»   » ಬೇಸಿಗೆ ರಜೆಗೆ ಬರುತ್ತಿವೆ ಭರ್ಜರಿ ಸ್ಟಾರ್ ಸಿನಿಮಾಗಳು

ಬೇಸಿಗೆ ರಜೆಗೆ ಬರುತ್ತಿವೆ ಭರ್ಜರಿ ಸ್ಟಾರ್ ಸಿನಿಮಾಗಳು

Posted By: ಜೀವನರಸಿಕ
Subscribe to Filmibeat Kannada

ಈ ವರ್ಷ ಸ್ಯಾಂಡಲ್ ವುಡ್ ಸಿನಿ ಪ್ರೇಮಿಗಳು ರಜೆಯನ್ನ ಮಜವಾಗಿ ಕಳೆಯಬಹುದು. ಮಾರ್ಚ್ನಿಂದ ಶುರುವಾಗಲಿರೋ ಸ್ಟಾರ್ ಸಿನಿಮಾಗಳು ವಾರಕ್ಕೊಂದರಂತೆ ನಿಮ್ಮ ಬೇಸಿಗೆ ರಜೆಯನ್ನ ತಂಪಾಗಿಸಲಿವೆ.

ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ಗಳ ಸಿನಿಮಾಗಳು ಈ ಮಾರ್ಚ್-ಏಪ್ರಿಲ್-ಮೇ ತಿಂಗಳಲ್ಲಿ ಧರೆಗಿಳಿಯ ಚಂದ್ರನಂತೆ ಸುಂದರವಾಗಿ ಬೆಳ್ಳಿತೆರೆಗಿಳಿಯಲಿವೆ. ಹಾಗೆ ನೋಡಿದ್ರೆ ಮಾರ್ಚ್ನಲ್ಲಿ ವರ್ಲ್ಡ್ ಕಪ್ ಇದ್ರೆ ಏಪ್ರಿಲ್ ನಲ್ಲಿ ಐಪಿಎಲ್ ಇದೆ.

ಆದರೆ ಕಳೆದ ವರ್ಷದಿಂದೀಚೆಗೆ ಐಪಿಎಲ್ ಅಷ್ಟಾಗಿ ಕುತೂಹಲ ಕೆರಳಿಸದೇ ಇರೋದು ಸಿನಿಮಾ ಮಂದಿಯ ಮುಖದಲ್ಲಿ ಮಂದಹಾಸ ಮೂಡಿಸಿದೆ. ಅದ್ರಲ್ಲೂ ಬೆಂಗಳೂರು ತಂಡದಲ್ಲಿ ಹೆಸರಿಗೊಂದು ಬೆಂಗಳೂರಿನ ಮಾತ್ರ ಇದ್ದು, ಎಲ್ಲ ಆಟಗಾರರು ಬೇರೆ ರಾಜ್ಯ ಮತ್ತು ವಿದೇಶಿಯರಾಗಿರೋದ್ರಿಂದ ಕರ್ನಾಟಕ ಕ್ರಿಕೆಟ್ ಪ್ರೇಮಿಗಳು ಬೆಂಗಳೂರು ಪಂದ್ಯಗಳನ್ನೂ ಬೆಂಬಲಿಸುತ್ತಿಲ್ಲ ಅನ್ನೋದು ಸಿನಿಮಾಗಳಿಗೆ ಪ್ಲಸ್ ಪಾಯಿಂಟ್ ಆಗ್ತಿದೆ.

ಇಂತಹಾ ಹಲವು ಕಾರಣಗಳಿದ್ರೂ ಈ ಬಾರಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳ ಸಿನಿಮಾಗಳು ಪ್ರತೀವಾರವೂ ಸ್ಪರ್ಧೆಗಿಳಿಯೋದು ಖಚಿತ. ಇದ್ರಿಂದ ಪ್ರತಿಯೊಬ್ಬರಿಗೂ ತಮ್ಮ ಮೆಚ್ಚಿನ ನಟ ನಟಿಯರ ಸಿನಿಮಾವನ್ನ ರಜೆ ಸಮಯದಲ್ಲಿ ಸವಿಯೋ ಅವಕಾಶ ಸಿಗ್ತಿದೆ. ರಜಾ ತಿಂಗಳ ರಸಮಯ ಸಿನಿಮಾಗಳ ಲಿಸ್ಟ್ ಸ್ಲೈಡ್ ನಲ್ಲಿ.

ಮೈತ್ರಿ

ಪವರ್ ಸ್ಟಾರ್ ಪುನೀತ್, ಮಲೆಯಾಳಂನ ಪರಿಪೂರ್ಣ ನಟ ಖ್ಯಾತಿಯ ಸೂಪರ್ ಸ್ಟಾರ್ ಮೋಹನ್ ಲಾಲ್ ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ ಸಂಗೀತ ಮಾತ್ರಿಕ ಇಳೆಯರಾಜ ಮೈತ್ರಿಯ ಅಪೂರ್ವ ಚಿತ್ರ 'ಮೈತ್ರಿ' ಇದೇ ಫೆಬ್ರವರಿ 20ರಂದು ತೆರೆಗೆ ಬರ್ತಿದೆ.

ರುದ್ರತಾಂಡವ

ರಾಜಾಹುಲಿ ನಿರ್ದೇಶಕ ಗುರುದೇಶಪಾಂಡೆ ನಿರ್ದೇಶನದ ಚಿರು-ರಾಧಿಕಾ ಕುಮಾರಸ್ವಾಮಿ ಜೋಡಿಯ ಚಿತ್ರ ರುದ್ರತಾಂಡವ. ತಮಿಳಿನ ಪಾಂಡಿಯನಾಡು ಚಿತ್ರದ ರೀಮೇಕ್ ಆಗಿರೋ ಈ ಮಾಸ್ ಧಮಾಕಾ ಇದೇ ಫೆಬ್ರವರಿ ತಿಂಗಳ ಕೊನೆಯವಾರ ತೆರೆಗಪ್ಪಳಿಸಲಿದೆ.

ವಾಸ್ತುಪ್ರಕಾರ

ವಿಭಿನ್ನ ವಿಶೇಷ ಸಿನಿಮಾಗಳನ್ನ ಸದಾ ತೆರೆದಿಡೋ ಭಟ್ರ ಸಿನಿಮಾ ಮಾರ್ಚ್ ಮೊದಲ ವಾರದಲ್ಲಿ ತೆರೆಗಪ್ಪಳಿಸೋಕೆ ತಯಾರಿ ಮಾಡಿಕೊಳ್ತಿದ್ದು ಭಾರೀ ನಿರೀಕ್ಷೆ ಮೂಡಿಸಿರೋ ಚಿತ್ರದಲ್ಲಿ ನವರಸನಾಯಕ ಜಗ್ಗೇಶ್-ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಾಂಬಿನೇಷನ್ ಗಮನ ಸೆಳೆಯಲಿದೆ.

ಕೃಷ್ಣಲೀಲಾ

ಶಶಾಂಕ್-ಅಜೆಯ್ ರಾವ್ ಕಾಂಬಿನೇಷನ್ ಅಂದ್ರೆ ಒಂದು ಹಿಟ್ ಸಿನಿಮಾ ಪಕ್ಕಾ ಅನ್ನೋದು ಬಹುತೇಕರ ನಿರೀಕ್ಷೆ. ಅದ್ರಲ್ಲೂ ಮೊದಲ ಬಾರಿ ಅಜೇಯ್ ರಾವ್ ಪ್ರೊಡಕ್ಷನ್ ನಲ್ಲಿ ಕೃಷ್ಣಲೀಲಾ ಮಾರ್ಚ್ನಲ್ಲಿ ತೆರೆಗಪ್ಪಳಿಸಲಿದೆ.

ದಕ್ಷ

ಕಲಾಸಾಮ್ರಾಟ್ ಎಸ್ ನಾರಾಯಣ ನಟ ದುನಿಯಾ ವಿಜಯ್ ಮತ್ತೆ ಒಂದಾಗಿರೋ ಒಂದೇ ಟೇಕ್ ನಲ್ಲಿ ಮುಗಿಸಿರೋ ದಾಖಲೆಯ ಚಿತ್ರ ದಕ್ಷ. ದಕ್ಷ ಬಿಡುಗಡೆ ಕೂಡ ಮಾರ್ಚ್ನಲ್ಲಿ ನಡೆಯಲಿದ್ದು ವಿಜಿ ಅಭಿಮಾನಿಗಳಿಗೆ, ಆಕ್ಷನ್ ಪ್ರೇಮಿಗಳಿಗೆ ಹಬ್ಬದೂಟ.

ರನ್ನ

ಮಾಣಿಕ್ಯ ಗೆಲುವಿನ ನಂತರ ಅಭಿಮಾನಿಗಳು ಕಿಚ್ಚ ಸುದೀಪ್ ರನ್ನ ನೋಡೋಕೆ ಕಾದಿದ್ದಾರೆ. ನಂದಕಿಶೋರ್ ನಿರ್ದೇಶನದ 'ರನ್ನ' ಚಿತ್ರ ಏಪ್ರಿಲ್ ವೇಳೆಗೆ ತೆರೆಗೆ ಬರೋದು ಪಕ್ಕಾ ರಜಾ ಸಮಯವನ್ನ ಮಜವಾಗಿ ಕಳೆಯೋಕೆ ಫ್ಯಾಮಿಲಿ ಎಂಟರ್ಟೈನರ್ ರನ್ನ ತೆರೆಗಪ್ಪಳಿಸಲಿದೆ.

ಬುಗುರಿ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 25ನೇ ಚಿತ್ರ ಅಂದಮೇಲೆ ನಿರೀಕ್ಷೆಗಳು ಸಿಕ್ಕಾಪಟ್ಟೆ ಇವೆ. ಇನ್ನು ಗಣೇಶ್ ರ ಮೊದಲ ಸಿನಿಮಾ ಮಾಡಿದ್ದ ನಿರ್ದೇಶಕ ಎಂ ಡಿ ಶ್ರೀಧರ್ ಅವರೇ 25ನೇ ಸಿನಿಮಾಗೂ ಆಕ್ಷನ್ ಕಟ್ ಹೇಳ್ತಿದ್ದಾರೆ. ಇಲ್ಲಿ ಗಣೇಶ್ ಗೆ ಎರಿಕಾ ಫರ್ನಾಂಡೀಸ್ ಜೋಡಿ. ಚಿತ್ರ ಏಪ್ರಿಲ್ ಮಧ್ಯದಲ್ಲಿ ತೆರೆಗಪ್ಪಳಿಸೋದು ಪಕ್ಕಾ.

ವಜ್ರಕಾಯ

ಭಜರಂಗಿ ಜೋಡಿ ಶಿವಣ್ಣ-ನಿರ್ದೆಶಕ ಹರ್ಷ ಕಾಂಬಿನೇಷನ್ ಏಪ್ರಿಲ್ ನಲ್ಲಿ ಅಬ್ಬರಿಸೋಕೆ ತಯಾರಿ ಮಾಡಿಕೊಳ್ತಿದೆ. ತಮಿಳು ತೆಲುಗು ಮಲೆಯಾಳಂನ ಸೂಪರ್ ಸ್ಟಾರ್ ಗಳು ಸ್ಟೆಪ್ ಹಾಕಿರೋ ವಜ್ರಕಾಯ ಸಹಜವಾಗೀನೇ ಮತ್ತೊಂದು ಬಹುನಿರೀಕ್ಷಿತ ಚಿತ್ರವಾಗಿ ಏಪ್ರಿಲ್ ಕೊನೆಗೆ ತೆರೆಗೆ ಬರಲಿದೆ ಅಂತಾರೆ ನಿರ್ದೇಶಕ ಹರ್ಷ.

ಐರಾವತ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಐರಾವತ' ಈಗ ಚಿತ್ರೀಕರಣದ ನಂತರದ ಕೆಲಸಗಳಲ್ಲಿದ್ದು ಚಿತ್ರವನ್ನ ಅದ್ಧೂರಿಯಾಗಿ ತರೋಕೆ ನಿರ್ದೇಶಕ ಅರ್ಜುನ್ ತಯಾರಿ ಮಾಡಿಕೊಳ್ತಿದ್ದಾರೆ. ದರ್ಶನ್-ಎರಿಕಾ ಫರ್ನಾಂಡೀಸ್ ಜೋಡಿಯ ಚಿತ್ರ ಏಪ್ರಿಲ್ ಕೊನೆಗೆ ಅಥವಾ ಮೇನಲ್ಲಿ ತೆರೆಗಪ್ಪಳಿಸೋ ನಿರೀಕ್ಷೆಯಿದೆ.

ರಣವಿಕ್ರಮ

ಪವರ್ ಸ್ಟಾರ್ ಪುನೀತ್ ರ 'ರಣವಿಕ್ರಮ' ಚಿತ್ರ ಈ ವರ್ಷದ ಬಹುನಿರೀಕ್ಷಿತ ಚಿತ್ರ. ಪೊಲೀಸ್ ಅಧಿಕಾರಿಯಾಗಿ ಪುನೀತ್ ಅಭಿನಯಿಸಿರೋ ಪವನ್ ಒಡೆಯರ್ ನಿರ್ದೇಶನದ ಚಿತ್ರ ಗ್ರಾಫಿಕ್ಸ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸದ ಹಂತದಲ್ಲಿದ್ದು ಮೈತ್ರಿ ತೆರೆಗೆ ಬಂದು ಎರಡು ತಿಂಗಳ ನಂತ್ರ ತೆರೆ ಕಾಣೋ ಯೋಚನೆ ಹಾಕಿಕೊಂಡಿದೆ.

ಏಪ್ರಿಲ್ ಮೇ ವೇಳೆಗೆ ಮಳೆಗಾಲ

ಮೇ ಕೊನೆಯ ವೇಳೆಗೆ ಬೆಂಗಳೂರಲ್ಲಿ ಮಳೆಗಾಲ ಶುರುವಾಗೋ ಹಾಗೇ ಪ್ರೇಮ್-ಅಮೂಲ್ಯ ಜೋಡಿಯ ಮಳೆ ಚಿತ್ರ ಕೂಡ ಮಳೆಯ ಹತ್ತಿರಕ್ಕೆ ಅಂದ್ರೆ ಮೇ ತಿಂಗಳಲ್ಲಿ ತೆರೆಗೆ ಬರೋದು ಗ್ಯಾರಂಟಿ. ಆದ್ರೆ ಮಳೆ ಆಡಿಯೋ ರಿಲೀಸ್ ಇತ್ತೀಚೆಗೆ ನಡೆದಿದ್ದು ಏಪ್ರಿಲ್ ವೇಳೆಗೇ ಮಳೆ ಬಂದ್ರೂ ಅಚ್ಚರಿಯಿಲ್ಲ.

English summary
The year 2015 looks like a great for Sandalwood buffs. Get ready to be spoilt for choice with as many as 12 big-budget movies coming your way. Breaking the norm, filmmakers are so sure of their offerings that they are unperturbed by something as big as the Cricket World Cup competing for audience attention.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada