»   » ನವ ದಾಂಪತ್ಯದ ಮೊದಲ ತಿಂಗಳ ಸಂಭ್ರಮದಲ್ಲಿ ಅಮೂಲ್ಯ-ಜಗದೀಶ್ ಮಾಡಿದ್ದೇನು.?

ನವ ದಾಂಪತ್ಯದ ಮೊದಲ ತಿಂಗಳ ಸಂಭ್ರಮದಲ್ಲಿ ಅಮೂಲ್ಯ-ಜಗದೀಶ್ ಮಾಡಿದ್ದೇನು.?

Posted By:
Subscribe to Filmibeat Kannada

ನಟಿ ಅಮೂಲ್ಯ ಹಾಗೂ ಜಗದೀಶ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಇಂದಿಗೆ ಸರಿಯಾಗಿ ಒಂದು ತಿಂಗಳು.

ಮೇ 12 ರಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಟಿ ಅಮೂಲ್ಯ ಹಾಗೂ ಜಗದೀಶ್ ರವರ ವಿವಾಹ ಮಹೋತ್ಸವ ನಡೆದಿತ್ತು. ಮದುವೆ ಬಳಿಕ ವೆಡ್ಡಿಂಗ್ ಪಾರ್ಟಿ ಹಾಗೂ ಅದ್ಧೂರಿ ಆರತಕ್ಷತೆ ಮಾಡಿಕೊಂಡಿದ್ದ ಈ ಜೋಡಿಗೆ ಇಂದು 'ಮೊದಲ ತಿಂಗಳ' ಸಂಭ್ರಮ.

ಮೊದಲ ತಿಂಗಳ ಸಂಭ್ರಮದಲ್ಲಿ ನವದಂಪತಿ ಅಮೂಲ್ಯ-ಜಗದೀಶ್ ಏನು ಮಾಡಿರಬಹುದು ಎಂಬ ಕುತೂಹಲ ಇದ್ಯಾ.? ಹಾಗಾದ್ರೆ, ಈ ವರದಿ ಓದಿರಿ....

ಸಸಿ ನೆಟ್ಟ ನವ ದಂಪತಿ

ಮೊದಲ ತಿಂಗಳ ಸಂಭ್ರಮದಲ್ಲಿ ಇರುವ ನವದಂಪತಿ ಅಮೂಲ್ಯ ಹಾಗೂ ಜಗದೀಶ್ ಸಸಿ ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.

ಗ್ರೋ ಗ್ರೀನ್

''ಸಸಿ ನೆಡುವ ಮೂಲಕ ನಮ್ಮ ಮೊದಲ ತಿಂಗಳ ಮದುವೆ ಸಂಭ್ರಮ ಆಚರಿಸುತ್ತಿದ್ದೇವೆ. #AJ_GrowGreen ಎಂಬ ಹ್ಯಾಶ್ ಟ್ಯಾಗ್ ಅಡಿ ಸಸಿಗಳನ್ನು ನೆಡುವ ಯೋಜನೆ ಕುರಿತು ಇನ್ನಷ್ಟು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೋಗುವ ಬಗ್ಗೆ ಪ್ಲಾನ್ ಮಾಡುತ್ತಿದ್ದೇವೆ'' ಎಂದು ಫೇಸ್ ಬುಕ್ ನಲ್ಲಿ ಅಮೂಲ್ಯ-ಜಗದೀಶ್ ಬರೆದುಕೊಂಡಿದ್ದಾರೆ.

ಮದುವೆ ದಿನವೂ ಸಸಿ ನೆಟ್ಟಿದ್ದ ಜೋಡಿ

ಮದುವೆ ಆದ ದಿನ ಕೂಡ ಸಸಿ ನೆಟ್ಟು ನಟಿ ಅಮೂಲ್ಯ ಹಾಗೂ ಜಗದೀಶ್ ಪರಿಸರ ಪ್ರೇಮ ಮೆರೆದಿದ್ದರು.

ನವ ದಂಪತಿ ಮಾಡಿರುವ ಪ್ರಮಾಣ

ವಿವಾಹವಾದ ದಿನ ಸಸಿ ನೆಟ್ಟ ಈ ಜೋಡಿ, ಪ್ರತಿ ವಿವಾಹ ವಾರ್ಷಿಕೋತ್ಸವದಂದು ಸಸಿ ನೆಡಲು ನಿರ್ಧರಿಸಿದೆ. ಜೊತೆಗೆ ಮೊದಲನೇ ವಿವಾಹ ವಾರ್ಷಿಕೋತ್ಸವದ ವರೆಗೂ ಪ್ರತಿ ತಿಂಗಳು ತಮ್ಮ ತೋಟದಲ್ಲಿ ಸಸಿ ನೆಡುವ ಯೋಜನೆ ಹಾಕಿಕೊಂಡಿದೆ. ಅದರಂತೆ, ಮೊದಲ ತಿಂಗಳ ಮದುವೆ ಸಂಭ್ರಮ ದಿನವಾದ ಇಂದು ಅಂದುಕೊಂಡಂತೆ ಸಸಿ ನೆಟ್ಟಿದೆ ಈ ಜೋಡಿ.

ನಮ್ಮ ಕಡೆಯಿಂದ ಹ್ಯಾಟ್ಸ್ ಆಫ್.!

ಆನಿವರ್ಸರಿ ಅಂದ್ರೆ ಪಾರ್ಟಿ, ಕ್ಲಬ್, ಫಾರಿನ್ ಟೂರ್ ಎಂದು ಫ್ಲೈಟ್ ಹತ್ತುವ ತಾರೆಯರ ಮಧ್ಯೆ ಅಮೂಲ್ಯ ಹಾಗೂ ಜಗದೀಶ್ ಸ್ವಲ್ಪ ವಿಭಿನ್ನ ಹಾಗೂ ಸಮಾಜದ ಪರ. ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಈ ಜೋಡಿಗೆ ನಮ್ಮ ಕಡೆಯಿಂದ ಒಂದು ಹ್ಯಾಟ್ಸ್ ಆಫ್.

English summary
In pics: This is how Kannada Actress Amulya and her Husband Jagadeesh celebrated their 1st Month Wedding Anniversary.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada