For Quick Alerts
ALLOW NOTIFICATIONS  
For Daily Alerts

ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಈ ಸ್ಟಾರ್ ನಟರು?

|
ಸಿನಿಮಾ, ಕ್ರಿಕೆಟ್ ಮತ್ತು ರಾಜಕೀಯ ಈ ಮೂರಕ್ಕೂ ಅವಿನಾಭಾವ ಸಂಬಂಧ | FILMIBEAT KANNADA

ಸಿನಿಮಾ, ಕ್ರಿಕೆಟ್ ಮತ್ತು ರಾಜಕೀಯ ಈ ಮೂರಕ್ಕೂ ಅವಿನಾಭಾವ ಸಂಬಂಧ. ರಾಜ್ಯದ ಕ್ರಿಕೆಟ್ ದಿಗ್ಗಜರು ಸಿನಿಮಾ ಆಗಲಿ, ರಾಜಕೀಯದಲ್ಲಾಗಲಿ ಅದೃಷ್ಟ ಪರೀಕ್ಷೆಗೆ ಕೈ ಹಾಕಿಲ್ಲವಾದರೂ, ಸಿನಿಮಾ ಮತ್ತು ರಾಜಕೀಯ ಜೊತೆ-ಜೊತೆಯಾಗಿಯೇ ಸಾಗುತ್ತಲೇ ಬಂದಿವೆ.

ದಶಕಗಳಿಂದ ರಾಜಕಾರಣ ಮಾಡಿಕೊಂಡು ಬಂದ ಕುಟುಂಬಕ್ಕೆ ಸಿನಿ ಮಂದಿ ಸೆಡ್ಡು ಹೊಡೆದು ಗೆದ್ದು ಬಂದ ಉದಾಹರಣೆ ಮಂಡ್ಯದಲ್ಲಿ ಈಗಷ್ಟೆ ದೊರೆತಿದೆ. ಮಂಡ್ಯದಲ್ಲಿ ಸುಮಲತಾ ಕಂಡ ಭರ್ಜರಿ ಗೆಲುವು, ಪ್ರಚಾರ ಸಮಯದಲ್ಲಿ ಯಶ್-ದರ್ಶನ್ ಅವರಿಗೆ ದೊರೆತ ಜನಾದರ ಸಿನಿ ಮಂದಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆಯೇನೋ? ಎಂಬ ನಿರೀಕ್ಷೆ ಹುಟ್ಟಿಸಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಟಿ ಅಮೂಲ್ಯ ಸ್ಪರ್ಧೆ.?

ಚಂದನವನದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಹಲವು ಸ್ಟಾರ್‌ ನಟರು, ನಟಿಯರು ಇದ್ದಾರೆ. ಅವರಲ್ಲಿ ಹಲವರಿಗೆ ರಾಜಕೀಯದ ಬಗ್ಗೆ ಒಲವಿದೆ ಅಥವಾ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸ್ಟಾರ್ ನಟ-ನಟಿಯರ ಸಮಾಜ ಸೇವೆ, ರಾಜಕೀಯ ಒಲವನ್ನು ಆಧರಿಸಿ, ಮುಂದಿನ ದಿನಗಳಲ್ಲಿ ಕನ್ನಡದ ಯಾವ ನಟ-ನಟಿಯರು ಸಕ್ರಿಯ ರಾಜಕಾರಣಕ್ಕೆ ಬರಬಹುದು ಎಂಬ ಪಟ್ಟಿಯಲ್ಲಿ ಇಲ್ಲಿ ನೀಡಲಾಗಿದೆ.

ಯಶ್ ಬರಬಹುದೇ ರಾಜಕಾರಣಕ್ಕೆ?

ಯಶ್ ಬರಬಹುದೇ ರಾಜಕಾರಣಕ್ಕೆ?

ನಟ ಯಶ್ ಅವರು 'ಯಶೋಮಾರ್ಗ' ಫೌಂಡೇಶನ್ ಮೂಲಕ ಬರದ ಜಿಲ್ಲೆಯ ಜನರಿಗೆ ನೀರು ಕೊಡುವ ರಾಜ್ಯವೇ ಮೆಚ್ಚುವ ಕಾರ್ಯ ಈಗಾಗಲೇ ಸ್ವಂತ ಬಲದಿಂದಲೇ ಮಾಡುತ್ತಿದ್ದದಾರೆ. ಅವರು ಇತ್ತೀಚೆಗಷ್ಟೆ ಮಂಡ್ಯದಲ್ಲಿ ಬಹು ಸಮಯ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ರಾಜಕೀಯದಲ್ಲಿ ಹಲವು ಗೆಳೆಯರನ್ನು ಹೊಂದಿರುವ ಅವರು ಮುಂದೆ ರಾಜಕೀಯಕ್ಕೆ ಪ್ರವೇಶಿಸಿದರೆ ಅಚ್ಚರಿ ಇಲ್ಲ. ಜನಾನುರಾಗಿ ಎಂದು ಗುರುತಿಸಿಕೊಂಡಿರುವ ಅಂತಹವರು ರಾಜಕೀಯಕ್ಕೆ ಬೇಕಾಗಿದ್ದಾರೆ ಸಹ.

ಡಿ ಬಾಸ್‌ ಚುನಾವಣೆಗೆ ನಿಂತರೆ ಗೆಲುವು ಪಕ್ಕಾ

ಡಿ ಬಾಸ್‌ ಚುನಾವಣೆಗೆ ನಿಂತರೆ ಗೆಲುವು ಪಕ್ಕಾ

ಡಿ-ಬಾಸ್ ದರ್ಶನ್ ಅವರು ಚುನಾವಣೆಗೆ ನಿಂತರೆ ಗೆಲುವು ಪಕ್ಕಾ, ಅಷ್ಟು ಬೃಹತ್ ಪ್ರಮಾಣದ ಅಭಿಮಾನಿ ಬಳಗ ಅವರಿಗಿದೆ. ಅವರೂ ಸಹ ಹಲವು ಜನಾನುರಾಗಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸುಮಲತಾ ಅವರ ಗೆಲುವಿನಲ್ಲಿ ದರ್ಶನ್ ಅವರ ಪಾಲೂ ಸಾಕಷ್ಟಿದೆ. ಈ ಹಿಂದೆಯೂ ಸಹ ಅವರು ಅಂಬರೀಶ್ ಅವರ ಪರವಾಗಿ ಚುನಾವಣೆಗೆ ಪ್ರಚಾರ ಮಾಡಿದ್ದರು. ಅವರಿಗೆ ರಾಜಕೀಯವನ್ನು ಹತ್ತಿರದಿಂದ ನೋಡಿದ ಅನುಭವ ಇದೆ. ಮೃದು ಮನಸ್ಸಿನ, ನೆಲಮಟ್ಟದಿಂದ ಬಂದ, ಬಡವರ ಪರ ಕರುಣೆಯ ಕಣ್ಣುಳ್ಳ ದರ್ಶನ್ ರಾಜಕೀಯಕ್ಕೆ ಬಂದರೆ ರಾಜ್ಯಕ್ಕೆ ಹಿತ.

ಮೈಕೊಡವಿಕೊಂಡು ಎದ್ದ ಪವನ್ ಕಲ್ಯಾಣ್, ಪಕ್ಷದ ಮುಖವಾಣಿಗೆ ಚಾಲನೆ

ಸುದೀಪ್‌ ಅವರು ಬರ್ತಾರಾ ರಾಜಕೀಯಕ್ಕೆ?

ಸುದೀಪ್‌ ಅವರು ಬರ್ತಾರಾ ರಾಜಕೀಯಕ್ಕೆ?

ಸುದೀಪ್ ಅವರು ಬುದ್ಧಿವಂತ ನಟ, ಅವರಿಗೆ ಉತ್ತಮ ದೂರದೃಷ್ಟಿ ವಿವೇಚನಾ ಶಕ್ತಿ ಇದೆ. ಬಿಗ್ ಬಾಸ್‌ ನಿರೂಪಣೆಯಲ್ಲಿ ಅವರ ವಾಕ್ಶಕ್ತಿ, ಮಾತಿನ ನೈಪುಣ್ಯತೆಯನ್ನು ಎಲ್ಲರೂ ಕಂಡಿದ್ದಾರೆ, ಮೆಚ್ಚಿದ್ದಾರೆ. ಅವರೂ ಸಹ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷದ ಪರ ಪ್ರಚಾರ ನಡೆಸಿದ್ದಾರೆ. ವೈಯಕ್ತಿಕವಾಗಿ ಅವರು ರಾಜಕೀಯಕ್ಕೆ ಬರುವುದಿಲ್ಲವೆಂದು ಹೇಳಿದ್ದಾರಾದರೂ ಅವರಿಗೆ ಇರುವ ಸಮಾಜದ ಪರ ಮನಸ್ಸು ಅವರನ್ನು ರಾಜಕೀಯದತ್ತ ಸೆಳೆದರೆ ಅಚ್ಚರಿ ಏನಿಲ್ಲ.

ಲವ್ಲಿ ಪ್ರೇಮ್‌ ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಇದೆ

ಲವ್ಲಿ ಪ್ರೇಮ್‌ ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಇದೆ

ನಟ ಪ್ರೇಮ್ ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಇದ್ದಂತೆ ತೋರುತ್ತದೆ. ಸುಮಲತಾ ಅವರ ಪರ ಪ್ರಚಾರ ಸಮಯದಲ್ಲಿ ದರ್ಶನ್-ಯಶ್ ಅವರಿಗೆ ಅವರೂ ಸಹ ಜೊತೆಯಾಗಿದ್ದರು. ರಾಜಕೀಯದ ಬಗ್ಗೆ ಆಸಕ್ತಿ ಇದ್ದ ಕಾರಣದಿಂದಲೇ ಅವರು ಪ್ರಚಾರ ಕಣಕ್ಕೆ ಬಂದಿದ್ದರು ಎಂದು ಸುಲಭವಾಗಿ ಊಹಿಸಬಹುದು. ಮುಂದೆ ಅವರನ್ನು ಸಕ್ರಿಯ ರಾಜಕಾರಣದಲ್ಲಿ ನೋಡಬಹುದೇನೋ?

'ಅವನೇ ಶ್ರೀಮನ್ನಾರಾಯಣ' ಟೀಸರ್ ಕ್ವಾಲಿಟಿ ಕಂಡು ಜೈ ಎಂದ ಕನ್ನಡಿಗರು

ರಾಗಿಣಿ ಬರ್ತಾರೆ ರಾಜಕೀಯಕ್ಕೆ

ರಾಗಿಣಿ ಬರ್ತಾರೆ ರಾಜಕೀಯಕ್ಕೆ

ತುಪ್ಪದ ಹುಡುಗಿ, ಲೇಡಿ ಬಾಂಡ್ ರಾಗಿಣಿ ಅವರು ಸಕ್ರಿಯ ರಾಜಕಾರಣಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಸ್ವತಃ ಅವರೇ ಒಮ್ಮೆ ಈ ಬಗ್ಗೆ ಹೇಳಿಕೊಂಡಿದ್ದಾರೆ ಸಹ. ಅವರೂ ಸಹ ಚುನಾವಣೆ ಪ್ರಚಾರಗಳಲ್ಲಿ ಭಾಗವಹಿಸಿದ್ದಾರೆ. ರಾಜಕೀಯ ಮಹಾತ್ವಾಕಾಂಕ್ಷಿ ಹೊಂದಿರುವ ಅವರು ರಾಜಕೀಯ ಪ್ರವೇಶ ಮಾಡುವುದು ಬಹುತೇಕ ಸ್ಪಷ್ಟ.

ರಚಿತಾ ರಾಮ್ ಬರಬಹುದೇ ರಾಜಕೀಯಕ್ಕೆ?

ರಚಿತಾ ರಾಮ್ ಬರಬಹುದೇ ರಾಜಕೀಯಕ್ಕೆ?

ಚಂದನವನದ ಸದ್ಯದ ಹಾರುವ ಚಿಟ್ಟೆ ರಚಿತಾ ರಾಮ್ ಅವರು ರಾಜಕೀಯಕ್ಕೆ ಬರಬಹುದೇ ಎಂಬ ಅನುಮಾನ ಅವರ ಕೆಲವು ಹೇಳಿಕೆಗಳಿಂದ ಮೂಡುತ್ತದೆ. ಅವರು ಕೆಲವು ವ್ಯಕ್ತಿಗಳ ಬಗ್ಗೆ ಮಾತನಾಡಿರುವ ವಿಡಿಯೋ ನಿರ್ದಿಷ್ಟ ಪಕ್ಷದ ಪೇಜ್‌ ಗಳಲ್ಲಿ ಪದೇ ಕಾಣಿಸಿಕೊಳ್ಳುತ್ತಿರುತ್ತದೆ. ಗೌಡ್ರ ಹುಡ್ಗಿ ರಚಿತಾ ರಾಮ್‌ಗೆ ಅವಕಾಶಗಳೂ ಸಾಕಷ್ಟಿವೆ.

ಚಿಕ್ಕಣ್ಣ ಬರ್ತಾರಾ ರಾಜಕೀಯಕ್ಕೆ?

ಚಿಕ್ಕಣ್ಣ ಬರ್ತಾರಾ ರಾಜಕೀಯಕ್ಕೆ?

ಹಾಸ್ಯ ನಟ ಚಿಕ್ಕಣ್ಣ ರಾಜಕೀಯಕ್ಕೆ ಬರುವ ಸಾಧ್ಯತೆ ಬಹಳವಾಗಿ ಇದೆ. ಚಿಕ್ಕಣ್ಣ ಅವರು ಕುಮಾರಸ್ವಾಮಿ ಅವರನ್ನು ಬಹುವಾಗಿ ಹೊಗಳುತ್ತಿರುವ ವಿಡಿಯೋ ಒಂದು ಕೆಲವು ತಿಂಗಳ ಹಿಂದಷ್ಟೆ ವೈರಲ್ ಆಗಿತ್ತು. ಲೋಕಸಭೆ ಚುನಾವಣೆ ಸಮಯದಲ್ಲಿ ಚಿಕ್ಕಣ್ಣ ಅವರು ಸುಮಲತಾ ಅವರ ಪರ ಪ್ರಚಾರದಲ್ಲಿ ಸಹ ಪಾಲ್ಗೊಂಡಿದ್ದರು. ಅವರಿಗೆ ರಾಜಕೀಯ ಆಸಕ್ತಿ ಇದೆ. ಇನ್ನಷ್ಟು ಪ್ರಬುದ್ಧತೆ ಬೆಳೆಸಿಕೊಂಡು ಅವರು ರಾಜಕೀಯ ಪ್ರವೇಶ ಮಾಡುವ ಸಾಧ್ಯತೆ ಇದೆ.

ಇವರು ರಾಜಕೀಯಕ್ಕೆ ಬಂದರೆ ಉತ್ತಮ

ಇವರು ರಾಜಕೀಯಕ್ಕೆ ಬಂದರೆ ಉತ್ತಮ

ಕನ್ನಟದ ಜಂಟಲ್‌ಮನ್ ನಟ ರಮೇಶ್ ಅರವಿಂದ್. ಅವರೊಬ್ಬ ವಿಚಾರವಾದಿ, ಚಿಂತನಾಶೀಲರು, ದೂರದೃಷ್ಟಿ ಉಳ್ಳ ವ್ಯಕ್ತಿ. ಅವರ ಜನಪರ ಕಾಳಜಿ, ವಿಷಯ ಜ್ಞಾನ, ಕಲಿಯು ಉತ್ಸಾವನ್ನು ಯಾರೂ ಬೊಟ್ಟು ಮಾಡುವಂತಿಲ್ಲ. ಇಂಜಿನಿಯರ್ ಪದವೀಧರರಾಗಿರುವ ಅವರು ರಾಜಕೀಯಕ್ಕೆ ಬಂದರೆ ಜನರಿಗೆ ಒಳಿತಾಗುವುದರಲ್ಲಿ ಅನುಮಾನವಿಲ್ಲ. ಆದರೆ ಈ ವರೆಗೆ ಅವರು ರಾಜಕೀಯ ಪ್ರವೇಶದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.

ರಾಜಕೀಯದಲ್ಲಿ ಯಶಸ್ಸು ಕಂಡ ಸಿನಿ ಮಂದಿ

ರಾಜಕೀಯದಲ್ಲಿ ಯಶಸ್ಸು ಕಂಡ ಸಿನಿ ಮಂದಿ

ರಾಜ್ಯದಲ್ಲಿ ಸಿನಿಮಾದಲ್ಲಿದ್ದು ರಾಜಕೀಯಕ್ಕೆ ಬಂದು ಯಶಸ್ಸು ಕಂಡವರ ಸಾಲು ದೊಡ್ಡದಿದೆ. ಅಂಬರೀಶ್, ಕುಮಾರಸ್ವಾಮಿ, ಶಶಿಕುಮಾರ್, ಮಧು ಬಂಗಾರಪ್ಪ, ಕುಮಾರ ಬಂಗಾರಪ್ಪ, ನಟಿ ರಮ್ಯಾ, ತಾರಾ ಅನುರಾಧ, ಉಮಾಶ್ರೀ, ಜಯಪ್ರದ, ಅನಂತ್‌ನಾಗ್, ಬಿಸಿ ಪಾಟೀಲ್ ಇನ್ನು ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಲು ಹೋರಾಡುತ್ತಿರುವವರ ಪೈಕಿ ಉಪೇಂದ್ರ ಮೊದಲ ಸಾಲಿನಲ್ಲಿದ್ದರೆ ಪ್ರಕಾಶ್ ರೈ, ಪೂಜಾ ಗಾಂಧಿ, ನಟಿ ಭಾವನಾ ಇನ್ನೂ ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.

English summary
Kannada film industry has a relation with politics from decads. Many of Kannada film stars have big fan followings and has love towards social work so they can or may join active politics in near or far future.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more