For Quick Alerts
  ALLOW NOTIFICATIONS  
  For Daily Alerts

  ಉತ್ತರವೇ ಸಿಗದ ಪ್ರಶ್ನೆಯಾಗಿಯೇ ಉಳಿದಿರುವ ಸ್ಟಾರ್ ನಟರ ವಿಷ್ಯಗಳು.!

  By Bharath Kumar
  |
  ಅಭಿಮಾನಿಗಳ ಪ್ರಶ್ನೆಗೆ ಈ ಸ್ಟಾರ್‌ಗಳು ಉತ್ತರ ನೀಡೋದು ಯಾವಾಗ..? | Filmibeat Kannada

  ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಕೆಲವು ವಿಷ್ಯಗಳಿವೆ. ಇದು ಎಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಸುದ್ದಿ ಮಾಡಿತ್ತು ಅಂದ್ರೆ, ಈ ಸುದ್ದಿಗಳನ್ನ ಕೇಳಿ ಸಿನಿರಸಿಕರು, ಅಭಿಮಾನಿಗಳು ದೊಡ್ಡ ಹಬ್ಬವನ್ನೇ ಆಚರಿಸಿದ್ದರು.

  ಆದ್ರೀಗ, ಒಂದೊಂದು ವಿಷ್ಯಗಳು ಪ್ರಶ್ನೆಗಳಾಗಿ ಬದಲಾಗಿದೆ. ಉತ್ತರವೇ ಸಿಗದ ಪ್ರಶ್ನೆಯಾಗಿ ಉಳಿದುಕೊಂಡಿದೆ. ಈ ವಿಷ್ಯಗಳು ಹುಟ್ಟಿಕೊಂಡಾಗನಿಂದಲೂ ಆ ಪ್ರಶ್ನೆಗಳು ಬೆಂಬಿಡದೆ ಕಾಡುತ್ತಿದೆ. ಇನ್ನು ಕೆಲವರ ವೈಯಕ್ತಿಕ ವಿಚಾರಗಳ ಸಂಗತಿಯೂ ಅದೇ ರಾಗ ಅದೇ ಹಾಡು. ಈ ನಟರು ಹೋದಲ್ಲಿ, ಬಂದಲ್ಲೆಲ್ಲ ಇದೇ ಪ್ರಶ್ನೆಗಳು.

  ಅಂಬಿ ಹಾಡುಗಳಿಗಾಗಿ ಕಾಯುತ್ತಿದ್ದವರಿಗೆ ಬಂತು ಸಿಹಿ ಸುದ್ದಿಅಂಬಿ ಹಾಡುಗಳಿಗಾಗಿ ಕಾಯುತ್ತಿದ್ದವರಿಗೆ ಬಂತು ಸಿಹಿ ಸುದ್ದಿ

  ಕನ್ನಡದ ಟಾಪ್ ನಟರಾದ ದರ್ಶನ್, ಸುದೀಪ್, ಉಪೇಂದ್ರ, ಯಶ್, ರವಿಚಂದ್ರನ್, ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಹೀಗೆ ಅನೇಕರಿಗೆ ಈ ಅನುಭವ ಉಂಟಾಗಿದೆ. ಹೌದು, ಉತ್ತರವೇ ಸಿಗದ ಪ್ರಶ್ನೆಗಳಾಗಿಯೇ ಉಳಿದುಕೊಂಡಿರುವ ವಿಷ್ಯಗಳು ಮತ್ತು ಸ್ಟಾರ್ಸ್ ಗಳು ಯಾರು ಎಂದು ಮುಂದೆ ನೋಡಿ....

  ದರ್ಶನ್ ಯಾವ ಸಿನಿಮಾ ಮೊದಲು ರಿಲೀಸ್.?

  ದರ್ಶನ್ ಯಾವ ಸಿನಿಮಾ ಮೊದಲು ರಿಲೀಸ್.?

  ದರ್ಶನ್ ಅವರ ಯಾವ ಸಿನಿಮಾ 50 ಸಿನಿಮಾ ಆಗುತ್ತೆ ಎಂಬುದು ಡಿ ಬಾಸ್ ಅಭಿಮಾನಿಗಳಲ್ಲಿ ಗೊಂದಲ ಉಂಟು ಮಾಡಿದೆ. ಈ ಹಿಂದೆ ನಿರ್ಧರಿಸಿದಂತೆ 'ಕುರುಕ್ಷೇತ್ರ' 50 ನೇ ಚಿತ್ರ. ಆದ್ರೆ, ಕಾರಣಾಂತರಗಳಿಂದ ಈ ಚಿತ್ರ ಮುಂದಕ್ಕೆ ಹೋಗುತ್ತಲೇ ಇದೆ. ಈ ಮಧ್ಯೆ 'ಯಜಮಾನ' ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಕುರುಕ್ಷೇತ್ರಕ್ಕೂ ಮುನ್ನವೇ 'ಯಜಮಾನ' ಬಂದು ಬಿಡುತ್ತಾ ಎಂಬ ಕುತೂಹಲವೂ ಇದೆ. ಆದ್ರೆ, ಇದಕ್ಕೆ ಇನ್ನು ಸ್ಪಷ್ಟ ಉತ್ತರ ಸಿಕ್ಕಿಲ್ಲ.

  ನಾರಾಯಣ್ ಪುತ್ರನಿಗೆ ಲಾಟರಿ ಹೊಡಿತು : ಡಿ ಬಾಸ್ ಚಿತ್ರದಲ್ಲಿ ಪಂಕಜ್!ನಾರಾಯಣ್ ಪುತ್ರನಿಗೆ ಲಾಟರಿ ಹೊಡಿತು : ಡಿ ಬಾಸ್ ಚಿತ್ರದಲ್ಲಿ ಪಂಕಜ್!

  'ದಿ ವಿಲನ್' ಸಿನಿಮಾ ಯಾವಾಗ ರಿಲೀಸ್.?

  'ದಿ ವಿಲನ್' ಸಿನಿಮಾ ಯಾವಾಗ ರಿಲೀಸ್.?

  ಈ ಸಿನಿಮಾ ಶುರುವಾದಾಗನಿಂದಲೂ ಇದೇ ಪ್ರಶ್ನೆ. 'ದಿ ವಿಲನ್' ಯಾವಾಗ ಬಿಡುಗಡೆ. ಸದ್ಯ ಸಿನಿಮಾ ಸೆನ್ಸಾರ್ ಗೆ ಹೋಗಿದೆ. ಈಗಲೂ ಸಿನಿಮಾ ರಿಲೀಸ್ ದಿನಾಂಕ ಪಕ್ಕಾ ಆಗಿಲ್ಲ. ಸಂಕ್ರಾಂತಿ, ಯುಗಾದಿ, ವರಮಹಾಲಕ್ಷ್ಮಿ ಹಬ್ಬ ಆಯ್ತು. ಈಗ ಗೌರಿ-ಗಣೇಶ ಹಬ್ಬ ಅಂತ ಹೇಳಲಾಗುತ್ತಿದೆ. ಆದ್ರೆ ಯಾವಾಗ ಎನ್ನುವುದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ.

  'ದಿ ವಿಲನ್' ಚಿತ್ರದ ಲೇಟೆಸ್ಟ್ ಅಪ್ಡೇಟ್ ನೀಡಿದ ಪ್ರೇಮ್'ದಿ ವಿಲನ್' ಚಿತ್ರದ ಲೇಟೆಸ್ಟ್ ಅಪ್ಡೇಟ್ ನೀಡಿದ ಪ್ರೇಮ್

  ಕೆ.ಜೆ.ಎಫ್ ಚಿತ್ರ ಯಾವಾಗ ಬಿಡುಗಡೆ.?

  ಕೆ.ಜೆ.ಎಫ್ ಚಿತ್ರ ಯಾವಾಗ ಬಿಡುಗಡೆ.?

  ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ 'ಕೆ.ಜಿ.ಎಫ್' ಸಿನಿಮಾ ಆರಂಭವಾಗಿ ಎರಡು ವರ್ಷ ಆಯ್ತು. ಈಗಲೂ ಈ ಚಿತ್ರ ಯಾವಾಗ ರಿಲೀಸ್ ಅಂತ ಗೊತ್ತಾಗುತ್ತಿಲ್ಲ. ಅಕ್ಟೋಬರ್ ನಲ್ಲಿ ಟ್ರೈಲರ್ ಬರುತ್ತಂತೆ. ಆದ್ರೆ, ಸಿನಿಮಾ ಯಾವಾಗ.?

  ದರ್ಶನ್ ಮತ್ತು ಸುದೀಪ್ ಒಟ್ಟಿಗೆ ಬರೋದು ಯಾವಾಗ.?

  ದರ್ಶನ್ ಮತ್ತು ಸುದೀಪ್ ಒಟ್ಟಿಗೆ ಬರೋದು ಯಾವಾಗ.?

  ದರ್ಶನ್ ಮತ್ತು ಸುದೀಪ್ ಸ್ನೇಹದಲ್ಲಿ ಬಿರುಕು ಉಂಟಾಗಿ ಒಂದೂವರೆ ವರ್ಷ ಆಗಿದೆ. ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಒಂದಾಗಿದ್ದಾರೆ ಎಂಬ ಮಾತಿದೆ. ಆದ್ರೆ, ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಹಾಗಾಗಿ, ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವುದು ಯಾವಾಗ.?

  ಸುದೀಪ್ ಹಾಲಿವುಡ್ ಸಿನಿಮಾ ಯಾವಾಗ.?

  ಸುದೀಪ್ ಹಾಲಿವುಡ್ ಸಿನಿಮಾ ಯಾವಾಗ.?

  ಕಿಚ್ಚ ಸುದೀಪ್ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಹಳೇ ಸುದ್ದಿ. ಆದ್ರೆ, ಈ ಸಿನಿಮಾ ಯಾವಾಗ ಸ್ಟಾರ್ಟ್ ಆಗುತ್ತೆ ಎಂಬುದು ಪ್ರಶ್ನೆ. ಸುದೀಪ್ ನೋಡಿದ್ರೆ, ಕೋಟಿಗೊಬ್ಬ 3, ಪೈಲ್ವಾನ್, ಅಂಬಿ ನಿಂಗ್ ವಯಸ್ಸಾಯ್ತೋ, ತೆಲುಗಿನ ಸೈರಾ ನರಸಿಂಹ ರೆಡ್ಡಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಯಾವ ಗ್ಯಾಪ್ ನಲ್ಲಿ ಮಾಡ್ತಾರೆ ಎನ್ನೋದು ಪ್ರಶ್ನೆ.?

  'ಪೈಲ್ವಾನ್' ಸೆಟ್ ಗೆ ಬಂದ ಸುನೀಲ್ ಶೆಟ್ಟಿ: ಸ್ವಾಗತ ಕೋರಿದ ಕಿಚ್ಚ'ಪೈಲ್ವಾನ್' ಸೆಟ್ ಗೆ ಬಂದ ಸುನೀಲ್ ಶೆಟ್ಟಿ: ಸ್ವಾಗತ ಕೋರಿದ ಕಿಚ್ಚ

  ಉಪೇಂದ್ರ ಮತ್ತೆ ಡೈರೆಕ್ಷನ್ ಯಾವಾಗ.?

  ಉಪೇಂದ್ರ ಮತ್ತೆ ಡೈರೆಕ್ಷನ್ ಯಾವಾಗ.?

  'ಉಪ್ಪಿ-2' ಚಿತ್ರದ ನಂತರ ಉಪೇಂದ್ರ ಡೈರೆಕ್ಷನ್ ಮತ್ತೆ ಯಾವಾಗ.? ಹೋಮ್ ಮಿನಿಸ್ಟರ್, ಐ ಲವ್ ಯೂ ಸೇರಿದಂತೆ ಮತ್ತೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿರುವ ಉಪ್ಪಿ ಮತ್ತೆ ನಿರ್ದೇಶನ ಯಾವಾಗ ಮಾಡ್ತಾರೆ ಎಂಬುದು ಪ್ರಶ್ನೆ.?

  ಜೆಕೆ 'ಸೂಪರ್ ಸ್ಟಾರ್' ಆದ್ರು: ಉಪೇಂದ್ರ ಅಭಿಮಾನಿಗಳು ರೊಚ್ಚಿಗೆದ್ರು.!ಜೆಕೆ 'ಸೂಪರ್ ಸ್ಟಾರ್' ಆದ್ರು: ಉಪೇಂದ್ರ ಅಭಿಮಾನಿಗಳು ರೊಚ್ಚಿಗೆದ್ರು.!

  ಶಿವಣ್ಣ-ಪುನೀತ್-ರಾಘಣ್ಣ ಸಿನಿಮಾ.?

  ಶಿವಣ್ಣ-ಪುನೀತ್-ರಾಘಣ್ಣ ಸಿನಿಮಾ.?

  ಡಾ ರಾಜ್ ಕುಮಾರ್ ಪುತ್ರರನ್ನ ಒಂದೇ ಸಿನಿಮಾದಲ್ಲಿ ನೋಡೋದು ಯಾವಾಗ.? ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರನ್ನ ಒಂದೇ ಚಿತ್ರದಲ್ಲಿ ನೋಡುವ ಬಯಕೆ ಅಭಿಮಾನಿಗಳದ್ದು. ಇಂತಹ ಸಾಹಸಕ್ಕೆ ಯಾವ ನಿರ್ದೇಶಕ ಕೈ ಹಾಕ್ತಾರೆ.?

  ರಕ್ಷಿತ್-ರಶ್ಮಿಕಾ ಮದುವೆ ಯಾವಾಗ.?

  ರಕ್ಷಿತ್-ರಶ್ಮಿಕಾ ಮದುವೆ ಯಾವಾಗ.?

  ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರು ನಿಶ್ಚಿತಾರ್ಥ ಆಗಿ ಒಂದೂವರೆ ವರ್ಷ ಆಗಿದೆ. ಆದ್ರೆ, ಮದುವೆ ಯಾವಾಗ ಎಂಬುದು ಕುತೂಹಲ ಮೂಡಿಸಿದೆ. ಈ ಬಗ್ಗೆ ಇಬ್ಬರು ಹೇಳೋದು ಒಂದೇ. ಸದ್ಯಕ್ಕೆ ಮದುವೆ ಬಗ್ಗೆ ನಿರ್ಧಾರ ಮಾಡಿಲ್ಲ.

  ರಕ್ಷಿತ್ ಜೊತೆ ಬ್ರೇಕ್ ಅಪ್ ಅಂದೋರಿಗೆ ಮಾತಲ್ಲೇ ಮಾಂಜ ಕೊಟ್ಟ ರಶ್ಮಿಕಾರಕ್ಷಿತ್ ಜೊತೆ ಬ್ರೇಕ್ ಅಪ್ ಅಂದೋರಿಗೆ ಮಾತಲ್ಲೇ ಮಾಂಜ ಕೊಟ್ಟ ರಶ್ಮಿಕಾ

  'ಮಂಜನಿ ಹನಿ' ಯಾವಾಗ.?

  'ಮಂಜನಿ ಹನಿ' ಯಾವಾಗ.?

  ಕನ್ನಡ ಚಿತ್ರರಂಗದ ಮಿಲಿಯನ್ ಡಾಲರ್ ಪ್ರಶ್ನೆ 'ಮಂಜನಿ ಹನಿ' ಯಾವಾಗ.? ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕನಸಿನ ಸಿನಿಮಾ 'ಮಂಜನಿ ಹನಿ' ಹಣದ ಸಮಸ್ಯೆಯಿಂದ ನಿಂತು ಹೋಗಿದೆ. ಅವರ ಅಭಿಮಾನಿಗಳು ಪದೇ ಪದೇ ಕೇಳುವ ಒಂದೇ ಪ್ರಶ್ನೆ ಮಂಜನಿ ಹನಿ ಯಾವಾಗ.? ಇದಕ್ಕೆ ರವಿಚಂದ್ರನ್ ಬಳಿಯೂ ಉತ್ತರ ಇಲ್ಲ.

  ಸಿನಿಮಾದಲ್ಲಿ ಚಾನ್ಸ್ ಬೇಕು ಅಂದ್ರೆ ಮಗು ಬಲಿ ಕೊಡಬೇಕು.!ಸಿನಿಮಾದಲ್ಲಿ ಚಾನ್ಸ್ ಬೇಕು ಅಂದ್ರೆ ಮಗು ಬಲಿ ಕೊಡಬೇಕು.!

  English summary
  Trending topics about Kannada actor Darshan, sudeep, upendra, rakshith shetty, ravichandran, yash, puneeth rajkumar, shiva rajkumar and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X