»   » ಸದ್ದಿಲ್ಲದ್ದೆ ಚಿತ್ರೀಕರಣ ಮುಗಿಸಿದ ಕನ್ನಡದ ಎರಡು ನಿರೀಕ್ಷಿತ ಸಿನಿಮಾಗಳು

ಸದ್ದಿಲ್ಲದ್ದೆ ಚಿತ್ರೀಕರಣ ಮುಗಿಸಿದ ಕನ್ನಡದ ಎರಡು ನಿರೀಕ್ಷಿತ ಸಿನಿಮಾಗಳು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಪ್ರತಿನಿತ್ಯ ಸಾಕಷ್ಟು ಸಿನಿಮಾಗಳು ಸೆಟ್ಟೇರುತ್ತೆ ಸಾಕಷ್ಟು ಚಿತ್ರಗಳು ಬಿಡುಗಡೆ ಆಗುತ್ತವೆ. ಮಹೂರ್ತ ಆದಾಗಿನಿಂದಲೇ ಬಾರಿ ಸುದ್ದಿ ಮಾಡಿದ್ದ ಕನ್ನಡದ ಎರಡು ಚಿತ್ರಗಳ ಚಿತ್ರೀಕರಣ ಸದ್ದಿಲ್ಲದೆ ಮುಗಿದು ಹೋಗಿದೆ. ಮೊನ್ನೆ ಮೊನ್ನೆಯಷ್ಟೆ ಚಿತ್ರೀಕರಣ ಪ್ರಾರಂಭ ಮಾಡಿ ಈಗಾಗಲೇ ಕುಂಬಳಕಾಯಿ ಹೊಡೆದಿರುವ ಸಿನಿಮಾಗಳು 'ತುರ್ತು ನಿರ್ಗಮನ' ಹಾಗೂ 'ನಾತಿಚರಾಮಿ'

ತುರ್ತು ನಿರ್ಗಮನ 'ಎಕ್ಸ್‌ಕ್ಯೂಸ್ ಮಿ' ಚಿತ್ರ ಖ್ಯಾತಿಯ ಸುನೀಲ್ ರಾವ್ ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ. ಟೀಸರ್ ನಿಂದಲೇ ಚಿತ್ರದ ಬಗ್ಗೆ ಭಾಗಿ ಕುತೂಹಲ ಮೂಡಿಸಿದ್ದ ತುರ್ತುನಿರ್ಗಮನ ಸಿನಿಮಾವನ್ನ ಹೇಮಂತ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಒಂದು 'ಮೊಟ್ಟೆಯ ಕಥೆ' ಸಿನಿಮಾ ಖ್ಯಾತಿಯ ರಾಜ್ ಬಿ ಶೆಟ್ಟಿ ಕೂಡ ಅಭಿನಯಿಸಿದ್ದಾರೆ.

Turthu Nirgamana and Nathicharami movie shooting completed.

ಸಂಭಾವನೆ ತಾರತಮ್ಯದ ಬಗ್ಗೆ ಮಾತನಾಡಿದ ಶೃತಿ ಹರಿಹರನ್

ಈ ಚಿತ್ರದ ಜೊತೆಯಲ್ಲಿ 'ನಾತಿಚರಾಮಿ' ಸಿನಿಮಾ ಕೂಡ ಚಿತ್ರೀಕರಣ ಮುಗಿಸಿದೆ. 'ಹರಿವು' ಸಿನಿಮಾ ಮಾಡಿ ರಾಷ್ಟ್ರ ಪಟ್ಟದಲ್ಲಿ ಹೆಸರು ಮಾಡಿದ್ದ ನಿರ್ದೇಶಕ ಮಂಸೋರೆ ಅವರ ಎರಡನೇ ಸಿನಿಮಾ ಇದಾಗಿದೆ. ಶೃತಿ ಹರಿಹರನ್, ಶರಣ್ಯ ಹಾಗೂ ಸಂಚಾರಿ ವಿಜಯ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದ್ದು, ನಾತಿಚರಾಮಿ ಚಿತ್ರಕ್ಕೆ ಬಿಂದುಮಾಲಿನಿ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಧ್ಯಾರಾಣಿಯವರ ಕತೆ-ಸಂಭಾಷಣೆಯನ್ನು ಬರೆದಿದ್ದಾರೆ.

Turthu Nirgamana and Nathicharami movie shooting completed.

'ನಾತಿಚರಾಮಿ' ಹಾಗೂ 'ತುರ್ತು ನಿರ್ಗಮ' ಎರಡು ಚಿತ್ರಗಳು ಚಿತ್ರರಂಗದಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ವಿಭಿನ್ನ ಸಾಲಿನಲ್ಲಿ ನಿಲ್ಲುವ ಸಿನಿಮಾಗಳು ಇದಾಗಿದ್ದು ಚಿತ್ರೀಕರಣ ಮುಗಿಸಿರುವ ಸಿನಿಮಾ ಟೀಂ ಆದಷ್ಟು ಬೇಗ ಚಿತ್ರವನ್ನ ಪ್ರೇಕ್ಷಕರ ಮುಂದೆ ತರುವ ಕಾರ್ಯದಲ್ಲಿ ಬ್ಯುಸಿ ಆಗಿದೆ.

English summary
Kannada Turthu Nirgamana and Nathicharami movie shooting has been completed. Shruti Hariharan has acted in Natacharami, Sunil Rao in acted Turthu Nirgamana movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X