For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶಾಲ ಹೃದಯವುಳ್ಳವರಂತೆ

  By Suneetha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ 'ಜಗ್ಗುದಾದ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಕೊನೆಯ ಹಂತದ ಶೂಟಿಂಗ್ ನಡೆಸುತ್ತಿರುವ ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ಚಿತ್ರದ ಕ್ಲೈಮ್ಯಾಕ್ಸ್ ತುಂಬಾ ಅಸಾಮಾನ್ಯವಾಗಿರುತ್ತದೆ ಎಂದು ನುಡಿದಿದ್ದಾರೆ.

  ಯಾವಾಗಲೂ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದ ದರ್ಶನ್ ಅವರು ಸ್ವಲ್ಪ ಚೇಂಜ್ ಇರಲಿ ಅಂತ 'ಜಗ್ಗುದಾದ' ಸಿನಿಮಾದಲ್ಲಿ ಕಂಪ್ಲೀಟ್ ಕಾಮಿಡಿ ರೋಲ್ ಮಾಡಿದ್ದಾರೆ. ಇವರ ಜೊತೆಗೆ ನಟ ಸೃಜನ್ ಲೋಕೇಶ್ ಅವರು ಕೂಡ ಮಿಂಚಿದ್ದಾರೆ.[ಚಿತ್ರಗಳು ; ಯಾರ ಮದುವೆಯಲ್ಲಿ ದರ್ಶನ್ ಕುಣಿದು ಕುಪ್ಪಳಿಸಿದ್ರು?]

  ಈಗಾಗಲೇ ಮದುವೆ ಸೆಟ್ ನಲ್ಲಿ ದರ್ಶನ್ ಅವರು ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿರುವ ಭಾಗದ ಶೂಟಿಂಗ್ ಮಾಡಿ ಮುಗಿಸಿರುವ ಚಿತ್ರತಂಡ ಇದೀಗ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡಲು ಎಲ್ಲಾ ತಯಾರಿ ನಡೆಸುತ್ತಿದೆ.[ದರ್ಶನ್ ಅಭಿಮಾನಿಗಳಿಗೆ 'ಜಗ್ಗುದಾದ' ಟೀಸರ್ ಗಿಫ್ಟ್]

  ಅಂದಹಾಗೆ ವಿಭಿನ್ನವಾಗಿ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡಬೇಕೆಂದು ಪ್ಲ್ಯಾನ್ ಮಾಡಿರುವ ನಿರ್ದೇಶಕ ರಾಘವೇಂದ್ರ ಅವರ 'ಜಗ್ಗುದಾದ' ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...

  ಹಾಸ್ಯಮಯ ಕ್ಲೈಮ್ಯಾಕ್ಸ್

  ಹಾಸ್ಯಮಯ ಕ್ಲೈಮ್ಯಾಕ್ಸ್

  ಪಕ್ಕಾ ರೊಮ್ಯಾಂಟಿಕ್ ಹಾಗೂ ಹಾಸ್ಯಮಯ ಸಿನಿಮಾ ಆಗಿರುವ 'ಜಗ್ಗುದಾದ' ಚಿತ್ರಕ್ಕೆ ನಗು ಉಕ್ಕಿಸುವ ಆಕ್ಷನ್ ದೃಶ್ಯಗಳುಳ್ಳ ಹಾಸ್ಯಮಯ ಕ್ಲೈಮ್ಯಾಕ್ಸ್ ಮಾಡಲಾಗಿದೆ.[ಗೋವಾದಲ್ಲಿ ಠಿಕಾಣಿ ಹೂಡಿದ ದರ್ಶನ್ ಮತ್ತು ಬಳಗ]

  ಇಡೀ ತಾರಾಗಣ ಕ್ಲೈಮ್ಯಾಕ್ಸ್ ನಲ್ಲಿರುತ್ತದೆ

  ಇಡೀ ತಾರಾಗಣ ಕ್ಲೈಮ್ಯಾಕ್ಸ್ ನಲ್ಲಿರುತ್ತದೆ

  'ಜಗ್ಗುದಾದ' ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಚಿತ್ರದ ಇಡೀ ತಾರಾಗಣ ಭಾಗವಹಿಸಲಿದೆ. ನಟ ದರ್ಶನ್, ನಾಯಕ ನಟಿ ದೀಕ್ಷಾ ಸೇಠ್, ಊರ್ವಶಿ, ಅನಂತ್ ನಾಗ್, ಅಚ್ಯುತ್ ಕುಮಾರ್, ಬುಲೆಟ್ ಪ್ರಕಾಶ್, ಸೃಜನ್ ಲೋಕೇಶ್ ಮತ್ತು ರವಿಶಂಕರ್ ಮುಂತಾದವರು ಚಿತ್ರದ ಕ್ಲೈಮ್ಯಾಕ್ಸ್ ಭಾಗಿಯಾಗುತ್ತಾರೆ.

  ಎಪ್ರಿಲ್ 10ರೊಳಗೆ ಶೂಟಿಂಗ್ ಕಂಪ್ಲೀಟ್

  ಎಪ್ರಿಲ್ 10ರೊಳಗೆ ಶೂಟಿಂಗ್ ಕಂಪ್ಲೀಟ್

  ಸದ್ಯಕ್ಕೆ ಅಚ್ಯುತ್ ಕುಮಾರ್ ಮತ್ತು ದರ್ಶನ್ ಅವರು ಒಟ್ಟಿಗೆ ನಟಿಸುತ್ತಿರುವ ಭಾಗದ ಶೂಟಿಂಗ್ ನಲ್ಲಿ ಚಿತ್ರತಂಡ ನಿರತರಾಗಿದ್ದು, ಚಿತ್ರದ ಕ್ಲೈಮ್ಯಾಕ್ಸ್ ಮಾರ್ಚ್ 21 ರಿಂದ 26ರೊಳಗಾಗಿ ಬಿಡದಿಯಲ್ಲಿ ಚಿತ್ರೀಕರಣ ನಡೆಸಲಿದೆ. ಇನ್ನುಳಿದಂತೆ ಎಪ್ರಿಲ್ 10ರೊಳಗಾಗಿ ಇಡೀ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  ನಿರ್ದೇಶಕರ ಮಾತು

  ನಿರ್ದೇಶಕರ ಮಾತು

  ನಿರ್ದೇಶಕ ರಾಘವೇಂದ್ರ ಹೆಗಡೆ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, 'ಮುಂಬೈನಿಂದ ಬಂದು ದೊಡ್ಡ ಸಿನಿಮಾವನ್ನು ನಿರ್ದೇಶನ ಮಾಡಬೇಕೆನ್ನುವ ನನ್ನ ಕನಸು ದರ್ಶನ್ ಅವರಿಂದ ನನಸಾಗುತ್ತಿದೆ. ಹೊಸ ನಿರ್ದೇಶಕರ ಬಳಿ ಸಿನಿಮಾ ಮಾಡಲು ಸಾಮಾನ್ಯವಾಗಿ ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ. ಅದರಲ್ಲೂ ಸ್ಟಾರ್ ನಟರಂತೂ ಬಿಲ್ ಕುಲ್ ಒಪ್ಪಲ್ಲ. ಎಂದು ನಿರ್ದೇಶಕರು ಮನಸ್ಸಿನ ಮಾತಾಡಿದ್ದಾರೆ.

  ದರ್ಶನ್ ಅವರು ವಿಶಾಲ ಹೃದಯಿ

  ದರ್ಶನ್ ಅವರು ವಿಶಾಲ ಹೃದಯಿ

  'ಎಷ್ಟೋ ಜನಕ್ಕೆ ತಿಳಿಯದ ದರ್ಶನ್ ಅವರ ಮಾನವೀಯ ಗುಣಗಳನ್ನು ನಾನು ತೆರೆಯ ಹಿಂದೆ ಕಂಡಿದ್ದೇನೆ. ಇಲ್ಲಿಯವರೆಗೂ ಸುಮಾರು 3 ಫೈಟ್ ಗಳನ್ನು ನಿರ್ದೇಶನ ಮಾಡಿದ್ದೇನೆ. ಈ ಸಾಹಸಮಯ ದೃಶ್ಯಗಳಲ್ಲಿ ಪಾಲ್ಗೊಂಡು ಎದ್ದವರಿಗೆ, ಬಿದ್ದವರಿಗೆ, ಹೊಡೆಸಿಕೊಂಡವರಿಗೆ, ಪೆಟ್ಟು ಮಾಡಿಕೊಂಡವರಿಗೆ ಪ್ರತೀ ದಿನವು ನಗದು ಹಣ ಸಿಗುವಂತೆ ಅವರು ನೋಡಿಕೊಳ್ಳುತ್ತಿದ್ದರು'. ಎಂದು ನಿರ್ದೇಶಕ ರಾಘವೇಂದ್ರ ನುಡಿದಿದ್ದಾರೆ.

  50 ಸಾವಿರ ಕೊಟ್ಟ ದರ್ಶನ್

  50 ಸಾವಿರ ಕೊಟ್ಟ ದರ್ಶನ್

  'ಒಂದು ಮದುವೆ ದೃಶ್ಯಕ್ಕೆ ಚೆನ್ನೈನಿಂದ 55 ವರ್ಷಕ್ಕೂ ಮೇಲ್ಪಟ್ಟ ಸುಮಾರು 20 ಮಹಿಳೆಯರು ಹಾಗೂ ಪುರುಷರು ಬಂದಿದ್ದರು. ಅವರ ಉತ್ಸಾಹ ನೋಡಿ ದರ್ಶನ್ ಅವರು ಸ್ವತಃ ತಮ್ಮ ಕೈಯಿಂದ ಸುಮಾರು 50 ಸಾವಿರ ನಗದು ನೀಡಿದ್ದಾರೆ' ಎಂದು ರಾಘವೇಂದ್ರ ದರ್ಶನ್ ಅವರ ಉದಾರತೆಯನ್ನು ಸ್ಮರಿಸಿಕೊಂಡಿದ್ದಾರೆ.

  ಮೇಕಿಂಗ್ ವಿಡಿಯೋ ನೋಡಿ

  ದರ್ಶನ್ ಅವರು ಭಾರಿ ಮದುವೆ ಸೆಟ್ ನಲ್ಲಿ ಸೃಜನ್ ಲೋಕೇಶ್ ಮತ್ತು ನಟಿ ದೀಕ್ಷಾ ಅವರ ಜೊತೆ ಸಖತ್ತಾಗಿ ಡ್ಯಾನ್ಸ್ ಮಾಡಿದ್ದಾರೆ. ಆ ಹಾಡಿನ ಮೇಕಿಂಗ್ ತುಣುಕುಗಳು ನಮಗೆ ದೊರೆತಿದ್ದು, ವಿಡಿಯೋ ಝಲಕ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

  English summary
  Unusual Climax for Darshan's Kannada Movie 'Jaggu Dada'. Kannada Actor Darshan, Actress Deeksha Seth in the lead role. The Movie is directed By Raghavendra Hegde.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X