»   » ಕಿಚ್ಚ ಸುದೀಪ್ ರನ್ನ ಚಿತ್ರಕ್ಕೆ ಭರ್ಜರಿ ಓಪನಿಂಗ್

ಕಿಚ್ಚ ಸುದೀಪ್ ರನ್ನ ಚಿತ್ರಕ್ಕೆ ಭರ್ಜರಿ ಓಪನಿಂಗ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ರಿಮೇಕ್ ಚಿತ್ರ 'ರನ್ನ' ರಾಜ್ಯದೆಲ್ಲೆಡೆ ಗುರುವಾರ (ಜೂ.4) ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ನೂರಾರು ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಂಡಿದ್ದು, ಸಾವಿರಾರು ಅಭಿಮಾನಿಗಳು ಮುಂಜಾನೆ ಎದ್ದು ಸೂರ್ಯನ್ನ ನೋಡಿದ್ರೋ ಇಲ್ವೋ ತಮ್ಮ ನೆಚ್ಚಿನ ನಟ, ನಟಿಯರನ್ನು ಕಾಣಲು ಚಿತ್ರಮಂದಿರದತ್ತ ಬರುತ್ತಿದ್ದಾರೆ.

ನರ್ತಕಿ ಚಿತ್ರಮಂದಿರಕ್ಕೆ ಕಿಚ್ಚ ಸುದೀಪ್ ನಿರ್ದೇಶಕ ನಂದಕಿಶೋರ್, ನಟಿಯರಾದ ರಚಿತಾ ರಾಮ್, ಹರಿಪ್ರಿಯಾ ಅವರು ಆಗಮನಿಸಿದಾರೆ. ತಾರೆಗಳನ್ನು ಹತ್ತಿರದಿಂದ ನೋಡಲು ಹೋದ ಕೆಲ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಸ್ಟಾರ್ ಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಬಂದ ಫ್ಯಾನ್ಸ್ ಲಾಠಿ ಪೆಟ್ಟು ತಿನ್ನಬೇಕಾಗಿದೆ. [ದಾಖಲೆ ಮೊತ್ತಕ್ಕೆ 'ರನ್ನ' ಪ್ರಸಾರ ಹಕ್ಕು ಮಾರಾಟ]


ರೀಮೇಕ್ ಚಿತ್ರವೇ ಆದರೂ, ತಮ್ಮದೇ ಸ್ಪೆಷಲ್ ಸ್ಟೈಲ್ ನಲ್ಲಿ ರಿಚ್ ಆಗಿ 'ರನ್ನ'ನನ್ನ ರೆಡಿಮಾಡಿದ್ದಾರೆ ನಿರ್ದೇಶಕ ನಂದಕಿಶೋರ್. ರಚಿತಾ ರಾಮ್, ಮಧೂ, ಹರಿಪ್ರಿಯಾ, ಸಾಧು ಕೋಕಿಲ, ಚಿಕ್ಕಣ್ಣ ರಂತಹ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಮುಂದಿನ ವಾರ 'ರನ್ನ'ನ ಗ್ರ್ಯಾಂಡ್ ಎಂಟ್ರಿ ಆಗಿದೆ.

ಸುದೀಪ್ ಹಾಗೂ ರಚಿತಾ ರಾಮ್ ಜೋಡಿ

ಚಿತ್ರದ ಟ್ರೈಲರ್,ಸೀರೆ ಹಾಡಿನ ಝಲಕ್ ನಲ್ಲಿ ಸುದೀಪ್ ಹಾಗೂ ರಚಿತಾ ರಾಮ್ ಜೋಡಿ ನೋಡಿ ಪ್ರೇಕ್ಷಕರು ಮೋಡಿಗೊಳಗಾಗಿದ್ದಾರೆ.


ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ನಂದ ಕಿಶೋರ್

ಶರಣ್ ಅಭಿನಯದ ವಿಕ್ಟರಿ ಹಾಗೂ ಅಧ್ಯಕ್ಷ ಚಿತ್ರಗಳ ಯಶಸ್ಸಿನ ನಂತರ ಸುದೀಪ್ ಅಭಿನಯದ 'ರನ್ನ' ಚಿತ್ರ ಕೈಗೆತ್ತಿಕೊಂಡ ನಂದ ಕಿಶೋರ್ ಬಗ್ಗೆ ಅಭಿಮಾನಿಗಳಿಗೆ ಅಪಾರ ನಿರೀಕ್ಷೆಯಿದೆ. ಈ ಚಿತ್ರ ಗೆಲ್ಲುವ ಮೂಲಕ ಹ್ಯಾಟ್ರಿಕ್ ಯಶಸ್ಸುಗೊಳಿಸುತ್ತಾರೆ ಎಂಬ ವಿಶ್ವಾಸವೂ ಇದೆ.


ಅಣ್ಣಯ್ಯ ನಂತರ ಬಂದ ಅತ್ತೆ ಬಗ್ಗೆ ನಿರೀಕ್ಷೆ

1993ರಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದ ಮಧೂ ಅವರು ಈಗ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಭರ್ಜರಿಯಾಗಿ ರೀ ಎಂಟ್ರಿ ಕೊಟ್ಟಿದ್ದಾರೆ. ರನ್ನ ಚಿತ್ರದಲ್ಲಿ ಸುದೀಪ್ ಅತ್ತೆಯಾಗಿ ಹೇಗೆ ನಟಿಸಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.


ಹೊಸ ದಾಖಲೆ ಬರೆದ ರನ್ನ

149 ಮಲ್ಟಿ ಪ್ಲೆಕ್ಸ್ ಹಾಗೂ ನೂರಾರು ಚಿತ್ರಮಂದಿರಗಳು ಭರ್ಜರಿ ರಿಲೀಸ್


ಮಾರ್ನಿಂಗ್ ಶೋ 6ಕ್ಕೆ

ನಾಲ್ಕೈದು ಚಿತ್ರಮಂದಿರದಲ್ಲಿ ಮಾತ್ರ ಮಾರ್ನಿಂಗ್ ಶೋ 6ಕ್ಕೆ ಆರಂಭವಾಗಿದ್ದು, ತುಂಬಿದ ಗೃಹ ಪ್ರದರ್ಶನ ಕಂಡಿದೆ. ಉಳಿದಂತೆ ಎಲ್ಲೆಡೆ ಮಾಮೂಲಿನಂತೆ ಚಿತ್ರ ಪ್ರದರ್ಶನಗೊಳ್ಳಲಿದೆ.


ನರ್ತಕಿ ಚಿತ್ರಮಂದಿರದಲ್ಲಿ ಕಂಡು ಬಂದ ದೃಶ್ಯ

ನರ್ತಕಿ ಚಿತ್ರಮಂದಿರದಲ್ಲಿ ನೆಚ್ಚಿನ ತಾರೆಗಳನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು ಚಿತ್ರಮಂದಿರದ ಮುಂದೆ ನಿಂತ ದೃಶ್ಯ.


ಹರಿಕೃಷ್ಣ ಹಿನ್ನಲೆ ಸಂಗೀತದ ಬಗ್ಗೆ

ಈಗಾಗಲೇ ಚಿತ್ರ ನೋಡಲು ಆರಂಭಿಸಿದ ಕೆಲ ಅಭಿಮಾನಿಗಳು ಚಿತ್ರದ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಹರಿಕೃಷ್ಣ ಅವರ ಹಿನ್ನಲೆ ಸಂಗೀತ ಇನ್ನಷ್ಟು ಸಮರ್ಥವಾಗಿ ಮೂಡಿ ಬರಬಹುದಿತ್ತು ಎಂದಿದ್ದಾರೆ.


ಮೊದಲ ಶೋ ಕ್ಯಾನ್ಸಲ್

ಮಂಗಳೂರು, ಮೈಸೂರಿನ ಹುಣಸೂರು ತಾಲೂಕಿನಲ್ಲಿ ತಾಂತ್ರಿಕ ತೊಂದರೆಯಿಂದ ಮೊದಲ ಶೋ ಕ್ಯಾನ್ಸಲ್ ಆಗಿದೆ.


ಸುದೀಪ್ ಕಟೌಟ್ ಗಳು, ಹಾರಗಳು

ನರ್ತಕಿ ಚಿತ್ರಮಂದಿರ ಸೇರಿದಂತೆ ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ ಬೃಹತ್ ಕಟೌಟ್ ಗಳನ್ನು ಹಾಕಲಾಗಿದ್ದು, ಸುದೀಪ್ ಚಿತ್ರಕ್ಕೆ ಶುಭ ಕೋರಲಾಗಿದೆ.


ಮ್ಯಾನರೀಸಂ ಕಾಪಿ ಎಂದ ಕೆಲವರು

ಸುದೀಪ್ ಅವರು ಪವನ್ ಕಲ್ಯಾಣ್ ಮ್ಯಾನರೀಸಂ ಕಾಪಿ ಮಾಡಿದ್ದಾರೆ ಯಾಕೆ ಎಂದ ಕೆಲ ಪ್ರೇಕ್ಷಕರು


ಎಲ್ಲರ ನಟನೆ ಸೂಪರ್ ಆಗಿದೆ

ಎಲ್ಲರ ನಟನೆ ಸೂಪರ್ ಆಗಿದೆ, ಚಿತ್ರ ಪೈಸಾ ವಸೂಲ್ ಎಂದಿರುವ ಪ್ರೇಕ್ಷಕರು.


English summary
The official remake of Telugu super hit movie Attarintiki Daredi stars Kicchaa aka Sudeep, Rachita Ram, Haripriya got released on Jun.4. Here the Twitter reaction on first day first show craze about the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada