»   » ಉಂಗುರ ಬದಲಾಯಿಸಿಕೊಂಡ ತ್ರಿಷಾ ಮತ್ತು ವರುಣ್

ಉಂಗುರ ಬದಲಾಯಿಸಿಕೊಂಡ ತ್ರಿಷಾ ಮತ್ತು ವರುಣ್

Posted By:
Subscribe to Filmibeat Kannada

ನಿಶ್ಚಿತಾರ್ಥವೇ ಇಷ್ಟೊಂದು ಅದ್ಧೂರಿಯಾಗಿರಬೇಕಾದರೆ ಮದುವೆ ಇನ್ನೆಷ್ಟು ವಿಜೃಂಭಣೆಯಿಂದ ಕೂಡಿರುತ್ತದೋ ಎಂದು ಮೂಗಿನ ಮೇಲೆ ಬೆರಳಿಡುವಂತೆ ದಕ್ಷಿಣ ಭಾರತದ ಖ್ಯಾತ ಅಭಿನೇತ್ರಿ ತ್ರಿಷಾ ಕೃಷ್ಣನ್ ಅವರ ನಿಶ್ಚಿತಾರ್ಥ ಉದ್ಯಮಿ ಮತ್ತು ಚಿತ್ರ ನಿರ್ಮಾಪಕ ವರುಣ್ ಮಣಿಯನ್ ಅವರೊಂದಿಗೆ ಶುಕ್ರವಾರ ಬೆಳಿಗ್ಗೆ ನೆರವೇರಿದೆ.

ತ್ರಿಷಾಗೆ ತಕ್ಕಂತೆ ಸುರಸುಂದರಾಂಗನಾಗಿರುವ ವರುಣ್ ಮತ್ತು ಕನ್ನಡದ 'ಪವರ್' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಿರುವ ತ್ರಿಷಾ ಕೃಷ್ಣನ್ ಹಲವಾರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಸಂಪ್ರದಾಯದಂತೆ ವರುಣ್ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ನೆರವೇರಿದ್ದು, ಇದೇ ವರ್ಷದ ಕೊನೆಯಲ್ಲಿ ವರುಣ್ ಅವರು ತ್ರಿಷಾಗೆ ಮಂಗಳಸೂತ್ರ ಕಟ್ಟಲಿದ್ದಾರೆ.

ತ್ರಿಷಾ ಕೃಷ್ಣನ್ ನಿಶ್ಚಿತಾರ್ಥಕ್ಕೆ ದಕ್ಷಿಣ ಭಾರತದ ಗಣ್ಯರ ದಂಡೇ ಆಗಮಿಸಿತ್ತು. ಕಮಲ್ ಹಾಸನ್, ಗೌತಮಿ, ರಮ್ಯಾ ಕೃಷ್ಣನ್, ಮಣಿರತ್ನಂ, ಸುಹಾಸಿನಿ ಮಣಿರತ್ನಂ, ಶಿವಾಜಿ ಪ್ರಭು, ವಿಕ್ರಂ ಪ್ರಭು, ಅಮಲಾ ಪೌಲ್ ಮತ್ತು ಸ್ನೇಹಿತರು ಆಗಮಿಸಿ ಜೋಡಿಗೆ ಶುಭ ಹಾರೈಸಿದರು. ಖ್ಯಾತ ಹಿನ್ನೆಲೆ ಗಾಯಕಿ ವಿನಯಾ ಅವರು ಹಾಡಿ ನೆರೆದವರನ್ನು ರಂಜಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿತ್ತು. [ನಿಶ್ಚಿತಾರ್ಥದ ಚಿತ್ರಸಂಪುಟ]

ಉಂಗುರ ಬದಲಾಯಿಸಿಕೊಂಡ ತ್ರಿಷಾ, ವರುಣ್

ತ್ರಿಷಾಗೆ ಉಂಗುರ ತೊಡಿಸುತ್ತಿರುವ ಬಾಳ ಸಂಗಾತಿಯಾಗಲಿರುವ ವರುಣ್ ಮಣಿಯನ್.

ವರುಣ್ ಮಣಿಯನ್ ಮತ್ತು ತ್ರಿಷಾ ಕೃಷ್ಣನ್

1999ರಿಂದ ಚಿತ್ರಪಯಣ ಶುರು ಮಾಡಿದ ತ್ರಿಷಾ ಕೃಷ್ಣನ್ ತಮಿಳು, ತೆಲುಗು ಚಿತ್ರಗಳಲ್ಲಿ ಸಖತ್ ಮಿಂಚಿದ್ದಾರೆ. ಕನ್ನಡ ಪವರ್ ಚಿತ್ರ ಅವರ ಇತ್ತೀಚಿನ ಚಿತ್ರ.

ತ್ರಿಷಾಗೆ ವರುಣ್ ಕೊಟ್ಟ ಗಿಫ್ಟ್ ಏನು?

ವಾರಾಂತ್ಯದಲ್ಲಿ ಸಾವಿರಕ್ಕೂ ಹೆಚ್ಚು ಹಸುಗಳಿಗೆ ಮೇವನ್ನು ಹಾಕುತ್ತೇವೆ ಮತ್ತು ಅವುಗಳ ವೈದ್ಯಕೀಯ ವೆಚ್ಚವನ್ನು ನಾವೇ ಭರಿಸುತ್ತೇವೆ. ಇದನ್ನು ತ್ರಿಷಾ ಕೂಡ ಇಷ್ಟಪಡುತ್ತಾಳೆ. ಇದೇ ನಾನು ಆಕೆಗೆ ಕೊಡುತ್ತಿರುವ ಉಡುಗೊರೆ ಅಂದಿದ್ದಾರೆ ವರುಣ್. ಭೇಷ್!

ಕಮಲ್ ಹಾಸನ್ ಮತ್ತು ಗೌತಮಿಯ ಶುಭಹಾರೈಕೆ

ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಮಲ್ ಹಾಸನ್ ಮತ್ತು ಧರ್ಮಪತ್ನಿ ಗೌತಮಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.

ರೋಲ್ಸ್ ರಾಯ್ಸ್‌ನೂ ಇಲ್ಲ ಮಣ್ಣೂ ಇಲ್ಲ

ತ್ರಿಷಾಗೆ ವರುಣ್ ರೋಲ್ಸ್ ರಾಯ್ಸ್ ನಿಶ್ಚಿತಾರ್ಥದ ಗಿಫ್ಟಾಗಿ ಕೊಟ್ಟಿದ್ದಾರೆಂದು ಸುದ್ದಿ ಹಬ್ಬಿತ್ತು. ಅದನ್ನು ವರುಣ್ ಸಾರಾಸಗಟಾಗಿ ಅಲ್ಲಗಳೆದಿದ್ದರು.

ಹಾಡಿ ರಂಜಿಸಿದ ಗಾಯಕಿ ವಿನಯಾ

ಕಾರ್ಯಕ್ರಮ ಯಾವುದೇ ಇರಲಿ ಅವಕ್ಕೆ ಸುಗಮ ಸಂಗೀತವಾಗಲಿ, ಚಲನಚಿತ್ರ ಸಂಗೀತವಾಗಲಿ ಸಾಥ್ ನೀಡಿದರೆ ಆ ಕಾರ್ಯಕ್ರಮದ ಕಳೆಯೇ ಬೇರೆಯಾಗಿರುತ್ತದೆ.

ಚಿತ್ರರಂಗದಿಂದ ದೂರ ಸರಿಯಲ್ಲ ತ್ರಿಷಾ

ತಾವು ಮದುವೆಯಾದರೂ ಚಿತ್ರರಂಗದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ. ನಂತರವೂ ನಟಿಸುವುದನ್ನು ಮುಂದುವರಿಸುವುದಾಗಿ ತ್ರಿಷಾ ಹೇಳಿದ್ದಾರೆ. ಇದಕ್ಕೆ ವರುಣ್ ಸಮ್ಮತಿಯೂ ಇದೆ.

ಕಟ್ಟಡ ನಿರ್ಮಾಣ ಉದ್ಯಮಿ ವರುಣ್

ತ್ರಿಷಾಳನ್ನು ಮದುವೆಯಾಗುತ್ತಿರುವ ವರುಣ್ ಹುಟ್ಟಿದ್ದು ಮುಂಬೈನಲ್ಲಿ, ಆದರೆ ಚೆನ್ನೈನಲ್ಲಿ ಸೆಟ್ಲ್ ಆಗಿದ್ದಾರೆ. ತಲತಲಾಂತರದಿಂದ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ಅವರ ಕುಟುಂಬ ತೊಡಗಿಕೊಂಡಿದೆ.

ಮದುವಣಗಿತ್ತಿಯಂತೆ ಮೆರೆಯುತಿಹ ತ್ರಿಷಾ

ತ್ರಿಷಾ ಅವರ ಬೇರು ಕೇರಳದಲ್ಲಿದ್ದರೂ ಅವರು ಹುಟ್ಟಿದ್ದು ಚೆನ್ನೈನಲ್ಲಿ. ಮಿಸ್ ಸೇಲಂ, ಮಿಸ್ ಮದ್ರಾಸ್ ಕೂಡ ಆಗಿರುವ ತ್ರಿಷಾ ಮಿಸ್ ಇಂಡಿಯಾ 2001ರಲ್ಲಿ 'ಸುಂದರ ನಗೆ'ಯ ಪ್ರಶಸ್ತಿ ಗೆದ್ದಿದ್ದರು.

ತ್ರಿಷಾ ಆಪ್ತ ಗೆಳತಿ ಅಮಲಾ ಪೌಲ್

ತ್ರಿಷಾ ಕೃಷ್ಣನ್ ಅವರ ಆಪ್ತ ಗೆಳತಿ ಚಿತ್ರನಟಿ ಅಮಲಾ ಪೌಲ್ ನಿಶ್ಚಿತಾರ್ಥಕ್ಕೆ ಬಂದು ಜೋಡಿ ಸುಖವಾಗಿರಲೆಂದು ಹರಸಿದರು.

ಎಲ್ಲಿ ಹೋದರೂ ಸೆಲ್ಫಿ!

ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದವರು ಯಾರು ಸೆಲ್ಫಿ ತೆಗೆದುಕೊಳ್ಳುವುದಿಲ್ಲ ಹೇಳಿ ಈ ಜಮಾನಾದಲ್ಲಿ?

ಸುಹಾಸಿನಿಯಿಂದ ಹೊಸ ಜೋಡಿಗೆ ಹಾರೈಕೆ

ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿರುವ ಸುಹಾಸಿನಿ ನಿಶ್ಚಿತಾರ್ಥಕ್ಕೆ ಆಗಮಿಸಿ ಹೊಸ ಜೋಡಿಗೆ ಶುಭಹಾರೈಸಿದರು.

ಹೇಗಿದೆ ನಮ್ಮ ಜೋಡಿ?

ಈ ಜೋಡಿ ಸುಖದಾಂಪತ್ಯ ನಡೆಸಲೆಂದು ನಾವೂ ಹಾರೈಸೋಣ.

English summary
South Indian super star Trisha Krishnan gets engaged with entrepreneur and film producer Varun Manian at his residence. The engagement was no less than a marriage. Stars like Kamal Haasan, Gauthami, Suhasini, Manirathnam wished the beautiful pair.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada