»   » ಯಶ್, ದರ್ಶನ್ ಸಿನಿಮಾದಲ್ಲಿ ಟಗರು 'ಕಾನ್ಸ್ ಟೇಬಲ್ ಸರೋಜ

ಯಶ್, ದರ್ಶನ್ ಸಿನಿಮಾದಲ್ಲಿ ಟಗರು 'ಕಾನ್ಸ್ ಟೇಬಲ್ ಸರೋಜ

Posted By:
Subscribe to Filmibeat Kannada
ಕಾನ್ಸ್ ಟೇಬಲ್ ಸರೋಜ ಯಾವ ಯಾವ ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾರೆ ಗೊತ್ತಾ ? | Filmibeat Kannada

ಟಗರು ಸಿನಿಮಾ ಬಿಡುಗಡೆ ಆಗಿದ್ದೇ ಆಗಿದ್ದು . ಚಿತ್ರದಲ್ಲಿ ಅಭಿನಯಿಸದ ಪಾತ್ರಗಳೆಲ್ಲವೂ ಹೈಲೆಟ್ ಆಗುವುದಕ್ಕೆ ಶುರುವಾಯ್ತು. ಮೊದಲ ದಿನ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಶಿವರಾಜ್ ಕುಮಾರ್ ಹಾಗೂ ಧನಂಜಯ ಅಭಿನಯವನ್ನ ಮೆಚ್ಚಿಕೊಂಡಾಡಿದ್ದರು. ಆದರೆ ಒಂದು ದಿನ ಕಳೆಯುವ ಹೊತ್ತಿಗೆ ಚಿತ್ರದಲ್ಲಿನ ಎಲ್ಲಾ ಪಾತ್ರಗಳಿಗೂ ಪ್ರಶಂಸೆಯ ಮಹಾಪೂರವೇ ಹರಿದು ಬರ್ತಿದೆ.

ಸದ್ಯ ಟಗರು ಸಿನಿಮಾದ ಇಷ್ಟಪಟ್ಟಿರುವ ಪ್ರೇಕ್ಷಕರಿಗೆ ಹೆಚ್ಚಾಗಿ ಕಾಡುತ್ತಿರುವುದು ಸರೋಜ ಪಾತ್ರಧಾರಿ ನಟಿ ತ್ರಿವೇಣಿ, ಈಕೆ ಹೆಸರಲ್ಲಿ ಟ್ರೋಲ್ ಗಳು, ಸ್ಟೇಟಸ್ ಗಳು ಜೋರಾಗಿ ಹರಿದಾಡುತ್ತಿವೆ. ಫೇಸ್ ಬುಕ್ ನಲ್ಲಿ 'ನಮ್ಮ ಸರೋಜ ನಮ್ಮ ಹೆಮ್ಮೆ' ಎಂದು ಹ್ಯಾಷ್ ಟ್ಯಾಗ್ ಮೂಲಕ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ.

ಡಾಲಿಯ ಡಾರ್ಲಿಂಗ್ 'ಕಾನ್ಸ್ ಟೇಬಲ್ ಸರೋಜ' ಸಂದರ್ಶನ

ಸರೋಜ ಪಾತ್ರದಲ್ಲಿ ಆಕ್ಟ್ ಮಾಡಿರುವ ನಟಿ ತ್ರಿವೇಣಿ ರಾವ್ ಸಿನಿಮಾಗೆ ಹೊಸಬರಲ್ಲ. ಸಾಕಷ್ಟು ಕನ್ನಡ ಸಿನಿಮಾಗಳಲ್ಲೇ ಆಕ್ಟ್ ಮಾಡಿದ್ದಾರೆ. ಆದರೆ ಸರೋಜ ಪಾತ್ರ ಮಾತ್ರ ಸಿನಿಮಾ ಪ್ರೇಮಿಗಳನ್ನ ಎಲ್ಲಿಲ್ಲದೆ ಕಾಡುತ್ತಿದೆ. ಹಾಗಾದರೆ ತ್ರಿವೇಣಿ ಅಭಿನಯದ ಚಿತ್ರಗಳು ಯಾವುದು ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ .

ಸ್ಟಾರ್ ಸಿನಿಮಾಗಳಲ್ಲಿ ಸರೋಜ

ಸದ್ಯ ಕಾನ್ಸ್ ಟೇಬಲ್ ಸರೋಜ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿರುವ ನಟಿ ತ್ರಿವೇಣಿ ರಾವ್ ಅಪ್ಪಟ ಕನ್ನಡದ ಹುಡುಗಿ. ಅಷ್ಟೇ ಅಲ್ಲದೆ ಸಾಕಷ್ಟು ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವಿಶೇಷ ಅಂದರೆ ತ್ರಿವೇಣಿ ಇಲ್ಲಿಯ ವರೆಗೂ ಅಭಿನಯಿಸಿದ್ದೇಲ್ಲಾ ಸ್ಟಾರ್ ನಟರ ಜೊತೆಯಲ್ಲೇ.

ಕಿರಾತಕ ಚಿತ್ರದಲ್ಲಿ ಅಭಿನಯ

ರಾಕಿಂಗ್ ಸ್ಟಾರ್ ಅವರಿಗೆ ಬ್ರೇಕ್ ತದ್ದುಕೊಟ್ಟ ಸಿನಿಮಾಗಳಲ್ಲಿ ಒಂದಾದ 'ಕಿರಾತಕ' ಚಿತ್ರದಲ್ಲಿ ತ್ರಿವೇಣಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ ಹಾಗೂ ಯಶ್ ಕಿಡ್ನಾಪ್ ಮಾಡುವ ದೃಶ್ಯವಿದೆ. ಆ ಸೀನ್ ನಲ್ಲಿ ಕಿಡ್ನಾಪ್ ಆಗುವ ಹುಡುಗಿ ಪಾತ್ರವನ್ನ ತ್ರಿವೇಣಿ ನಿರ್ವಹಿಸಿದ್ದಾರೆ.

ದರ್ಶನ್ ಸಿನಿಮಾದಲ್ಲಿ ತ್ರಿವೇಣಿ

ಚಾಲೆಂಜಿಂಗ್ ಸ್ಟಾರ್ ಅಭಿನಯದ 'ಚಕ್ರವರ್ತಿ' ಸಿನಿಮಾದಲ್ಲಿ ತ್ರಿವೇಣಿ ಅಭಿನಯಿಸಿದ್ದಾರೆ. ಸೃಜನ್ ಲೋಕೇಶ್ ಜೋಡಿಯಾಗಿ ತ್ರಿವೇಣಿ ಆಕ್ಟ್ ಮಾಡಿದ್ದರು.

ನಮ್ಮ ಸರೋಜ ನಮ್ಮ ಹೆಮ್ಮೆ

ತ್ರಿವೇಣಿ ಅವರ ನಿಜವಾದ ಹೆಸರನ್ನೇ ಮರೆತು ಹೋಗಿರುವ ಜನರು ಸರೋಜ ಅಂತಾನೇ ಕರೆಯುವುದಕ್ಕೆ ಪ್ರಾರಂಭ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ತ್ರಿವೇಣಿ ಅವರ ಪೋಟೋಗಳನ್ನ ಹಾಕಿ ಹ್ಯಾಷ್ ಟ್ಯಾಗ್ ಮೂಲಕ 'ನಮ್ಮ ಸರೋಜ ನಮ್ಮ ಹೆಮ್ಮೆ' ಎಂದು ಬರೆಯುತ್ತಿದ್ದಾರೆ.

English summary
Here is a movies list of Kannada actresses Trivani(Tagaru Saroja) ,Trivani has previously performed small roles in Darshan and Yash's films. Currently triveni busy with telugu movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada