Don't Miss!
- News
Indira Canteens: ಇಂದಿರಾ ಕ್ಯಾಂಟೀನ್ಗಳಲ್ಲಿ ಕುಡಿಯಲು ನೀರಿಲ್ಲ, ಬಿಲ್ ಕಟ್ಟಿಲ್ಲ ಎಂದು ಸಂಪರ್ಕ ಕಡಿತ
- Automobiles
ಭಾರತದಲ್ಲಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಯಾವಾಗ? ಅತಿ ಹೆಚ್ಚು ರೇಂಜ್ ಕೊಡಲಿದೆಯಂತೆ..!
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Sports
Ranji Trophy: ಕರ್ನಾಟಕ ಮಾರಕ ದಾಳಿಗೆ ತತ್ತರಿಸಿದ ಉತ್ತರಾಖಂಡ: 116 ರನ್ಗಳಿಗೆ ಆಲೌಟ್
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರೀಲರ್ಸ್‌ಗಳಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು: 17500 ದಂಡ!
ಇನ್‌ಸ್ಟಾಗ್ರಾಂ ರೀಲರ್ಸ್‌ಗಳು ಇತರೆ ಅಪ್ಲಿಕೇಶನ್‌ಗಳಿಗೆ ಕಿರು ವಿಡಿಯೋ ಮಾಡಿ ಹಾಕುವವರಿಗೆ ಬೆಂಗಳೂರಿನ ಸಂಚಾರಿ ಪೊಲೀಸರು ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.
ವಿಡಿಯೋ ಮಾಡುವ ಸಲುವಾಗಿ ಹೆಲ್ಮೆಟ್ ಹಾಕಿಕೊಳ್ಳದೆ ಅಜಾಗರೂಕತೆಯಿಂದ ಬೈಕ್ ಓಡಿಸಿರುವ ರೀಲರ್ಸ್‌ಗಳನ್ನು ಪತ್ತೆ ಹಚ್ಚಿ ನಿಯಮಾನುಸಾರ ಭಾರಿ ಮೊತ್ತದ ದಂಡವನ್ನು ಟ್ರಾಫಿಕ್ ಪೊಲೀಸರು ಹಾಕಿದ್ದಾರೆ.
Samantha:
ಸಮಂತಾ
ಮತ್ತು
ನಾಗಚೈತನ್ಯ
ಇನ್‌ಸ್ಟಾಗ್ರಾಂ
ಕದನಕ್ಕೆ
ತಲೆಕೆಡಿಸಿಕೊಂಡ
ಫ್ಯಾನ್ಸ್!
ಸೋಷಿಯಲ್ ಮೀಡಿಯಾ ರೀಲ್ಸ್‌ಗಳಿಗಾಗಿ ನಿಯಮ ಗಾಳಿಗೆ ತೂರಿ ವಿಡಿಯೋ ಮಾಡಿರುವ ಒಟ್ಟು 44 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದು ಇನ್‌ಸ್ಟಾಗ್ರಾಂ ರೀಲ್‌ಗಳಿಂದ ಖ್ಯಾತವಾಗಿರು ಒಬ್ಬಾತನಿಗೆ 17500 ದಂಡ ವಿಧಿಸಿದ್ದಾರೆ ಎನ್ನಲಾಗುತ್ತಿದೆ. ತಾನು ದಂಡ ಕಟ್ಟಿರುವುದನ್ನೇ ಆತ ರೀಲ್ಸ್ ಮಾಡಿ ಹಾಕಿ ಆ ವಿಡಿಯೋ ಸಹ ವೈರಲ್ ಆಗಿದೆಯಂತೆ!

ವೀಲಿಂಗ್ ಮಾಡುವವರ ವಿರುದ್ಧವೂ ದಂಡ
ರೀಲರ್ಸ್‌ಗಳ ವಿರುದ್ಧ ಮಾತ್ರವಲ್ಲದೆ. ವೀಲಿಂಗ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವವರ ವಿರುದ್ಧ ಬೆಂಗಳೂರು ಪೊಲೀಸರು ಕ್ರಮ ಜರುಗಿಸಿದ್ದಾರೆ. ಅಂಥಹಾ ಬೈಕ್ ರೈಡರ್‌ಗಳನ್ನು ಹುಡುಕಿ ಅವರ ಮೇಲೆ ದಂಡ ಹೇರಿರುವುದಲ್ಲದೆ ಕೆಲವರ ಬಳಿ ಬೈಕ್ ಸಹ ವಶಪಡಿಸಿಕೊಂಡಿದ್ದಾರೆ.

ಸೂಚನೆ ನೀಡಿದ್ದ ರವಿಕಾಂತೇ ಗೌಡ
ಕೆಲವು ದಿನಗಳ ಹಿಂದೆಯಷ್ಟೆ ಆಯುಕ್ತ ರವಿಕಾಂತೇ ಗೌಡ ಅವರು, ಇನ್ನು ಮುಂದೆ ಸಂಚಾರಿ ಪೊಲೀಸರು ದಾಖಲಾತಿ ತಪಾಸಣೆ ನೆಪದಲ್ಲಿ ಸುಖಾ-ಸುಮ್ಮನೆ ಬೈಕ್ ಚಾಲಕರನ್ನು ಅಡ್ಡಗಟ್ಟಬಾರದು ಎಂದಿದ್ದರು. ಅದರ ಬೆನ್ನಲ್ಲೆ ಈಗ ಯಾರು ಸಂಚಾರಿ ನಿಯಮ ಉಲ್ಲಂಘಿಸುತ್ತಾರೆಯೋ ಅವರನ್ನು ಹುಡುಕಿ ಹೋಗಿ ದಂಡ ಹೇರುವ ಪದ್ಧತಿಗೆ ಚಾಲನೆ ಸಿಕ್ಕಂತಿದೆ.

ಮೇಲ್ನೋಟಕ್ಕೆ ನಿಯಮ ಉಲ್ಲಂಘಿಸಿದ್ದರೆ ಮಾತ್ರ ತಡೆ
ರವಿಕಾಂತೇ ಗೌಡ ಹೇಳಿರುವಂತೆ, ಮೇಲ್ನೋಟಕ್ಕೆ ಸಂಚಾರ ನಿಯಮ ಉಲ್ಲಂಘನೆ ಮಾಡದವರನ್ನು ದಾಖಲಾತಿ ಪರಿಶೀಲನೆ ನೆಪದಲ್ಲಿ ರಸ್ತೆಯಲ್ಲಿ ಅಡ್ಡಗಟ್ಟುವಂತಿಲ್ಲ. ಒಂದೊಮ್ಮೆ ಬೈಕ್ ಸವಾರನು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದಲ್ಲಿ, ಒನ್ ವೇ ನಲ್ಲಿ ಎದುರಾಗಿ ಬರುತ್ತಿದ್ದರೆ, ಸಿಗ್ನಲ್ ಜಂಪ್ ಮಾಡಿದ್ದನ್ನು ಪೊಲೀಸರು ನೋಡಿದ್ದರೆ ಮಾತ್ರವೇ ಸವಾರರನ್ನು ತಡೆದು ನಿಲ್ಲಿಸಬಹುದಾಗಿ ಇಲ್ಲವಾದರೆ ಯಾವುದೇ ಚಾಲಕರನ್ನು ತಡೆದು ನಿಲ್ಲಿಸಿ ದಾಖಲಾತಿ ಪರಿಶೀಲನೆ ಮಾಡುವಂತಿಲ್ಲ.

ರೀಲರ್ಸ್‌ಗಳ ವಿರುದ್ಧ ಈ ಹಿಂದೆಯೂ ದೂರು ದಾಖಲು
ಇನ್ನು ರೀಲರ್ಸ್‌ಗಳ ಮೇಲೆ ಟ್ರಾಫಿಕ್ ಪೊಲೀಸರ ಕಣ್ಣು ಬೀಳುತ್ತಿರುವುದು ಇದು ಮೊದಲೇನೂ ಅಲ್ಲ ಈ ಹಿಂದೆಯೂ ಒಮ್ಮೆ ಟಿಕ್‌ಟಾಕ್ ಇದ್ದಾಗ ಬೆಂಗಳೂರು ಸೇರಿದಂತೆ ಕೆಲವೆಡೆ ಪೊಲೀಸರು ಈ ಟಿಕ್‌ಟಾಕ್ ಸ್ಟಾರ್‌ಗಳಿಗೆ ಎಚ್ಚರಿಕೆ ನೀಡಿದ್ದರು. ಪೊಲೀಸರು ಮಾತ್ರವೇ ಅಲ್ಲದೆ, ಮಹಿಳೆಯರ ಬಗ್ಗೆ ನಿಂದನಾತ್ಮಕವಾಗಿ ವಿಡಿಯೋ ಮಾಡಿದ ಕೆಲವು ಟಿಕ್ ಟಾಕ್ ಸ್ಟಾರ್‌ಗಳ ಮೇಲೆ ದೂರು ಸಹ ದಾಖಲಾಗಿತ್ತು. ಮಕ್ಕಳನ್ನು ಹೊಡೆದಿದ್ದ ವಿಡಿಯೋ ವಿರುದ್ಧವೂ ದೂರು ದಾಖಲಾಗಿತ್ತು.