»   » ದುರಂತ ಅಂತ್ಯದ ಮನಕಲಕುವ ಚಿತ್ರಗಳು - 4

ದುರಂತ ಅಂತ್ಯದ ಮನಕಲಕುವ ಚಿತ್ರಗಳು - 4

Posted By:
Subscribe to Filmibeat Kannada

ದುರಂತ ಅಂತ್ಯ ಕಾಣುವ ಹಳೆಯ/ಹೊಸ ಕನ್ನಡ ಚಿತ್ರಗಳ ಬಗ್ಗೆ ನಮ್ಮ ಒದುಗರಿಗೆ ತಿಳಿಸುವ ಸಣ್ಣ ಪ್ರಯತ್ನದ ಮುಂದುವರಿದ ಭಾಗವಾಗಿ ಸರಣಿಯ ನಾಲ್ಕನೇ ಲೇಖನವಿದು.

ಈ ಹಿಂದಿನ ಮೂರು ಲೇಖನದಲ್ಲಿ ಪ್ರತಿ ಲೇಖನದಲ್ಲಿ ಐದು ಚಿತ್ರಗಳಂತೆ ಹದಿನೈದು ಚಿತ್ರಗಳ ಬಗ್ಗೆ ತಿಳಿಸಿದ್ದೇವೆ.

ಈ ಸರಣಿಯ ಲೇಖನ ಇನ್ನೂ ಮುಂದುವರಿಯಲಿದೆ. ನಿಮ್ಮ ಗಮನಕ್ಕೆ ಬಂದ ಚಿತ್ರಗಳು ನಮ್ಮ ಗಮನಕ್ಕೆ ಬರದೇ ಇದ್ದ ಪಕ್ಷದಲ್ಲಿ ಅಂಥಹಾ ಚಿತ್ರಗಳ ಬಗ್ಗೆ ನಮಗೆ ತಿಳಿಸಲು ಕೋರುತ್ತಿದ್ದೇವೆ.

ಎರಡನೇ ಲೇಖನ

ಮೂರನೇ ಲೇಖನ

ಚಿತ್ರ: ಮುತ್ತಿನಹಾರ

ಚಿತ್ರ: ಮುತ್ತಿನಹಾರ
ಬಿಡುಗಡೆಯಾದ ವರ್ಷ : 1990
ನಿರ್ದೇಶಕ: ಎಸ್ ವಿ ರಾಜೇಂದ್ರಸಿಂಗ್ ಬಾಬು
ತಾರಾಗಣದಲ್ಲಿ : ಡಾ. ವಿಷ್ಣುವರ್ಧನ್ , ಸುಹಾಸಿನಿ, ಕೆ ಎಸ್ ಅಶ್ವಥ್
ಜನಪ್ರಿಯ ಹಾಡು: ದೇವರು ಹೊಸೆದಾ ಪ್ರೇಮದ ದಾರ, ಮಡಿಕೇರಿ ಸಿಪಾಯಿ
ಕ್ಲೈಮ್ಯಾಕ್ಸ್: ನಾಯಕನ ವೀರ ಮರಣ

ಚಿತ್ರ: ಮಸಣದ ಹೂವು

ಚಿತ್ರ: ಮಸಣದ ಹೂವು
ಬಿಡುಗಡೆಯಾದ ವರ್ಷ : 1985
ನಿರ್ದೇಶಕ: ಎಸ್ ಆರ್ ಪುಟ್ಟಣ್ಣ ಕಣಗಾಲ್
ತಾರಾಗಣದಲ್ಲಿ : ಅಂಬರೀಶ್, ಅಪರ್ಣಾ, ಲೋಕನಾಥ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು
ಜನಪ್ರಿಯ ಹಾಡು: ಓ ಗುಣವಂಥ ನಿನ್ನಾ ಗುಣಗಾನ ಮಾಡಲು, ಮಸಣದ ಹೂವೆಂದು ನೀನೇಕೆ ಕೊರಗುವೆ
ಕ್ಲೈಮ್ಯಾಕ್ಸ್: ಚಿತ್ರದ ಎರಡನೇ ನಾಯಕಿಯ ಆತ್ಮಹತ್ಯೆ
ಚಿತ್ರ ಪೂರ್ಣವಾಗುವ ಮುನ್ನ ನಿರ್ದೇಶಕ ಪುಟ್ಟಣ್ಣ ನಿಧನರಾದರು.

ಚಿತ್ರ: ಧರಣಿ ಮಂಡಲ ಮಧ್ಯದೊಳಗೆ

ಚಿತ್ರ: ಧರಣಿ ಮಂಡಲ ಮಧ್ಯದೊಳಗೆ
ಬಿಡುಗಡೆಯಾದ ವರ್ಷ : 1983
ನಿರ್ದೇಶಕ: ಎಸ್ ಆರ್ ಪುಟ್ಟಣ್ಣ ಕಣಗಾಲ್
ತಾರಾಗಣದಲ್ಲಿ : ಶ್ರೀನಾಥ್, ರಾಮಕೃಷ್ಣ, ಚಂದ್ರಶೇಖರ್, ಜೈಜಗದೀಶ್
ಕ್ಲೈಮ್ಯಾಕ್ಸ್: ಬಡವ, ಶ್ರೀಮಂತ ಎನ್ನುವ ತಾರತಮ್ಯ, ಒಂದಾಗದ ನಾಯಕ, ನಾಯಕಿ

ಚಿತ್ರ: ಜೀವನಚೈತ್ರ

ಚಿತ್ರ: ಜೀವನಚೈತ್ರ
ಬಿಡುಗಡೆಯಾದ ವರ್ಷ : 1992
ನಿರ್ದೇಶಕ: ದೊರೈ - ಭಗವಾನ್
ತಾರಾಗಣದಲ್ಲಿ : ಡಾ. ರಾಜ್, ಮಾಧವಿ, ಪಂಡರೀಬಾಯಿ, ಕೆ ಎಸ್ ಅಶ್ವಥ್
ಜನಪ್ರಿಯ ಹಾಡು: ನಾದಮಯ ಈ ಲೋಕವೆಲ್ಲಾ, ಮಾನವನಾಗಿ ಹುಟ್ಟಿದ ಮೇಲೆ
ಕ್ಲೈಮ್ಯಾಕ್ಸ್: ಸಮಸ್ತ ಆಸ್ತಿಯನ್ನು ಮಕ್ಕಳಿಗೆ ಹಂಚಿ ಸಿಂಹಾದ್ರಿ(ವಾಸಾವಾಗಿದ್ದ ಮನೆ) ಯಿಂದ ದೂರ.

ಚಿತ್ರ: ಧರ್ಮಸೆರೆ

ಚಿತ್ರ: ಧರ್ಮಸೆರೆ
ಬಿಡುಗಡೆಯಾದ ವರ್ಷ : 1979
ನಿರ್ದೇಶಕ: ಎಸ್ ಆರ್ ಪುಟ್ಟಣ್ಣ ಕಣಗಾಲ್
ತಾರಾಗಣದಲ್ಲಿ : ಶ್ರೀನಾಥ್, ಆರತಿ, ಸತ್ಯಪ್ರಿಯಾ, ಜೈಜಗದೀಶ್
ಜನಪ್ರಿಯ ಹಾಡು: ಮೂಕ ಹಕ್ಕಿಯು ಹಾಡುತಿದೆ, ಈ ಸಂಭಾಷಣೆ
ಕ್ಲೈಮ್ಯಾಕ್ಸ್: ಗರ್ಭಿಣಿಯಾಗದ ಮೂಕಿಯನ್ನು ಸಮಾಜದ ತಿರಸ್ಕಾರ, ಅವಮಾನ

English summary
Tragedy ending Kannada movies - Series 3.
Please Wait while comments are loading...