For Quick Alerts
  ALLOW NOTIFICATIONS  
  For Daily Alerts

  ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹರ್ಷಿಕಾಗೆ ಅಸಭ್ಯ ವರ್ತನೆ

  |

  ನಟಿ ಹರ್ಷಿಕಾ ಪೂಣಚ್ಚ ಜೊತೆಗೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂದಿಸಿದ್ದಾರೆ.

  ನಿನ್ನೆ (ಮೇ 2) ಹರ್ಷಿಕಾ ಪೂಣಚ್ಚ ಸಂಬಂಧಿಯೊಬ್ಬರ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರು. ಮಡಿಕೇರಿಯ ಸಮೀಪದ ನೀರುಕೋಲ್ಲಿಯ ರೆಸಾರ್ಟ್ ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಬನ್ಸಿ ನಾಣಯ್ಯ ಹಾಗೂ ಬಿಪಿಎನ್ ದೇವಯ್ಯ ಎಂಬುವವರು ತಮ್ಮ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಹರ್ಷಿಕಾ ಆರೋಪ ಮಾಡಿದ್ದಾರೆ.

  ತಮ್ಮ ಜೊತೆಗೆ ಅಸಭ್ಯ ವರ್ತನೆ ತೋರಿದ್ದು ಮಾತ್ರವಲ್ಲದೆ, ಅದನ್ನು ಪ್ರಶ್ನೆ ಮಾಡಿದ್ದಕ್ಕೆ ನಟ ಭುವನ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರಂತೆ. ಈ ಘಟನೆಯಿಂದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಭುವನ್ ಹಾಗೂ ಹರ್ಷಿಕಾ ದೂರು ನೀಡಿದ್ದರು.

  ವಿದೇಶಕ್ಕೆ ಹರ್ಷಿಕಾ ಪೂಣಚ್ಚ ಒಬ್ಬರೇ ಹೋಗಿಲ್ಲ.! ಮತ್ಯಾರಿದ್ದಾರೆ.?

  ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಬನ್ಸಿ ನಾಣಯ್ಯನನ್ನು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರು ಮಾಡಿದ್ದಾರೆ. ಇನ್ನೊಬ್ಬ ಆರೋಪಿ ಬಿಪಿಎನ್ ದೇವಯ್ಯ ಘಟನೆಯ ಬಳಿಕ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

  English summary
  Two people misbehaved with actress Harshika Poonacha in engagement ceremony held in madikeri

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X