For Quick Alerts
  ALLOW NOTIFICATIONS  
  For Daily Alerts

  ಹಿಂದು ವಿರೋಧಿಗೆ ಅವಕಾಶ: ಬುಕ್‌ ಮೈ ಶೋ ವಿರುದ್ಧ ಅಭಿಯಾನ

  |

  ಹಾಡುಗಾರ್ತಿ ಹರ್ನಿಂದ್ ಕೌರ್ ಅವರಿಗೆ ಅವಕಾಶ ನೀಡಿ, ಅವರ ಕಾರ್ಯಕ್ರಮದ ಪ್ರಚಾರ ಮಾಡಿದ್ದಕ್ಕಾಗಿ ಬುಕ್ ಮೈ ಶೋ ವಿರುದ್ಧ ಟ್ವಿಟ್ಟರ್‌ನಲ್ಲಿ ಅಭಿಯಾನ ಶುರುವಾಗಿದೆ.

  ಹಾಡುಗಾರ್ತಿ ಹರ್ನಿಂದ್ ಕೌರ್ ಅವರು ಹಿಂದು ವಿರೋಧಿ ಎಂದು ಆರೋಪಿಸಿ ಅಭಿಯಾನ ಆರಂಭಿಸಲಾಗಿದ್ದು, ಆಕೆಯ ಕಾರ್ಯಕ್ರಮಕ್ಕೆ ಪ್ರಚಾರ ನೀಡಿದ್ದಕ್ಕಾಗಿ ಬುಕ್ ಮೈ ಶೋ ವಿರುದ್ಧ ನೆಟ್ಟಿಜನರು ಮುಗಿಬಿದ್ದಿದ್ದಾರೆ.

  ಹರ್ನಿಂದ್ ಕೌರ್ ಅವರ ಆನ್‌ಲೈನ್ ಹಾಡುಗಾರಿಕೆ ಕಾರ್ಯಕ್ರಮವಿತ್ತು, ಹರ್ನಿಂದ್ ಇನ್‌ಸ್ಟಾ ನಲ್ಲಿ ಲೈವ್ ಮೂಲಕ ಕವಿತೆ ಓದುವ ಹಾಡುವ ಕಾರ್ಯಕ್ರಮ ನೀಡಲಿದ್ದರು. ಇದರ ಪೋಸ್ಟರ್ ಒಂದನ್ನು ಬುಕ್‌ ಮೈ ಶೋ ಟ್ವೀಟ್ ಮಾಡಿತ್ತು.

  ಹಿಂದು ವಿರೋಧಿ ಟ್ವೀಟ್‌ಗಳಿಗೆ ಖ್ಯಾತರು ಹರ್ನಿಂದ್

  ಹಿಂದು ವಿರೋಧಿ ಟ್ವೀಟ್‌ಗಳಿಗೆ ಖ್ಯಾತರು ಹರ್ನಿಂದ್

  ಗಾಯಕಿ ಹರ್ನಿಂದ್ ಕೌರ್ ತಮ್ಮ ಹಿಂದು ವಿರೋಧಿ ಟ್ವೀಟ್‌ಗಳಿಂದ ಖ್ಯಾತರು. ಟ್ವಿಟ್ಟರ್‌ ನಲ್ಲಿ ಹಿಂದು ವಿರೋಧಿ, ಎಡಪಂತೀಯ ಯೋಚನೆಗಳಿಂದ ತುಂಬಿದ ಪೋಸ್ಟ್‌ಗಳನ್ನು ಆಗಾಗ್ಗೆ ಹಾಕುತ್ತಲೇ ಇರುತ್ತಾರೆ.

  ಮೋದಿ ಸಾವಿನ ಬಗ್ಗೆಯೂ ಟ್ವೀಟ್ ಮಾಡಿದ್ದ ಗಾಯಕಿ

  ಮೋದಿ ಸಾವಿನ ಬಗ್ಗೆಯೂ ಟ್ವೀಟ್ ಮಾಡಿದ್ದ ಗಾಯಕಿ

  ಒಮ್ಮೆಯಂತೂ ಮೋದಿ ಅವರ ಸಾವಿನ ಬಗ್ಗೆಯೂ ಹರ್ನಿಂದ್ ಕೌರ್ ಟ್ವೀಟ್ ಮಾಡಿದ್ದರು. ಇದು ಬಹುವಾಗಿ ವಿವಾದ ಕೆರಳಿಸಿತ್ತು. 'ಮೋದಿ ಅವರು ಗಾಂಧಿ ದಾರಿಯಲ್ಲಿ ನಡೆಯುತ್ತಿದ್ದಾರೆ ಎಂಬುದು ಸಾಬೀತಾಗುವುದು ಅವರನ್ನು ಯಾರಾದರೂ ಗೂಡ್ಸೆಯಂತೆ ಕೊಂದಾಗ ' ಮಾತ್ರ ಎಂದು ಟ್ವೀಟ್ ಮಾಡಿದ್ದರು.

  ಬುಕ್‌ ಮೈ ಶೋ ವಿರುದ್ಧ ಅಭಿಯಾನ

  ಮೋದಿ ವಿರೋಧಿ, ಹಿಂದು ವಿರೋಧಿ ಕಾರ್ಯಕ್ರಕ್ಕೆ ಪ್ರಚಾರ ನೀಡಿದ ಬುಕ್ ಮೈ ಶೋ ಅನ್ನು ಅನ್‌ಸಬ್‌ಸ್ಕ್ರೈಬ್ ಮಾಡಿ ಎಂದು ಟ್ವಿಟ್ಟರ್ ನಲ್ಲಿ ಅಭಿಯಾನ ನಡೆಯುತ್ತಿದೆ.

  ಬುಕ್‌ ಮೈ ಶೋ ಗೆ ಕೆಲಸವೇ ಇಲ್ಲದಂತಾಗಿದೆ

  ಬುಕ್‌ ಮೈ ಶೋ ಗೆ ಕೆಲಸವೇ ಇಲ್ಲದಂತಾಗಿದೆ

  ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳು, ಪಿವಿಆರ್‌, ಮಾಲ್‌ಗಳು ಇತರೆ ಕಾರ್ಯಕ್ರಮಗಳು ಬಂದ್ ಆಗಿರುವ ಕಾರಣ ಬುಕ್ ಮೈ ಶೋ ಗೆ ಕೆಲಸವೇ ಇಲ್ಲದಂತಾಗಿದೆ. ಹಾಗಾಗಿ ಆನ್‌ಲೈನ್‌ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಚಾರ ನೀಡುತ್ತಿದೆ.

  English summary
  Twitter campaign against Book My Show for promoting a Modi hatter singer Harnindh Kaur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X