Just In
Don't Miss!
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಹುಲಿ'ಯಂತೆ ಘರ್ಜಿಸಿದ್ದ ಸ್ಯಾಂಡಲ್ ವುಡ್ ಕಲಿಗಳು ಇವರು.!
ಜುಲೈ 29 ಅಂತಾರಾಷ್ಟ್ರೀಯ ಹುಲಿ ದಿನ. ಇತ್ತೀಚಿನ ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಕುಸಿಯುತ್ತಿದೆ. ಕಾರಣಾಂತರಗಳಿಂದ ಹುಲಿಗಳ ಸಂತತಿ ನಾಶವಾಗುತ್ತಿದೆ. ಮುಂದಿನ ಪೀಳಿಗೆಗೆ ಹುಲಿಗಳು ಇದ್ದವು ಎಂಬುದನ್ನ ಬರಿ ಚಿತ್ರಗಳಲ್ಲಿ ತೋರಿಸಬೇಕಾಗುವ ಸಂದರ್ಭ ಬಂದರೂ ಅಚ್ಚರಿ ಇಲ್ಲ ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಭವಿಷ್ಯಕ್ಕಾಗಿ ಹುಲಿಗಳ ಸಂರಕ್ಷಣೆ ಆಗಬೇಕು ಎಂಬುದು ಅರಣ್ಯ ಇಲಾಖೆಗಳ ಉದ್ದೇಶವಾಗಿದೆ. ಹಾಗಾಗಿ, ನಟ ದರ್ಶನ್ ಸೇರಿದಂತೆ ಕೆಲವು ಸಿನಿಮಾ ಸ್ಟಾರ್ ಗಳು ಹುಲಿಗಳನ್ನ ದತ್ತು ಪಡೆದು ಪೋಷಿಸುತ್ತಿದ್ದಾರೆ.
Infographics: ಹುಲಿಗಳ ಲೆಕ್ಕದಲ್ಲಿ ಮಧ್ಯಪ್ರದೇಶ ನಂ.1, ಕರ್ನಾಟಕ ನಂ.2
ಹುಲಿಗಳಿಗೂ ಕನ್ನಡ ಚಿತ್ರರಂಗಕ್ಕೂ ಒಂಥರಾ ನಂಟು. ಹುಲಿ ಇಲ್ಲದೇ ಸ್ಯಾಂಡಲ್ ವುಡ್ ನೆನಪಿಸಿಕೊಳ್ಳುವುದು ಕಷ್ಟ. ಹುಲಿಯ ಬಗ್ಗೆಯೇ ಹಲವು ಚಿತ್ರಗಳನ್ನ ಮಾಡಿದ್ದಾರೆ. ಹುಲಿಯ ಹೆಸರಿಟ್ಟು ಸಿನಿಮಾಗಳನ್ನ ಕೂಡ ಮಾಡಿದ್ದಾರೆ. ಹಾಗಿದ್ರೆ, ಹುಲಿ ಎಂದಾಕ್ಷಣ ಚಂದನವನದಲ್ಲಿ ನೆನಪಾಗುವುದು ಏನು? ಮುಂದೆ ಓದಿ.....

ಟೈಗರ್ ಗೆ ಇನ್ನೊಂದು ಹೆಸರೇ ಪ್ರಭಾಕರ್
ಹುಲಿ ಎಂದಾಕ್ಷಣ ಮೊದಲು ನೆನಪಾಗುವುದೇ ಟೈಗರ್ ಪ್ರಭಾಕರ್. ಅವರ ಹೆಸರಿನಲ್ಲೇ ಟೈಗರ್ ಇದೆ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ 500ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಕಲಾವಿದ. ಸಿನಿಮಾವೊಂದರಲ್ಲಿ ಹುಲಿ ಜೊತೆ ನೈಜವಾಗಿ ಕಾದಾಡಿದ್ದರಂತೆ. ಟೈಗರ್, ಟೈಗರ್ ಗಂಗು, ಹುಲಿ ಹೆಬ್ಬುಲಿ, ಹುಲಿ ಹೆಜ್ಜೆ (ವಿಷ್ಣುವರ್ಧನ್ ಜೊತೆ ನಟಿಸಿದ್ದ ಚಿತ್ರ) ಹೀಗೆ ಹುಲಿ ಹೆಸರಿನಲ್ಲಿ ಪ್ರಭಾಕರ್ ಹಲವು ಸಿನಿಮಾಗಳನ್ನ ಮಾಡಿದ್ದಾರೆ. ಅವರ ವಿನೋದ್ ಪ್ರಭಾಕರ್ 'ಮರಿ ಟೈಗರ್' ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.
ತಂದೆಯ ಸಾವಿನ ಕಾರಣ ಬಿಚ್ಚಿಟ್ಟ ವಿನೋದ್ ಪ್ರಭಾಕರ್

ಅಣ್ಣಾವ್ರ 'ಬೆಟ್ಟದ ಹುಲಿ'
1965ರಲ್ಲಿ ಡಾ ರಾಜ್ ಕುಮಾರ್ ಅವರು 'ಬೆಟ್ಟದ ಹುಲಿ' ಎಂದು ಸಿನಿಮಾ ಮಾಡಿದ್ದರು. ಶೇಷಗಿರಿ ರಾವ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ರಾಜ್ ಕುಮಾರ್, ಕೆಎಸ್ ಅಶ್ವಥ್, ಜಯಂತಿ, ಉದಯ್ ಕುಮಾರ್, ಎಂಪಿ ಶಂಕರ್ ನಟಿಸಿದ್ದರು. 1979ರಲ್ಲಿ 'ಹುಲಿ ಹಾಲಿವ ಮೇವು' ಎಂದು ಹುಲಿ ಹೆಸರಿನಲ್ಲಿ ಇನ್ನೊಂದು ಸಿನಿಮಾ ಮಾಡಿದ್ದರು ಅಣ್ಣಾವ್ರು.

ಯಶ್ ಗೆ ಇಮೇಜ್ ಕೊಟ್ಟಿದ್ದು 'ರಾಜಾಹುಲಿ'
ರಾಕಿಂಗ್ ಸ್ಟಾರ್ ಯಶ್ ಲವರ್ ಬಾಯ್ ಇಮೇಜ್ ನಲ್ಲಿ ಯಶಸ್ಸು ಕಂಡಿದ್ದರು. ಯಶ್ ಗೆ ಮಾಸ್ ಇಮೇಜ್ ತಂದುಕೊಟ್ಟಿದ್ದೇ 'ರಾಜಾಹುಲಿ'. ಈ ಸಿನಿಮಾ ಮಾಡಿದ ಬಳಿಕ ಯಶ್ ಅವರ ಲಕ್ಕು ಬದಲಾಯಿತು. ಈ ಹೆಸರಿಗೆ ಒಂದು ಗತ್ತು ಬಂತು. ಅಲ್ಲಿಂದ ಯಶ್ ರಾಜಾಹುಲಿಯಾಗಿ ಹೆಜ್ಜೆ ಇಟ್ಟರು.

ಹೆಬ್ಬುಲಿ ಸುದೀಪ್
ಕಿಚ್ಚ ಸುದೀಪ್ ಅವರಿಗೂ ಕೂಡ ಹುಲಿಯ ನಂಟಿದೆ. ತಮಿಳಿನಲ್ಲಿ ಪುಲಿ (ಹುಲಿ) ಎಂಬ ಸಿನಿಮಾ ಮಾಡಿದ್ದರು. ಅದಾದ ಬಳಿಕ ಕನ್ನಡದಲ್ಲಿ 'ಹೆಬ್ಬುಲಿ' ಸಿನಿಮಾ ಮಾಡಿ ಘರ್ಜಿಸಿದ್ದರು. ಈಗ ಹೆಬ್ಬುಲಿ ಅಂದ್ರೆ ಸುದೀಪ್ ಅಂತಾರೆ ಕನ್ನಡ ಕಲಾಭಿಮಾನಿಗಳು.

'ಹುಲಿ' ಬಿಡದ ಗುರುದೇಶಪಾಂಡೆ
ಅಂದ್ಹಾಗೆ, ಯಶ್ ಜೊತೆ ರಾಜಾಹುಲಿ ಮಾಡಿದ್ದು ನಿರ್ದೇಶಕ ಗುರುದೇಶಪಾಂಡೆ. ಅದಾದ ಬಳಿಕ ಪಡ್ಡೆಹುಲಿ ಎಂದು ಇನ್ನೊಂದು ಸಿನಿಮಾ ಮಾಡಿದ್ದರು. ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ಅಭಿನಯದಲ್ಲಿ ಈ ಸಿನಿಮಾ ತೆರೆಕಂಡಿತ್ತು.

'ಹುಲಿ' ಕಿಶೋರ್
2010ರಲ್ಲಿ ನಟ ಕಿಶೋರ್ ಹುಲಿ ಎಂದು ಸಿನಿಮಾ ಮಾಡಿದ್ದರು. ಈ ಚಿತ್ರವನ್ನ ಶಿವಪ್ರಕಾಶ್ ನಿರ್ಮಿಸಿದ್ದರು. ಓಂ ಪ್ರಕಾಶ್ ನಿರ್ದೇಶನ ಮಾಡಿದ್ದರು. ಈ ಹುಲಿ ಅಷ್ಟಾಗಿ ಘರ್ಜಿಸಲಿಲ್ಲವಾದರೂ ಇಂಡಸ್ಟ್ರಿಯಲ್ಲಿ ಒಂದು ನೆನಪಾಗಿ ಉಳಿದಿದೆ. ಹೀಗೆ, ಹುಲಿ ಹೆಸರಿನಲ್ಲಿ ಅನೇಕ ಸಿನಿಮಾಗಳು ಬಂದಿದೆ. ಆದರೆ, ಈ ಮೇಲಿನ ಚಿತ್ರಗಳು ಥಟ್ ಅಂತ ನೆನಪಾಗುತ್ತೆ.