»   » ದುರಂತ ಅಂತ್ಯ ಕಂಡ ಕನ್ನಡ ಚಿತ್ರಗಳು - 3

ದುರಂತ ಅಂತ್ಯ ಕಂಡ ಕನ್ನಡ ಚಿತ್ರಗಳು - 3

Posted By:
Subscribe to Filmibeat Kannada

1934ರಲ್ಲಿ ತೆರೆಕಂಡ ಟಾಕಿ ಚಿತ್ರ ಸತಿ ಸುಲೋಚನದಿಂದ ಹಿಡಿದು ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರಗಳವರೆಗೆ ಬಹಳಷ್ಟು ದುರಂತ ಅಂತ್ಯ ಕಾಣುವ ಕನ್ನಡ ಚಿತ್ರಗಳನ್ನು ನೋಡಿದ್ದೇವೆ, ಕೇಳಿದ್ದೇವೆ.

ದುರಂತ ಅಂತ್ಯ ಕಾಣುವ ಹಳೆಯ/ಹೊಸ ಕನ್ನಡ ಚಿತ್ರಗಳ ಬಗ್ಗೆ ನಮ್ಮ ಒದುಗರಿಗೆ ತಿಳಿಸುವ ಸಣ್ಣ ಪ್ರಯತ್ನದ ಮುಂದುವರಿದ ಭಾಗವಾಗಿ ಸರಣಿಯ ಮೂರನೇ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಈ ಸರಣಿಯ ಲೇಖನ ಇನ್ನೂ ಮುಂದುವರಿಯಲಿದೆ. ನಿಮ್ಮ ಗಮನಕ್ಕೆ ಬಂದ ಚಿತ್ರಗಳು ನಮ್ಮ ಗಮನಕ್ಕೆ ಬರದೇ ಇದ್ದ ಪಕ್ಷದಲ್ಲಿ ಅಂಥಹಾ ಚಿತ್ರಗಳ ಬಗ್ಗೆ ನಮಗೆ ತಿಳಿಸಲು ಕೋರುತ್ತಿದ್ದೇವೆ.

ನೀವೂ ಒದಿ, ನಿಮ್ಮವರಿಗೂ ಒದಲು ಹೇಳಿ.

ಎಡಕಲ್ಲು ಗುಡ್ಡದ ಮೇಲೆ

ಚಿತ್ರ : ಎಡಕಲ್ಲು ಗುಡ್ಡದ ಮೇಲೆ
ಬಿಡುಗಡೆಯಾದ ವರ್ಷ : 1973
ನಿರ್ದೇಶಕ: ಎಸ್ ಆರ್ ಪುಟ್ಟಣ್ಣ ಕಣಗಾಲ್
ತಾರಾಗಣದಲ್ಲಿ : ಜಯಂತಿ, ಆರತಿ, ಚಂದ್ರಶೇಖರ್, ಶಿವರಾಂ
ಜನಪ್ರಿಯ ಹಾಡು: ವಿರಹಾ ನೂರು ನೂರು ತರಹ, ಸನ್ಯಾಸಿ ಸನ್ಯಾಸಿ
ಕ್ಲೈಮ್ಯಾಕ್ಸ್: ನಾಯಕ ಮತ್ತು ನಾಯಕಿಯ ಸಾವು

ಬೆಳ್ಳಿ ಮೋಡ

ಚಿತ್ರ : ಬೆಳ್ಳಿ ಮೋಡ
ಬಿಡುಗಡೆಯಾದ ವರ್ಷ : 1966
ನಿರ್ದೇಶಕ: ಎಸ್ ಆರ್ ಪುಟ್ಟಣ್ಣ ಕಣಗಾಲ್
ಸಂಗೀತ ನಿರ್ದೇಶಕ: ವಿಜಯ ಭಾಸ್ಕರ್
ತಾರಾಗಣದಲ್ಲಿ : ಕಲ್ಯಾಣ್ ಕುಮಾರ್, ಕಲ್ಪನಾ, ಅಶ್ವಥ್, ಪಂಡರೀಬಾಯಿ
ಜನಪ್ರಿಯ ಹಾಡು: ಮೂಡಲ ಮನೆಯ ಮುತ್ತಿನ ನೀರಿನ, ಒಡೆಯಿತು ಒಲವಿನ
ಕ್ಲೈಮ್ಯಾಕ್ಸ್: ನಾಯಕನ ಪ್ರೀತಿಯನ್ನು ನಿರಾಕರಿಸಿ ನಾಯಕಿ ದೂರವಾಗುವುದು

ಚಂದನದ ಗೊಂಬೆ

ಚಿತ್ರ : ಚಂದನದ ಗೊಂಬೆ
ಬಿಡುಗಡೆಯಾದ ವರ್ಷ : 1979
ನಿರ್ದೇಶಕ: ದೊರೆ ಭಗವಾನ್
ಸಂಗೀತ ನಿರ್ದೇಶಕ: ರಾಜನ್ - ನಾಗೇಂದ್ರ
ತಾರಾಗಣದಲ್ಲಿ : ಅನಂತ್ ನಾಗ್, ಲಕ್ಷ್ಮಿ
ಜನಪ್ರಿಯ ಹಾಡು: ಮನೆಯನು ಬೆಳಗಿದೆ ಇಂದು, ಕಂಗಳು ತುಂಬಿರಲು
ಕ್ಲೈಮ್ಯಾಕ್ಸ್: ನಾಯಕನ ಸಾವು

ಗೀತಾ

ಚಿತ್ರ : ಗೀತಾ
ಬಿಡುಗಡೆಯಾದ ವರ್ಷ : 1981
ನಿರ್ದೇಶಕ: ಶಂಕರ್ ನಾಗ್
ಸಂಗೀತ ನಿರ್ದೇಶಕ: ಇಳಯರಾಜಾ
ತಾರಾಗಣದಲ್ಲಿ : ಶಂಕರ್ ನಾಗ್, ಅಕ್ಷತಾ ರಾವ್, ರಮೇಶ್ ಭಟ್, ಸಾಹುಕಾರ್ ಜಾನಕಿ
ಜನಪ್ರಿಯ ಹಾಡು: ಜೊತೆಯಲಿ ಜೊತೆ ಜೊತೆಯಲಿ, ಏನೇ ಕೇಳು ಕೊಡುವೆ ನಾನೀಗ
ಕ್ಲೈಮ್ಯಾಕ್ಸ್: ನಾಯಕಿಗೆ ಬ್ಲಡ್ ಕ್ಯಾನ್ಸರ್

ಬಂಧನ

ಚಿತ್ರ : ಬಂಧನ
ಬಿಡುಗಡೆಯಾದ ವರ್ಷ : 1984
ನಿರ್ದೇಶಕ: ರಾಜೇಂದ್ರ ಸಿಂಗ್ ಬಾಬು
ಸಂಗೀತ ನಿರ್ದೇಶಕ: ಎಂ ರಂಗರಾವ್
ತಾರಾಗಣದಲ್ಲಿ : ಡಾ. ವಿಷ್ಣುವರ್ಧನ್, ಸುಹಾಸಿನಿ, ಜೈಜಗದೀಶ್, ಅಶ್ವಥ್
ಜನಪ್ರಿಯ ಹಾಡು: ಬಣ್ಣ ನನ್ನ ಒಲವಿನ ಬಣ್ಣ, ನೂರೊಂದು ನೆನಪು
ಕ್ಲೈಮ್ಯಾಕ್ಸ್: ನಾಯಕನ ಸಾವು

ಬೆಂಕಿಯ ಬಲೆ

ಚಿತ್ರ : ಬೆಂಕಿಯ ಬಲೆ
ಬಿಡುಗಡೆಯಾದ ವರ್ಷ : 1983
ನಿರ್ದೇಶಕ: ದೊರೈ ಭಗವಾನ್
ಸಂಗೀತ ನಿರ್ದೇಶಕ: ರಾಜನ್ ನಾಗೇಂದ್ರ
ತಾರಾಗಣದಲ್ಲಿ : ಅನಂತ್ ನಾಗ್, ಲಕ್ಷ್ಮಿ ಜನಪ್ರಿಯ ಹಾಡು: ಒಲಿದ ಜೀವ ಜೊತೆಗಿರಲು ಬಾಳು ಸುಂದರ
ಕ್ಲೈಮ್ಯಾಕ್ಸ್ : ನಾಯಕನ ಸಾವು

ಜೀವನಚಕ್ರ

ಚಿತ್ರ : ಜೀವನಚಕ್ರ
ಬಿಡುಗಡೆಯಾದ ವರ್ಷ : 1985
ನಿರ್ದೇಶಕ: ಭಾರ್ಗವ
ಸಂಗೀತ ನಿರ್ದೇಶಕ: ರಾಜನ್ ನಾಗೇಂದ್ರ
ತಾರಾಗಣದಲ್ಲಿ : ಡಾ. ವಿಷ್ಣುವರ್ಧನ್, ರಾಧಿಕ, ಸಿ ಆರ್ ಸಿಂಹ ಜನಪ್ರಿಯ ಹಾಡು: ಆನಂದ ಆನಂದ, ನನ್ನವರು ಯಾರೂ ಇಲ್ಲ ಕ್ಲೈಮ್ಯಾಕ್ಸ್ : ನಾಯಕ, ನಾಯಕಿಯ ಸಾವು

ರಂಗನಾಯಕಿ

ಚಿತ್ರ : ರಂಗನಾಯಕಿ
ಬಿಡುಗಡೆಯಾದ ವರ್ಷ :1981
ನಿರ್ದೇಶಕ: ಪುಟ್ಟಣ್ಣ ಕಣಗಾಲ್
ಸಂಗೀತ ನಿರ್ದೇಶಕ: ಎಂ ರಂಗರಾವ್
ತಾರಾಗಣದಲ್ಲಿ : ಆರತಿ, ಅಂಬರೀಶ್, ಅಶೋಕ್ ಜನಪ್ರಿಯ ಹಾಡು: ಕನ್ನಡ ನಾಡಿನ ರಸಿಕರ ಮನವ
ಕ್ಲೈಮ್ಯಾಕ್ಸ್ : ನಾಯಕಿ ಆತ್ಮಹತ್ಯೆ

ಭಾಗ್ಯವಂತರು

ಚಿತ್ರ : ಭಾಗ್ಯವಂತರು
ಬಿಡುಗಡೆಯಾದ ವರ್ಷ : 1977
ನಿರ್ದೇಶಕ: ಭಾರ್ಗವ
ಸಂಗೀತ ನಿರ್ದೇಶಕ: ರಾಜನ್ ನಾಗೇಂದ್ರ
ತಾರಾಗಣದಲ್ಲಿ : ಡಾ. ರಾಜಕುಮಾರ್, ಸರೋಜಾ ದೇವಿ, ಅಶೋಕ್ ಜನಪ್ರಿಯ ಹಾಡು: ಭಾಗ್ಯವಂತರು ನಾವೇ ಭಾಗ್ಯವಂತರು ಕ್ಲೈಮ್ಯಾಕ್ಸ್ : ನಾಯಕ, ನಾಯಕಿಯ ಸಾವು

ಗೆಜ್ಜೆಪೂಜೆ

ಚಿತ್ರ : ಗೆಜ್ಜೆಪೂಜೆ
ಬಿಡುಗಡೆಯಾದ ವರ್ಷ: 1969
ನಿರ್ದೇಶಕರು: ಎಸ್ ಆರ್ ಪುಟ್ಟಣ್ಣ ಕಣಗಾಲ್
ಸಂಗೀತ ನಿರ್ದೇಶಕರು: ವಿಜಯ ಭಾಸ್ಕರ್
ಪ್ರಮುಖ ತಾರಾಗಣದಲ್ಲಿ: ಕಲ್ಪನಾ, ಗಂಗಾಧರ್, ಲೀಲಾವತಿ ಜನಪ್ರಿಯ ಹಾಡು : ಪಂಚಮವೇದ ಪ್ರೇಮದ ನಾದ, ಗಗನವು ಎಲ್ಲೋ ಭೂಮಿಯು ಎಲ್ಲೋ
ಕ್ಲೈಮ್ಯಾಕ್ಸ್: ಆತ್ಮಹತ್ಯೆಗೆ ಶರಣಾಗುವ ನಾಯಕಿ

ಶರಪಂಜರ

ಚಿತ್ರ : ಶರಪಂಜರ
ಬಿಡುಗಡೆಯಾದ ವರ್ಷ: 1971
ನಿರ್ದೇಶಕರು: ಎಸ್ ಆರ್ ಪುಟ್ಟಣ್ಣ ಕಣಗಾಲ್
ಸಂಗೀತ ನಿರ್ದೇಶಕರು: ವಿಜಯ ಭಾಸ್ಕರ್
ಪ್ರಮುಖ ತಾರಾಗಣದಲ್ಲಿ: ಕಲ್ಪನಾ, ಗಂಗಾಧರ್, ಲೀಲಾವತಿ, ಶಿವರಾಂ ಜನಪ್ರಿಯ ಹಾಡು : ಕಾವೇರಿ ಕೊಡಗಿನ ಕಾವೇರಿ, ಉತ್ತರ ಧ್ರುವದಿನ್ ದಕ್ಷಿಣ ಧ್ರುವಕೂ
ಕ್ಲೈಮ್ಯಾಕ್ಸ್: ಮಾನಸಿಕ ಅಸ್ವಸ್ಥತೆಗೆ ಪುನ: ಒಳಗಾಗುವ ನಾಯಕಿ

ಸಾಕ್ಷಾತ್ಕಾರ

ಚಿತ್ರ : ಸಾಕ್ಷಾತ್ಕಾರ
ಬಿಡುಗಡೆಯಾದ ವರ್ಷ: 1971
ನಿರ್ದೇಶಕರು: ಎಸ್ ಆರ್ ಪುಟ್ಟಣ್ಣ ಕಣಗಾಲ್
ಸಂಗೀತ ನಿರ್ದೇಶಕರು: ಎಂ ರಂಗರಾವ್
ಪ್ರಮುಖ ತಾರಾಗಣದಲ್ಲಿ: ಡಾ. ರಾಜಕುಮಾರ್, ಜಮುನಾ, ಪೃಥ್ವಿರಾಜ್ ಕಪೂರ್, ಬಾಲಕೃಷ್ಣ ಜನಪ್ರಿಯ ಹಾಡು : ಜನ್ಮ ಜನ್ಮದ ಅನುಭಂದ, ಒಲವೇ ಜೀವನ ಸಾಕ್ಷಾತ್ಕಾರ
ಕ್ಲೈಮ್ಯಾಕ್ಸ್: ನಾಯಕಿಯ ಸಾವು

ಕಸ್ತೂರಿ ನಿವಾಸ

ಚಿತ್ರ: ಕಸ್ತೂರಿ ನಿವಾಸ
ಬಿಡುಗಡೆಯಾದ ವರ್ಷ: 1971
ನಿರ್ದೇಶಕರು: ದೊರೈ ಭಗವಾನ್
ಸಂಗೀತ ನಿರ್ದೇಶಕರು: ಜಿ ಕೆ ವೆಂಕಟೇಶ್
ಪ್ರಮುಖ ತಾರಾಗಣದಲ್ಲಿ: ಡಾ. ರಾಜಕುಮಾರ್, ಜಯಂತಿ, ಆರತಿ, ಅಶ್ವಥ್ ಜನಪ್ರಿಯ ಹಾಡು : ಆಡಿಸಿ ನೋಡು ಬೀಳಿಸಿ ನೋಡು, ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ಕ್ಲೈಮ್ಯಾಕ್ಸ್: ನಾಯಕ ದಿವಾಳಿಯಾಗಿ ದೇಶಾಂತರಕ್ಕೆ

ನಾಗರಹಾವು

ಚಿತ್ರ : ನಾಗರಹಾವು
ಬಿಡುಗಡೆಯಾದ ವರ್ಷ: 1972
ನಿರ್ದೇಶಕರು: ಎಸ್ ಆರ್ ಪುಟ್ಟಣ್ಣ ಕಣಗಾಲ್
ಸಂಗೀತ ನಿರ್ದೇಶಕರು: ವಿಜಯ ಭಾಸ್ಕರ್
ಪ್ರಮುಖ ತಾರಾಗಣದಲ್ಲಿ: ವಿಷ್ಣುವರ್ಧನ್, ಆರತಿ, ವೈಶಾಲಿ ಕಾಸರವಳ್ಳಿ, ಅಶ್ವಥ್, ಲೀಲಾವತಿ ಜನಪ್ರಿಯ ಹಾಡು : ಹಾವಿನ ದ್ವೇಷ ಹನ್ನೆರೆಡು ವರುಷ, ಬಾರೆ..ಬಾರೇ ಚಂದದ ಚಲುವಿನ ತಾರೆ
ಕ್ಲೈಮ್ಯಾಕ್ಸ್: ನಾಯಕ, ನಾಯಕಿ, ಚಾಮಯ್ಯ ಮೇಷ್ಟ್ರ ಸಾವು

English summary
Tragedy ending Kannada movies - Series 3.
Please Wait while comments are loading...