»   » 'ಹಿಂಗ್ಯಾಕೆ' ಅಂತಿದ್ದಾರೆ ಟಿ.ಎನ್.ಸೀತಾರಾಮ್ ಪುತ್ರ

'ಹಿಂಗ್ಯಾಕೆ' ಅಂತಿದ್ದಾರೆ ಟಿ.ಎನ್.ಸೀತಾರಾಮ್ ಪುತ್ರ

Posted By:
Subscribe to Filmibeat Kannada

ಸೌಂಡ್ ಮಾಡದೆ ಇಂದು ಗಾಂಧಿನಗರದಲ್ಲಿ ಏನೂ ಮಾಡಕ್ಕೆ ಆಗಲ್ಲ ಎಂಬ ಪರಿಸ್ಥಿತಿ ಇದೆ. ಆದರೆ ತಳಗವಾರ ನಾರಾಯಣ ರಾವ್ ಸೀತಾರಾಮ್ (ಟಿ.ಎನ್.ಸೀತಾರಾಮ್) ಅವರ ಪುತ್ರ ಟಿ.ಎಸ್.ಸತ್ಯಜಿತ್ ಅವರ ಚಿತ್ರವೊಂದು ಸದ್ದಿಲ್ಲದಂತೆ ರೆಡಿಯಾಗ್ತಿದೆ. ಈ ಚಿತ್ರಕ್ಕೆ ಅವರು ಇಟ್ಟಿರುವ ಹೆಸರು 'ಹಿಂಗ್ಯಾಕೆ'.

ಈ ಚಿತ್ರದ ಬಗ್ಗೆ ಸೀತಾರಾಮ್ ಅವರು ಹೇಳುವುದೇನೆಂದರೆ, "ಒಂದು ಕ್ಷಣ ಬಿಡದೆ ನಗಿಸುವ, ಅತ್ಯಂತ ಸದಭಿರುಚಿಯ, ಇಂದಿನ ಯುವಜನರ ಚಿತ್ರ.
ಇವತ್ತಿನ ಕಾಲದ ಚಾಪ್ಲಿನ್ ಥರ ಇದೆ ಎನ್ನುತ್ತಾರೆ ಎಡಿಟರ್" ಎಂದಿದ್ದಾರೆ. ಚಿತ್ರದ ಸಂಕಲನಕಾರ ಹೇಳಿದ್ದನ್ನು ಅವರದೇ ಮಾತುಗಳಲ್ಲಿ ದಾಖಲಿಸಿದ್ದಾರೆ ಸೀತಾರಾಮ್. [ಜೀ ಕನ್ನಡದಲ್ಲಿ ಕ್ಲಾಸಿಕ್ ಧಾರಾವಾಹಿ 'ಮಾಯಾಮೃಗ']

Hingyaake movie poster

ಈ ಚಿತ್ರವನ್ನು ವಿಜಯಾಚಾರ್ ಎಂಬುವವರು ಓಲ್ಡ್ ಮಾಸ್ಟರ್ ಫಿಲಂಸ್ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ. ಹೊಸ ಮುಖಗಳನ್ನು ಹಾಕಿಕೊಂಡು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಸತ್ಯಜಿತ್. ಈ ಹಿಂದೆ ಅವರು ಈಟಿವಿ ಕನ್ನಡ ವಾಹಿನಿಯ 'ಚಿತ್ರಲೇಖ' ಧಾರಾವಾಹಿಯನ್ನು ನಿರ್ದೇಶಿಸಿದ್ದರು.

ಈಗ ಇದೇ ಮೊದಲ ಬಾರಿಗೆ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ಔಟ್ ಅಂಡ್ ಔಟ್ ಕಾಮಿಡಿ ಚಿತ್ರವಾಗಿರುವ 'ಹಿಂಗ್ಯಾಕೆ' ಪಾತ್ರವರ್ಗದಲ್ಲಿ ಪ್ರತೀಕ್ ಥಾಕ್ಕರ್, ಸುನಿಲ್ ಕೆಬಿ, ದೀಪ್ತಿ ಮಾನೆ, ಸುಷ್ಮಿತಾ ಮುಂತಾದವರಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಸತ್ಯಜಿತ್ ಅವರದು.

ಪಕ್ಕಾ ಮನರಂಜನೆ, ಕಾಮಿಡಿ, ಹೊಟ್ಟೆ ತುಂಬ ನಗಬೇಕು ಎಂಬುವವರು ಖಂಡಿತ ನಿರೀಕ್ಷಿಸಬೇಕಾದ ಚಿತ್ರವಿದು. ಚಿತ್ರ ಪೋಸ್ಟರ್ ಸಹ ವಿಭಿನ್ನವಾಗಿದ್ದು ಒಮ್ಮೆ ನೋಡಿದರೆ ಮತ್ತೆಮತ್ತೆ ನೋಡಿ ನಗುವಂತಿದೆ. (ಏಜೆನ್ಸೀಸ್)

English summary
Prominent Kannada film and TV serial director, actor and writer T N Seetharam's son T S Satyajith is all set to direct a film named 'Hingyaake'. The out and out comedy film is being produced by Vijayachar under the Old Master Films banner.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada