»   » 'ಉಪೇಂದ್ರ' ಮತ್ತೆ ಹುಟ್ಟಿ ಬರ್ಬೇಕಂತೆ.! ಇದು 'ಪ್ರೇಮ' ಬಯಕೆ.!

'ಉಪೇಂದ್ರ' ಮತ್ತೆ ಹುಟ್ಟಿ ಬರ್ಬೇಕಂತೆ.! ಇದು 'ಪ್ರೇಮ' ಬಯಕೆ.!

Posted By:
Subscribe to Filmibeat Kannada

ಏನಿದು ವಿಚಿತ್ರ ಶೀರ್ಷಿಕೆ ಅಂತ ಕಣ್ಣು ಮಿಟುಕಿಸ್ತಾಯಿದ್ದೀರಾ.? ಅಸಲಿ ಮ್ಯಾಟರ್ ಗೆ ಬರುವ ಮುನ್ನ ಒಂದು ಸಣ್ಣ ಫ್ಲ್ಯಾಶ್ ಬ್ಯಾಕ್ ಗೆ ಹೋಗ್ಬರೋಣ ಬನ್ನಿ....

ಕಳೆದ ವಾರವಷ್ಟೇ ರಿಯಲ್ ಸ್ಟಾರ್ ಉಪೇಂದ್ರ ರವರ ಹೊಸ ಸಿನಿಮಾದ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಎಕ್ಸ್ ಕ್ಲೂಸಿವ್ ಮಾಹಿತಿಯನ್ನ ನಿಮ್ಮ ಮುಂದೆ ಇಟ್ಟಿದ್ವಿ.

upendra-s-next-movie-titled-as-upendra-matte-hutti-baa-inti-prema

ಉಪ್ಪಿಗಾಗಿ 'H2O' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಎನ್.ಲೋಕನಾಥ್, ಇದೀಗ ಅದೇ ಉಪ್ಪಿ ಜೊತೆ ಒಂದು ಸಿನಿಮಾ ಮಾಡಲು ಮುಂದಾಗಿದ್ದಾರೆ ಅಂತ ನಾವೇ ಮೊದಲು ವರದಿ ಮಾಡಿದ್ದು. [ಉಪೇಂದ್ರಗೆ 'H2O' ಕುಡಿಸಿದವರು ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟರೆ.?]

ಈ ಸುದ್ದಿ ನೋಡಿ, ಉಪ್ಪಿ ಫ್ಯಾನ್ಸ್ ಗೆ 'ಉಪ್ಪಿಟ್ಟು' ತಿಂದಷ್ಟೇ ಖುಷಿಯಾಗಿತ್ತು. ಈಗ ಇದೇ ಚಿತ್ರದ ಶೀರ್ಷಿಕೆ ಬಹಿರಂಗವಾಗಿದೆ. ಉಪೇಂದ್ರ ಅಭಿನಯದ 'H2O' ಖ್ಯಾತಿಯ ಎನ್.ಲೋಕನಾಥ್ ನಿರ್ದೇಶನದ ಚಿತ್ರಕ್ಕೆ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಅಂತ ಟೈಟಲ್ ಫಿಕ್ಸ್ ಆಗಿದೆ.

ಚಿತ್ರದ ಶೀರ್ಷಿಕೆ ನೋಡಿ, ನಿಮ್ಮ ತಲೆಯಲ್ಲಿ ಹೆಬ್ಬಾವು ಹರಿದ ಹಾಗೆ ಆದ್ರೆ ನಾವು ಜವಾಬ್ದಾರಿ ಅಲ್ಲ. ಎಷ್ಟೇ ಆಗ್ಲಿ, ಇದು ಉಪ್ಪಿ ಸಿನಿಮಾ ಅನ್ನೋದು ನೆನಪಿರಲಿ. ['ಕಲ್ಪನಾ-2' ಶೂಟಿಂಗ್ ಸೆಟ್ ನಲ್ಲಿ ನಡೆದ್ದೇನು? ಉಪೇಂದ್ರಗೆ ಏನಾಯ್ತು?]

ಅಂದ್ಹಾಗೆ, ಉಪ್ಪಿ ಸದ್ಯ 'ಮುಕುಂದ ಮುರಾರಿ' ಹಾಗೂ 'ಕಲ್ಪನಾ-2' ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. ಅದು ಮುಗಿದ ತಕ್ಷಣ, 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ....

English summary
N.Lokanath of 'H2O' fame is all set to direct Real Star Upendra's next movie which is titled as 'Upendra matte hutti baa, Inti Prema'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada