'ಕನ್ನಡದಲ್ಲಿ ಬಾಹುಬಲಿ'ಗಾಗಿ ಮತ್ತೆ ಜೋರಾಗಿದೆ ಕೂಗು
ಕರ್ನಾಟಕದಲ್ಲಿ 'ಬಾಹುಬಲಿ 2' ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದ ಕನ್ನಡಿಗರು, ಮೊನ್ನೆಯಷ್ಟೇ 'ಬಾಹುಬಲಿ' ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕನ್ನಡಿಗರಲ್ಲಿ ವಿಷಾಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ತಣ್ಣಗಾಗಿದ್ದಾರೆ. ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.[ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!]
'ಬಾಹುಬಲಿ - ದಿ ಕನ್ ಕ್ಲೂಶನ್' ಚಿತ್ರ ಬಿಡುಗಡೆಗೆ ಕೇವಲ ಮೂರು ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ಈಗ ಮತ್ತೆ 'ಬಾಹುಬಲಿ 2' ಚಿತ್ರ ಕನ್ನಡಕ್ಕೆ ಡಬ್ ಆಗಿ ಬರಲಿ ಅಭಿಯಾನ ಶುರುವಾಗುತ್ತಿದೆ. ಇದಕ್ಕೆ ಕನ್ನಡ ಗ್ರಾಹಕ ಕೂಟದ ಸದಸ್ಯರಾದ ಜಯಂತ್ ಸಿದ್ಮಲ್ಲಪ್ಪ ಎಂಬುವವರು ಟ್ವಿಟರ್ ನಲ್ಲಿ ಕರೆಕೊಟ್ಟಿದ್ದಾರೆ.

ಜಯಂತ್ ಸಿದ್ಮಲ್ಲಪ್ಪ ರವರು 'ಬಾಹುಬಲಿ 2' ಚಿತ್ರದ ಕನ್ನಡ ಡಬ್ ಗಾಗಿ ಇಂದು ಸಂಜೆ 6 ಗಂಟೆಗೆ(ಏಪ್ರಿಲ್ 25) ಟ್ವಿಟರ್ ಅಭಿಯಾನ ಕೈಗೊಂಡಿದ್ದು, 'ಬಾಹುಬಲಿ' ಚಿತ್ರದ ಪ್ರಿಯರನ್ನು ಸಹಕರಿಸಿ, ಟ್ರೆಂಡ್ ಮಾಡಿ ಎಂದು ಕೇಳಿಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ನಿರ್ದೇಶಕ ಎಸ್.ಎಸ್.ರಾಜಮೌಳಿ, ನಿರ್ಮಾಪಕ ಶೋಬು ಯಾರ್ಲಗಡ್ಡ ಮತ್ತು ಪ್ರೊಡಕ್ಷನ್ ಹೌಸ್ 'ಆರ್ಕ ಮೀಡಿಯ ವರ್ಕ್ಸ್' ಗೆ ತಿಳಿಸಿ ಎಂದು ಹ್ಯಾಸ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.['ಬಾಹುಬಲಿ 2' ಕನ್ನಡದ ಡಬ್ಬಿಂಗ್ ಬೇಡಿಕೆಗೆ ಜನರ ಪ್ರತಿಕ್ರಿಯೆ..!]
ಅಂದಹಾಗೆ ಈ ಹಿಂದೆಯೂ ಕನ್ನಡ ಗ್ರಾಹಕರ ಕೂಟ ಫೆಬ್ರವರಿ 16 ರಂದು 'ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಿ ಬರಲಿ' ಎಂಬ ಟ್ವಿಟರ್ ಅಭಿಯಾನ ಕೈಗೊಂಡು ಹಲವರಿಂದ ಉತ್ತಮ ರೆಸ್ಪಾನ್ಸ್ ಪಡೆದಿತ್ತು.[ಇಂದು(ಫೆ.16) 'ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಲಿ' ಟ್ವಿಟರ್ ಅಭಿಯಾನ]


Click it and Unblock the Notifications











