For Quick Alerts
  ALLOW NOTIFICATIONS  
  For Daily Alerts

  ಪರಭಾಷೆಗೆ ರಿಮೇಕ್ ಆದ ಡಾ.ರಾಜ್ ಹೆಮ್ಮೆಯ 10 ಬ್ಲಾಕ್ ಬಸ್ಟರ್ ಚಿತ್ರಗಳು

  |

  ಗುಬ್ಬಿ ವೀರಣ್ಣ ಗರಡಿಯಲಿ ಪಳಗಿದ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಯಾನೆ ಡಾ.ರಾಜ್ ಕುಮಾರ್, 1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ತನ್ನ ಸಿನಿಪಯಣ ಆರಂಭಿಸಿದರು.

  2000 ಇಸವಿಯಲ್ಲಿ ಬಂದ ಅವರ ಕೊನೆಯ ಶಬ್ದವೇದಿ ಚಿತ್ರದವರೆಗಿನ ತನ್ನ 206 ಚಿತ್ರಗಳ ಪಯಣದಲ್ಲಿ ರಾಜ್, ರಿಮೇಕ್ ಚಿತ್ರದಲ್ಲಿ ನಟಿಸಿದ್ರಾ ಎಂದು ಹುಡುಕಿದರೆ ಅದಕ್ಕೆ ಕರಾರುವಕ್ಕಾದ ಉತ್ತರ ಸಿಗದಿದ್ದರೂ, ಬಹುತೇಕ ಇಲ್ಲ ಎನ್ನಬಹುದೇ ಸರಿಯಾದ ಉತ್ತರ.

  ಇನ್ನು, ರಾಜ್ ಕುಮಾರ್ ಅವರ ಸಿನಿಮಾಗಳು ಪರಭಾಷೆಗೆ ರಿಮೇಕ್ ಆಗಿದೆಯೇ ಎಂದು ನೋಡಿದರೆ, ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳು, ತಮಿಳು, ತೆಲುಗು, ಹಿಂದಿ ಮತ್ತು ಇತರ ಭಾಷೆಗಳಿಗೆ ಗೆ ರಿಮೇಕ್ ಆಗಿದೆ.

  ಡಾ.ರಾಜ್ ಅಭಿನಯದ ಬ್ಲಾಕ್ ಬಸ್ಟರ್ 'ಸಂಪತ್ತಿಗೆ ಸವಾಲ್' ಸೆಟ್ಟೇರಿದ ಹಿಂದಿನ ಅಸಲಿ ಕಥೆಡಾ.ರಾಜ್ ಅಭಿನಯದ ಬ್ಲಾಕ್ ಬಸ್ಟರ್ 'ಸಂಪತ್ತಿಗೆ ಸವಾಲ್' ಸೆಟ್ಟೇರಿದ ಹಿಂದಿನ ಅಸಲಿ ಕಥೆ

  ಪದ್ಮಭೂಷಣ, ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ, ಹತ್ತು ಬಾರಿ ಫಿಲಂಫೇರ್ ಪ್ರಶಸ್ತಿ (ದಕ್ಷಿಣ) ಪಡೆದಿರುವ ರಾಜ್ ಅವರ ಹತ್ತು ಸೂಪರ್ ಹಿಟ್ ಸಿನಿಮಾಗಳು, ಬೇರೆ ಭಾಷೆಗೆ ರಿಮೇಕ್ ಆಗಿರುವ ಪಟ್ಟಿ, ನಿಮಗಾಗಿ..

  ರಿಮೇಕ್ ಆದ ಅಣ್ಣಾವ್ರ ಸಿನಿಮಾ - 1

  ರಿಮೇಕ್ ಆದ ಅಣ್ಣಾವ್ರ ಸಿನಿಮಾ - 1

  1. ಕುಲಗೌರವ
  ಬಿಡುಗಡೆಯಾದ ವರ್ಷ: 1971
  ಪ್ರಮುಖ ತಾರಾಗಣದಲ್ಲಿ: ಡಾ.ರಾಜ್ ಕುಮಾರ್, ಭಾರತಿ, ಜಯಂತಿ
  ನಿರ್ದೇಶಕ: ಪೇಕೇಟಿ ಶಿವರಾಂ
  ರಿಮೇಕ್ ಆದ ಸಿನಿಮಾದ ಹೆಸರು: ಕುಲಗೌರವಂ (ತೆಲುಗು, 1972). ಎನ್.ಟಿ.ರಾಮರಾವ್, ಆರತಿ, ಜಯಂತಿ
  ರಿಮೇಕ್ ಆದ ಸಿನಿಮಾದ ಹೆಸರು: ಕುಲಗೌರವಂ (ತಮಿಳು, 1974). ಮುತ್ತುರಾಮನ್, ಜಯಸುಧಾ, ಜಯಂತಿ

  ರಿಮೇಕ್ ಆದ ಅಣ್ಣಾವ್ರ ಸಿನಿಮಾ - 2

  ರಿಮೇಕ್ ಆದ ಅಣ್ಣಾವ್ರ ಸಿನಿಮಾ - 2

  2. ಗಂಧದ ಗುಡಿ
  ಬಿಡುಗಡೆಯಾದ ವರ್ಷ: 1973
  ಪ್ರಮುಖ ತಾರಾಗಣದಲ್ಲಿ: ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಕಲ್ಪನ, ಎಂ.ಪಿ.ಶಂಕರ್
  ನಿರ್ದೇಶಕ: ವಿಜಯ್
  ರಿಮೇಕ್ ಆದ ಸಿನಿಮಾದ ಹೆಸರು: ಅಡವಿ ರಾಮುಡು (ತೆಲುಗು, 1977). ಎನ್.ಟಿ.ರಾಮರಾವ್, ಜಯಸುಧಾ, ಜಯಪ್ರದ
  ರಿಮೇಕ್ ಆದ ಸಿನಿಮಾದ ಹೆಸರು: ಕರ್ತವ್ಯ (ಹಿಂದಿ, 1979). ಧರ್ಮೇಂದ್ರ, ರೇಖಾ, ವಿನೋದ್ ಮೆಹ್ರಾ

  ರಾಜ್-ವಿಷ್ಣುಗೆ ಯಾಕಿಲ್ಲ ಮೇಣದ ಪ್ರತಿಮೆ: ಮೇಡಮ್ ಟುಸ್ಸಾಡ್ ವಿರುದ್ಧ ಹರಿಪ್ರಿಯಾ ಕಿಡಿ

  ರಿಮೇಕ್ ಆದ ಅಣ್ಣಾವ್ರ ಸಿನಿಮಾ - 3

  ರಿಮೇಕ್ ಆದ ಅಣ್ಣಾವ್ರ ಸಿನಿಮಾ - 3

  3. ಬಾಳು ಬೆಳಗಿತು
  ಬಿಡುಗಡೆಯಾದ ವರ್ಷ: 1970
  ಪ್ರಮುಖ ತಾರಾಗಣದಲ್ಲಿ: ಡಾ.ರಾಜ್ ಕುಮಾರ್, ಭಾರತಿ, ಜಯಂತಿ
  ನಿರ್ದೇಶಕ: ಸಿದ್ದಲಿಂಗಯ್ಯ
  ರಿಮೇಕ್ ಆದ ಸಿನಿಮಾದ ಹೆಸರು: ಮಂಚಿವಾಡು (ತೆಲುಗು, 1973). ಅಕ್ಕಿನೇನಿ ನಾಗೇಶ್ವರ ರಾವ್, ವಾಣಿಶ್ರೀ, ಕಾಂಚನ
  ರಿಮೇಕ್ ಆದ ಸಿನಿಮಾದ ಹೆಸರು: ಹಮ್ ಶಕಲ್ (ಹಿಂದಿ, 1974). ರಾಜೇಶ್ ಖನ್ನಾ, ತನುಜಾ, ಮೌಸಮಿ ಚಟರ್ಜಿ
  ರಿಮೇಕ್ ಆದ ಸಿನಿಮಾದ ಹೆಸರು: ಊರಕ್ಕು ಉಜೇಪ್ಪಾವನ್ (ತಮಿಳು, 1976). ಎಂ.ಜಿ.ರಾಮಚಂದ್ರನ್, ವಾಣಿಶ್ರೀ, ವೆನ್ನಿರಾ ನಿರ್ಮಲ

  ರಿಮೇಕ್ ಆದ ಅಣ್ಣಾವ್ರ ಸಿನಿಮಾ -4

  ರಿಮೇಕ್ ಆದ ಅಣ್ಣಾವ್ರ ಸಿನಿಮಾ -4

  4. ಶಂಕರ್ ಗುರು
  ಬಿಡುಗಡೆಯಾದ ವರ್ಷ: 1978
  ಪ್ರಮುಖ ತಾರಾಗಣದಲ್ಲಿ: ಡಾ.ರಾಜ್ ಕುಮಾರ್, ಕಾಂಚನ, ಪದ್ಮಪ್ರಿಯ, ಜಯಮಾಲ
  ನಿರ್ದೇಶಕ: ವಿ.ಸೋಮಶೇಖರ್
  ರಿಮೇಕ್ ಆದ ಸಿನಿಮಾದ ಹೆಸರು: ತ್ರಿಶೂಲಂ (ತಮಿಳು, 1979). ಶಿವಾಜಿ ಗಣೇಶನ್, ಕೆ.ಆರ್. ವಿಜಯಾ, ಶ್ರೀಪ್ರಿಯ
  ರಿಮೇಕ್ ಆದ ಸಿನಿಮಾದ ಹೆಸರು: ಮಹಾನ್ (ಹಿಂದಿ, 1983). ಅಮಿತಾಬ್ ಬಚ್ಚನ್, ಪರ್ವೀನ್ ಬಾಬಿ, ವಹಿದಾ ರೆಹಮಾನ್

  ರಿಮೇಕ್ ಆದ ಅಣ್ಣಾವ್ರ ಸಿನಿಮಾ -5

  ರಿಮೇಕ್ ಆದ ಅಣ್ಣಾವ್ರ ಸಿನಿಮಾ -5

  5. ಪ್ರೇಮದ ಕಾಣಿಕೆ
  ಬಿಡುಗಡೆಯಾದ ವರ್ಷ: 1976
  ಪ್ರಮುಖ ತಾರಾಗಣದಲ್ಲಿ: ಡಾ.ರಾಜ್ ಕುಮಾರ್, ಆರತಿ, ಜಯಮಾಲ
  ನಿರ್ದೇಶಕ: ವಿ.ಸೋಮಶೇಖರ್
  ರಿಮೇಕ್ ಆದ ಸಿನಿಮಾದ ಹೆಸರು: ಪೊಲ್ಲಾದವನ್ (ತಮಿಳು, 1980). ರಜನೀಕಾಂತ್, ಲಕ್ಷ್ಮೀ, ಶ್ರೀಪ್ರಿಯಾ
  ರಿಮೇಕ್ ಆದ ಸಿನಿಮಾದ ಹೆಸರು: ರಾಝ್ (ಹಿಂದಿ, 1981). ರಾಜ್ ಬಬ್ಬರ್, ಸುಲಕ್ಷಣಾ ಪಂಡಿತ್, ಖಾದರ್ ಖಾನ್

  ರಿಮೇಕ್ ಆದ ಅಣ್ಣಾವ್ರ ಸಿನಿಮಾ -6

  ರಿಮೇಕ್ ಆದ ಅಣ್ಣಾವ್ರ ಸಿನಿಮಾ -6

  6. ಎರಡು ಕನಸು
  ಬಿಡುಗಡೆಯಾದ ವರ್ಷ: 1974
  ಪ್ರಮುಖ ತಾರಾಗಣದಲ್ಲಿ: ಡಾ.ರಾಜ್ ಕುಮಾರ್, ಕಲ್ಪನ, ಮಂಜುಳ
  ನಿರ್ದೇಶಕ: ದೊರೈರಾಜ್, ಎಸ್.ಕೆ.ಭಗವಾನ್
  ರಿಮೇಕ್ ಆದ ಸಿನಿಮಾದ ಹೆಸರು: ಪೂಜ (ತೆಲುಗು, 1975). ಜಿ.ರಾಮಕೃಷ್ಣ, ಮಂಜುಳ, ವಾಣಿಶ್ರೀ

  ರಿಮೇಕ್ ಆದ ಅಣ್ಣಾವ್ರ ಸಿನಿಮಾ -7

  ರಿಮೇಕ್ ಆದ ಅಣ್ಣಾವ್ರ ಸಿನಿಮಾ -7

  7. ನಾ ನಿನ್ನ ಮರೆಯಲಾರೆ
  ಬಿಡುಗಡೆಯಾದ ವರ್ಷ: 1976
  ಪ್ರಮುಖ ತಾರಾಗಣದಲ್ಲಿ: ಡಾ.ರಾಜ್ ಕುಮಾರ್, ಲಕ್ಷ್ಮೀ, ಲೀಲಾವತಿ
  ನಿರ್ದೇಶಕ: ವಿಜಯ್
  ರಿಮೇಕ್ ಆದ ಸಿನಿಮಾದ ಹೆಸರು: ಪುದುಕವಿಥೈ (ತಮಿಳು, 1982). ರಜನೀಕಾಂತ್, ಜ್ಯೋತಿ, ಸರಿತಾ
  ರಿಮೇಕ್ ಆದ ಸಿನಿಮಾದ ಹೆಸರು: ಪ್ಯಾರ್ ಕಿಯಾ ಹೇ, ಪ್ಯಾರ್ ಕರೇಂಗೆ (ಹಿಂದಿ, 1986). ಅನಿಲ್ ಕಪೂರ್, ಪದ್ಮಿನಿ ಕೊಲ್ಹಾಪುರೆ, ಅಶೋಕ್ ಕುಮಾರ್

  ರಿಮೇಕ್ ಆದ ಅಣ್ಣಾವ್ರ ಸಿನಿಮಾ 8

  ರಿಮೇಕ್ ಆದ ಅಣ್ಣಾವ್ರ ಸಿನಿಮಾ 8

  8. ತಾಯಿಗೆ ತಕ್ಕ ಮಗ
  ಬಿಡುಗಡೆಯಾದ ವರ್ಷ: 1978
  ಪ್ರಮುಖ ತಾರಾಗಣದಲ್ಲಿ: ಡಾ.ರಾಜ್ ಕುಮಾರ್, ಸಾವಿತ್ರಿ, ಪದ್ಮಪ್ರಿಯಾ
  ನಿರ್ದೇಶಕ: ವಿ.ಸೋಮಶೇಖರ
  ರಿಮೇಕ್ ಆದ ಸಿನಿಮಾದ ಹೆಸರು: ಪುಲಿಬಿಡ್ಡ (ತೆಲುಗು, 1981). ಕೃಷ್ಣಂರಾಜು, ಶ್ರೀದೇವಿ, ಕೈಕಾಲ ಸತ್ಯನಾರಾಯಣ
  ರಿಮೇಕ್ ಆದ ಸಿನಿಮಾದ ಹೆಸರು: ಮೇ ಇಂತಕಾಮ್ ಲೂಂಗ (ಹಿಂದಿ, 1982). ಧರ್ಮೇಂದ್ರ, ರೀನಾ ರಾಯ್, ಶ್ರೀರಾಮ್ ಲಾಗೂ

  ರಿಮೇಕ್ ಆದ ಅಣ್ಣಾವ್ರ ಸಿನಿಮಾ 9

  ರಿಮೇಕ್ ಆದ ಅಣ್ಣಾವ್ರ ಸಿನಿಮಾ 9

  9. ಕಸ್ತೂರಿ ನಿವಾಸ
  ಬಿಡುಗಡೆಯಾದ ವರ್ಷ: 1971
  ಪ್ರಮುಖ ತಾರಾಗಣದಲ್ಲಿ: ಡಾ.ರಾಜ್ ಕುಮಾರ್, ಜಯಂತಿ, ಆರತಿ
  ನಿರ್ದೇಶಕ: ದೊರೈ - ಭಗವಾನ್
  ರಿಮೇಕ್ ಆದ ಸಿನಿಮಾದ ಹೆಸರು: ಆವಂದನ್ ಮನಿದನ್ (ತಮಿಳು, 1975). ಶಿವಾಜಿ ಗಣೇಶನ್, ಜಯಲಲಿತಾ, ಮಂಜುಳ
  ರಿಮೇಕ್ ಆದ ಸಿನಿಮಾದ ಹೆಸರು: ಶಾಂದಾರ್ (ಹಿಂದಿ, 1974). ಸಂಜೀವ್ ಕುಮಾರ್, ಶರ್ಮಿಳಾ ಠಾಗೋರ್, ವಿನೋದ್ ಮೆಹ್ರಾ

  ರಿಮೇಕ್ ಆದ ಅಣ್ಣಾವ್ರ ಸಿನಿಮಾ 10

  ರಿಮೇಕ್ ಆದ ಅಣ್ಣಾವ್ರ ಸಿನಿಮಾ 10

  10. ಅನುರಾಗ ಅರಳಿತು
  ಬಿಡುಗಡೆಯಾದ ವರ್ಷ: 1986
  ಪ್ರಮುಖ ತಾರಾಗಣದಲ್ಲಿ: ಡಾ.ರಾಜ್ ಕುಮಾರ್, ಮಾಧವಿ, ಗೀತಾ
  ನಿರ್ದೇಶಕ: ಎಂ.ಎಸ್.ಸೋಮಶೇಖರ್
  ರಿಮೇಕ್ ಆದ ಸಿನಿಮಾದ ಹೆಸರು: ಘರನಾ ಮೊಗಡು (ತೆಲುಗು, 1992). ಚಿರಂಜೀವಿ, ನಗ್ಮಾ, ವಾಣಿ ವಿಶ್ವನಾಥ್
  ರಿಮೇಕ್ ಆದ ಸಿನಿಮಾದ ಹೆಸರು: ಲಾಡ್ಲಾ (ಹಿಂದಿ, 1994). ಅನಿಲ್ ಕಪೂರ್, ಶ್ರೀದೇವಿ, ರವೀನಾ ಟಂಡನ್
  ರಿಮೇಕ್ ಆದ ಸಿನಿಮಾದ ಹೆಸರು: ಮನ್ನನ್ (ತಮಿಳು, 1992). ರಜನೀಕಾಂತ್, ವಿಜಯಶಾಂತಿ, ಖುಷ್ಬೂ
  ರಿಮೇಕ್ ಆದ ಸಿನಿಮಾದ ಹೆಸರು: ಜಮೈ ಬಾಬು ಜಿಂದಾಬಾದ್ (ಬೆಂಗಾಳಿ, 2001). ಪ್ರೊಶೆಂಜಿತ್ ಚಟರ್ಜಿ, ರಿತುಪರ್ಣ ಸೇನ್ ಗುಪ್ತಾ, ದೀಪಾಂಕರ್ ದೇ

  English summary
  Top Ten Super Hit Movies Of Dr. Rajkumar, Remade Into Other Languages.
  Thursday, March 5, 2020, 10:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X