»   » ರಾಜ್ ಕುಟುಂಬಕ್ಕೆ ಅಲ್ಲು ಅರ್ಜುನ್ ತೋರಿದ ಗೌರವ ಇದು

ರಾಜ್ ಕುಟುಂಬಕ್ಕೆ ಅಲ್ಲು ಅರ್ಜುನ್ ತೋರಿದ ಗೌರವ ಇದು

Posted By:
Subscribe to Filmibeat Kannada

ಡಾ.ರಾಜ್ ಕುಮಾರ್ ಅವರ ಕುಟುಂಬ ಅಂದರೆ ಕನ್ನಡಿಗರಿಗೆ ಅದೇನೋ ಪ್ರೀತಿ. ಅಂತಹ ಮಹಾನ್ ವ್ಯಕ್ತಿ ಮತ್ತು ಅವರ ಇಡೀ ಕುಟುಂಬ ಕಂಡರೆ ಇತರೆ ಚಿತ್ರರಂಗದ ಗಣ್ಯರಿಗೂ ಅಪಾರ ಗೌರವ. ಅಂತವರ ಪೈಕಿ ಟಾಲಿವುಡ್ ನಟ ಅಲ್ಲು ಅರ್ಜುನ್ ಕೂಡ ಒಬ್ಬರು.

'ರಾಜಕುಮಾರ'ನ 100ನೇ ದಿನದ ಸಂಭ್ರಮಕ್ಕೆ ಭರ್ಜರಿ ತಯಾರಿ

ಅಲ್ಲು ಅರ್ಜುನ್ ನಿನ್ನೆ (ಜೂನ್ 22) ಬೆಂಗಳೂರಿಗೆ ಬಂದಿದ್ದರು. ತಮ್ಮ 'ಡಿಜೆ' ಸಿನಿಮಾದ ಪ್ರಮೋಷನ್ ಗಾಗಿ ಬಂದಿದ್ದ ಅಲ್ಲು ಅರ್ಜುನ್ ರಾಜ್ ಕುಟುಂಬಕ್ಕೆ ತೊರಿಸಿದ ಗೌರವ ಎಲ್ಲರೂ ಮೆಚ್ಚಿಕೊಳ್ಳುವಂಥದ್ದು. 'ಡಿಜೆ' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಡೆದ ಈ ಘಟನೆ ಅಲ್ಲು ಅರ್ಜುನ್, ರಾಜ್ ಕುಟುಂಬದ ಮೇಲೆ ಇಟ್ಟಿದ್ದ ಗೌರವವನ್ನು ಸಾರಿ ಸಾರಿ ಹೇಳಿತು. ಮುಂದೆ ಓದಿ...

ಅಲ್ಲು ಅರ್ಜುನ್ ಗುಣಗಾನ

ಬೆಂಗಳೂರಿನಲ್ಲಿ ನಡೆದ 'ಡಿಜೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಅಲ್ಲು ಅರ್ಜುನ್ ರಾಜ್ ಕುಮಾರ್ ಕುಟುಂಬದ ಬಗ್ಗೆ ಮಾತನಾಡಿದರು. ಜೊತೆಗೆ ಪಾರ್ವತಮ್ಮ ಅವರ ನಿಧನ ಹಿನ್ನಲೆ ಮೌನಾಚರಣೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ನಡೆದಿದ್ದೇನು.?

ಸುದ್ದಿಗೋಷ್ಠಿ ಶುರುವಿನಲ್ಲಿ ನಿರೂಪಕಿ 'ಡಿಜೆ' ಚಿತ್ರದ ಬಗ್ಗೆ ಪ್ರಶ್ನೆ ಹೇಳಿದರು. ಆಗ ಅಲ್ಲು ಅರ್ಜುನ್ ಮೊದಲು ರಾಜ್ ಕುಮಾರ್ ಕುಟುಂಬವನ್ನು ನೆನಪು ಮಾಡಿಕೊಂಡರು. ವಿಶೇಷ ಅಂದ್ರೆ ಸಹ ಸ್ವತಃ ಅವರೇ ಕಾರ್ಯಕ್ರಮದಲ್ಲಿದ್ದ ಎಲ್ಲರಿಗೂ ಮೌನಾಚರಣೆ ಮಾಡಿ ಅಂತ ಹೇಳಿದರು.

ಎಲ್ಲರೂ ಬೆರಗಾದರು

'ಡಿ.ಜೆ' ಚಿತ್ರದ ಕಾರ್ಯಕ್ರಮ ಶುರುವಾದಾಗ ಆಯೋಜಕರಾಗಲಿ ಅಥವಾ ಬೇರೆ ಯಾರೂ ಸಹ ಅಲ್ಲು ಅರ್ಜುನ್ ಗೆ ಹೇಳಿ ಮಾಡಿಸಲಿಲ್ಲ. ಚಿತ್ರದ ಬಗ್ಗೆ ಮಾತನಾಡುವುದಕ್ಕೆ ತಮ್ಮ ಬಳಿ ಮೈಕ್ ಬಂದ ತಕ್ಷಣ ಅಲ್ಲು ಅರ್ಜುನ್ ಎಲ್ಲರಿಗೂ ತಾವೇ ಹೇಳಿ ಮೌನಾಚರಣೆ ಮಾಡಿಸಿದರು.

ಒಳ್ಳೆಯ ನಂಟು

ರಾಜ್ ಕುಮಾರ್ ಕುಟುಂಬಕ್ಕೆ ಮತ್ತು ಅಲ್ಲು ಅರ್ಜುನ್ ಅವರ ಕುಟುಂಬಕ್ಕೆ ಒಳ್ಳೆಯ ನಂಟು ಇದೆ. ಅಲ್ಲದೆ ಅಲ್ಲು ಅರ್ಜುನ್ ತಮ್ಮ ವಿವಾಹದ ಸಂದರ್ಭದಲ್ಲಿ ತಾವೇ ರಾಜ್ ನಿವಾಸಕ್ಕೆ ತೆರಳಿ ಇಡೀ ಕುಟುಂಬವನ್ನು ಮದುವೆಗೆ ಆಹ್ವಾನಿಸಿದ್ದರು.

ಅಪ್ಪು ಅಂದ್ರೆ ಇಷ್ಟ

ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್, ಫೈಟ್ ಅಂದರೆ ಅಲ್ಲು ಅರ್ಜುನ್ ಗೆ ಬಹಳ ಇಷ್ಟ. ಇದನ್ನು ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಜೊತೆಗೆ 'ಜಾಕಿ' ಸಿನಿಮಾದ ತೆಲುಗು ಆಡಿಯೋ ಬಿಡುಗಡೆ ಮಾಡಿದ್ದು ಸಹ ಅಲ್ಲು ಅರ್ಜುನ್.

ಸರಳತೆ ಬಗ್ಗೆ ಮೆಚ್ಚುಗೆ

ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಇಡೀ ಕುಟುಂಬದ ಸರಳತೆಯನ್ನು ಅಲ್ಲು ಅರ್ಜುನ್ ಬಹಳ ಮೆಚ್ಚಿಕೊಳ್ಳುತ್ತಾರೆ. ಒಂದು ಸೂಪರ್ ಸ್ಟಾರ್ ಕುಟುಂಬವಾಗಿದ್ದರೂ ಇಷ್ಟು ಸರಳವಾಗಿ ಇರುತ್ತಾರೆ ಅದಕ್ಕೆ ನಾನು ಆ ಕುಟುಂಬಕ್ಕೆ ಅಪಾರ ಗೌರವ ಕೊಡುತ್ತೇನೆ ಎನ್ನುತ್ತಾರೆ.

English summary
Tollywood Star Allu Arjun Respects DR.Rajkumar Family

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada