»   » ರಂಗಿತರಂಗ-ಟ್ವಿಟ್ಟರ್ ಲೋಕದಲ್ಲಿ ಮಿಶ್ರ ರಂಗು

ರಂಗಿತರಂಗ-ಟ್ವಿಟ್ಟರ್ ಲೋಕದಲ್ಲಿ ಮಿಶ್ರ ರಂಗು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸಕತ್ ಆಗಿ ಸೌಂಡ್ ಮಾಡಿದ 'ರಂಗಿತರಂಗ' ಚಿತ್ರದ ಬಗ್ಗೆ ಅನೇಕ ಸ್ಟಾರ್ ನಟ, ನಟಿಯರು ಮೆಚ್ಚುಗೆ ಮಾತುಗಳನ್ನಾಡಿದ್ದನ್ನು ನೋಡಿ, ಕೇಳಿ ಶುಕ್ರವಾರ(ಜು.3) ಪ್ರೇಕ್ಷಕರು ಚಿತ್ರಮಂದಿರ ಹೊಕ್ಕಿದ್ದಾರೆ. ಸದ್ಯಕ್ಕಂತೂ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಣ್ಣ ಬಣ್ಣದ ಅಲೆಗಳನ್ನು ಕಾಣುವ ಅನುಭವ ನೀಡುವ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಲ್ಲೋ ಮಿಸ್ ಹೊಡೆಯುತ್ತಿದೆ ಎಂದು ಮೊದಲ ದಿನದ ಮೊದಲ ಅನುಭವವನ್ನು ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಹಲವಾರು ಮಂದಿ ಹಂಚಿಕೊಂಡಿದ್ದಾರೆ.[ಸೋಷಿಯಲ್ ಮೀಡಿಯಾದಲ್ಲಿ 'ರಂಗಿತರಂಗ' ಸೂಪರ್ ಹಿಟ್]

ಹಾಲಿವುಡ್ಡಿನ ಲ್ಯಾನ್ಸ್ ಕ್ಯಾಪ್ಲನ್ ಮತ್ತು ವಿಲಿಯಂ ಡೇವಿಡ್ ಅವರ ಛಾಯಾಗ್ರಹಣದ ಹೆಗ್ಗಳಿಕೆ, ಅಜನೀಶ್ ಅವರ ಉತ್ತಮ ಹಿನ್ನಲೆ ಸಂಗೀತ, ಒಳ್ಳೆ ಲೋಕೇಷನ್, ಡೈಲಾಗ್ ಕಿಂಗ್ ಸಾಯಿ ಕುಮಾರ್ ಜೊತೆಗೆ ಹೊಸಬರಾದ ನಿರೂಪ್, ರಾಧಿಕಾ ಚೇತನ್ ಹೇಗೆ ಕಾಣಿಸಿಕೊಂಡಿದ್ದಾರೆ ಎಂಬ ಕುತೂಹಲ ಅನಾವರಣಗೊಂಡಿದೆ.

ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಯುವ ಪ್ರತಿಭೆ ಅನೂಪ್ ಭಂಡಾರಿ. ನಿರ್ದೇಶನದ ಜೊತೆಗೆ ಸಾಹಿತ್ಯ ರಚಿಸಿ, ಸಂಗೀತವನ್ನೂ ಸಂಯೋಜಿಸಿದ್ದಾರೆ. ಚಿತ್ರದ ಬಗ್ಗೆ ಆಪಾರ ನಿರೀಕ್ಷೆ ಹುಟ್ಟಿಕೊಂಡಿದ್ದರಿಂದ ಮೊದಲ ದಿನ ಚಿತ್ರಮಂದಿರಗಳು ಭರ್ತಿಯಾಗಿವೆ. ಟ್ವಿಟ್ಟರ್ ನಲ್ಲಿ ಬಂದ ಪ್ರತಿಕ್ರಿಯೆಗಳ ಮೇಲೆ ಒಮ್ಮೆ ಕಣ್ಣಾಡಿಸಿ..

ಸ್ಟಾರ್ ಗಳಿಂದ ಮೆಚ್ಚುಗೆ ಪಡೆದ ಚಿತ್ರ ರಂಗಿತರಂಗ

ರಾಕಿಂಗ್ ಸ್ಟಾರ್ ಯಶ್, ಉಗ್ರಂ ಶ್ರೀಮುರಳಿ, ಬಾಹುಬಲಿ ಚಿತ್ರದ ಸಿನಿಮಾಟೋಗ್ರಾಫರ್ ಸೆಂಥಿಲ್ ಕುಮಾರ್ ಸೇರಿದಂತೆ ಮುಂತಾದವರು ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ನಾಲಿಗೆಗೆ ಕಸರತ್ತು ನೀಡುವ ಅಕ್ಕ ಪಕ್ಕ ಸಾಂಗ್ ಫ್ಯಾನ್ಸ್ ಮನಸೆಳೆದಿತ್ತು.

ಥ್ರಿಲ್ ಪಡೆಯಲು ಚಿತ್ರಮಂದಿರಕ್ಕೆ ಹೋಗಿ ಬನ್ನಿ

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಿ ತುಂಬಾ ದಿನವಾಗಿದ್ದರೆ ಈ ಚಿತ್ರ ಒಮ್ಮೆ ನೋಡಿ

ಮಧ್ಯಂತರದ ವರದಿ

ಮಧ್ಯಂತರದ ತನಕ ಎಲ್ಲವೋ ಸೊಗಸಾಗಿದೆ. ಚಿತ್ರ ಬೋರ್ ಹೊಡೆಸಲ್ಲ., ಹಿನ್ನಲೆ ಸಂಗೀತ ಸೂಪರ್.. ಎರಡನೇ ಅವಧಿಗಾಗಿ ಜನ ಕಾಯುವಂತೆ ಮಾಡುವಲ್ಲಿ ಅನೂಪ್ ಯಶಸ್ವಿ

ಸಸ್ಪೆನ್ಸ್ ಏನಿಲ್ಲ, ಸ್ವಲ್ಪ ಥ್ರಿಲ್ ಸನ್ನಿವೇಶಗಳಿವೆ

ಮಧ್ಯಂತರದ ತನಕ ಸಸ್ಪೆನ್ಸ್ ಏನಿಲ್ಲ, ಸ್ವಲ್ಪ ಥ್ರಿಲ್ ಸನ್ನಿವೇಶಗಳಿವೆ, ಅದರೆ, ಎರಡನೇ ಅವಧಿ ಸಪ್ಪೆಯಾಗಿದೆ.

ಅನಗತ್ಯ ಸಂಗೀತ, ಹಾಡು ಬೇಕಿತ್ತಾ, ಸಾಯಿ ರಕ್ಷಣೆ

ಅನಗತ್ಯ ಸಂಗೀತ, ಹಾಡು ಬೇಕಿತ್ತಾ ಎನ್ನುವಷ್ಟರಲ್ಲಿ ಚಿತ್ರವನ್ನು ಡೈಲಾಗ್ ಕಿಂಗ್ ಸಾಯಿಕುಮಾರ್ ರಕ್ಷಿಸಿದ್ದಾರೆ.

ಮೊದಲ ಅವಧಿಗೆ ಫಿದಾ ಆದ ಕೆಲ ಪ್ರೇಕ್ಷಕರು

ಮೊದಲ ಅವಧಿಗೆ ಫಿದಾ ಆದ ಕೆಲ ಪ್ರೇಕ್ಷಕರು ನೀಡಿರುವ ರೇಟಿಂಗ್ ನೋಡಿ

ಒಳ್ಳೆ ಸಸ್ಪೆನ್ಸ್ ನೋಡಬಹುದು

ಒಳ್ಳೆ ಸಸ್ಪೆನ್ಸ್ ಚಿತ್ರ ಅಡ್ಡಿ ಇಲ್ಲದೆ ನೋಡಬಹುದು 3.25/5, ಸಿನಿಲೋಕ.ಕಾಂ.ಇನ್

ಒಂದು ಒಳ್ಳೆ ಥ್ರಿಲ್ಲಿಂಗ್ ಅನುಭವ

ಒಂದು ಒಳ್ಳೆ ಥ್ರಿಲ್ಲಿಂಗ್ ಅನುಭವ ಖಂಡಿತಾ ನೋಡಿ

English summary
Twitter reaction to Rangitaranga film which got released on 3 July. The movie is completely a new effort by newbies. Directed by Anup Bhandari, Rangitaranga stars debutants Nirup Bhandari, Radhika Chetan and Avantika Shetty in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada