For Quick Alerts
  ALLOW NOTIFICATIONS  
  For Daily Alerts

  'ಹೆಬ್ಬುಲಿ' ನಿರ್ಮಾಪಕನ ಚಿತ್ರಕ್ಕೆ ಕಂಡಿಷನ್ ಹಾಕಿದ ದರ್ಶನ್

  By Bharath Kumar
  |
  ಹೆಬ್ಬುಲಿ ನಿರ್ಮಾಪಕ ಉಮಾಪತಿ ಸಿನಿಮಾಗೆ ದರ್ಶನ ಕಂಡೀಶನ್ | Filmibeat Kannada

  ಒಂದು ಸಿನಿಮಾ ಮುಗಿಯವರೆಗೂ ಇನ್ನೊಂದು ಸಿನಿಮಾದ ಬಗ್ಗೆ ಮಾತನಾಡಲ್ಲ, ಹಾಗೂ ಪ್ರಮೋಷನ್ ಮಾಡಲ್ಲ ದರ್ಶನ್. ಹಾಗಾಗಿ, ಸೆಟ್ಟೇರುವವರೆಗೂ ಆ ಸಿನಿಮಾ ಕನ್ ಫರ್ಮ್ ಆಗಿರಲ್ಲ.

  ಬಟ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಹೆಬ್ಬುಲಿ ನಿರ್ಮಾಪಕ ಉಮಾಪತಿ ಕಾಂಬಿನೆಷನಲ್ಲೊಂದು ಸಿನಿಮಾ ಬರ್ತಿದೆ ಎಂಬುದು ಸುದ್ದಿಯಾಗಿತ್ತು. ಈ ವಿಷ್ಯವನ್ನ ಖುದ್ದು ಉಮಾಪತಿ ಅವರೇ ಖಚಿತ ಪಡಿಸಿದ್ದರು.

  ಈ ಚಿತ್ರದ ಬಗ್ಗೆ ಈಗ ಕುತೂಹಲಕಾರಿ ಸಂಗತಿಗಳನ್ನ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ. ಉಮಾಪತಿ ಜೊತೆ ಸಿನಿಮಾ ಮಾಡಲು ದಾಸ ಒಂದು ಕಂಡಿಷನ್ ಹಾಕಿದ್ದಾರಂತೆ. ಅದರ ಜೊತೆಗೆ ನಿರ್ಮಾಪಕರು ಎರಡು ಟೈಟಲ್ ಅಂತಿಮ ಮಾಡಿಕೊಂಡಿದ್ದಾರಂತೆ. ಈ ಸಿನಿಮಾ ಯಾವಾಗ ಶುರು ಹಾಗೂ ದರ್ಶನ್ ಹಾಕಿರುವ ಷರತ್ತೇನು.? ಈ ಚಿತ್ರಕ್ಕೆ ಟೈಟಲ್ ಯಾವುದು ಎಂಬ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ....

  'ದಾಸ'ನ ಷರತ್ತು ಇದೇ

  'ದಾಸ'ನ ಷರತ್ತು ಇದೇ

  ಉಮಾಪತಿ ಅವರ ಜೊತೆ ಸಿನಿಮಾ ಮಾಡಲು ದರ್ಶನ್ ಕಾಲ್ ಶೀಟ್ ಕೊಟ್ಟಿದ್ದಾರೆ ಎಂಬುದು ಸ್ವತಃ ನಿರ್ಮಾಪಕರಿಂದಲೇ ಖಚಿತವಾಗಿದೆ. ಆದ್ರೆ, ಈ ಸಿನಿಮಾ ಮಾಡಲು ಚಾಲೆಂಜಿಂಗ್ ಸ್ಟಾರ್ ಒಂದು ಕಂಡಿಷನ್ ಹಾಕಿದ್ದಾರೆ. ಅದೇನಪ್ಪಾ ಅಂದ್ರೆ, ''ಈ ಚಿತ್ರದಲ್ಲಿ ಶೇಕಡಾ 96 ರಷ್ಟು ಸಾಧ್ಯವಾದ್ರೆ 100 ರಷ್ಟು ಕನ್ನಡದವರನ್ನೇ ಹಾಕಿಕೊಂಡು ಕೆಲಸ ಮಾಡಿ. ಕಲಾವಿದರು, ತಂತ್ರಜ್ಞರು ಎಲ್ಲರೂ ಕನ್ನಡದವರಿಗೆ ಅವಕಾಶ ಕೊಡಿ'' ಎಂದಿದ್ದಾರಂತೆ.

  ರೈತರ ಶ್ರಮದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತುರೈತರ ಶ್ರಮದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತು

  ಎರಡು ಟೈಟಲ್ ಅಂತಿಮವಾಗಿದೆ

  ಎರಡು ಟೈಟಲ್ ಅಂತಿಮವಾಗಿದೆ

  ಅಂದ್ಹಾಗೆ, ದರ್ಶನ್ ಮತ್ತು ಉಮಾಪತಿ ಚಿತ್ರಕ್ಕೆ ಎರಡು ಟೈಟಲ್ ಸಿದ್ದವಾಗಿದೆ. ಕಥೆಯನ್ನ ನೋಡಿ ಯಾವುದು ಸೂಕ್ತವಾಗಿದೆಯೊ ಅದನ್ನ ಫೈನಲ್ ಮಾಡಲಾಗುವುದು. ಮೊದಲನೇಯದು 'ಕಾಟೇರ' ಇನ್ನೊಂದು 'ರಾಬರ್ಟ್'.

  ಈ ಹುಡುಗಿಯನ್ನು ದರ್ಶನ್ ಯಾವಾಗ ಭೇಟಿ ಮಾಡ್ತಾರೆ?ಈ ಹುಡುಗಿಯನ್ನು ದರ್ಶನ್ ಯಾವಾಗ ಭೇಟಿ ಮಾಡ್ತಾರೆ?

  ದರ್ಶನ್ ಗೂ ಇಷ್ಟ, ಉಮಾಪತಿಗೂ ಇಷ್ಟ

  ದರ್ಶನ್ ಗೂ ಇಷ್ಟ, ಉಮಾಪತಿಗೂ ಇಷ್ಟ

  ಚೌಕ ಚಿತ್ರದಲ್ಲಿ ಡಿ ಬಾಸ್ ವಿಶೇಷ ಪಾತ್ರ ನಿರ್ವಹಿಸಿದ್ದರು. ಅದರಲ್ಲಿ ಅವರ ಹೆಸರು ರಾಬರ್ಟ್. ಈ ಹೆಸರು ನಿರ್ಮಾಪಕರಿಗೆ ಹೆಚ್ಚು ಇಷ್ಟವಾದ ಕಾರಣ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಅದೇ ರೀತಿ 'ಕಾಟೇರ' ಎಂಬುದು ದರ್ಶನ್ ಗೆ ಇಷ್ಟವಾದ ಹೆಸರಂತೆ.

  'ಕಾಟೇರ' ಅಂದ್ರೆ ಯಾರು ಗೊತ್ತಾ.?

  'ಕಾಟೇರ' ಅಂದ್ರೆ ಯಾರು ಗೊತ್ತಾ.?

  ಅಂದ್ಹಾಗೆ, ಕಾಟೇರ ಅಂದ್ರೆ ಒಬ್ಬ ಕುಸ್ತಿ ಪೈಲ್ವಾನ್ ಹೆಸರಂತೆ. ದಾವಣೆಗೆರೆ ಬಳಿ ಆ ವ್ಯಕ್ತಿ ಇದ್ದಾನೆ. ಒಂದು ಸಮಯದ ಊಟಕ್ಕೆ ಅಂತ ಕೂತ್ರೆ, ಮೂವತ್ತರಿಂದ ಮೂವತೈದು ಚಪಾತಿ, ಇಪತ್ತು ರೊಟ್ಟಿ, ಎರಡ್ಮೂರು ಕೋಳಿ ಹಾಗೂ ಹದಿನೈದು ವಾಟರ್ ಮೆಲನ್ ಜ್ಯೂಸ್ ಕುಡಿತಾನೆ, ಹಾಗಾಗಿ, ಅವರ ರೀತಿ ಒಂದು ಮಾತ್ರ ಮಾಡಬೇಕು ಎಂದು ಹೇಳಿದ್ದರು. ಹಾಗಾಗಿ, ಅದೊಂದು ಕಾನ್ಸೆಪ್ಟ ಇದೆಯಂತೆ. ಒಂದು ವೇಳೆ ಈ ಕಥೆ ಓಕೆ ಆದ್ರೆ, ದರ್ಶನ್ ಕುಸ್ತಿ ಪೈಲ್ವಾನ್ ಆಗಬಹುದು.

  'ದರ್ಶನ್' ಜೊತೆಗಿನ ಆಂತರಿಕ ಕದನಕ್ಕೆ ಬ್ರೇಕ್ ಹಾಕಿದ 'ಅಭಿಮನ್ಯು''ದರ್ಶನ್' ಜೊತೆಗಿನ ಆಂತರಿಕ ಕದನಕ್ಕೆ ಬ್ರೇಕ್ ಹಾಕಿದ 'ಅಭಿಮನ್ಯು'

  ತರುಣ್ ಬಳಿ ಎರಡ್ಮೂರು ಕಥೆ

  ತರುಣ್ ಬಳಿ ಎರಡ್ಮೂರು ಕಥೆ

  ಅಂದ್ಹಾಗೆ, ದರ್ಶನ್ ಮತ್ತು ಉಮಾಪತಿ ಜೋಡಿಯ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ತರುಣ್ ಅವರ ಬಳಿ ದರ್ಶನ್ ಗಾಗಿ ಎರಡು ಕಥೆ ಇದೆ, ಕಾಟೇರ ಎಂಬ ಕಥೆಯೂ ಇದೆ. ನಿರ್ದೇಶಕರಿಗೆ ಯಾವುದು ಸೂಕ್ತವೋ ಮತ್ತು ದರ್ಶನ್ ಅವರು ಯಾವುದು ಆಯ್ಕೆ ಮಾಡ್ತಾರೋ ಅದನ್ನ ಸಿನಿಮಾ ಮಾಡ್ತೀವಿ ಎಂದು ಉಮಾಪತಿ ಹೇಳಿದ್ದಾರೆ.

  ಅಕ್ಟೋಬರ್ ನಲ್ಲಿ ಆರಂಭ

  ಅಕ್ಟೋಬರ್ ನಲ್ಲಿ ಆರಂಭ

  ದರ್ಶನ್-ಉಮಾಪತಿ-ತರುಣ್ ಸುಧೀರ್ ಜೋಡಿಯಲ್ಲಿ ಸಿನಿಮಾ ಮಾಡೋದು ಪಕ್ಕಾ. ಆದ್ರೆ, ಕಥೆಯೇನು, ಟೈಟಲ್ ಏನು, ನಾಯಕಿ ಯಾರು ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದ್ರೆ, ಸೆಪ್ಟಂಬರ್ ಅಥವಾ ಅಕ್ಟೋಬರ್ ನಲ್ಲಿ ಸಿನಿಮಾದ ಪೂಜೆ ನಡೆಯಲಿದ್ದು, ನವೆಂಬರ್ ವೊತ್ತಿಗೆ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದೆಯಂತೆ ಚಿತ್ರತಂಡ.

  English summary
  Actor Darshan and director Tarun Sudhir coming together for a film that Umapathy will be producing this project. movie starts on september end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X