For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ-ಪ್ರಿಯಾಂಕಾ ದಂಪತಿಗೆ 17ನೇ ವರ್ಷ ವಿವಾಹ ವಾರ್ಷಿಕೋತ್ಸವ

  |

  ಸ್ಯಾಂಡಲ್‌ವುಡ್ ತಾರಾ ಜೋಡಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿ 17ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.

  ವಿಷ್ಣುವರ್ಧನ್-ಭಾರತಿ, ಅಂಬರೀಶ್-ಸುಮಲತಾ ನಂತರ ಕನ್ನಡ ಚಿತ್ರರಂಗದ ಮಾದರಿ ತಾರಾಜೋಡಿ ಎಂದು ಗುರುತಿಸಿಕೊಂಡಿರುವ ಉಪ್ಪಿ-ಪ್ರಿಯಾಂಕಾ ಜೋಡಿ 17 ವಸಂತಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ಚಿತ್ರ ಪ್ರೇಮಿಗಳು ಉಪ್ಪಿ-ಪ್ರಿಯಾಂಕಾಗೆ ಶುಭಹಾರೈಸಿದ್ದಾರೆ.

  '1980'ಕ್ಕೆ ವಾಪಸ್ ಹೋಗುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ'1980'ಕ್ಕೆ ವಾಪಸ್ ಹೋಗುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ

  2003ರಲ್ಲಿ ಮದುವೆಯಾದ ಈ ತಾರಾಜೋಡಿ ಕಷ್ಟ-ಸುಖವನ್ನ ಸಮನಾಗಿ ಸ್ವೀಕರಿಸಿ, 17 ವರ್ಷಗಳು ಯಶಸ್ವಿಯಾಗಿ ಪೂರೈಸಿದೆ. ಅಂದ್ಹಾಗೆ, ಉಪ್ಪಿ-ಪ್ರಿಯಾಂಕ ದಂಪತಿಗೆ ಆಯುಶ್-ಐಶ್ವರ್ಯ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

  ಪ್ರಜಾಕೀಯದ ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರುವ ಉಪೇಂದ್ರ ಕಬ್ಜ ಎಂಬ ಮೆಗಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆರ್ ಚಂದ್ರು ನಿರ್ದೇಶನದ ಈ ಚಿತ್ರ ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

  ಪ್ರಿಯಾಂಕಾ ಉಪೇಂದ್ರ ಕೈಯಲ್ಲಿ ಲಾಂಗ್ ಕೊಟ್ಟ ನಿರ್ದೇಶಕಪ್ರಿಯಾಂಕಾ ಉಪೇಂದ್ರ ಕೈಯಲ್ಲಿ ಲಾಂಗ್ ಕೊಟ್ಟ ನಿರ್ದೇಶಕ

  ಮತ್ತೊಂದೆಡೆ ಪ್ರಿಯಾಂಕಾ ಉಪೇಂದ್ರ ಸಹ ಸತತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಉಗ್ರಾವತಾರ, ಸೆಂಟ್ ಮಾರ್ಕ್ಸ್ ರೋಡ್, ಖೈಮೆರಾ, 1980 ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಉಪ್ಪು-ಪ್ರಿಯಾಂಕಾ ಸಿನಿಮಾಗಳು

  ಕರ್ನಾಟಕ: ಸರ್ಕಾರ, ಸಾರಿಗೆ ನೌಕರರ ನಡುವಿನ ಹಗ್ಗಜಗ್ಗಾಟ ಅಂತ್ಯ..! | Oneindia Kannada

  ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರು ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. ತೆಲುಗಿನ 'ರಾ' ಸೇರಿದಂತೆ 2002 ರಲ್ಲಿ ತೆರೆಕಂಡ 'ಹೆಚ್2ಓ' ಹಾಗೂ 2011 ರಲ್ಲಿ ಬಿಡುಗಡೆಯಾದ 'ಶ್ರೀಮತಿ' ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ.

  English summary
  Real star Upendra and Priyanka celebrate their 17th Wedding Anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X