For Quick Alerts
  ALLOW NOTIFICATIONS  
  For Daily Alerts

  ಉಳಿದವರು ಕಂಡಂತೆ ಪ್ರಯೋಗಾತ್ಮಕ ಚಿತ್ರ: ಸುನಿ

  By Rajendra
  |
  <ul id="pagination-digg"><li class="next"><a href="/news/ulidavaru-kandanthe-is-for-both-class-and-mass-rakshit-082740.html">Next »</a></li></ul>

  ಸ್ಯಾಂಡಲ್ ವುಡ್ ನ ಈ ವರ್ಷದ ಮೋಸ್ಟ್ ಎಕ್ಸ್ ಪೆಕ್ಟೆಡ್ ಫಿಲಂಗಳಲ್ಲಿ 'ಉಳಿದವರು ಕಂಡಂತೆ' ಚಿತ್ರವೂ ಒಂದು. 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ತಂಡ ಈ ಬಾರಿ ಏನೆಲ್ಲಾ ಕಮಾಲ್ ಮಾಡಿದೆ ಎಂಬುದನ್ನು ಕಣ್ತುಂಬಿಕೊಳ್ಳಲು ಚಿತ್ರರಸಿಕರು ತುದಿಗಾಲಲ್ಲಿ ನಿಂತಿದ್ದಾರೆ.

  ಚಿತ್ರ ಪ್ರೇಮಿಗಳ ಕಾತುರ ಕುತೂಹಲಕ್ಕೆ ಇದೇ ಶುಕ್ರವಾರ (ಮಾ.28) ತೆರೆಬೀಳಲಿದೆ. ಚಿತ್ರವನ್ನು ಸರಿಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಇದಿಷ್ಟೇ ಅಲ್ಲದೆ ಹೊರ ರಾಜ್ಯ, ವಿದೇಶಗಳಲ್ಲಿನ ಕನ್ನಡಿಗರ ಮುಂದೆಯೂ ಚಿತ್ರ ಬರುತ್ತಿದೆ. ['ಉಳಿದವರು ಕಂಡಂತೆ' ಪ್ರೆಸ್ ಮೀಟ್ ಸ್ಟಿಲ್ಸ್]

  ಗಾಂಧಿನಗರದ ಎಂದಿನ ಶೀರ್ಷಿಕೆಗಳಿಗಿಂತ 'ಉಳಿದವರು ಕಂಡಂತೆ' ಭಿನ್ನವಾಗಿದೆ. ಬರೀ ಶೀರ್ಷಿಕೆಯಲ್ಲಷ್ಟೇ ಅಲ್ಲ ಮೇಕಿಂಗ್ ನಲ್ಲೂ ಡಿಫರೆಂಟ್ ಆಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಕಮ್ ನಟ ರಕ್ಷಿತ್ ಶೆಟ್ಟಿ. ಈ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಅದರ ಹೈಲೈಟ್ಸ್ ಇಲ್ಲಿವೆ ಓದಿ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

  ಜುಲೈ 25ಕ್ಕೆ ಆರಂಭವಾದ ಚಿತ್ರ ಇದೀಗ ಬಿಡುಗಡೆಯಾಗುತ್ತಿದೆ. ಯಾಕಿಷ್ಟು ತಡವಾಯಿತು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಇಷ್ಟು ಕಾಲಾವಕಾಶ ತೆಗೆದುಕೊಳ್ಳಲು ಕಾರಣ ಇದನ್ನು ಅತ್ಯುತ್ತಮವಾಗಿ ತೆರೆಗೆ ತರಲು ಪ್ರಯತ್ನಿಸಿದ್ದೇವೆ. ಕೇವಲ ಧ್ವನಿಗ್ರಹಣ ಹಾಗೂ ಸಂಗೀತಕ್ಕೇ ಮೂರು ತಿಂಗಳು ಖರ್ಚಾಯಿತು. ರಾಜ್ಯದಲ್ಲಷ್ಟೇ ಅಲ್ಲದೆ ಬಾಂಬೆ, ಪುಣೆ ಮುಂತಾದ ಕಡೆ ಸಹ ಬಿಡುಗಡೆ ಮಾಡಲಾಗುತ್ತಿದೆ.

  ಈ ಚಿತ್ರದಲ್ಲಿನ ಒಂದು ಕೋಲ್ಡ್ ಬ್ಲಡ್ಡೆಡ್ ವಾರ್ ಇರಬಹುದು, ಸೆಂಟಿಮೆಂಟ್ ಆಗಿರಬಹುದು, ಮನಸ್ಸಿಗೆ ಹಿತವಾದ ಹೃದಯಂಗಮ ಸನ್ನಿವೇಶಗಳಿರಬಹುದು ಹೀಗೆ ಚಿತ್ರವನ್ನು ಎಲ್ಲಾ ಕಮರ್ಷಿಯಲ್ ಅಂಶಗಳಿಂದಲೂ ತೆರೆಗೆ ತಂದಿದ್ದೇವೆ. ಸಿನಿಮಾ ನೋಡುತ್ತಿದ್ದಷ್ಟು ಹೊತ್ತೂ ಇದು ನಿಮ್ಮದೇ ಕಥೆ ಎನ್ನಿಸುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ. ಇದೊಂದು ಅತ್ಯುತ್ತಮ ಪ್ರಯೋಗಾತ್ಮಕ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಸಿಂಪರ್ ಸುನಿ.

  <ul id="pagination-digg"><li class="next"><a href="/news/ulidavaru-kandanthe-is-for-both-class-and-mass-rakshit-082740.html">Next »</a></li></ul>
  English summary
  Rakshit Shetty debut directional Kannada movie Ulidavaru Kandante (As seen by the rest) is slated for release on 28th March, 2014. The movie released overseas by Reelbox Media Entertainment Pvt. Ltd. in the countries of Australia, UK, Germany, US, Dubai and New Zealand among others. Kishore, Tara, Achuth Kumar, Yagna Shetty, and Rakshit Shetty as well, are in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X