For Quick Alerts
ALLOW NOTIFICATIONS  
For Daily Alerts

  ತಮಿಳುನಾಡಿನಲ್ಲಿ ಮತ್ತೊಂದು ಕ್ರಾಂತಿ ಆಗುವುದಾ?

  By ರಾಧಾ ರಾಧಾಕೃಷ್ಣನ್
  |

  'ವಿಶ್ವರೂಪಂ' ಚಿತ್ರವನ್ನು ಏಕೆ ನಿಷೇಧಿಸಲಾಯಿತು, ಕಮಲ್ ಹಾಸನ್ ಅವರನ್ನು ಏಕೆ ಮೂಲೆಗುಂಪು ಮಾಡಲಾಯಿತು ಎಂಬ ವಿಷಯ ಕುರಿತು ಅನೇಕರು ಅನೇಕ ರೀತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ, ಟೀಕಿಸಿದ್ದಾರೆ ಮತ್ತು 'ತೆರೆಯ ಹಿಂದಿನ' ಕಥೆಯನ್ನು ಎಳೆಎಳೆಯಾಗಿ ತೆರೆದಿಡಲು ಯತ್ನಿಸಿದ್ದಾರೆ. ಯಾವುದು ಸತ್ಯ ಯಾವುದು ಮಿಥ್ಯ ಎಂಬುದನ್ನು ಈ ವಿಷಯದಲ್ಲಿ ಅಷ್ಟು ಸುಲಭವಾಗಿ ಹೇಳುವುದು ಅಷ್ಟು ಸುಲಭವಲ್ಲ.

  ಆದರೆ, ಈ ಘಟನೆ ನಾವು ಭಾರತೀಯರು ಎಷ್ಟು ಬೇಗನೆ ವಿಚಲಿತರಾಗುತ್ತೇವೆ, ಎಷ್ಟು ಬೇಗನೆ ಸೈರಣೆ ಕಳೆದುಕೊಳ್ಳುತ್ತೇವೆ ಎಂಬುದಕ್ಕೆ ತಕ್ಕ ಉದಾಹರಣೆ. ಇತ್ತೀಚಿನ ದಿನಗಳಲ್ಲಿ ಅನೇಕ ನಟರು, ಲೇಖಕರು ಮತ್ತು ಖ್ಯಾತನಾಮರು ಇಂತಹ ಆರೋಪಗಳಿಗೆ ಗುರಿಯಾಗಿದ್ದಾರೆ, ಟೀಕೆಗೊಳಗಾಗಿದ್ದಾರೆ ಮತ್ತು ಅವರ ಸೃಜನಾತ್ಮಕ ಸ್ವಾತಂತ್ರ್ಯವನ್ನು ಪ್ರಶ್ನಿಸಲಾಗಿದೆ. ಇದು ಜಾತ್ಯತೀತ ರಾಷ್ಟ್ರವಾದ ಭಾರತದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಮಾಡುವುದಿಲ್ಲ. ಇದು ಆಷಾಢಭೂತಿತನವಲ್ಲದೆ ಮತ್ತೇನೂ ಅಲ್ಲ.

  ಈಗ ಸುದ್ದಿಯಲ್ಲಿರುವ ತಮಿಳುನಾಡಿನಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಿರುವ ರಾಜಕೀಯ ಮತ್ತು ಜನಸಾಮಾನ್ಯರನ್ನು ಹಿಡಿದಿಟ್ಟಿರುವ ಸಿನೆಮಾರಂಗದ ನಡುವಿನ ನೆಂಟಸ್ತಿಕೆ ಮತ್ತು ನರಳಾಟ ಅಪಾರ. ಕಾವೇರಿ ನೀರು ಹಂಚಿಕೆ ವಿಷಯ ಬಂದರೆ ಇಡೀ ಚಿತ್ರರಂಗ ರಾಜಕಾರಣಿಗಳ ಪರವಾಗಿ ನಿಲ್ಲುತ್ತಾರೆ. ಇಲ್ಲಿನ ಅನೇಕ ನಟರ ಅಲ್ಟಿಮೇಟ್ ಉದ್ದೇಶವೆಂದರೆ ರಾಜಕೀಯಕ್ಕೆ ಕಾಲಿಡುವುದು ಮತ್ತು ಹೆಚ್ಚೆಂದರೆ ಮುಖ್ಯಮಂತ್ರಿಯಾಗುವುದು, ಕಂಪನಿಯ ಎಕ್ಸಿಕ್ಯೂಟಿವ್ ಒಬ್ಬ ಸಿಇಓ ಆಗುವ ಗುರಿ ಇಟ್ಟುಕೊಂಡಂತೆ.


  ಇರುವ ಎರಡು ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗಳಲ್ಲಿ ಕಾಲಿವುಡ್‌ನ ಹಲವಾರು ನಾಯಕ ನಟರು, ಖಳನಟರು, ಹಾಸ್ಯನಟರು, ಪೋಷಕ ನಟರೇ ತುಂಬಿಕೊಂಡಿದ್ದಾರೆ. ಪಕ್ಷ ಅಧಿಕಾರದಲ್ಲಿದ್ದರೆ ಕಲಾಕಾರರು ಪ್ರವರ್ಧಮಾನಕ್ಕೆ ಬರುತ್ತಾರೆ, ಅಧಿಕಾರ ಇಲ್ಲದಿದ್ದರೆ ಮೂಲೆಗುಂಪಾಗುತ್ತಾರೆ. ಇದು ತಮಿಳುನಾಡಿನ ರಾಜಕೀಯ ಮತ್ತು ಸಿನೆಮಾರಂಗದ ಸಂಕೀರ್ಣತೆಗಳಲ್ಲೊಂದು. ರಾಜಕೀಯದ ಬೆನ್ನುಹತ್ತಿ ಅನೇಕರು ಅಧೋಗತಿ ಹೊಂದಿದ್ದಾರೆ. ಆದರೆ, ಕಮಲ್ ಹಾಸನ್ ಕೂಡ ಬಲಿಪಶುವಾಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

  ನಾನೇನು ಕಮಲ್ ಅವರು ಭಾರೀ ಅಭಿಮಾನಿಯಲ್ಲಿ. ವೃತ್ತಿಯುದ್ದಕ್ಕೂ ಅವರು ಅನೇಕ ಬಗೆಯ ಚಿತ್ರಗಳನ್ನು ಮಾಡಲು ಯತ್ನಿಸಿದ್ದಾರೆ. ಕೆಲವು ಯಶಸ್ವಿಯಾಗಿವೆ, ಕೆಲವು ಸೋತಿವೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತಗಾರನಾಗಿ ಅನೇಕ ವಿಭಾಗಗಳಲ್ಲಿ ಕೈಯಾಡಿಸಿದ್ದರೂ ಅವರು ನಟನಾಗಿ ಮಾತ್ರ ಅತ್ಯುತ್ತಮ. ಅಮೀರ್ ಖಾನ್‌ಗಿಂತಲೂ ಮೊದಲೇ ಅವರು ತಮ್ಮ ಕೆಲಸಗಳಲ್ಲಿ ಅಸಾಧಾರಣ ಸೃಜನಾತ್ಮಕತೆ ಮತ್ತು ನೈಪುಣ್ಯತೆಯನ್ನು ತಂದಿದ್ದಾರೆ. ಜನರು ಕೂಡ ಅವರಲ್ಲಿ ಭಾರೀ ಅಭಿಮಾನ ಮತ್ತು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

  ಇಂಥ ಒಬ್ಬ ಅಪ್ರತಿಮ ನಟ ಸಿನೆಮಾರಂಗ ಮತ್ತು ರಾಜಕೀಯರಂಗದ ದುಷ್ಕೃತ್ಯಗಳಿಂದಾಗಿ ಕೆಳಮಟ್ಟಕ್ಕೆ ತಳ್ಳಲ್ಪಟ್ಟಿದ್ದಾರೆ. 100 ಕೋಟಿ ರು. ಹಾಕಿ ತೆಗೆದಿರುವ ವಿಶ್ವರೂಪಂ ಚಿತ್ರದಿಂದಾಗಿ ಆಸ್ತಿಪಾಸ್ತಿ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ (ಇದನ್ನು ಅವರೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ). ತಾವೂ ಮುಂದೆ ಬಲಿಪಶುವಾಗಬೇಕಾಗುತ್ತದೆ ಎಂಬ ಕಾರಣದಿಂದ ಅನೇಕ ಖ್ಯಾತನಾಮರು ಕಮಲ್ ಅವರನ್ನು ಬೆಂಬಲಿಸುವುದರಿಂದ ಹಿಂದುಳಿದಿದ್ದಾರೆ. ಆದರೆ, ರಾಜಕೀಯ ಮತ್ತು ಸಿನೆಮಾರಂಗದ ಕಾದಾಟದಿಂದಾಗಿ ಬಳಲುತ್ತಿರುವುದು ಶ್ರೀಸಾಮಾನ್ಯರು. ದಶಕಗಳ ಹಿಂದೆ ಪೆರಿಯಾರ್ ಮಾಡಿದ್ದ ಕ್ರಾಂತಿಯನ್ನು ಈಗಿನ ಜನರು ರಾಜಕೀಯ ಮತ್ತು ಸಿನೆಮಾರಂಗದ ವಿರುದ್ಧ ಮಾಡಬೇಕಾಗಿದೆ. ತಮಿಳುನಾಡಿನಲ್ಲಿ ಮತ್ತೊಂದು ಕ್ರಾಂತಿಯಾಗಿ 'ವಿಶ್ವರೂಪ' ಧರಿಸಲು ಕಾಸ ಸೂಕ್ತವಾಗಿದೆ. [ವಿಶ್ವರೂಪಂ ಚಿತ್ರವಿಮರ್ಶೆ]

  English summary
  Actor and director of Vishwaroopam has been victimized due to undercurrents of entertainment and politics. It is time for people in Tamil Nadu to start another movement against the State and the political system to stop it from random victimization, vendetta and witch hunting. It is high time to accord citizens of the State the self-respect they deserve.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more