»   » ಬೆಂಕಿಪಟ್ಣ ಚಿತ್ರದ ರೈಟ್ಸ್ ತೂಗುದೀಪ ಡಿಸ್ಟ್ರಿಬ್ಯೂಷನಿಗೆ

ಬೆಂಕಿಪಟ್ಣ ಚಿತ್ರದ ರೈಟ್ಸ್ ತೂಗುದೀಪ ಡಿಸ್ಟ್ರಿಬ್ಯೂಷನಿಗೆ

Posted By:
Subscribe to Filmibeat Kannada

ಟಿ ಕೆ ದಯಾನಂದ್ ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ 'ಬೆಂಕಿಪಟ್ಣ' ಚಿತ್ರದ ವಿತರಣೆ ಹಕ್ಕು ತೂಗುದೀಪ ಡಿಸ್ಟ್ರಿಬ್ಯೂಷನ್ ಸಂಸ್ಥೆಯ ಪಾಲಾಗಿದೆ.

ಈ ಮಧ್ಯೆ, ಚಿತ್ರವನ್ನು ಶುಕ್ರವಾರ (ಡಿ 26) ಸೆನ್ಸಾರ್ ಮಂಡಳಿ ವೀಕ್ಷಿಸಿದೆ. ಚಿತ್ರದ ಯಾವುದೇ ದೃಶ್ಯಕ್ಕೆ ಕತ್ತರಿಸಿ ಪ್ರಯೋಗಿಸದೇ (ಒಂದೆರಡು ಮ್ಯೂಟ್ ಹೊರತುಪಡಿಸಿ) ಸಿನಿಮಾಗೆ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡುತ್ತಿದೆ.

ಸೆನ್ಸಾರ್ ಮಂಡಳಿಯ ಸದಸ್ಯರ ಜೊತೆ, ಸಿನಿಮಾ ತಂಡದ ಸದಸ್ಯರನ್ನು ಹೊರತು ಪಡಿಸಿ ಬೇರೆಯವರು ಚಿತ್ರ ವೀಕ್ಷಿಸಿದ್ದು ವಿಶೇಷ. (ಬೆಂಕಿಪಟ್ಣ ಧ್ವನಿಸುರುಳಿ ವಿಮರ್ಶೆ)

Toogudeep Distributions got Benki Patna movie rights

ಜನವರಿ ತಿಂಗಳಲ್ಲಿ ಶಿವಂ, ಖುಷಿ ಖುಷಿಯಾಗಿ, ರಾಟೆ, ವಾಸ್ತಪ್ರಕಾರ, ಜಾಕ್ಸನ್ ಮುಂತಾದ ಬಹು ನಿರೀಕ್ಷೆಯ ಚಿತ್ರಗಳು ತೆರೆಕಾಣುತ್ತಿವೆ. ಹೀಗಾಗಿ, ಬೆಂಕಿಪಟ್ಣ ಚಿತ್ರವನ್ನು ಫೆಬ್ರವರಿ ಮೊದಲ ವಾರ ಅಥವಾ ಮಧ್ಯದಲ್ಲಿ ಬಿಡುಗಡೆಗೊಳಿಸುವ ಸಿದ್ದತೆಯನ್ನು ಚಿತ್ರತಂಡ ಮಾಡಿಕೊಂಡಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ನಿಮ್ಮ ಸಿನಿಮಾ ಗೆದ್ದೇ ಗೆಲ್ಲುತ್ತದೆ, ಧೈರ್ಯದಿಂದಿರಿ ಎಂದು ತೂಗುದೀಪ ಡಿಸ್ಟ್ರಿಬ್ಯೂಷನ್ ಸಂಸ್ಥೆಯ ದಿನಕರ್ ತೂಗುದೀಪ್ ಚಿತ್ರತಂಡಕ್ಕೆ ನೈತಿಕ ಬೆಂಬಲ ನೀಡಿದ್ದಾರೆಂದು ಚಿತ್ರದ ಕಾರ್ಯಕಾರಿ ನಿರ್ಮಾಪಕ ದಿನೇಶ್ ಕುಮಾರ್ ಹೇಳಿದ್ದಾರೆ.

ಬೆಂಕಿಪಟ್ಣ ಚಿತ್ರದ ಪ್ರೋಮೋ ಮತ್ತು ಹಾಡುಗಳು ಭಾರೀ ಸದ್ದನ್ನು ಮಾಡುತ್ತಿವೆ, ಹಾಗೆಯೇ ಆಡಿಯೋ ಕ್ಯಾಸೆಟ್ಟುಗಳು ಸಖತ್ ಬಿಕರಿಯಾಗುತ್ತಿವೆ.

ಬೆಂಕಿಪಟ್ಣ ಚಿತ್ರದ ಕಥೆಯನ್ನು ಕೇಳಿ ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಚೇರನ್ ಇಂಪ್ರೆಸ್ ಆಗಿ, ನಿರ್ದೇಶಕ ದಯಾನಂದ್ ಅವರಿಗೆ ಕರೆ ಮಾಡಿದ್ದರು. ಚಿತ್ರದ ಕಥಾಹಂದರದ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡಿದ್ದ ಚೇರನ್, ವಿಭಿನ್ನ ಮತ್ತು ಅಪರೂಪದ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿ ಬೆಸ್ಟ್ ಆಫ್ ಲಕ್ ಹೇಳಿದ್ದನ್ನು ನಮ್ಮ ಅಂತರ್ಜಾಲದಲ್ಲಿ ಓದಿರುತ್ತೀರಾ. (ಬೆಂಕಿಪಟ್ಣದ ಮೇಲೆ ಚೇರನ್ ಕಣ್ಣು)

ಟಿ ಕೆ ದಯಾನಂದ್ ಚೊಚ್ಚಲ ನಿರ್ದೇಶನದ ಬೆಂಕಿಪಟ್ಣ ಚಿತ್ರದ ಪ್ರಮುಖ ತಾರಾಗಣದಲ್ಲಿ ಪ್ರತಾಪ್ ನಾರಾಯಣ್, ಅನುಶ್ರೀ, ಅರುಣ್ ಸಾಗರ್, ಪ್ರಕಾಶ್ ಬೆಳವಾಡಿ, ಶ್ವೇತಾ ಬಡಿಗೇರ್ ಮುಂತಾದವರಿದ್ದಾರೆ.

ಮಾಸ್ತಿ ಜಾಕೀರ್ ಆಲಂಖಾನ್ ಚಿತ್ರದ ನಿರ್ಮಾಪಕರು ಮತ್ತು ದಿನೇಶ್ ಕುಮಾರ್ ಅವರು ಕಾರ್ಯಕಾರಿ ನಿರ್ಮಾಪಕರು. ಚಿತ್ರಕ್ಕೆ ಸಂಗೀತ ನೀಡಿದವರು ಯುವ ನಿರ್ದೇಶಕರಾದ ಸ್ಟೀವ್ - ಕೌಶಿಕ್ ತಂಡ.

English summary
Toogudeep Distributions got the Kannada movie 'Benki Patna' movie rights. Censor committee watched the movie and giving U/A certificate.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada