆ, ದಾಸನಿಂದ ಮತ್ತಷ್ಟು ನಮ್ಮ ಪ್ರೀತಿಯ ರಾಮು ಅಂತಹ ಸಿನಿಮಾ ನೋಡಬಹುದಿತ್ತು.

  'ಶಾಂತಿ ನಿವಾಸ'ಕ್ಕೆ ಮತ್ತೆ ಬಾರದ ಸುದೀಪ್

  'ಶಾಂತಿ ನಿವಾಸ'ಕ್ಕೆ ಮತ್ತೆ ಬಾರದ ಸುದೀಪ್

  ಕಿಚ್ಚ ಸುದೀಪ್ ನಟಿಸಿ, ನಿರ್ದೇಶನ ಮಾಡಿದ್ದ ಸಿನಿಮಾ 'ಶಾಂತಿ ನಿವಾಸ' (2007). ಸುದೀಪ್ ತುಂಬಾ ಇಷ್ಟು ಪಟ್ಟು ಮಾಡಿದ ಸಿನಿಮಾ ಇದು. ಆದ್ರೆ, ನಿರೀಕ್ಷೆ ಮಟ್ಟಕ್ಕೆ ಈ ಸಿನಿಮಾ ಬಂದಿಲ್ಲ. ಇದರಿಂದ ಸಹಜವಾಗಿ ಬೇಸರಗೊಂಡ ಸುದೀಪ್ ಕಮರ್ಷಿಯಲ್ ಚಿತ್ರಗಳ ಮೊರೆ ಹೋದರು. ಮತ್ತೊಂದು ಶಾಂತಿ ನಿವಾಸದ ಬಗ್ಗೆ ಯೋಚನೆ ಮಾಡಲಿಲ್ಲ.

  ಉಳಿದವರು ಕಂಡಂತೆ - ರಕ್ಷಿತ್ ಶೆಟ್ಟಿ

  ಉಳಿದವರು ಕಂಡಂತೆ - ರಕ್ಷಿತ್ ಶೆಟ್ಟಿ

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ಸಿನಿಮಾ 'ಉಳಿದವರು ಕಂಡಂತೆ' (2014). ಕನ್ನಡ ಪ್ರೇಕ್ಷಕರು ಈ ಸಿನಿಮಾವನ್ನ ದೊಡ್ಡ ಒಪ್ಪಿಕೊಂಡರು, ಅದರಿಂದ ಚಿತ್ರಕ್ಕೆ ಲಾಭವಾಗಲಿಲ್ಲ. ಸಿನಿಮಾ ಚೆನ್ನಾಗಿದೆ ಎಂಬ ಮಾತು ಬಿಟ್ಟರೇ ಬಿಸಿನೆಸ್ ದೃಷ್ಠಿಯಲ್ಲಿ ಗಳಿಕೆ ಕಂಡಿಲ್ಲ. ಹೀಗಾಗಿ, ರಕ್ಷಿತ್ ಶೆಟ್ಟಿಯ ಪ್ರಯತ್ನಕ್ಕೆ ಹಿನ್ನೆಡೆಯಾಯಿತು.

  ಮಣಿ - ಯೋಗರಾಜ್ ಭಟ್

  ಮಣಿ - ಯೋಗರಾಜ್ ಭಟ್

  ನಿರ್ದೇಶಕ ಯೋಗರಾಜ್ ಭಟ್ ಚೊಚ್ಚಲ ನಿರ್ದೇಶನದ ಸಿನಿಮಾ ಮಣಿ ಎನ್ನುವುದು ಅದೇಷ್ಟೋ ಜನಕ್ಕೆ ಗೊತ್ತಿಲ್ಲ. ಬಹುತೇಕರು ಮುಂಗಾರು ಮಳೆ ಎಂದುಕೊಂಡಿದ್ದಾರೆ. ಆದ್ರೆ, 2003ರಲ್ಲಿ ಮಣಿ ಎಂಬ ಸಿನಿಮಾ ಮಾಡಿದ್ದರು. ಸಿನಿಮಾ ಚೆನ್ನಾಗಿತ್ತು ಎಂದು ಪ್ರೇಕ್ಷಕರು ಎಂದರು, ಸಕ್ಸಸ್ ಸಿಗಲಿಲ್ಲ. ಅಲ್ಲಿಂದ ನಿರಾಸೆಯಾಗಿದ್ದ ಭಟ್ಟರು 2006ರಲ್ಲಿ ಮುಂಗಾರುಮಳೆ ಎಂಬ ಚಿತ್ರದಿಂದ ತಮ್ಮ ಹಾದಿ ಬದಲಿಸಿದರು. ಬಹುಶಃ ಅಂದು ಮಣಿ ಹಿಟ್ ಆಗಿದ್ರೆ ಯೋಗರಾಜ್ ಭಟ್ ಯಾವ ಚಿತ್ರಕ್ಕೆ ಕೈ ಹಾಕ್ತಿದ್ದರೋ.?

  ಪ್ರೇಮ್ 'ಜೋಗಯ್ಯ'

  ಪ್ರೇಮ್ 'ಜೋಗಯ್ಯ'

  ಜೋಗಿ ಸೂಪರ್ ಹಿಟ್ ನಂತರ ಮುಮದುವರೆದ ಭಾಗ ಎಂದು ಪ್ರೇಮ್ ಮಾಡಿದ ಸಿನಿಮಾ ಜೋಗಯ್ಯ. ಬಹುಶಃ ಈ ಸಿನಿಮಾ ಹಿಟ್ ಆಗಿದ್ರೆ, ಶಿವಣ್ಣ ಕೈಯಲ್ಲಿ ಮತ್ತೆ ಲಾಂಗ್ ಕೊಟ್ಟು ಜೋಗಿ ಪಾತ್ರವನ್ನ ಮುಂದುವರಿಸಿದ್ರು ಅಚ್ಚರಿಯಿಲ್ಲ. ಅಥವಾ ದಿ ವಿಲನ್ ಸಿನಿಮಾ ಆಗಲೇ ಆಗ್ತಿತ್ತೇನೋ. ಆದ್ರೆ, ಜೋಗಯ್ಯ ಕಲೆಕ್ಷನ್ ಮಾಡಿತೇ ಹೊರತು ಮೆಚ್ಚುಗೆ ಗಳಿಸಿಕೊಂಡಿಲ್ಲ.

  English summary
  Weekend special: Most Expected Movies did not Succeed in Sandalwood Box Office.
  Friday, September 7, 2018, 11:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X