»   » ಶಿವಣ್ಣನ 'ಶಿವಲಿಂಗ' ಏಕೆ ನೋಡಬೇಕು ಇಲ್ಲಿದೆ ಟಾಪ್ 5 ಕಾರಣಗಳು

ಶಿವಣ್ಣನ 'ಶಿವಲಿಂಗ' ಏಕೆ ನೋಡಬೇಕು ಇಲ್ಲಿದೆ ಟಾಪ್ 5 ಕಾರಣಗಳು

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ನಟಿ ವೇದಿಕಾ ಅವರು ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ಶಿವಲಿಂಗ' ಸಿನಿಮಾ ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ಶುಕ್ರವಾರ (ಫೆಬ್ರವರಿ 12) ದಂದು ತೆರೆ ಕಾಣುತ್ತಿದೆ.

ಹಾರರ್ ಸಿನಿಮಾಗಳನ್ನು ಮಾಡುವಲ್ಲಿ ಚಾಣಾಕ್ಷನಾಗಿರುವ ನಿರ್ದೇಶಕ ಪಿ.ವಾಸು ಆಕ್ಷನ್-ಕಟ್ ಹೇಳಿರುವ 'ಶಿವಲಿಂಗ' ಸಿನಿಮಾ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ.


'ಭಜರಂಗಿ' ಸಿನಿಮಾದ ನಂತರ ಶಿವಣ್ಣ ಅವರು ಮಾಡಿದ 'ವಜ್ರಕಾಯ', 'ಕಿಲ್ಲಿಂಗ್ ವೀರಪ್ಪನ್' ಹೀಗೆ ಸಾಲು-ಸಾಲು ಚಿತ್ರಗಳು ಹಿಟ್ ಲಿಸ್ಟ್ ಸೇರಿರುವುದರಿಂದ ಸಾಮಾನ್ಯವಾಗಿ ಈ ಬಾರಿ ಕೂಡ 'ಶಿವಲಿಂಗ' ಸಿನಿಮಾದ ಬಗ್ಗೆ ಅಭಿಮಾನಿಗಳು ಸೇರಿದಂತೆ ಪ್ರೇಕ್ಷಕರು ಕೂಡ ಸಾಕಷ್ಟು ಕಾತರತೆಯನ್ನಿಟ್ಟುಕೊಂಡಿದ್ದಾರೆ.


ಈಗಾಗಲೇ ಟ್ರೈಲರ್ ಮತ್ತು ಸುಂದರ ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ನಟಿ ವೇದಿಕಾ ಜುಗಲ್ ಬಂದಿಯ 'ಶಿವಲಿಂಗ' ಸಿನಿಮಾ ಹಾರರ್ ಕಮ್ ಥ್ರಿಲ್ಲರ್-ಮಿಸ್ಟರಿ ಕಥೆಯನ್ನು ಹೊಂದಿದ್ದು ಪ್ರೇಕ್ಷಕರಿಗೆ ಥ್ರಿಲ್ಲಾಗಿಸುತ್ತಂತೆ.


ಇನ್ನು ನಾಳೆ ತೆರೆಗೆ ಬರುತ್ತಿರುವ ಬಹುನಿರೀಕ್ಷಿತ 'ಶಿವಲಿಂಗ' ಸಿನಿಮಾವನ್ನು ಸಿನಿ ಪ್ರೀಯರು ಏಕೆ ನೋಡಬೇಕು ಎಂಬುದಕ್ಕೆ 5 ಕಾರಣಗಳನ್ನು ನಾವು ನಿಮಗೆ ಕೊಡ್ತೀವಿ, ನೋಡೋಕೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


ಪಿ.ವಾಸು ಅವರ 30 ವರ್ಷಗಳ ಕನಸು

ಹಾರರ್ ಮಿಶ್ರಿತ ಸಿನಿಮಾಗಳಾದ 'ಆಪ್ತಮಿತ್ರ', 'ಆಪ್ತರಕ್ಷಕ' ದಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಿ.ವಾಸು ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡಬೇಕು ಎಂಬುದಾಗಿ ಸುಮಾರು 30 ವರ್ಷಗಳಿಂದ ಇದ್ದ ಕನಸು ಇದೀಗ 'ಶಿವಲಿಂಗ' ಚಿತ್ರದ ಮೂಲಕ ನನಸಾಗಿದೆ.


'ಶಿವಲಿಂಗ' ಹಾರರ್ ಸಿನಿಮಾ

'ಆಪ್ತಮಿತ್ರ' ಮತ್ತು 'ಆಪ್ತರಕ್ಷಕ' ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಮತ್ತು ಭಯ ಇದ್ದಂತೆ, ಶಿವಣ್ಣ ಅವರ 'ಶಿವಲಿಂಗ' ಸಿನಿಮಾದಲ್ಲೂ ಪ್ರೇಕ್ಷಕರಿಗೆ ಎಂರ್ಟಟೈನ್ ಮೆಂಟ್ ಜೊತೆ ಜೊತೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಹಾಗೂ ಕೊಂಚ ಭಯವನ್ನು ಹುಟ್ಟಿಸಿದ್ದಾರೆ ನಿರ್ದೇಶಕ ಪಿ.ವಾಸು.


ದೇವಾಲಯ ಮತ್ತು ಮಸೀದಿಯಲ್ಲಿ ಶೂಟಿಂಗ್

ಕೋಟಿ ಲಿಂಗ ಇರುವ ಪವಿತ್ರ ಸ್ಥಳ ಮತ್ತು ಮಸೀದಿಗಳಲ್ಲಿ 'ಶಿವಲಿಂಗ' ಸಿನಿಮಾವನ್ನು ಶೂಟಿಂಗ್ ಮಾಡಲಾಗಿದ್ದು, ಸಿನಿಪ್ರಿಯರಿಗೆ ಥ್ರಿಲ್ಲರ್ ಕಥೆಯ ಜೊತೆ ಜೊತೆಗೆ ಅದ್ಭುತ ಪ್ರವಾಸಿ ಸ್ಥಳಗಳನ್ನು ಕ್ಯಾಮರಾ ಕಣ್ಣಲ್ಲಿ ನೋಡಬಹುದಾಗಿದೆ.


ಶಿವಣ್ಣನ ಸ್ಟೈಲಿಷ್ ಲುಕ್

ಈಗಲೂ 25ರ ಹರೆಯದ ಯುವಕರನ್ನು ನಾಚಿಸುವಂತೆ ಸಿನಿಮಾಗಳಲ್ಲಿ ನಟಿಸುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು 'ಶಿವಲಿಂಗ' ಚಿತ್ರದಲ್ಲಿ ಸಿ.ಐ.ಡಿ ಪಾತ್ರದಲ್ಲಿ ಮಿಂಚಿದ್ದು ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿ ವೇದಿಕಾ ಅವರು ಶಿವಣ್ಣ ಅವರ ಪತ್ನಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.


ಪಕ್ಕಾ ಫ್ಯಾಮಿಲಿ ಎಂರ್ಟಟೈನರ್

ಶಿವಣ್ಣ ಅವರ ಸ್ವಲ್ಪ ಫೈಟ್, ವೇದಿಕಾ ಅವರ ಮುಗ್ದ ನಟನೆ, ಸಾಧು ಮಹಾರಾಜ್ ಅವರ ನಾನ್ ಸ್ಟಾಪ್ ಕಾಮಿಡಿ, ಅದರ ಜೊತೆಗೆ ಅಲ್ಲಲ್ಲಿ ಭಯ ಹುಟ್ಟಿಸೋ ಕೆಲವು ದೃಶ್ಯಗಳು ಎಲ್ಲಾ ಸೇರಿ ಒಟ್ನಲ್ಲಿ ಪಕ್ಕಾ ಫ್ಯಾಮಿಲಿ ಎಲ್ಲಾ ಒಟ್ಟಾಗಿ ನೋಡಬಹುದಾದ ಸಿನಿಮಾ 'ಶಿವಲಿಂಗ'. ನಾಳೆ ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್ ನಲ್ಲಿ ಸಿನಿಮಾ ಭರ್ಜರಿಯಾಗಿ ತೆರೆ ಕಾಣುತ್ತಿದೆ.


English summary
Hattrick Hero Shiva Rajkumar and filmmaker P Vasu's Kannada Movie 'Shivalinga' release this Friday (Feb 12th). Here is the Top 5 reasons to watch 'Shivalinga'. Actor Shiva Rajkumar, Actress Vedika in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada