»   » ರಾಜಕೀಯಕ್ಕಾಗಿ ದೊಡ್ಡ ದೊಡ್ಡ ಚಿತ್ರಗಳನ್ನ ಕೈಬಿಟ್ಟ ರಿಯಲ್ ಸ್ಟಾರ್

ರಾಜಕೀಯಕ್ಕಾಗಿ ದೊಡ್ಡ ದೊಡ್ಡ ಚಿತ್ರಗಳನ್ನ ಕೈಬಿಟ್ಟ ರಿಯಲ್ ಸ್ಟಾರ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ ವಿಷ್ಯ ರಾಜ್ಯಾದ್ಯಂತ ದೊಡ್ಡ ಚರ್ಚೆಯಾಗುತ್ತಿದೆ. ಆದ್ರೆ, ಈ ರಾಜಕೀಯದ ಬೆಳವಣಿಗೆಯ ಮಧ್ಯೆ ಉಪೇಂದ್ರ ಅವರು ದೊಡ್ಡ ದೊಡ್ಡ ಸಿನಿಮಾಗಳನ್ನ ಕೈಬಿಟ್ಟಿದ್ದಾರೆ ಎನ್ನಲಾಗಿದೆ.

ರಾಜಕೀಯಕ್ಕೆ ತೊಡಗಿಕೊಳ್ಳಲು ಸಿದ್ದವಾಗಿರುವ ಉಪ್ಪಿ ಸದ್ಯಕ್ಕೆ ಯಾವ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿಲ್ಲವಂತೆ. ಮಾತುಕತೆ ಹಂತದಲ್ಲಿದ್ದ ಸಿನಿಮಾಗಳಿಂದ ಕೂಡ ಉಪ್ಪಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಹಾಗಿದ್ರೆ, ಉಪ್ಪಿ ಕೈಬಿಟ್ಟ ದೊಡ್ಡ ಸಿನಿಮಾಗಳು ಯಾವುದು? ಎಂದು ತಿಳಿದುಕೊಳ್ಳಲು ಮುಂದೆ ಓದಿ....

ಮೆಗಾಸ್ಟಾರ್ ಸಿನಿಮಾ ಬಿಡಲು ರಾಜಕೀಯ ಕಾರಣ

ಎಲ್ಲರ ಗೊತ್ತಿರುವಾಗೆ, ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಚಿತ್ರದಲ್ಲಿ ಉಪೇಂದ್ರ ಅವರು ಅಭಿನಯಿಸುಬೇಕಿತ್ತು. ಆದ್ರೆ, ರಾಜಕೀಯಕ್ಕೆ ಪ್ರವೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಸಿನಿಮಾವನ್ನ ಕೈಬಿಟ್ಟಿದ್ದಾರೆ ಎನ್ನಲಾಗಿದೆ.

'ಕುರುಕ್ಷೇತ್ರ'ದಲ್ಲೂ ಅಭಿನಯಿಸಬೇಕಿತ್ತು?

ಮುನಿರತ್ನ ನಿರ್ಮಾಣ ಮಾಡುತ್ತಿರುವ 'ಕುರುಕ್ಷೇತ್ರ' ಚಿತ್ರದಲ್ಲಿ ಉಪೇಂದ್ರ ಅಭಿನಯಿಸಬೇಕಿತ್ತು. ಇದನ್ನ ಮುನಿರತ್ನ ಅವರು ಕೂಡ ಅವರು ಹೇಳಿಕೊಂಡಿದ್ದರು. ಆದ್ರೆ, ಅಂತಿಮ ಕ್ಷಣದಲ್ಲಿ ಉಪೇಂದ್ರ 'ಕುರುಕ್ಷೇತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಇದಕ್ಕೂ ರಾಜಕೀಯವೇ ಕಾರಣವೆನ್ನಲಾಗಿದೆ.

ಯಾವ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತಿಲ್ಲ

ಕೇವಲ ಈ ಸಿನಿಮಾಗಳ ಮಾತ್ರವಲ್ಲ, ಸದ್ಯಕ್ಕೆ ಉಪೇಂದ್ರ ಅವರಿಗೆ ಅರಸಿ ಬರುತ್ತಿರುವ ಚಿತ್ರಗಳನ್ನ ಕೂಡ ರಿಯಲ್ ಸ್ಟಾರ್ ಒಪ್ಪಿಕೊಳ್ಳುತ್ತಿಲ್ಲವಂತೆ.

ಉಪ್ಪಿ ಡೈರೆಕ್ಷನ್ ಸಿನಿಮಾ ಕಥೆ ಏನು?

ಈ ಮಧ್ಯೆ ಉಪೇಂದ್ರ ಅವರು ತಾವೇ ನಿರ್ದೇಶನ ಮಾಡಲಿರುವ ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ. ಆದ್ರೆ, ರಾಜಕೀಯಕ್ಕೆ ಉಪ್ಪಿ ಪ್ರವೇಶ ಮಾಡುತ್ತಿರುವುದರಿಂದ ಈ ಸಿನಿಮಾ ಸದ್ಯಕ್ಕೆ ಶುರುವಾಗುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ.

ಉಪೇಂದ್ರ ಮುಗಿಸಿರುವ ಸಿನಿಮಾಗಳು

ಸದ್ಯಕ್ಕೆ ಉಪೇಂದ್ರ ಅವರು ಎರಡು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. 'ಉಪೇಂದ್ರ ಮತ್ತೆ ಹುಟ್ಟಿ ಬಾ' ಚಿತ್ರದ ಚಿತ್ರೀಕರಣವನ್ನ ಮುಗಿಸಿದ್ದಾರೆ. ಕೆ.ಮಾದೇಶ್ ನಿರ್ದೇಶನದ 'ಉಪ್ಪಿ-ರುಪ್ಪಿ' ಚಿತ್ರವನ್ನ ಮಾಡುತ್ತಿದ್ದಾರೆ. ಇದರ ಜೊತೆ ಇತ್ತೀಚೆಗಷ್ಟೇ 'ಹೋಮ್ ಮಿನಿಸ್ಟರ್' ಸಿನಿಮಾವನ್ನ ಆರಂಭಿಸಿದ್ದರು. ಈಗ ಈ ಚಿತ್ರಗಳು ಚಿತ್ರೀಕರಣ ಮಾಡಬೇಕಾಗುತ್ತೆ.

English summary
Kannada Actor Upendra Rejects Telugu Movie Becuse of His Political development

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada