For Quick Alerts
  ALLOW NOTIFICATIONS  
  For Daily Alerts

  ಗಾಂಧಿನಗರದ ಸುತ್ತ : 'ಮಜಾ ಟಾಕೀಸ್'ನಲ್ಲಿ ದರೋಡೆಕೋರರು.. 'ಯಜಮಾನ'ನ ಮತ್ತೊಂದು ಹಾಡು..

  |

  ಚಿತ್ರರಂಗದಲ್ಲಿ ದಿನ ಒಂದಷ್ಟು ಸಿನಿಮಾಗಳ ಸುದ್ದಿ ಇರುತ್ತದೆ. ಒಂದಲ್ಲ ಒಂದು ಸಿನಿಮಾ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಇಂದು ಸಹ ಅಂತಹ ಕೆಲವು ಸುದ್ದಿಗಳು ಇವೆ.

  'ಟಗರು' ಸಿನಿಮಾದ ವರ್ಷದ ಸಂಭ್ರಮದಲ್ಲಿದೆ. 'ಯಜಮಾನ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗುತ್ತಿದೆ. 'ಮಜಾ ಟಾಕೀಸ್'ಗೆ 'ಕಳ್ಬೆಟ್ಟದ ದರೋಡೆಕೋರರು' ಚಿತ್ರತಂಡ ಆಗಮಿಸಿದೆ. 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾ ಸೆನ್ಸಾರ್ ಆಗಿದೆ. ಸತೀಶ್ ನೀನಾಸಂ ಪ್ರೇಕ್ಷಕರಿಗೆ ಅಚ್ಚರಿ ನೀಡಿದ್ದಾರೆ. 'ಗೀತಾ' ಅವತಾರದಲ್ಲಿ ಶಾನ್ವಿ ಶ್ರೀವತ್ಸವ್ ಬಂದಿದ್ದಾರೆ.

  ಅಪ್ಪು ಓಪನ್ ಟಾಕ್ : ''ನಾನು ಸ್ಮಗ್ಲಿಂಗ್, ಮೈನಿಂಗ್ ಮಾಡುತ್ತೇನೆ ಎಂದಿದ್ದರು!''

  ಅಂದಹಾಗೆ, ಐದು ಹೊಸ ಕನ್ನಡ ಸಿನಿಮಾಗಳ ಐದು ಸಣ್ಣ ಸಣ್ಣ ಸುದ್ದಿಗಳ ಸಂಗ್ರಹ ಇಲ್ಲಿದೆ. ಮುಂದೆ ಓದಿ..

  ವರ್ಷದ ಸಂಭ್ರಮದಲ್ಲಿ 'ಟಗರು'

  ವರ್ಷದ ಸಂಭ್ರಮದಲ್ಲಿ 'ಟಗರು'

  ಶಿವರಾಜ್ ಕುಮಾರ್ ಅವರ 'ಟಗರು' ಸಿನಿಮಾಗೆ ಒಂದು ವರ್ಷದ ಸಂಭ್ರಮ. ಕಳೆದ ವರ್ಷ ಸೂಪರ್ ಹಿಟ್ ಆಗಿದ್ದ ಈ ಸಿನಿಮಾಗೆ ಇಂದು ಒಂದು ವರ್ಷವನ್ನು ತುಂಬಿದೆ. ಸೂರಿ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಬಂದ ಎರಡನೇ ಚಿತ್ರ ಇದಾಗಿತ್ತು. ಡಾಲಿ ಆಗಿ ಕಾಣಿಸಿಕೊಂಡಿದ್ದ ಧನಂಜಯ್ ಗೆ ದೊಡ್ಡ ಜನಪ್ರಿಯತೆ ಸಿಕ್ಕಿತ್ತು.

  'ಗೀತಾ' ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಹೊಸ ಲುಕ್

  'ಯಜಮಾನ'ನ ಮತ್ತೊಂದು ಹಾಡು

  'ಯಜಮಾನ'ನ ಮತ್ತೊಂದು ಹಾಡು

  'ಯಜಮಾನ' ಸಿನಿಮಾದ ನಾಲ್ಕೂ ಹಾಡುಗಳು ಸೂಪರ್ ಹಿಟ್ ಆಗಿವೆ. ಇದೀಗ ಸಿನಿಮಾದ ಐದನೇ ಹಾಡು ಬಿಡುಗಡೆಯಾಗುತ್ತಿದೆ. ನಾಳೆ (ಸೋಮವಾರ) ಸಂಜೆ 5 ಗಂಟೆಗೆ ಹಾಡು ರಿಲೀಸ್ ಆಗಲಿದೆ. 'ಹತ್ತ್ ರೂಪಾಯಿಗ್ ಒಂದ್..' ಎಂಬ ಈ ಹಾಡು ಚಿತ್ರದ ಕೊನೆಯ ಹಾಡಾಗಿದೆ. ಸಿನಿಮಾ ಮಾರ್ಚ್ 1 ರಂದು ರಿಲೀಸ್ ಆಗಲಿದ್ದು, ಇಂದಿನಿಂದ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ.

  'ಮಜಾ ಟಾಕೀಸ್'ನಲ್ಲಿ ದರೋಡೆಕೋರರು

  'ಮಜಾ ಟಾಕೀಸ್'ನಲ್ಲಿ ದರೋಡೆಕೋರರು

  ಕಲರ್ಸ್ ವಾಹಿನಿಯ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ 'ಕಳ್ಬೆಟ್ಟದ ದರೋಡೆಕೋರರು' ಚಿತ್ರತಂಡ ಆಗಮಿಸಿದೆ. ಈ ಸಂಚಿಕೆ ಇಂದು ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ನಿರ್ದೇಶಕ ದೀಪಿಕ್ ಮದುವನಹಳ್ಳಿ, ನಾಯಕ ನಟರಾಜ್, ನಾಯಕಿ ಶ್ವೇತ ಪ್ರಸಾದ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

  'ಡಾಟರ್ ಆಫ್ ಪಾರ್ವತಮ್ಮ' ಸೆನ್ಸಾರ್

  'ಡಾಟರ್ ಆಫ್ ಪಾರ್ವತಮ್ಮ' ಸೆನ್ಸಾರ್

  'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾದ ಸೆನ್ಸಾರ್ ಆಗಿದೆ. ಚಿತ್ರಕ್ಕೆ ಯೂ ಪ್ರಮಾಣ ಪತ್ರ ಸಿಕ್ಕಿದೆ. ಹರಿಪ್ರಿಯಾ ಹಾಗೂ ಸುಮಲತಾ ಅಂಬರೀಶ್ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶಂಕರ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿಯೂ ಹೊಸತನದ ಪಾತ್ರವನ್ನು ಹರಿಪ್ರಿಯಾ ಪ್ರಯತ್ನ ಮಾಡಿದ್ದಾರೆ.

  ಪ್ರೇಕ್ಷಕರಿಗೆ ಅಚ್ಚರಿ ನೀಡಿದ ಸತೀಶ್

  ಪ್ರೇಕ್ಷಕರಿಗೆ ಅಚ್ಚರಿ ನೀಡಿದ ಸತೀಶ್

  'ಚಂಬಲ್' ಸಿನಿಮಾ ಬಿಡುಗಡೆಯಾಗಿ, ಅದಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ನಟ ನೀನಾಸಂ ಸತೀಶ್ ಖುಷಿಯಾಗಿದ್ದಾರೆ. ಯಾರಿಗೂ ತಿಳಿಯದ ಹಾಗೆ ನಿನ್ನೆ ಪ್ರೇಕ್ಷಕರ ಜೊತೆಗೆ ಜಿಟಿ ಮಾಲ್ ನಲ್ಲಿ ಸಿನಿಮಾ ನೋಡಿದ್ದಾರೆ. ಸಿನಿಮಾ ಮುಗಿದ ಮೇಲೆ ಸತೀಶ್ ಪ್ರೇಕ್ಷಕರಿಗೆ ಅಚ್ಚರಿ ನೀಡಿದ್ದಾರೆ.

  'ಗೀತಾ' ಆದ ಶಾನ್ವಿ

  'ಗೀತಾ' ಆದ ಶಾನ್ವಿ

  ಗಣೇಶ್ ಅಭಿನಯದ 'ಗೀತಾ' ಸಿನಿಮಾದಲ್ಲಿ ಶಾನ್ವಿ ಶ್ರೀವತ್ಸವ್ ನಾಯಕಿಯಾಗಿದ್ದಾರೆ. ಈ ಚಿತ್ರದ ಅವರ ಒಂದು ಲುಕ್ ಹೊರಬಂದಿದೆ. ರೆಟ್ರೋ ಲುಕ್ ನಲ್ಲಿ ಶಾನ್ವಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಗಣೇಶ್ ಕೂಡ ಹೊಸ ಲುಕ್ ಟ್ರೈ ಮಾಡಿದ್ದಾರೆ. ವಿಜಯ ನಾಗೇಂದ್ರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  English summary
  Today Special : 'Yajamana' movie 5th song will be releasing on tomorrow. 'Geetha' movie shanvi srivastava look out. Sathish Ninasam watched 'Chambal' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X