For Quick Alerts
  ALLOW NOTIFICATIONS  
  For Daily Alerts

  ಪುನೀತ್‌ ಪ್ರೇರಣೆ: ದೇಹದಾನ ಮಾಡಲು ಮುಂದಾದ ದಂಪತಿ

  |

  ಪುನೀತ್ ರಾಜ್‌ಕುಮಾರ್ ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ. ತನ್ನೆರೆಡೂ ಕಣ್ಣುಗಳನ್ನು ದಾನ ಮಾಡಿ ನಾಲ್ವರ ಬದುಕಲ್ಲಿ ಬೆಳಕಾಗಿದ್ದಾರೆ. ಪುನೀತ್ ಸಾವಿನಲ್ಲು ಮೆರೆದ ಸಾರ್ಥಕತೆಯಿಂದಾಗಿ ಅದೆಷ್ಟೋ ಅಭಿಮಾನಿಗಳು ಪ್ರೇರಣೆ ಪಡೆದುಕೊಂಡು ಪುನೀತ್ ದಾರಿಯಲ್ಲೇ ನಡೆಯಲು ತೀರ್ಮಾನಿಸಿದ್ದಾರೆ. ರಾಜ್ಯಾದ್ಯಂತ ಸಾಕಷ್ಟು ಮಂದಿ ಈಗಾಗಲೇ ನೇತ್ರದಾನ ಮಾಡಲು ಮುಂದಾಗಿದ್ದಾರೆ. ಇನ್ನು ಮಾಡುತ್ತಲೆ ಇದ್ದಾರೆ. ಸಂಚಾರಿ ವಿಜಯ್ ಕೂಡ ಈ ಹಿಂದೆ ಸಾವಿನಲ್ಲು ಸಾರ್ಥಕತೆ ಮೆರೆದಿದ್ದರು, ತನ್ನೆರೆಡು ಕಣ್ಣುಗಳನ್ನು ದಾನ ಮಾಡಿದ್ದರು.

  ಸ್ಯಾಂಡಲ್‌ವುಡ್‌ನ ಈ ಇಬ್ಬರು ನಟರು ನೇತ್ರದಾನ ಮಾಡಿದ ನಂತರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನ ಮಾಡಲು ಮುಂದಾಗಿದ್ದಾರೆ. ಇದೀಗ ಪುನೀತ್ ರಾಜ್‌ ಕುಮಾರ್ ಪ್ರೇರಣೆಯಿಂದ ಎರಡು ದಂಪತಿಗಳು ದೇಹದಾನ ಮಾಡಲು ಮುಂದಾಗಿದ್ದಾರೆ. ಯಾದಗಿರಿಯ ಹನುಮಯ್ಯ ದಂಪತಿ ಹಾಗೂ ಮಲ್ಲಿಕಾರ್ಜುನ ದಂಪತಿಗಳು ದೇಹದಾನಕ್ಕೆ ಮನಸ್ಸು ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  ಯಾದಗಿರಿಯಲ್ಲಿ ಇತ್ತೀಚೆಗೆ ಪುನೀತ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ ಈ ಜೋಡಿಗಳು ತಮ್ಮ ದೇಹದಾನ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇವರ ಈ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದು, ದಂಪತಿಗಳು ಕೂಡ ಪುನೀತ್ ಪ್ರೇರಣೆಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಸಂತಸ ಗೊಂಡಿದ್ದಾರೆ.

  ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಎರೆಡೂ ದಂಪತಿಗಳು ದೇಹದಾನ ಮಾಡಿದ್ದರೇ, ಇನ್ನೂ ಹಲವರು ನೇತ್ರದಾನವನ್ನು ಮಾಡಿದ್ದಾರೆ. ಹೀಗೆ ಹಲವರು ಪುನೀತ್ ರಾಜ್‌ಕುಮಾರ್ ಪ್ರೇರಣೆಯಿಂದ ನೇತ್ರದಾನ ಮಾಡಲು ಮುಂದಾಗುತ್ತಿದ್ದಾರೆ. ಇನ್ನು ಹಲವರು ಈ ಬಗ್ಗೆ ಚಿಂತಿಸುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಈ ಕಣ್ಣುದಾನದ ಪ್ರಕ್ರಿಯೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದಾರೆ.

  ಈಗಾಗಲೇ ಪುನೀತ್ ಸಾವಿನಿಂದ ನೊಂದಿರುವ ಹಲವರು ಇನ್ನೂ ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಪರದಾಡುತ್ತಿದ್ದಾರೆ. ಈ ದುಃಖದ ನಡುವಿನಲ್ಲಿಯೇ ನೆಚ್ಚಿನ ನಟನ ಸ್ಮರಣಾರ್ಥಗಳನ್ನು ಮಾಡುತ್ತಿದ್ದಾರೆ. ಶ್ರದ್ಧಾಂಜಲಿ, ಪುಷ್ಪನಮನ, ಪುನೀತ್ ನಮನ ಎಂದೆಲ್ಲಾ ನೆಚ್ಚನ ನಟನನ್ನು ನೆನಪಿಸಿಕೊಳ್ಳುತ್ತಿದ್ದಾರೆ.ಈ ಹಿಂದೆ ಕೂಡ ಒಂದು ಸಂಪೂರ್ಣ ಗ್ರಾಮವೇ ನೇತ್ರದಾನ ಮಾಡಿ ಸಾರ್ಥಕತೆ ಮೆರೆಯುತ್ತಿದ್ದಾರೆ. ದಾವಣೆಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡದಲ್ಲಿನ ಜನ ಈಗ ನೇತ್ರದಾನಕ್ಕೆ ಮುಂದಾಗಿದ್ದಾರೆ. ಇದೊಂದು ಚಿಕ್ಕ ಗ್ರಾಮವಾಗಿದ್ದು 100ಜನರಷ್ಟೆ ವಾಸವಿದ್ದಾರೆ. ಇವರೆಲ್ಲರೂ ಕೂಡ ಮೊದಲಿನಿಂದಲೂ ಪುನೀತ್ ಸಿನಿಮಾಗಳು ರಿಲೀಸ್ ಆದರೆ ತಪ್ಪದೇ ಹೋಗಿ ವೀಕ್ಷಿಸುತ್ತಿದ್ದರು. ಇದೀಗ ನೆಚ್ಚಿನ ನಟನನ್ನು ಕಳೆದುಕೊಂಡಿರೋ ಇವರು ಅದೇ ನೋವಿನಲ್ಲಿ ಪುನೀತ್ ರಂತೆ ತಾವು ನೇತ್ರದಾನ ಮಾಡಲು ಮುಂದಾಗಿದ್ದಾರೆ.

  ತಾಂಡದ ಯುವಕರ ಸಹಯೋಗದಲ್ಲಿ ಇತ್ತೀಚೆಗೆ ಪುನೀತ್‌ ರಾಜ್‌ ಕುಮಾರ್ ರವರ ನೆನಪಿಗಾಗಿ ನೇತ್ರದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ಗ್ರಾಮದ ಪ್ರತಿಯೊಬ್ಬರು ನೇತ್ರದಾನದ ಫಾರ್ಮ್‌ಅನ್ನು ತುಂಬಿದ್ದಾರೆ. ತಾಂಡದ ಈ ಜನರ ಕೆಲಸ ಈಗ ಎಲ್ಲರ ಪ್ರಶಂಸೆಗೂ ಕಾರಣವಾಗಿದೆ. ನಟ ಪುನೀತ್ ರಾಜ್‌ಕುಮಾರ್ ಮಾರ್ಗದರ್ಶನವನ್ನೇ ಜೀವನದುದ್ದಕ್ಕೂ ಅನುಸರಿಸಲು ಮುಂದಾಗಿರುವ ದಾವಣೆಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡದ ಜನ ಅವರ ಆದರ್ಶಗಳನ್ನು ಚಾಚೂ ತಪ್ಪದೇ ಪಾಲಿಸಲು ತೀರ್ಮಾನಿಸಿದ್ದಾರೆ. ಸ್ಥಳೀಯ ಆಸ್ಪತ್ರೆ ಸಿಬ್ಬಂದಿಗಳು ಕೂಡ ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

  ಇನ್ನು ಚಿತ್ರರಂಗದಿಂದ ಇದೇ ತಿಂಗಳ 16ರಂದು ಪುನೀತ್ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಚಿತ್ರರಂಗದ ಎಲ್ಲಾ ಗಣ್ಯರು ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದರ ನೇತೃತ್ವವನ್ನು ಸಾ.ರಾ.ಗೋವಿಂದು ಅವರು ವಹಿಸಿಕೊಂಡಿದ್ದಾರೆ.

  ಹಾಗೇ ಇಂದು ಸಂಜೆ 6ಗಂಟೆಗೆ ರಾಜ್ಯದ ಸುಮಾರು 600ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಅಪ್ಪು ನಮನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೌನಾಚರಣೆ ಮಾಡಿ ,ಕ್ಯಾಂಡಲ್ ಹಚ್ಚಿ, ಪುಷ್ಪನಮನ ಮಾಡಲಾಗುತ್ತಿದೆ. ಅಲ್ಲದೇ ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್ ರಚಿಸಿರುವ ಹಾಡಿನ ಮೂಲಕ ಗೀತನಮನ ಕೂಡ ಸಲ್ಲಿಸಲು ಮುಂದಾಗಿದೆ ಥಿಯೇಟರ್ ಒಕ್ಕೂಟ. ಥಿಯೇಟರ್ ಮಾಲಿಕರು ಮತ್ತು ಅಭಿಮಾನಿಗಳು ಈ ಸಂದರ್ಭದಲ್ಲಿ ಭಾಗಿಯಾಗಲಿದ್ದಾರೆ.

  English summary
  Yadagiri districts Mallikarjuna and his wife and Hanumanthaiah and his wife decided to donate body organs. they influanced by Puneeth Rajkumar's eye donation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X