»   » ಅದು ರಾಧಿಕಾ 'ಕಮ್ ಬ್ಯಾಕ್' ಸಿನಿಮಾ ಅಂತ ಕರೆಯಬೇಡಿ ಎಂದ ಯಶ್.!

ಅದು ರಾಧಿಕಾ 'ಕಮ್ ಬ್ಯಾಕ್' ಸಿನಿಮಾ ಅಂತ ಕರೆಯಬೇಡಿ ಎಂದ ಯಶ್.!

Posted By:
Subscribe to Filmibeat Kannada

ಮದುವೆ ಆದ ಬಳಿಕ ಯಾವ ಚಿತ್ರವನ್ನೂ ಒಪ್ಪಿಕೊಳ್ಳದ 'ಸ್ಯಾಂಡಲ್ ವುಡ್ ಕ್ವೀನ್' ರಾಧಿಕಾ ಪಂಡಿತ್ ಇದೀಗ ಒಂದು ಸಿನಿಮಾವನ್ನ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವೆಲ್ಲ ಓದಿದ್ರಿ. ಈಗ ಇದೇ ಮ್ಯಾಟರ್ ಬಗ್ಗೆ ನಟ ಯಶ್ ಮಾತನಾಡಿದ್ದಾರೆ.

ವಾವ್....ಮದುವೆ ಬಳಿಕ ರಾಧಿಕಾ ಪಂಡಿತ್ ಮೊದಲ ಸಿನಿಮಾ ಶುರು.!

ಅಲ್ಲದೇ, 'ಇದು ರಾಧಿಕಾ ಪಂಡಿತ್ ಕಮ್ ಬ್ಯಾಕ್' ಎಂದು ಉದ್ಗಾರ ಮಾಡುತ್ತಿರುವವರಿಗೆ ನಟ ಯಶ್ ಒಂದು ಮಾತು ಹೇಳಿದ್ದಾರೆ. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

'ರಾಧಿಕಾ ಕಮ್ ಬ್ಯಾಕ್' ಎಂದು ಕರೆಯಬೇಡಿ.!

''ರಾಧಿಕಾ ಪಂಡಿತ್ ಸಿನಿಮಾ ಮಾಡಲು ಒಪ್ಪಿಕೊಂಡಿರುವುದು ನನಗೆ ಖುಷಿ ನೀಡಿದೆ. ಆದರೆ, ಅದನ್ನ 'ಕಮ್ ಬ್ಯಾಕ್' ಎಂದು ಕರೆಯಬೇಡಿ'' ಎಂಬುದು ನಟ ಯಶ್ ರವರ ಮಾತು.

ಬಂಗಾರಪೇಟೆ ಪಾನಿಪೂರಿ ತಿಂದ ಯಶ್ 'ತಿಂಡಿಪೋತ' ಪತ್ನಿ ರಾಧಿಕಾ ಪಂಡಿತ್

ಬ್ರೇಕ್ ತೆಗೆದುಕೊಂಡಿದ್ದರು ಅಷ್ಟೆ.!

''ಇಷ್ಟು ವರ್ಷಗಳ ಕಾಲ ರಾಧಿಕಾ ತುಂಬಾ ಕಷ್ಟ ಪಟ್ಟಿದ್ದಾರೆ. ನಮ್ಮ ಮದುವೆ ಆದ ಬಳಿಕ ಆರು ತಿಂಗಳ ಕಾಲ ಅವರು ಬ್ರೇಕ್ ತೆಗೆದುಕೊಂಡಿದ್ದರು ಅಷ್ಟೆ'' - ಯಶ್, ನಟ

ಮಿಸಸ್ ರಾಮಾಚಾರಿ ರಾಧಿಕಾ ಪಂಡಿತ್ ಇದೇ ವಿಷಯಕ್ಕೆ ಈಗ ಸದ್ದು ಮಾಡುತ್ತಿದ್ದಾರೆ

ಯಶ್ ಮುಂದಿಟ್ಟಿರುವ ಪ್ರಶ್ನೆ

''ನಾನು ಕೂಡ ಮದುವೆ ಆದ ಬಳಿಕ ಬ್ರೇಕ್ ತೆಗೆದುಕೊಂಡಿದ್ದೆ. ನಂತರವಷ್ಟೇ 'ಕೆ.ಜಿ.ಎಫ್' ಚಿತ್ರಕ್ಕೆ ಚಾಲನೆ ನೀಡಿದ್ದು. ಹೀಗಾಗಿ, 'ಕೆ.ಜಿ.ಎಫ್' ನನ್ನ ಕಮ್ ಬ್ಯಾಕ್ ಎಂದು ಯಾಕೆ ಯಾರೂ ಹೇಳಲ್ಲ.? ಬರೀ ನಟಿಯರಿಗೆ ಮಾತ್ರ ಕಮ್ ಬ್ಯಾಕ್ ಎಂಬ ಉದ್ಗಾರ ಯಾಕೆ.?'' ಎಂಬುದು ಯಶ್ ರವರ ಪ್ರಶ್ನೆ.

ಮದುವೆ ಆದ ನಾಯಕಿಯರಿಗೆ ಪ್ರೋತ್ಸಾಹ ಸಿಗಲಿ

''ಮಹಿಳೆಯರ ಕುರಿತು ಇಂತಹ ತಾರತಮ್ಯ ನಿಲ್ಲಬೇಕು. ರಾಧಿಕಾ ರವರ ಈ ನಡೆಯಿಂದ ಮದುವೆ ಆದ ನಾಯಕಿಯರು ಮತ್ತೆ ಬಣ್ಣ ಹಚ್ಚಲು ಪ್ರೋತ್ಸಾಹ ನೀಡಲಿದೆ ಎಂದು ಭಾವಿಸುತ್ತೇನೆ'' - ಯಶ್.

ರಾಧಿಕಾ ಪಂಡಿತ್ ಸಿನಿಮಾ

ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಲಿರುವ ನಿರ್ದೇಶಕಿ ಪ್ರಿಯಾ ಆಕ್ಷನ್ ಕಟ್ ಹೇಳಲಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲು ರಾಧಿಕಾ ಪಂಡಿತ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

English summary
''I'm happy for Radhika, but please don't call it her comeback'' says Rocking Star Yash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada