For Quick Alerts
  ALLOW NOTIFICATIONS  
  For Daily Alerts

  ಕನ್ನಡದ 'ವರಲಕ್ಷ್ಮಿ'ಗೆ ರಜನಿ ಚಿತ್ರದಲ್ಲಿ ನಾಯಕಿಯಾಗುವ ವರ ಸಿಕ್ಕಿದೆ.!

  By Bharath Kumar
  |

  'ಕಾಲಾ' ಚಿತ್ರದ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಲಿರುವ ಹೊಸ ಸಿನಿಮಾ ಘೋಷಣೆಯಾಗಿದೆ. ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ತಲೈವಾ ಅವರ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

  ಈ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿತ್ತು. ಇದೀಗ, ರಜನಿ ಜೊತೆಯಲ್ಲಿ ತೆರೆಹಂಚಿಕೊಳ್ಳುವ ಅವಕಾಶ ಇಬ್ಬರು ಯುವನಟಿಯರಿಗೆ ಸಿಕ್ಕಿದೆ.

  ಅದರಲ್ಲಿ ಒಬ್ಬರು ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಯುವ ನಟಿ. ಈಕೆಗೆ ಇದು ಮೊದಲ ತಮಿಳು ಸಿನಿಮಾ ಹಾಗೂ ಸೂಪರ್ ಸ್ಟಾರ್ ಜೊತೆಯಲ್ಲೂ ಮೊದಲ ಚಿತ್ರವಾಗಲಿದೆ. ಹಾಗಿದ್ರೆ, ರಜನಿಕಾಂತ್ ಜೊತೆಯಲ್ಲಿ ನಟಿಸಿರುವ ಆ 'ವರಲಕ್ಷ್ಮಿ' ಯಾರು.? ಮುಂದೆ ಓದಿ....

  ಕನ್ನಡದ 'ವರಲಕ್ಷ್ಮಿ'ಗೆ ಬಿಗ್ ಪ್ರಾಜೆಕ್ಟ್

  ಕನ್ನಡದ 'ವರಲಕ್ಷ್ಮಿ'ಗೆ ಬಿಗ್ ಪ್ರಾಜೆಕ್ಟ್

  2016ರಲ್ಲಿ ತೆರೆಕಂಡಿದ್ದ 'ನಾನು ಮತ್ತು ವರಲಕ್ಷ್ಮಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದ ಮಾಳವಿಕಾ ಮೋಹನನ್ ಈಗ ಸೂಪರ್ ಸ್ಟಾರ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಇದು ತಮಿಳಿನಲ್ಲಿ ಮಾಳವಿಕಾ ಮೋಹನನ್ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾವಾಗಲಿದೆ.

  ಮಲಯಾಳಂ ಬೆಡಗಿ

  ಮಲಯಾಳಂ ಬೆಡಗಿ

  ಮಾಳವಿಕಾ ಮೋಹನನ್ ಮೂಲತಃ ಮಲಯಾಳಂ ನಟಿ. ಇದುವರೆಗೂ ಮೂರು ಮಲಯಾಳಂ ಚಿತ್ರ ಮಾಡಿರುವ ಮಾಳವಿಕಾ ಕನ್ನಡದಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಈಗ ರಜನಿ ಚಿತ್ರದ ಮೂಲಕ ಕಾಲಿವುಡ್ ಗೂ ಎಂಟ್ರಿ ಕೊಡ್ತಿದ್ದಾರೆ. ತೆಲುಗಿನಲ್ಲಿ ಸಿನಿಮಾ ಮಾಡಿಲ್ಲ. ಹಿಂದಿಯಲ್ಲೂ ಒಂದು ಸಿನಿಮಾ ಮಾಡಿದ್ದಾರೆ.

  ಇನ್ನೊಬ್ಬ ನಾಯಕಿ ತ್ರಿಷಾ

  ಇನ್ನೊಬ್ಬ ನಾಯಕಿ ತ್ರಿಷಾ

  ಅಂದ್ಹಾಗೆ, ರಜನಿಕಾಂತ್ ಚಿತ್ರದಲ್ಲಿ ಇಬ್ಬರು ನಟಿಯರು. ಒಬ್ಬರು ಮಾಳವಿಕಾ ಮೋಹನನ್. ಇನ್ನೊಬ್ಬರು ಬಹುಭಾಷಾ ನಟಿ ತ್ರಿಷಾ. ತ್ರಿಷಾಗೆ ಇದು ತಲೈವಾ ಜೊತೆಯಲ್ಲಿ ಮೊಟ್ಟ ಮೊದಲ ಸಿನಿಮಾ. ರಜನಿಕಾಂತ್ ಜೊತೆಯಲ್ಲಿ ಅಭಿನಯಿಸಬೇಕಿತ್ತು ಎಂಬುದು ತ್ರಿಷಾ ಅವರ ಕನಸಾಗಿತ್ತು. ಇದು ಈಗ ಈಡೇರಿದೆ.

  ದೊಡ್ಡ ತಾರಬಳಗ ಹೊಂದಿದೆ

  ದೊಡ್ಡ ತಾರಬಳಗ ಹೊಂದಿದೆ

  ರಜನಿಕಾಂತ್ ಜೊತೆಯಲ್ಲಿ ತಮಿಳು ನಟ ವಿಜಯ್ ಸೇತುಪತಿ, ಸಿಮ್ರಾನ್, ಬಾಬಿ ಸಿಂಹ, ಸನತ್ ರೆಡ್ಡಿ ಮತ್ತು ಮೇಘ ಆಕಾಶ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನವಾಜ್ಜುದ್ದೀನ್ ಸಿದ್ಧಿಕಿ ಕೂಡ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Actress Trisha and Malavika Mohanan are, reportedly, the latest addition to the cast of Superstar Rajinikanth-Karthik Subbaraj's upcoming film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X