For Quick Alerts
  ALLOW NOTIFICATIONS  
  For Daily Alerts

  ಒಂದೇ ವಿಷಯದ ಬಗ್ಗೆ ಎರಡು ಚಿತ್ರ: ಒಂದು ಕಡೆ ಶಿವಣ್ಣ, ಮತ್ತೊಂದ್ಕಡೆ ಸುದೀಪ್

  |

  ಒಂದೇ ವಿಷಯಗಳ ಬಗ್ಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಿನಿಮಾಗಳು ಮಾಡಿರುವುದು ಹೊಸ ಸಂಪ್ರದಾಯವೇನಲ್ಲ. ಇದಕ್ಕೂ ಮುಂಚೆ ಒಂದೇ ವಿಷಯದ ಕುರಿತು ಹಲವು ಚಿತ್ರಗಳು ತೆರೆಮೇಲೆ ಬಂದಿರುವ ಸಾಕಷ್ಟು ಉದಾಹರಣೆಗಳಿವೆ.

  ಈಗ ಕನ್ನಡದಲ್ಲಿ ಇಂತಹದ್ದೇ ಮತ್ತೊಂದು ಸನ್ನಿವೇಶ ಮರುಕಳಿಸುತ್ತಿದೆ. ಒಂದೇ ವಿಷಯದ ಬಗ್ಗೆ ಇಬ್ಬರು ದೊಡ್ಡ ನಟರು ಸಿನಿಮಾ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಚಿತ್ರಗಳ ಸಹ ಘೋಷಣೆ ಮಾಡಿದ್ದಾರೆ. ಒಂದು ಕಡೆ ಕಿಚ್ಚ ಸುದೀಪ್ ಮತ್ತೊಂದೆಡೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದೇ ಕಥಾವಸ್ತವನ್ನಾಗಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಅಷ್ಟಕ್ಕೂ, ಯಾವುದು ಆ ಚಿತ್ರಗಳು? ಮುಂದೆ ಓದಿ....

  ಅಶ್ವತ್ಥಾಮ ಕುರಿತು ಎರಡು ಸಿನಿಮಾ

  ಅಶ್ವತ್ಥಾಮ ಕುರಿತು ಎರಡು ಸಿನಿಮಾ

  ಮಹಾಭಾರತದಲ್ಲಿ ಬರುವ ಅಶ್ವತ್ಥಾಮನ ಪಾತ್ರ ಆಧರಿಸಿ ಕನ್ನಡದಲ್ಲಿ ಎರಡು ಸಿನಿಮಾ ಘೋಷಣೆಯಾಗಿದೆ. ಇದು ಪೌರಾಣಿಕ ಚಿತ್ರವಲ್ಲದಿದ್ದರೂ ಅಶ್ವತ್ಥಾಮನ ಪಾತ್ರದ ಮೇಲೆ ಸಿನಿಮಾ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದಿದೆ. ಸದ್ಯಕ್ಕೆ ಈ ಎರಡು ಚಿತ್ರಗಳಲ್ಲಿ ಅಶ್ವತ್ಥಾಮ ಎನ್ನುವುದು ಪ್ರಮುಖವಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

  ಫ್ಯಾಂಟಮ್ ಬಳಿಕ ಕಿಚ್ಚನ ಜೊತೆ ಅನೂಪ್ ಭಂಡಾರಿ ಮತ್ತೊಂದು ಚಿತ್ರಫ್ಯಾಂಟಮ್ ಬಳಿಕ ಕಿಚ್ಚನ ಜೊತೆ ಅನೂಪ್ ಭಂಡಾರಿ ಮತ್ತೊಂದು ಚಿತ್ರ

  ಸುದೀಪ್-ಅನೂಪ್ ಭಂಡಾರಿ

  ಸುದೀಪ್-ಅನೂಪ್ ಭಂಡಾರಿ

  'ಫ್ಯಾಂಟಮ್' ಸಿನಿಮಾದ ಬಳಿಕ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಇನ್ನೊಂದು ಸಿನಿಮಾ ಮಾಡಲಿದ್ದಾರೆ. ಆ ಚಿತ್ರಕ್ಕೆ ಅಶ್ವತ್ಥಾಮ ಎಂದು ಹೆಸರಿಡಲಾಗಿದ್ದು, ಕಿಚ್ಚ ಕ್ರಿಯೇಷನ್ಸ್ ಅಡಿ ಸುದೀಪ್ ನಿರ್ಮಾಣ ಮಾಡಲಿದ್ದಾರೆ. ಸದ್ಯಕ್ಕೆ ಹೀರೋ ಅಂತಿಮವಾಗಿಲ್ಲ. ಆದ್ರೆ, ಪೂರ್ವ ತಯಾರಿ ನಡೆದಿದೆ.

  ಶಿವಣ್ಣ-ಸಚಿನ್ ಸಿನಿಮಾ

  ಶಿವಣ್ಣ-ಸಚಿನ್ ಸಿನಿಮಾ

  ರಕ್ಷಿತ್ ಶೆಟ್ಟಿ ನಟನೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ನಿರ್ದೇಶಿಸಿದ್ದ ಸಚಿನ್ ರವಿ ಹ್ಯಾಟ್ಯಿಕ್ ಹೀರೋಗೆ ಆಕ್ಷನ್ ಕಟ್ ಹೇಳುತ್ತಿದ್ದು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾನೂ ಅಶ್ವತ್ಥಾಮ ಪಾತ್ರದ ಕುರಿತು ತಯಾರಾಗಲಿದೆ ಎಂದು ತಿಳಿಸಿದ್ದಾರೆ.

  'ಅವನೇ ಶ್ರೀಮನ್ನಾರಾಯಣ' ನಿರ್ದೇಶಕನ ಜೊತೆ ಶಿವಣ್ಣನ ಹೊಸ ಸಿನಿಮಾ'ಅವನೇ ಶ್ರೀಮನ್ನಾರಾಯಣ' ನಿರ್ದೇಶಕನ ಜೊತೆ ಶಿವಣ್ಣನ ಹೊಸ ಸಿನಿಮಾ

  ಮದಕರಿ ನಾಯಕ ಘಟನೆ

  ಮದಕರಿ ನಾಯಕ ಘಟನೆ

  ರಾಕ್ಲೈನ್ ವೆಂಕಟಶ್ ಮದಕರಿ ನಾಯಕ ಸಿನಿಮಾ ಘೋಷಣೆ ಮಾಡಿದರು. ಮತ್ತೊಂದೆಡೆ ಸುದೀಪ್ ಸಹ ಮದಕರಿ ನಾಯಕನ ಕುರಿತು ಸಿನಿಮಾ ಮಾಡಬೇಕೆಂಬ ತಯಾರಿ ನಡೆಸಿದ್ದರು. ದರ್ಶನ್ ಮತ್ತು ಸುದೀಪ್ ಇಬ್ಬರಲ್ಲಿ ಮದಕರಿ ನಾಯಕನ ಬಗ್ಗೆ ಯಾರು ಸಿನಿಮಾ ಮಾಡಲಿದ್ದಾರೆ ಎಂಬ ಚರ್ಚೆ ನಡೆಯಿತು. ಅಂತಿಮವಾಗಿ ಸುದೀಪ್ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದರು.

  English summary
  Two films announced in kannada on Ashwatthama. once side kiccha sudeep and nirup bhandari announced, another side shivrajkumar also announced same Subject.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X