»   » ಸಾರಾ ಗೋವಿಂದು ಸಿಡಿಸಿದ ಬಾಂಬ್: ಯಾರಾ ನಟಿಯರು?

ಸಾರಾ ಗೋವಿಂದು ಸಿಡಿಸಿದ ಬಾಂಬ್: ಯಾರಾ ನಟಿಯರು?

Posted By:
Subscribe to Filmibeat Kannada

ಕನ್ನಡಿಗರಲ್ಲಿ, ಕನ್ನಡಪರ ಹೋರಾಟಗಾರರಲ್ಲಿ ಒಗ್ಗಟ್ಟಿಲ್ಲ, ಸ್ವಾಭಿಮಾನದ ಕೊರತೆಯಿದೆ, ಕನ್ನಡಪರ ಹೋರಾಟಗಳು ಸುಮ್ಮನೆ ಕಾಟಾಚಾರಕ್ಕೆ ನಡೆಯುತ್ತೆ ಎನ್ನುವ ಮಾತು ಆಗಾಗ ಕೇಳಿ ಬರುತ್ತದೆ.

ಇದಕ್ಕೆ ಪೂರಕ ಎನ್ನುವಂತೆ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ 'ಎರಡು ಬಣ' ಗಳಂತಾಗಿರುವುದಕ್ಕೆ ಉದಾಹರಣೆಗಳು ಬೇಕಾದಷ್ಟಿವೆ. ಕೆಲವರು ನ್ಯೂಟ್ರಲ್ ಆಗಿದ್ದರೆ, ಪ್ರಮುಖ ನಟರು ಬೇರೆ ಬೇರೆ ಬಣದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಿರುವುದು ದುರಂತ.

ಕೆಲವು ದಿನಗಳ ಹಿಂದೆ ಮುಗಿದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲೂ ಚಿತ್ರೋದ್ಯಮದ ಪ್ರಮುಖರು ಗೈರಾಗಿ ಸ್ಯಾಂಡಲ್ ವುಡ್ ನಲ್ಲಿ ಏನೇನೂ ಸರಿಯಿಲ್ಲ ಎಂದು ಮತ್ತೆ ಜಗಜ್ಜಾಹೀರಾಗಿತ್ತು. (ಪ್ರೇಮಿಗಳ ದಿನ ರಾಗಿಣಿ ಏನ್ಮಾಡ್ತಾರೆ)

ವಿಚಾರಕ್ಕೆ ಬರುವುದಾದರೆ, ಕನ್ನಡಪರ ಹೋರಾಟಗಾರ ಮತ್ತು ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ನೀಡಿರುವ ಹೇಳಿಕೆ, ಕನ್ನಡ ನಟಿಯರ 'ಕನ್ನಡಪರ ಹೋರಾಟ'ದ ನೈತಿಕತೆಯನ್ನೇ ಪ್ರಶ್ನಿಸುವಂತಾಗಿದೆ.

ಡಬ್ಬಿಂಗ್ ವಿರುದ್ದ ಹೋರಾಟಕ್ಕೂ ನಮ್ಮ ನಟಿಯರು ಹಣದ ಬೇಡಿಕೆ ಇಟ್ಟಿದ್ರು ಎಂದು ಸಾ.ರಾ.ಗೋವಿಂದು ಹೇಳಿಕೆ ನೀಡಿ ಹೊಸ ಬಾಂಬ್ ಸಿಡಿಸಿದ್ದಾರೆ. ಮಂದೆ ಓದಿ..

ರಾಗಿಣಿ ಅಭಿಮಾನಿಗಳ ಸಂಘ

ಪ್ರೇಮಿಗಳ ದಿನವಾದ ಫೆಬ್ರವರಿ ಹದಿನಾಲ್ಕರಂದು ಬೆಂಗಳೂರು ಗಾಂಧಿನಗರದ ಕಾನಿಷ್ಕಾ ಹೋಟೇಲ್ ನಲ್ಲಿ ತುಪ್ಪದ ಬೆಡಗಿ 'ರಾಗಿಣಿ ದ್ವಿವೇದಿ' ಅಭಿಮಾನಿಗಳ ಸಂಘ ಜನ್ಮ ತಾಳಿದೆ.

ಸ್ಯಾಂಡಲ್ ವುಡ್ಡಿನವರೂ ಬಂದಿದ್ದರು

ಅಖಿಲ ಕರ್ನಾಟಕ ರಾಗಿಣಿ ದ್ವಿವೇದಿ ಅಭಿಮಾನಿ ಸಂಘದ ವಿದ್ಯುಕ್ತ ಚಾಲನಾ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದ ಪ್ರಮುಖರು ಮತ್ತು ಇತರರು ಸಾಕ್ಷಿಯಾಗಿದ್ದರು. ಲಹರಿ ವೇಲು, ಸಾ.ರಾ.ಗೋವಿಂದು, ಬಸಂತ್ ಕುಮಾರ್ ಪಾಟೀಲ್, ಭಾ ಮಾ ಗಿರೀಶ್ ಮುಂತಾದವರು ಭಾಗವಹಿಸಿದ್ದರು.

ಸಾ.ರಾ.ಗೋವಿಂದು ಹೇಳಿದ್ದು

ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಗೋವಿಂದು, ನಮ್ಮ ಕೆಲವು ನಟಿಯರಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡಬೇಕೆನ್ನುವ ಮನಸ್ಸಿಲ್ಲ. ಎಲ್ಲವನ್ನೂ ದುಡ್ಡಿನ ದೃಷ್ಠಿಕೋನದಲ್ಲಿ ನೋಡಿದರೆ ಆಗುತ್ತಾ ಎಂದು ಗಂಭೀರ ಪ್ರಶ್ನೆಯನ್ನು ಎತ್ತಿದ್ದಾರೆ.

ದುಡ್ಡಿನ ಬೇಡಿಕೆ

ಹಿಂದೆ ನಡೆದ ಡಬ್ಬಿಂಗ್ ವಿರೋಧಿ ಹೋರಾಟದಲ್ಲಿ ಕನ್ನಡ ಚಿತ್ರೋದ್ಯಮ ಒಟ್ಟಾಗಿದ್ದರೂ ನಮ್ಮ ಕೆಲವು ನಟಿಯರು ಈ ಹೋರಾಟದಲ್ಲಿ ಭಾಗವಹಿಸಲು ಸಂಭಾವನೆ ಕೇಳಿದ್ದರು. ನೀನು ಆತರ ಆಗ್ಬೇಡಮ್ಮಾ.. ಎಂದು ರಾಗಿಣಿಗೆ, ಗೋವಿಂದು ಕಾರ್ಯಕ್ರಮದಲ್ಲಿ ಬುದ್ದಿಮಾತನ್ನು ಹೇಳಿದ್ದಾರೆ. ಗೋವಿಂದು ಅವರ ಹೇಳಿಕೆ ಹಲವು ಪ್ರಶ್ನೆ, ಗೊಂದಲಕ್ಕೆ ಕಾರಣವಾಗಿದೆ.

ಯಾರು ಎಂದು ಗೋವಿಂದು ಹೇಳಿಲ್ಲ

ಈ ಹೋರಾಟಕ್ಕೆ ಭಾಗವಹಿಸಲು ಹಣದ ಬೇಡಿಕಿಯಿಟ್ಟ ನಟಿಯರು ಯಾರು ಎನ್ನುವುದನ್ನು ಮಾತ್ರ ಹೇಳದೇ ಗೋವಿಂದು, ಹೊರಜಗತ್ತಿಗೆ ಗೊತ್ತಿಲ್ಲದ ಈ ಸುದ್ದಿಯನ್ನು ರಹಸ್ಯವಾಗಿಯೇ ಇಟ್ಟಿದ್ದಾರೆ. ಸಂಭಾವನೆಗಾಗಿ ಜನರ ಮುಂದೆ ಬಣ್ಣ ಹಚ್ಚಿಕೊಂಡು ಬರುವ ಈ ನಟಿಯರು ಯಾರು ಸ್ವಾಮಿ? ಹೆಸರು ಹೇಳಲು ನಿಮಗಾಗದಿದ್ದರೇ, ಈ ಸುದ್ದಿಯನ್ನು ಯಾಕೆ ಹೊರಗೆಡವಿದ್ದೀರಿ, ಯಾಕೆ ಮತ್ತೆ ಅಭಿಮಾನಿಗಳನ್ನು ಗೊಂದಲಕ್ಕೆ ದೂಡಿದ್ರೀ ಎನ್ನುವುದು ಗೋವಿಂದು ಅವರಿಗೆ ಕನ್ನಡ ಸಿನಿಪ್ರೇಮಿಗಳ ಹಿತಚಿಂತಕರ ಪ್ರಶ್ನೆ.

English summary
To participate in Dubbing against protest Kannada actresses demanded money, Sa. Ra Govindu statement in Ragini Dwivedi Fans Association inauguration programme.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada