For Quick Alerts
  ALLOW NOTIFICATIONS  
  For Daily Alerts

  ಭಾರಿ ಅವಘಡದಲ್ಲಿ ಹೊತ್ತಿ ಉರಿದ ಬಸ್: ಬಚಾವ್​ ಆದ ಖ್ಯಾತ ತುಳು ನಟಿ ನೀಮಾ ರೇ

  |

  ತುಳು ಚಿತ್ರರಂಗದ ಖ್ಯಾತ ನಟಿ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಅಪಘಾತವಾಗಿದ್ದು, ನಟಿ ನೀಮಾ ರೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

  ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಶ್ರೀ ದುರ್ಗಾ ಬಸ್ ರಾಷ್ಟ್ರೀಯ ಹೆದ್ದಾರಿ 77ರ ನೆಲ್ಯಾಡಿ ಬಳಿ ಅಪಘಾತಕ್ಕೆ ಒಳಗಾಗಿದೆ. ಈ ವೇಳೆ ನಟಿ ಸೇರಿದಂತೆ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

  ಚಿತ್ರೀಕರಣ ವೇಳೆ ನಟ ಫಹಾದ್ ಫಾಸಿಲ್‌ ಗೆ ಗಾಯ, ಶಸ್ತ್ರಚಿಕಿತ್ಸೆಚಿತ್ರೀಕರಣ ವೇಳೆ ನಟ ಫಹಾದ್ ಫಾಸಿಲ್‌ ಗೆ ಗಾಯ, ಶಸ್ತ್ರಚಿಕಿತ್ಸೆ

  ರಾತ್ರಿ 11:50ರ ಸಮಯದಲ್ಲಿ ಬೆಂಗಳೂರಿನತ್ತ ಸಾಗುತ್ತಿದ್ದ ಶ್ರೀದುರ್ಗಾ ಬಸ್‌ಗೆ ರಭಸವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಶ್ರೀ ದುರ್ಗಾ ಬಸ್ ಬೆಂಕಿ ಹೊತ್ತಿಕೊಂಡು ಉರಿದಿದೆ. ಕ್ಯಾಂಟರ್ ಚಾಲನ ಸಜೀವ ದಹನವಾಗಿದ್ದಾರೆ ಎಂಬ ಮಾಹಿತಿ ಇದೆ. ಬಸ್ ಚಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಘಟನೆ ನಡೆದ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದರು. ನಂತರ ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಅಷ್ಟರಲ್ಲಿ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಸಾಹಸದಿಂದ ಬಾಗಿಲು ತೆಗೆದು ಹೊರಬಂದಿದ್ದರು.

  ಅವಘಡದಿಂದ ಗಾಬರಿಯಾಗಿದ್ದ ಪ್ರಯಾಣಿಕರನ್ನು ನಂತರ ಬೇರೊಂದು ಬಸ್‌ನಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  Tulu Film actress Neema Ray travelling bus meets with an accident

  Recommended Video

  Yuvarathna film team lands in trouble!

  ನಟಿ ನೀಮಾ ರೇ ಇತ್ತೀಚಿಗಷ್ಟೆ ರಾಷ್ಟ್ರ ಪ್ರಶಸ್ತಿ ಪಡೆದ 'ಪಿಂಗಾರ' ಸಿನಿಮಾದಲ್ಲಿ ನಟಿಸಿದ್ದಾರೆ. 67ನೇ ರಾಷ್ಟ್ರ ಪ್ರಶಸ್ತಿ ಸಾಲಿನಲ್ಲಿ ಅತ್ಯುತ್ತಮ ತುಳು ಸಿನಿಮಾ ಎಂದು ಪ್ರಶಸ್ತಿ ಪಡೆದಿತ್ತು. ಈ ಚಿತ್ರದಲ್ಲಿ ನೀಮಾ ರೇ ನಟಿಸಿದ್ದರು.

  English summary
  Tulu Film actress Neema Ray travelling bus meets with an accident.
  Thursday, March 25, 2021, 9:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X