»   » ಉಪೇಂದ್ರ ಚಿತ್ರದಲ್ಲಿ ಚೊಚ್ಚಲ ಬಾರಿಗೆ ರಚಿತಾ ರಾಮ್

ಉಪೇಂದ್ರ ಚಿತ್ರದಲ್ಲಿ ಚೊಚ್ಚಲ ಬಾರಿಗೆ ರಚಿತಾ ರಾಮ್

Written By:
Subscribe to Filmibeat Kannada

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ಬುಲ್ ಬುಲ್ ರಚಿತಾ ರಾಮ್, ಉಪೇಂದ್ರ ಅವರ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಸಲಿದ್ದು, ನಿರೀಕ್ಷೆ ಹುಟ್ಟಿಕೊಂಡಿದೆ.[ಉಪೇಂದ್ರ ಅವರ 50ನೇ ಚಿತ್ರಕ್ಕೆ 'ಆಕ್ಷನ್-ಕಟ್' ಯಾರದ್ದು? ]

ಸದ್ಯ, ಈ ಹೊಸ ಚಿತ್ರದ ಸ್ಕ್ರಿಪ್ಟ್‌ ವರ್ಕ್ ಮುಗಿದಿದ್ದು, ಇಷ್ಟರಲ್ಲೇ ಮುಹೂರ್ತ ಕೂಡ ನೆರೆವೇರಲಿದೆಯಂತೆ. ಕೆ ಮಾದೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಕಾಮನ್ ಮ್ಯಾನ್ ಆಗಿ ಮಿಂಚಲಿದ್ದಾರೆ.

ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಉಪ್ಪಿ

''ಉಪೇಂದ್ರ, ಮತ್ತೆ ಹುಟ್ಟಿ ಬಾ'', ಚಿತ್ರದ ಶೂಟಿಂಗ್ ಮುಗಿಸಿರುವ ಉಪ್ಪಿ, ಸದ್ಯ, 'ಕನ್ನೇಶ್ವರ' ಚಿತ್ರವನ್ನ ಶುರು ಮಾಡಲಿದ್ದಾರೆ. ಅದಾದ ನಂತರ ಶಶಾಂಕ್ ಹಾಗೂ ಮಂಜು ಮಾಂಡವ್ಯ ಅವರ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಈ ಮಧ್ಯೆ ಮತ್ತೊಂದು ಹೊಸ ಚಿತ್ರಕ್ಕೆ ಓಕೆ ಅಂದಿದ್ದಾರೆ ರಿಯಲ್ ಸ್ಟಾರ್.[ಉಪೇಂದ್ರಗೆ ಆಕ್ಷನ್ ಕಟ್ ಹೇಳಲಿದ್ದಾರೆ 'ಮುಂಗಾರು ಮಳೆ' ನಿರ್ದೇಶಕ]

ಕೆ ಮಾದೇಶ್ ಆಕ್ಷನ್ ಕಟ್

ಕನ್ನಡದ ಖ್ಯಾತ ನಿರ್ದೇಶಕ ಕೆ ಮಾದೇಶ್, ಉಪೇಂದ್ರ ಅವರ ಹೊಸ ಚಿತ್ರಕ್ಕೆ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ, ಚಿಕ್ಕಣ್ಣ-ಶರಣ್ ಅಭಿನಯದ 'ರಾಜ್-ವಿಷ್ಣು' ಚಿತ್ರವನ್ನ ಮಾದೇಶ್ ನಿರ್ದೇಶನ ಮಾಡುತ್ತಿದ್ದಾರೆ.

ಉಪ್ಪಿ ಜೊತೆ ರಚಿತಾ ರಾಮ್

ಇದೇ ಮೊದಲ ಬಾರಿಗೆ ಉಪೇಂದ್ರ ಅವರ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ, 'ಭರ್ಜರಿ', 'ಪುಷ್ಪಕ ವಿಮಾನ' ಚಿತ್ರಗಳನ್ನ ಮುಗಿಸಿರುವ ರಚಿತಾ ರಾಮ್, ರಿಯಲ್ ಸ್ಟಾರ್ ಅವರ ಮುಂದಿನ ಚಿತ್ರದಲ್ಲಿ ಡುಯೆಟ್ ಹಾಡಲಿದ್ದಾರೆ.

ಕಾಮನ್ ಮ್ಯಾನ್ ಉಪ್ಪಿ

ಪ್ರತಿಯೊಂದು ಚಿತ್ರದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ಉಪೇಂದ್ರ, ಮಾದೇಶ್ ಅವರ ಚಿತ್ರದಲ್ಲಿ ಕಾಮನ್ ಮ್ಯಾನ್ ಆಗಿ ಮಿಂಚಲಿದ್ದಾರಂತೆ. ಉಪೇಂದ್ರ ಅವರನ್ನೇ ಗಮನದಲ್ಲಿಟ್ಟುಕೊಂಡು, ಚಿತ್ರಕಥೆ ಮಾಡಿದ್ದು, ಉಪೇಂದ್ರ ಅವರ ಶೈಲಿಯ ಡೈಲಾಗ್ ಗಳು, ಎಂಟರ್ ಟೈನ್ಮೆಂಟ್ ಈ ಚಿತ್ರದಲ್ಲಿ ಇರಲಿದೆಯಂತೆ.[ಉಪ್ಪಿಯ 'ಕನ್ನೇಶ್ವರ'ದಲ್ಲಿ ಕೋಮಲ್ ಕುಮಾರ !]

ಸಾಧುಕೋಕಿಲಾ ಸಂಗೀತ

ಚಿತ್ರಕ್ಕೆ ಸಾಧುಕೋಕಿಲಾ ಅವರು ಸಂಗೀತ ಸಂಯೋಜನೆ ಮಾಡಲಿದ್ದು, ಚಿತ್ರದಲ್ಲೂ ನಟಿಸಲಿದ್ದಾರೆ. ಎಂ ಎಸ್ ರಮೇಶ್ ಸಂಭಾಷಣೆ ಬರೆಯಲಿದ್ದಾರೆ. ಇನ್ನು ಖಳನಟ ರವಿಶಂಕರ್, ರಂಗಾಯಣ ರಘು ಅವರು ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ಮಾಣ ಯಾರು?

ಇನ್ನೂ ಹೆಸರಿಡದ ಈ ಚಿತ್ರವನ್ನ, ನಿರ್ಮಾಪಕಿ ಹಾಗೂ ಕಂಠೀರವ ಸ್ಟುಡಿಯೋದ ಅಧ್ಯಕ್ಷರಾಗಿರುವ ವಿಜಯಲಕ್ಷ್ಮಿ ಅರಸ್ ಅವರು ನಿರ್ಮಾಣ ಮಾಡುತ್ತಿದ್ದಾರೆ.

ಮುಹೂರ್ತ ಯಾವಾಗ

ಕೆ.ಮಾದೇಶ್ ಹಾಗೂ ಉಪೇಂದ್ರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಈ ಚಿತ್ರ, ನಾಳೆ (ಡಿಸೆಂಬರ್ 12) ಸೆಟ್ಟೇರಲಿದೆ. ಬೆಳಿಗ್ಗೆ 9.45ಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರೆವೇರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ.

English summary
Director K Madesh teams up with Upendra In New Movie. and for the first time kannada Actress Rachita Ram paired with Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada