Don't Miss!
- News
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
- Technology
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Automobiles
ಮಾರುತಿ ಜಿಮ್ನಿಯಿಂದ-ಮಹೀಂದ್ರಾ ಥಾರ್ವರೆಗೆ 2023ರಲ್ಲಿ ಕೈಗೆಟಕುವ ಬೆಲೆಯ 4x4 ಎಸ್ಯುವಿಗಳು
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪುಲಿ' ಏಕೆ ನೋಡಬೇಕು, ಇಲ್ಲಿದೆ ಟಾಪ್ 10 ಕಾರಣಗಳು
ಇಳೆಯದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ನ 'ಪುಲಿ' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಅಭಿಮಾನಿಗಳು ಭರದ ಸಿದ್ದತೆ ನಡೆಸುತ್ತಿದ್ದಾರೆ. ಚೆನ್ನೈನಲ್ಲಿ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ವಿಜಯ್ ಅವರ ಬೃಹತ್ ಕಟೌಟ್ ಗಳನ್ನು ನಿಲ್ಲಿಸಿ ಈಗಿನಿಂದಲೇ ಸಂಭ್ರಮಾಚರಣೆ ಶುರು ಹಚ್ಚಿಕೊಂಡಿದ್ದಾರೆ.
ಈಗಾಗಲೇ ಅಡ್ವಾನ್ಸ್ ಟಿಕೇಟ್ ಬುಕ್ಕಿಂಗ್ ಕೂಡ ಎಲ್ಲೆಡೆ ಪ್ರಾರಂಭವಾಗಿದ್ದು, ಚೆನ್ನೈನ ಬಹುತೇಕ ಚಿತ್ರಮಂದಿರಗಳು ಚಿತ್ರ ಬಿಡುಗಡೆಗೆ ಮುನ್ನವೇ ಹೌಸ್ ಫುಲ್ ಬೋರ್ಡ್ ನೇತು ಹಾಕಿಕೊಂಡಿವೆ. ಅಂದಹಾಗೆ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಲು ಉತ್ಸಾಹದಿಂದ ಕಾಯುತ್ತಿದ್ದಾರೆ.
ಸದ್ಯಕ್ಕೆ ಈ ಮೊದಲೇ ಅಡ್ವಾನ್ಸ್ ಆಗಿ 'ಪುಲಿ' ಟಿಕೇಟ್ ಪಡೆದುಕೊಂಡ ಅಭಿಮಾನಿಗಳಂತೂ ನಾವೇ ಲಕ್ಕಿ ಎಂದು ಸಂಭ್ರಮದಿಂದ ಬೀಗುತ್ತಿದ್ದಾರೆ.[ಜಪ್ಪಯ್ಯ ಅಂದ್ರೂ, 'ಪುಲಿ' ಚಿತ್ರದ ಮೊದಲೆರಡು ದಿನದ ಟಿಕೆಟ್ ಸಿಗಲ್ಲ!]
ಜೊತೆಗೆ ಅಕ್ಟೋಬರ್ 1 ರಂದು ಅಭಿಮಾನಿಗಳ ಮನವಿಯ ಮೇರೆಗೆ ಬೆಳಗಿನ ಜಾವ 4ರ ಸುಮಾರಿಗೆ ಚಿತ್ರಪ್ರದರ್ಶನ ಪ್ರಾರಂಭಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಮಾಹಿತಿ ನೀಡಿವೆ. ಮಾತ್ರವಲ್ಲದೇ ಈಗಾಗಲೇ ಮುಂಜಾನೆ ವೇಳೆಯ ಚಿತ್ರಪ್ರದರ್ಶನದ ಟಿಕೇಟ್ ಗಳು ಕೂಡ ಸೋಲ್ಡ್ ಔಟ್ ಆಗಿದೆ.['ಪುಲಿ' ವಿಜಯ್, ಸಮಂತಾ ಮನೆ ಮೇಲೆ ಐಟಿ ದಾಳಿ ಏಕೆ?]
ಎಸ್ ಎಸ್ ರಾಜಮೌಳಿ ಅವರ 'ಬಾಹುಬಲಿ' ಚಿತ್ರಕ್ಕಿಂತಲೂ ವಿಭಿನ್ನ ಕಥಾಹಂದರವನ್ನು ಹೊಂದಿರುವ ನಿರ್ದೇಶಕ ಚೆಂಬುದೇವನ್ ಅವರ 'ಪುಲಿ' ಚಿತ್ರವನ್ನು ನೀವು ನೋಡಲೇಬೇಕಾದ 10 ಕಾರಣಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಮುಂದೆ ಓದಿ.[ತಮಿಳು 'ಪುಲಿ' ಬಾಲ ಹಿಡಿದು ನಿಂತ ಕಲಾ ಸಾಮ್ರಾಟ್]

ಇಳೆಯದಳಪತಿ ವಿಜಯ್
ಹೌದು ಬಹುನಿರೀಕ್ಷಿತ 'ಪುಲಿ' ಚಿತ್ರವನ್ನು ಅಭಿಮಾನಿಗಳು ಹೆಚ್ಚು ನಿರೀಕ್ಷಿಸಲು ಪ್ರಮುಖ ಕಾರಣ ತಮಿಳು ನಟ ಇಳೆಯದಳಪತಿ ವಿಜಯ್. ಯಾಕೆಂದರೆ ತಮಿಳುನಾಡು ಹಾಗೂ ಚೆನ್ನೈ ಸೇರಿದಂತೆ ಕರ್ನಾಟಕದಲ್ಲೂ ವಿಜಯ್ ಅವರಿಗೆ ಸಾಕಷ್ಟು ಅಭಿಮಾನಿ ಬಳಗವೇ ಇದೆ.

ಬಾಲಿವುಡ್ ಬೆಡಗಿ ಶ್ರೀದೇವಿ ಅವರ ಕಮ್ ಬ್ಯಾಕ್
1986 ರಲ್ಲಿ ತೆರೆಕಂಡ ಸೂಪರ್ ಸ್ಟಾರ್ ರಜನಿಕಾಂತ್ ಅವರ 'ನಾನ್ ಅಡಿಮೆ ಇಲ್ಲೈ' ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಸುಮಾರು 29 ವರ್ಷಗಳ ನಂತರ ಸುಂದರಿ ಶ್ರೀದೇವಿ ಬೋನಿ ಕಪೂರ್ ಅವರು ತಮಿಳು ಚಿತ್ರರಂಗದ ಸಿಲ್ವರ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಚಿತ್ರ ವೀಕ್ಷಿಸಲು ಇದು ಒಂದು ಕಾರಣವಾಗುತ್ತದೆ.

ಅದ್ಭುತ ವಿಷುವಲ್ ಎಫೆಕ್ಟ್ಸ್
ನಿರ್ದೇಶಕ ಚೆಂಬುದೇವನ್ ಅವರು ಸ್ಟ್ಯಾಂಡರ್ಡ್ ಹಾಗೂ ಅದ್ಭುತ ವಿಷುವಲ್ ಎಫೆಕ್ಟ್ಸ್ ಗಳನ್ನು ನೀಡುವ ಮೂಲಕ 'ಪುಲಿ' ಚಿತ್ರಕ್ಕೆ ಹಾಲಿವುಡ್ ಟಚ್ ನೀಡಿದ್ದಾರೆ. ಇದರಿಂದ ತಮಿಳು ಪ್ರೇಕ್ಷಕರ ಬಹುದಿನಗಳ ಕನಸೊಂದು ಈಡೇರಿದಂತಾಗಿದ್ದು, ವಿಜಯ್ 'ಪುಲಿ' ಚಿತ್ರ ಅಭಿಮಾನಿಗಳ ಕನಸನ್ನು ನನಸು ಮಾಡಿದೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲ.

ಸೂಪರ್ ಫ್ಯಾಂಟಸಿ ಫ್ಲಿಕ್
ಈಗಾಗಲೇ ಬಿಡುಗಡೆಯಾಗಿರುವ 'ಪುಲಿ' ಟೀಸರ್, ಟ್ರೈಲರ್ ಮುಂತಾದವುಗಳನ್ನು ನೋಡುತ್ತಿದ್ದರೆ ಚಿತ್ರಕ್ಕೆ ಅಳವಡಿಸಿಕೊಂಡ ಹೈ ಕ್ವಾಲಿಟಿ ಫ್ಯಾಂಟಸಿ ಫ್ಲಿಕ್ ಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಅಲ್ಲದೇ 'ಪುಲಿ' ಸಂಪೂರ್ಣ ಫ್ಯಾಮಿಲಿಯೊಂದಿಗೆ ಕುಳಿತು ನೋಡಬಹುದಾದ ಚಿತ್ರವಾಗಿದೆ ವಿಶೇಷವಾಗಿ ಮಕ್ಕಳು ಹೆಚ್ಚು ಇಷ್ಟಪಡುವ ಅಂಶ ಈ ಚಿತ್ರದಲ್ಲಿದೆ.

ಪೈಪೋಟಿ ನೀಡುವ ಸ್ಟಾರ್ ನಟ-ನಟಿಯರು
'ಪುಲಿ' ಚಿತ್ರದಲ್ಲಿ ಅದ್ಭುತ ಪಾತ್ರಗಳಿದ್ದು, ಎಲ್ಲಾ ಪಾತ್ರಗಳಿಗೂ ತಕ್ಕುದಾದ ನಟ-ನಟಿಯರನ್ನು ಆಯ್ಕೆ ಮಾಡಲಾಗಿದೆ. ಒಬ್ಬರಿಗಿಂತ ಒಬ್ಬರು ಪೈಪೋಟಿ ನೀಡುವ ನಟನೆ ಮಾಡಿದ್ದಾರೆ. ತಮಿಳು ನಟ ವಿಜಯ್, ಕನ್ನಡ ನಟ ಕಿಚ್ಚ ಸುದೀಪ್, ಶ್ರೀದೇವಿ, ಶ್ರುತಿ ಹಾಸನ್, ಹನ್ಸಿಕಾ ಮೋಟ್ವಾನಿ, ನಂದಿತ ಶ್ವೇತಾ, ಪ್ರಭು, ಸತ್ಯನ್, ವಿಜಯಕುಮಾರ್, ತಂಬಿ ರಾಮಯ್ಯ, ರೊಬೋ ಶಂಕರ್ ಮುಂತಾದ ತಾರಾಗಣ ಈ ಚಿತ್ರಕ್ಕಿದೆ.

'ಪುಲಿ' ಯಲ್ಲಿದೆ ಸಖತ್ ಕಾಮಿಡಿ ಪಂಚ್
ಬಹುನಿರೀಕ್ಷಿತ ಚಿತ್ರ 'ಪುಲಿ' ಪ್ರೇಕ್ಷಕರಿಗೆ ರೋಮಾಂಚನದ ಜೊತೆಗೆ ಸಖತ್ ಕಾಮಿಡಿ ಪಂಚ್ ನೀಡುತ್ತದೆ. ಕ್ಷಣ-ಕ್ಷಣಕ್ಕೂ ಕುತೂಹಲದ ಜೊತೆಗೆ ತಂಬಿ ರಾಮಯ್ಯ, ಸತ್ಯನ್ ಅವರು ಹಾಸ್ಯದ ಮೂಲಕ ಪ್ರೇಕ್ಷಕರನ್ನು ಎಂಗೇಜ್ ಮಾಡುತ್ತಾರೆ ಎಂದು ನಿರ್ದೇಶಕ ಚೆಂಬುದೇವನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಒಟ್ಟಾರೆ 'ಪುಲಿ' ಪ್ರೇಕ್ಷಕರಿಗೆ ಸಖತ್ ಎಂರ್ಟಟೈನ್ ಮಾಡೋದು ಗ್ಯಾರಂಟಿ.

ಅದ್ಭುತ ಟೆಕ್ನಿಕಲ್ ತಂಡ
'ಪುಲಿ' ಚಿತ್ರದಲ್ಲಿ ಮುಖ್ಯವಾಗಿ ಹೈಲೈಟ್ ಆಗೋದು ಟೆಕ್ನಿಕಲ್ ವರ್ಕ್ ಯಾಕೆಂದರೆ ಸಿನಿಮಾಟೋಗ್ರಾಫಿಯಿಂದ ಹಿಡಿದು ಚಿತ್ರದ ಎಡಿಟಿಂಗ್ ಕಾರ್ಯಗಳವರೆಗೂ ಬಹಳ ನೀಟಾಗಿ ಮಾಡಲಾಗಿದೆ. ಜೊತೆಗೆ ಕ್ಯಾಮಾರಮೆನ್ ನಟ್ಟಿ ಅವರ ಕೈಚಳಕದಿಂದ ಸಿನಿಮಾಟೋಗ್ರಾಫಿ ಅದ್ಭುತವಾಗಿ ಮೂಡಿಬಂದಿದೆ.

ಉತ್ತಮ ಕಥೆ-ಚಿತ್ರಕಥೆ ಸಂಭಾಷಣೆಗಳ ಗುಚ್ಛ 'ಪುಲಿ'ಯಲ್ಲಿದೆ
'ಪುಲಿ' ಚಿತ್ರವನ್ನು ಬೆಳ್ಳಿ ತೆರೆಯಲ್ಲಿ ನೋಡಲು ಇನ್ನೊಂದು ಮುಖ್ಯ ಕಾರಣವೆಂದರೆ ಚಿತ್ರ ಉತ್ತಮ ಕಥಾಹಂದರವನ್ನು ಹೊಂದಿದೆ ಜೊತೆಗೆ ವಿಜಯ್, ಸುದೀಪ್ ಮತ್ತು ಶ್ರೀದೇವಿಯಂತವರ ನಟನಾ ಸಾಮರ್ಥ್ಯ ಪ್ರೇಕ್ಷಕರಿಗೆ ಚಿತ್ರ ನೋಡುವಂತೆ ಪ್ರೇರೇಪಿಸುತ್ತದೆ.

ನಿರೀಕ್ಷಿಸಿದಂತೆ 'ಪುಲಿ' ಆಕ್ಷನ್-ಸಿಕ್ವೆನ್ಸ್ ಹೊಂದಿರುವ ಸಿನಿಮಾ
'ಪುಲಿ' ಸಿನಿಮಾ ಕಾಮಿಡಿ ಸೇರಿದಂತೆ ಆಕ್ಷನ್ ಪ್ರೀಯರಿಗೆ ತಕ್ಕ ಹಾಗೆ ಸಖತ್ ಫೈಟ್ ಸೀನ್ ಗಳನ್ನು ಕೂಡ ಧಾರಾಳವಾಗಿ ಒಳಗೊಂಡಿದೆ.

ಪ್ರೇಕ್ಷಕರಿಗೆ ಉತ್ತಮ ವಿಷುವಲ್ ಟ್ರೀಟ್
'ಪುಲಿ' ನೋಡಲು ಇನ್ನೊಂದು ಕಾರಣವೇನೆಂದರೆ ಸಖತ್ ಕ್ಲ್ಯಾರಿಟಿ ಜೊತೆಗೆ ಉತ್ತಮ ಕ್ವಾಲಿಟಿಯುಳ್ಳ ವಿಷುವಲ್ ಟ್ರೀಟ್ ಅನ್ನು ನಿರ್ದೇಶಕ ಚೆಂಬುದೇವನ್ ಅವರು ಪ್ರೇಕ್ಷಕವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ನೀಡಿದ್ದಾರೆ.