twitter
    For Quick Alerts
    ALLOW NOTIFICATIONS  
    For Daily Alerts

    2018ರಲ್ಲಿ ಭಾರಿ ಸದ್ದು ಮಾಡಿದ 12 ಹಾಡುಗಳು: ನಿಮ್ಮ ಆಯ್ಕೆ ಯಾವುದು?

    |

    ಕಳೆದ ವರ್ಷ 200ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾಗಿದ್ದವು. ಒಂದು ಸಿನಿಮಾದಲ್ಲಿ ಐದು ಹಾಡು ಅಂದ್ರೆ ಸಾವಿರಕ್ಕೂ ಹೆಚ್ಚು ಹಾಡುಗಳು ಬಂದಿದೆ. ಅದರಲ್ಲಿ ಮಾಸ್ ಸಾಂಗ್ಸ್ ಇದೆ, ರೋಮ್ಯಾಂಟಿಕ್ ಸಾಂಗ್ಸ್ ಇದೆ, ಎಣ್ಣೆ ಸಾಂಗ್ಸ್ ಇದೆ, ಐಟಂ ಸಾಂಗ್ಸ್ ಇದೆ.

    ಬಟ್, ಇಷ್ಟು ಹಾಡುಗಳಲ್ಲಿ ಕೆಲವು ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡಿದೆ. ಪದೇ ಪದೇ ಕೇಳಿದ್ದಾರೆ. ಆ ಹಾಡುಗಳಿಗೆ ಡಬ್ ಸ್ಮ್ಯಾಶ್ ಮಾಡಿದ್ದಾರೆ. ಕಾಲೇಜ್, ಸ್ಕೂಲ್, ಟಿವಿ ಕಾರ್ಯಕ್ರಮಗಳಲ್ಲಿ ಈ ಹಾಡುಗಳು ಧೂಳೆಬ್ಬಿಸಿವೆ.

    ಫಿಲ್ಮಿಬೀಟ್ Poll: ಹೀರೋಯಿನ್ ವಿಭಾಗದಲ್ಲಿ ಆಶಿಕಾ-ಪ್ರಿಯಾಂಕಾ ನಡುವೆ ರೇಸ್ ಫಿಲ್ಮಿಬೀಟ್ Poll: ಹೀರೋಯಿನ್ ವಿಭಾಗದಲ್ಲಿ ಆಶಿಕಾ-ಪ್ರಿಯಾಂಕಾ ನಡುವೆ ರೇಸ್

    ಅಂದ್ಹಾಗೆ, ಕಳೆದ ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ ಹಾಡು ಯಾವುದು, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದ ಹಾಡು ಯಾವುದು, ಸಂಗೀತ ಅಭಿಮಾನಿಗಳ ಮನ ಗೆದ್ದ ಹಾಡುಗಳು ಯಾವುದು ಎಂದು ನೋಡುವುದಾದರೇ, 12 ಹಾಡುಗಳನ್ನ ಇಲ್ಲಿ ಪಟ್ಟಿ ಮಾಡಲಾಗಿದೆ. ಇದನ್ನ ಬಿಟ್ಟು ಅಥವಾ ಇವುಗಳಲ್ಲಿ ಯಾವುದು ನಿಮ್ಮೆ ನೆಚ್ಚಿನ ಗೀತೆ ಎಂದು ಕಾಮೆಂಟ್ ಮಾಡಿ ತಿಳಿಸಿ. ಮುಂದೆ ಓದಿ....

    ಕನ್ನಡ ಮೀಡಿಯಂ ರಾಜು

    ಕನ್ನಡ ಮೀಡಿಯಂ ರಾಜು

    ಗುರುನಂದನ್, ಆಶಿಕಾ ರಂಗನಾಥ್ ಅಭಿನಯಿಸಿದ್ದ 'ರಾಜು ಕನ್ನಡ ಮೀಡಿಯಂ' ಚಿತ್ರದ 'ಕೊಡೆಯೊಂದರ ಅಡಿಯಲ್ಲಿ' ಹಾಡು ಹಲವು ಹೃದಯಕ್ಕೆ ಕಲ್ಲು ಹೊಡೆದಿತ್ತು. ಹೃದಯ ಶಿವ ಬರೆದಿದ್ದ ಸಾಹಿತ್ಯಕ್ಕೆ ಕಿರಣ್ ರವಿಂದ್ರನಾಥ್ ಸಂಗೀತ ಸೇರಿ, ಸೋನು ನಿಗಮ್ ದನಿಗೂಡಿಸಿದ್ದು ಈ ಹಾಡನ್ನ ಇನ್ನೊಂದು ಹಂತಕ್ಕೆ ಕರೆದುಕೊಂಡು ಹೋಗಿತ್ತು. ಬಹುಶಃ ಈ ವರ್ಷ ಮೆಲೋಡಿ ಹಿಟ್ ಸಾಂಗ್ಸ್ ಪಟ್ಟಿಯಲ್ಲಿ ಈ ಹಾಡು ಟಾಪ್ ನಲ್ಲಿರುತ್ತೆ.

    ಈ ವರ್ಷ ಬಾರದ ಲೋಕಕ್ಕೆ ಪಯಣಿಸಿದ ಚಿತ್ರರಂಗದ ತಾರೆಯರುಈ ವರ್ಷ ಬಾರದ ಲೋಕಕ್ಕೆ ಪಯಣಿಸಿದ ಚಿತ್ರರಂಗದ ತಾರೆಯರು

    ಎಣ್ಣೆ ನಿಮ್ದು, ಊಟ ನಮ್ದು

    ಎಣ್ಣೆ ನಿಮ್ದು, ಊಟ ನಮ್ದು

    ಯಾವುದೇ ಪಾರ್ಟಿ, ಯಾವುದೇ ಸಂಭ್ರಮ, ಹಬ್ಬ, ಉತ್ಸವ ಎಲ್ಲೆಲ್ಲಿಯೂ ಕಳೆದ ವರ್ಷ ಸದ್ದು ಮಾಡಿದ್ದು 'ಕನಕ' ಚಿತ್ರದ 'ಎಣ್ಣೆ ನಿಮ್ದು, ಊಟ ನಮ್ದು' ಹಾಡು. ನವೀನ್ ಸಜ್ಜು ಸಾಹಿತ್ಯ, ಸಂಗೀತ ಮತ್ತು ಅವರೇ ಧ್ವನಿಯಲ್ಲೇ ಈ ಹಾಡು ಮೂಡಿಬಂದಿತ್ತು.

    2018: ಫಿಲ್ಮಿಬೀಟ್ ಯೂಟ್ಯೂಬಿನ ಟಾಪ್ 10 ವಿಡಿಯೋಗಳು2018: ಫಿಲ್ಮಿಬೀಟ್ ಯೂಟ್ಯೂಬಿನ ಟಾಪ್ 10 ವಿಡಿಯೋಗಳು

    ಟಗರು ಬಂತು ಟಗರು

    ಟಗರು ಬಂತು ಟಗರು

    ಕಳೆದ ವರ್ಷ ಶಿವಣ್ಣ ಖದರ್ ಹೆಚ್ಚಿದ್ದು ಟಗರು ಸಿನಿಮಾ ಮತ್ತು ಈ ಚಿತ್ರದ 'ಟಗರು ಬಂತು ಟಗರು' ಹಾಡು. ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಚರಣ್ ರಾಜ್ ಸಂಗೀತದಲ್ಲಿ ಬಂದಿದ್ದ ಈ ಹಾಡನ್ನ ಹಾಡಿದ್ದು ಆಂಟೋನಿ ದಾಸ್.

    ಈ ವರ್ಷ ನಿರಾಸೆ ಮೂಡಿಸಿದ ಪುನೀತ್-ದರ್ಶನ್-ಶ್ರೀಮುರಳಿ.!ಈ ವರ್ಷ ನಿರಾಸೆ ಮೂಡಿಸಿದ ಪುನೀತ್-ದರ್ಶನ್-ಶ್ರೀಮುರಳಿ.!

    ಚುಟು ಚುಟು ಅಂತೈತೆ

    ಚುಟು ಚುಟು ಅಂತೈತೆ

    ಒಂದು ಟೈಂನಲ್ಲಿ ಪಡ್ಡೆ ಹೈಕ್ಳಿಗೆ ಹಾಗೂ ಹೆಣೈಕ್ಳಿಕೆ 'ಚುಟು ಚುಟು' ಅಂತೈತು. ಯಾಕಂದ್ರೆ, ರ್ಯಾಂಬೋ 2 ಚಿತ್ರದ ಹಾಡು ಎಲ್ಲರನ್ನ ಹಾಗೆ ಮಾಡಿತ್ತು. ಶಿವಬೇರ್ಗಿ ಬರೆದಿದ್ದ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ರವೀಂದ್ರ ಸರಗಾವಿ ಮತ್ತು ಶಮಿತಾ ಹಾಡಿದ್ದರು.

    'ಸ್ಟಾರ್'ಗಳನ್ನ ಹಿಂದಿಕ್ಕಿ ಮುನ್ನುಗ್ಗಿದ ವರ್ಷದ 'ದಿ ಬೆಸ್ಟ್' ಚಿತ್ರಗಳು'ಸ್ಟಾರ್'ಗಳನ್ನ ಹಿಂದಿಕ್ಕಿ ಮುನ್ನುಗ್ಗಿದ ವರ್ಷದ 'ದಿ ಬೆಸ್ಟ್' ಚಿತ್ರಗಳು

    ಅಮ್ಮ ಐ ಲವ್ ಯೂ

    ಅಮ್ಮ ಐ ಲವ್ ಯೂ

    ಅಮ್ಮನ ಬಗ್ಗೆ ಮೂಡಿಬಂದಿದ್ದ 'ಅಮ್ಮ ಐ ಲವ್ ಯೂ' ಹಾಡು ವರ್ಷ ಯಶಸ್ವಿ ಹಾಡುಗಳಲ್ಲಿ ಒಂದು. ಅಮ್ಮನ ಕುರಿತು ಈ ಹಿಂದೆ ಹಲವು ಹಾಡುಗಳು ಬಂದಿದ್ದರೂ ಈ ಹಾಡು ತನ್ನದೇ ವಿಶೇಷತೆಯಿಂದ ಎಲ್ಲರ ಮನಸ್ಸು ಕದ್ದಿತ್ತು. ನಾಗೇಂದ್ರ ಪ್ರಸಾದ್ ಸಾಹಿತ್ಯ, ಗುರು ಕಿರಣ್ ಸಂಗೀತವಿದ್ದ ಈ ಹಾಡನ್ನ ಸುನಿಲ್ ಕಶ್ಯಪ್ ಹಾಡಿದ್ದರು.

    ಮುಂದಿನ ವರ್ಷ 'ಇವರೆಲ್ಲ'ರೂ ಮದುವೆ ಊಟ ಹಾಕಿಸೋದು ಗ್ಯಾರೆಂಟಿ.!ಮುಂದಿನ ವರ್ಷ 'ಇವರೆಲ್ಲ'ರೂ ಮದುವೆ ಊಟ ಹಾಕಿಸೋದು ಗ್ಯಾರೆಂಟಿ.!

    ಏನಮ್ಮಿ ಏನಮ್ಮಿ

    ಏನಮ್ಮಿ ಏನಮ್ಮಿ

    ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ, ಸೋಶಿಯಲ್ ಆಪ್ ಗಳಲ್ಲಿ ಭಾರಿ ಹವಾ ಉಂಟು ಮಾಡಿದ್ದ ಹಾಡು ಅಯೋಗ್ಯ ಚಿತ್ರದ 'ಏನಮ್ಮಿ ಏನಮ್ಮಿ'. ಈ ಹಾಡಿನ ಡಬ್ ಸ್ಮ್ಯಾಶ್, ಡ್ಯಾನ್ಸ್ ವಿಡಿಯೋಗಳು ವೈರಲ್ ಆಗಿತ್ತು. ಚೇತನ್ ಕುಮಾರ್ ಸಾಹಿತ್ಯ, ಅರ್ಜುನ್ ಜನ್ಯ ಮ್ಯೂಸಿಕ್ ಇದ್ದ ಈ ಹಾಡನ್ನ ವಿಜಯ ಪ್ರಕಾಶ್ ಮತ್ತು ಪಲಕ್ ಮುಚ್ಚಾಲ್ ಹಾಡಿದ್ದರು.

    2018ನೇ ವರ್ಷದ 'ರೈಸಿಂಗ್ ಸ್ಟಾರ್' ಪಟ್ಟ ಯಾರಿಗೆ ಸಿಗಬೇಕು?2018ನೇ ವರ್ಷದ 'ರೈಸಿಂಗ್ ಸ್ಟಾರ್' ಪಟ್ಟ ಯಾರಿಗೆ ಸಿಗಬೇಕು?

    ಪ್ರವೀಣ ದಡ್ಡ ದಡ್ಡ

    ಪ್ರವೀಣ ದಡ್ಡ ದಡ್ಡ

    ಕಮರ್ಷಿಯಲ್ ಗೀತೆಗಳ ಮಧ್ಯೆ ಸರ್ಕಾರಿ ಹಿ ಪ್ರಾ ಶಾಲೆ ಚಿತ್ರದಲ್ಲಿ ಕ್ಲಾಸಿಕ್ ಹಾಡೊಂದು ಗಮನ ಸೆಳೆಯಿತು. ಅದೇ 'ದಡ್ಡ ಸಾಂಗ್' ತ್ರಿಲೋಕ್ ತ್ರಿವಿಕ್ರಮ ಬರೆದಿದ್ದ ಸಾಹಿತ್ಯಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ವಾಸುಕಿ ವೈಭವ್ ಈ ಹಾಡನ್ನ ಹಾಡಿದ್ದರು.

    2018ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹೊಸ ನಿರ್ದೇಶಕರಿವರು2018ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹೊಸ ನಿರ್ದೇಶಕರಿವರು

    ಹೇ ಜಲೀಲಾ

    ಹೇ ಜಲೀಲಾ

    ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಹೇ ಜಲೀಲಾ ಹಾಡು ವರ್ಷಾಂತ್ಯದಲ್ಲಿ ಸದ್ದು ಮಾಡಿತ್ತು. ತುಂಬಾ ವರ್ಷದ ನಂತರ ನಾಯಕನಾಗಿ ಅಂಬರೀಶ್ ಗೆ ಬರೆದಿದ್ದ ಈ ಹಾಡು ಹಿಟ್ ಆಗಿತ್ತು. ಜೋಗಿ ಪ್ರೇಮ್ ಈ ಹಾಡನ್ನ ಬರೆದಿದ್ದರು. ಅರ್ಜುನ್ ಜನ್ಯ ಸಂಗೀತ ಹಾಗೂ ವಿಜಯ ಪ್ರಕಾಶ್ ಗಾಯನದಲ್ಲಿ ಈ ಹಾಡು ಬಂದಿತ್ತು.

    'ದಿ ವಿಲನ್' ಚಿತ್ರದ ಎರಡು ಹಾಡು

    'ದಿ ವಿಲನ್' ಚಿತ್ರದ ಎರಡು ಹಾಡು

    'ದಿ ವಿಲನ್' ಸಿನಿಮಾದ ಎಲ್ಲ ಹಾಡುಗಳು ಸದ್ದು ಮಾಡಿದ್ವು. ಆದ್ರೆ, ಶಿವಣ್ಣನ 'ಟಿಕ್ ಟಿಕ್' ಹಾಡು ಮತ್ತು ಸುದೀಪ್ ಕಾಣಿಸಿಕೊಂಡಿದ್ದ 'ಐ ಯಾಮ್ ವಿಲನ್' ಹಾಡು ಹೆಚ್ಚು ಕ್ರೇಜ್ ಹುಟ್ಟುಹಾಕಿತ್ತು. ಈ ಎರಡು ಹಾಡಿಗೆ ಪ್ರೇಮ್ ಸಾಹಿತ್ಯ ರಚಿಸಿದ್ದರು. ಅರ್ಜುನ್ ಜನ್ಯ ಸಂಗೀತ ನೀಡಿದ್ದರು.

    ವಿಕ್ಟರಿಯ ಎಣ್ಣೆ ಸಾಂಗ್

    ವಿಕ್ಟರಿಯ ಎಣ್ಣೆ ಸಾಂಗ್

    ಕಳೆದ ವರ್ಷ ಸದ್ದು ಮಾಡಿದ ಇನ್ನೊಂದು ಎಣ್ಣೆ ಸಾಂಗ್ ಅಂದ್ರೆ 'ನಾ ಮನೆಗೋಗೊದಿಲ್ಲ'. 'ವಿಕ್ಟರಿ-2' ಚಿತ್ರದ ಈ ಹಾಡು ವರ್ಷದ ಕೊನೆಯಲ್ಲಿ ಭಾರಿ ಹವಾ ಮಾಡಿತ್ತು. ಯೋಗರಾಜ್ ಭಟ್ ಅವರು ಬರೆದಿದ್ದ ಸಾಲುಗಳಿಗೆ ವಿಜಯ ಪ್ರಕಾಶ್ ಧ್ವನಿಗೂಡಿಸಿದ್ದರು.

    ಸಲಾಂ ರಾಕಿ ಭಾಯ್

    ಸಲಾಂ ರಾಕಿ ಭಾಯ್

    ನಾಗೇಂದ್ರ ಪ್ರಸಾದ್ ಸಾಹಿತ್ಯ, ರವಿಬಸ್ರೂರು ಸಂಗೀತದಲ್ಲಿ ಮೂಡಿಬಂದಿದ್ದ ಸಲಾಂ ರಾಕಿ ಭಾಯ್ 2018 ನೇ ವರ್ಷದ ದೊಡ್ಡ ಹಿಟ್ ಸಾಂಗ್. ಕೆಜಿಎಫ್ ಚಿತ್ರದ ಟೈಟಲ್ ಹಾಡು ಕಳೆದ ವರ್ಷಕ್ಕೆ ಅತ್ಯುತ್ತಮ ವಿದಾಯ ನೀಡಿದೆ. ಈ ಎಲ್ಲಾ ಹಾಡುಗಳ ಪೈಕಿ ನಿಮ್ಮ ನೆಚ್ಚಿನ ಗೀತೆ ಯಾವುದು ಅಥವಾ ಈ ಪಟ್ಟಿಯಲ್ಲಿ ಇಲ್ಲದೇ ಇರೋ ಹಾಡುಗಳು ಇದ್ದರೂ ಕಾಮೆಂಟ್ ಮೂಲಕ ತಿಳಿಸಿ.

    English summary
    Year End special articles: Here is a list Top 12 kannada songs in 2018.
    Wednesday, January 9, 2019, 17:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X