»   » ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಕಿರುತೆರೆ ನಟಿ

ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಕಿರುತೆರೆ ನಟಿ

Posted By: ಉದಯರವಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಹಿಂದಿ ಧಾರಾವಾಹಿಗಳ ಕಿರುತೆರೆ ನಟಿ ಮೋನಾ ವಸು ಅವರಿಗೆ ಕೆಟ್ಟ ಘಟನೆಯೊಂದು ಎದುರಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮುಂಬೈ ಅಂಧೇರಿಯ ವೆರ್ಸೋವಾ ಜೆಟ್ಟಿ ಪ್ರದೇಶದಿಂದ ಅವರು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿರಬೇಕಾದರೆ ಓರ್ವ ಅವರ ಸಮೀಪಕ್ಕೆ ಬಂದು ಟಚ್ ಮಾಡಿ ಪರಾರಿಯಾಗಿದ್ದಾನೆ.

  ಆದರೆ ಮೋನಾ ಅವರು ಆ ವ್ಯಕ್ತಿಯ ಬೆನ್ನಟ್ಟಿ ಕಡೆಗೂ ಅವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿ ಡಿಎನ್ ನಗರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಆ ಬಳಿಕ ಆ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿದ್ದಾರೆ. ಇದಿಷ್ಟು ಘಟನೆ ಬುಧವಾರ (ಮಾ.11) ರಾತ್ರಿ ಎರಡು ಗಂಟೆಗಳ ಕಾಲಾವಧಿಯಲ್ಲಿ ನಡೆದಿದೆ.

  TV Actress Mona Wasu files molestation case

  ಆ ಬಳಿಕ ಪೊಲೀಸರು ಮೋನಾ ಅವರನ್ನು ಮನೆತನಕ ಬಿಟ್ಟು ಬಂದಿದ್ದಾರೆ. ಈ ಘಟನೆ ನಡೆದಾಗ ಸಮಯ ರಾತ್ರಿ 11.45. ಈ ಬಗ್ಗೆ ಮಾತನಾಡಿರುವ ಮೋನಾ, ತಡರಾತ್ರಿ ಒಂಟಿಯಾಗಿ ಪ್ರಯಾಣಿಸುವುದು ಅಷ್ಟು ಕ್ಷೇಮವಲ್ಲ ಎಂದು ಗೊತ್ತಿತ್ತು. ಆದರೆ ತಾನು ಪೆಪ್ಪರ್ ಸ್ಪ್ರೇ, ಕಾಂಪಾಸ್ ಅನ್ನು ಸದಾ ನನ್ನ ಬಳಿ ಇಟ್ಟುಕೊಂಡಿರುತ್ತಿದ್ದೆ ಎಂದಿದ್ದಾರೆ.

  ಕೇವಲ ರಾತ್ರಿ ಸಮಯದಲ್ಲಷ್ಟೇ ಅಲ್ಲದೆ ಬೆಳಗಿನ ಹೊತ್ತೂ ಈ ರೀತಿಯ ಘಟನೆಗಳು ವರದಿಯಾಗುತ್ತಿವೆ ಎನ್ನುವ ಅವರು, ಧೈರ್ಯವಾಗಿ ಕಿಡಿಗೇಡಿಯನ್ನು ಪೊಲೀಸರಿಗೆ ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದಿಯ 'ಪರಿಚಯ್' ಎಂಬ ಧಾರಾವಾಹಿಯಲ್ಲಿ ಅವರು ನೆಗಟೀವ್ ಪಾತ್ರವನ್ನು ಪೋಷಿಸುತ್ತಿದ್ದಾರೆ.

  ಬಂಧಿತ ವ್ಯಕ್ತಿಯನ್ನು ರಣದೀಪ್ ಕುಮಾರ್ ಗುಪ್ತಾ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನ ವಿರುದ್ಧ ಸೆಕ್ಷನ್ 350ರ ಅಡಿ ಕೇಸು ದಾಖಲಿಸಿಕೊಂಡಿದ್ದು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಸೆಲೆಬ್ರಿಟಿಗಳಿಗೇ ಹೀಗಾದರೆ ಇನ್ನು ಸಾಮಾನ್ಯ ಮಹಿಳೆಯರ ಪಾಡೇನು ಎಂಬ ಪ್ರಶ್ನೆ ತಲೆಯೆತ್ತಿದೆ.

  English summary
  TV actress Mona Vasu, best known for playing the negative character in Parichay – Nayee Zindagi Kay Sapno Ka, was reportedly molested late at night in Mumbai on March 11, 2015. The incident allegedly took place near Versova Jetty in Andheri West when the actress was getting back home from work. A news channel flashed reports of the shameful event.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more