»   » ಉಪೇಂದ್ರ 'ಬಸವಣ್ಣ', ಕೈಯಲ್ಲಿ ಖಡ್ಗ ಯಾಕಣ್ಣಾ?

ಉಪೇಂದ್ರ 'ಬಸವಣ್ಣ', ಕೈಯಲ್ಲಿ ಖಡ್ಗ ಯಾಕಣ್ಣಾ?

Posted By:
Subscribe to Filmibeat Kannada

ಶೂಟಿಂಗೂ ಮುನ್ನವೇ ಭಾರಿ ವಿವಾದ ಸೃಷ್ಟಿಸಿರುವ ಹಾಗೂ ಸದ್ದು ಮಾಡಿರುವ ಚಿತ್ರ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಬಸವಣ್ಣ'. ಇದೇ ಸೋಮವಾರದಿಂದ (ಜು.15) 'ಬಸವಣ್ಣ' ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಿದೆ. 'ದಂಡುಪಾಳ್ಯ' ಖ್ಯಾತಿಯ ಶ್ರೀನಿವಾಸರಾಜು ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಚಿತ್ರವಿದು.

ಅವರ ದಂಡುಪಾಳ್ಯ ಚಿತ್ರವೂ ಪೂಜಾಗಾಂಧಿ ಅವರ ದುಂಡಗಿನ ಪೋಸ್ಟರ್ ಗಳ ಕಾರಣ ಕೊಂಚ ವಿವಾದ ಎಬ್ಬಿಸಿತ್ತು. ಈಗ ಬಸವಣ್ಣ ಚಿತ್ರದ ಪೋಸ್ಟರ್ ಗಳು ಹೊಸ ಚರ್ಚೆಗೆ ಹಾಗೂ ವಿವಾದಕ್ಕೆ ನಾಂದಿ ಹಾಡಿವೆ. ಈ ಹಿಂದೆ ಬಸವಣ್ಣ ಶೀರ್ಷಿಕೆ ಜೊತೆ ಗನ್ ಇಟ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರು ಶ್ರೀನಿವಾಸರಾಜು.

ಈಗ ಚಿತ್ರದ ಎರಡನೇ ಫೋಟೋಶೂಟ್ ಚಿತ್ರಗಳನ್ನು ಶ್ರೀನಿವಾಸರಾಜು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದಾರೆ. ಬಸವಣ್ಣ ಚಿತ್ರದ ಎರಡು ಲೇಟೆಸ್ಟ್ ಪೋಸ್ಟರ್ ಗಳಲ್ಲಿ ಉಪೇಂದ್ರ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆಲ್ಲಾ ಉಪ್ಪಿ ಅವರು ಉದ್ದಕ್ಕೆ ಕೂದಲು ಬಿಟ್ಟು ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೈಯಲ್ಲಿ ರಕ್ತಸಿಕ್ತ ಖಡ್ಗ, ಜನಿವಾರ, ಹಣೆ ಹಾಗೂ ಕೈ ಮೇಲೆ ವಿಭೂತಿ ಪಟ್ಟೆಗಳು, ಕಡುಗೆಂಪು ಕಚ್ಚೆಪಂಚೆ ಗೆಟಪ್ ನಲ್ಲಿ ಗಮನಸೆಳೆದಿದ್ದಾರೆ.

ಹೈದರಾಬಾದಿನ ಕಾಸ್ಟ್ಯೂಮ್ ಡಿಸೈನರ್ ಪರಿಕಲ್ಪನೆ

ಹೈದರಾಬಾದಿನ ಕಾಸ್ಟ್ಯೂಮ್ ಡಿಸೈನರ್ ಬಾಬಿ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ವಿನ್ಯಾಸ ಇದಾಗಿದೆ. ವಾರದ ಹಿಂದೆಯೇ ಈ ಈ ಗೆಟಪ್ ನಲ್ಲಿ ಉಪ್ಪಿ ಫೋಟೋ ಶೂಟಿ ನಡೆದಿದೆಯಂತೆ. ಈಗ ಪೋಸ್ಟರ್ ಗಳು ಬಿಡುಗಡೆಯಾಗಿವೆ.

ಜಗಜ್ಯೋತಿ ಬಸವೇಶ್ವರರ ಜೀವನ ಚರಿತ್ರೆಗೆ ಸಂಬಂಧವಿಲ್ಲ

ತಮ್ಮ ಚಿತ್ರಕ್ಕೂ 12ನೇ ಶತಮಾನದ ಜಗಜ್ಯೋತಿ ಬಸವೇಶ್ವರರ ಜೀವನ ಚರಿತ್ರೆಗೂ ಸಂಬಂಧವಿಲ್ಲ. ತಮ್ಮ ಚಿತ್ರದ ಹೀರೋ ಈಗಿರುತ್ತಾನೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ. 'ಬಸವಣ್ಣ' ಚಿತ್ರದ ಫಸ್ಟ್ ಲುಕ್ ಬಸವ ಜಯಂತಿ (ಮೇ.13) ದಿನವೇ ಬಿಡುಗಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಶ್ರೀನಿವಾಸರಾಜು ಹೇಳುವುದೇನೆಂದರೆ...

ಶ್ರೀನಿವಾಸರಾಜು ಹೇಳುವುದೇನೆಂದರೆ... ಚಿತ್ರದ ಪೋಸ್ಟರ್ ಗಳನ್ನು ನೋಡಿ ಬಸವಣ್ಣನವರಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಚಿತ್ರ ಬಿಡುಗಡೆ ಆದ ಮೇಲೆ ವಿವಾದಿತ ಸನ್ನಿವೇಶಗಳಿದ್ದರೆ ಆಗ ಮಾತನಾಡಿ. ಈಗಲೇ ಚಿತ್ರಕಥೆ ಬಗ್ಗೆ ಮಾತನಾಡುವುದು ಬೇಡ ಎನ್ನುತ್ತಾರೆ.

ಖಡ್ಗ ಇದ್ದ ಮಾತ್ರಕ್ಕೆ ಯಾಕೆ ತಪ್ಪಾಗಿ ಕಾಣಬೇಕು?

ಚಿತ್ರದಲ್ಲಿ ಗನ್, ಖಡ್ಗ ಇದ್ದ ಮಾತ್ರಕ್ಕೆ ಯಾಕೆ ತಪ್ಪಾಗಿ ಕಾಣಬೇಕು. ಚಿತ್ರದ ಫಸ್ಟ್, ಸೆಕೆಂಡ್ ಲುಕ್ ನೋಡಿ ಜಡ್ಜ್ ಮಾಡಬೇಡಿ. ಚಿತ್ರ ರಿಲೀಸ್ ಆಗಲಿ. ಆಗ ವಿವಾದಾತ್ಮಕ ಅನ್ನಿಸಿದರೆ ಆಗ ಮಾತನಾಡೋಣ ಎಂದಿದ್ದಾರೆ.

ಶಿವ, ಗಣೇಶ, ಕೃಷ್ಣನ ಕೈಗೆ ಗನ್ ಮಚ್ಚು ಕೊಟ್ಟಿಲ್ಲವೇ?

ಶಿವ, ಗಣೇಶ, ಕೃಷ್ಣ ಎಂದಿಟ್ಟು ಅಲ್ಲೂ ಗನ್ ಮಚ್ಚು ಲಾಂಗು ಕೊಡಲ್ಲವೇ? ಹಾಗಂತ ಆ ಚಿತ್ರಗಳೆಲ್ಲವನ್ನೂ ತಪ್ಪು ಎಂದು ಹೇಳಕ್ಕಾಗುತ್ತದೆಯೇ ಎಂಬುದು ಶ್ರೀನಿವಾಸರಾಜು ಅವರ ವಿವರಣೆ.

English summary
Here is the second look of Dandupalya Director Srinivas Raju's movie 'Basavanna' with Real Star Upendra. The director again shows Uppi in different getup, it will becomes debatable. But the director clarifies, the movie is not about social reformer Bhakti Bhandari Basavanna. Details of cast and crew will be out pretty soon.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada