For Quick Alerts
  ALLOW NOTIFICATIONS  
  For Daily Alerts

  ಭರ್ಜರಿ ಸಂಭ್ರಮಾಚರಣೆಗೆ ತಯಾರಿ ನಡೆಸುತ್ತಿದ್ದಾರೆ ಶಿವಣ್ಣ, ಉಪ್ಪಿ ಅಭಿಮಾನಿಗಳು

  |

  ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿದ ಚಿತ್ರಗಳ ಸಾಲಿನಲ್ಲಿ ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿದ್ದ 'ಓಂ' ಸೇರುತ್ತದೆ. ಚಿತ್ರರಂಗದಲ್ಲಿ ಹೊಸ ಟ್ರೆಂಡ ಸೃಷ್ಟಿಸಿದ ಚಿತ್ರವಿದು. ಈ ಸಿನಿಮಾ ಬಿಡುಗಡೆಯಾಗಿ 2020ರ ಮೇ 19ಕ್ಕೆ ಸರಿಯಾಗಿ 25 ವರ್ಷಗಳು ಭರ್ತಿಯಾಗಲಿವೆ.

  1995ರ ಮೇ 19ರಂದು ಈ ಚಿತ್ರ ರಾಜ್ಯದಾದ್ಯಂತ ಭೇಟಿಯಾಗಿತ್ತು. ರೌಡಿಸಂ ಕಥನವನ್ನು ಕನ್ನಡಕ್ಕೆ ಮೊದಲ ಬಾರಿಗೆ ಪರಿಚಯಿಸಿದ ಚಿತ್ರ 'ಓಂ'. ಈ ಚಿತ್ರ ಭರ್ಜರಿ ಹಿಟ್ ಆಗಿತ್ತು. ಅಷ್ಟೇ ಅಲ್ಲ, ಇತ್ತೀಚಿನ ವರ್ಷಗಳವರೆಗೂ ಆಗಾಗ್ಗೆ ಚಿತ್ರಮಂದಿರದಲ್ಲಿ ಬಿಡುಗಡೆಯಾದಾಗಲೂ ಅಭಿಮಾನಿಗಳು ಮತ್ತೆ ಅದೇ ಉತ್ಸಾಹದಿಂದ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ವೀಕ್ಷಿಸುತ್ತಿದ್ದರು. ಈ ಚಿತ್ರ ಮಾಡಿದ ಮೋಡಿ ಅಂತಹದ್ದು. 'ಓಂ' ಬಿಡುಗಡೆಯಾಗಿ 25 ವರ್ಷದ ತುಂಬುತ್ತಿರುವ ಸಂಭ್ರಮದಲ್ಲಿ ಬೆಳ್ಳಿ ಹಬ್ಬ ಆಚರಣೆಗೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

  ಸಾರ್ವಕಾಲಿಕ ದಾಖಲೆಯ 'ಓಂ' ಸಿನಿಮಾ ಯೂಟ್ಯೂಬ್ ಗೆ ಬಂತು!ಸಾರ್ವಕಾಲಿಕ ದಾಖಲೆಯ 'ಓಂ' ಸಿನಿಮಾ ಯೂಟ್ಯೂಬ್ ಗೆ ಬಂತು!

  ಶಿವಣ್ಣ, ಉಪ್ಪಿ ಅಭಿಮಾನಿಗಳ ಖುಷಿ

  ಶಿವಣ್ಣ, ಉಪ್ಪಿ ಅಭಿಮಾನಿಗಳ ಖುಷಿ

  ಲಾಕ್ ಡೌನ್ ಕಾರಣದಿಂದಾಗಿ ಸಾರ್ವಜನಿಕವಾಗಿ ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ. ಹೀಗಾಗಿ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿಯೇ ವಿಶಿಷ್ಟವಾಗಿ ಈ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.

  ಒಂದು ದಿನ ಸಂಭ್ರಮಾಚರಣೆ

  ಒಂದು ದಿನ ಸಂಭ್ರಮಾಚರಣೆ

  ಮೇ 18ರ ರಾತ್ರಿ ಏಳು ಗಂಟೆಯಿಂದಲೇ ಟ್ವಿಟ್ಟರ್‌ನಲ್ಲಿ ಸಂಭ್ರಮಾಚರಣೆ ಶುರುವಾಗಲಿದ್ದು, ಮೇ 19ರ ರಾತ್ರಿ ಏಳು ಗಂಟೆಯವರೆಗೂ ನಡೆಯಲಿದೆ. ಈ ಸಮಯದಲ್ಲಿ 'ಓಂ' ಚಿತ್ರ ಟ್ವಿಟ್ಟರ್‌ನಲ್ಲಿ ದಿನಪೂರ್ತಿ ಟ್ರೆಂಡ್ ಆಗಲಿದೆ. ಈ ಮೂಲಕ ದೇಶದ ಗಮನವನ್ನು ಕನ್ನಡ ಚಿತ್ರರಂಗದತ್ತ ಸೆಳೆಯುವುದು ಅಭಿಮಾನಿಗಳ ಉದ್ದೇಶ,

  'ಓಂ' ಚಿತ್ರದ ಆಡಿಯೋ ಬಿಡುಗಡೆಯ ಈ ಫೋಟೋ ಹಿಂದಿನ ಕಥೆ ಕೇಳಿ..'ಓಂ' ಚಿತ್ರದ ಆಡಿಯೋ ಬಿಡುಗಡೆಯ ಈ ಫೋಟೋ ಹಿಂದಿನ ಕಥೆ ಕೇಳಿ..

  ಖ್ಯಾತನಾಮರಿಂದ ಸಿಡಿಪಿ ಬಿಡುಗಡೆ

  ಖ್ಯಾತನಾಮರಿಂದ ಸಿಡಿಪಿ ಬಿಡುಗಡೆ

  ಇದೇ ಸಂದರ್ಭದಲ್ಲಿ 'ಓಂ' ಚಿತ್ರದ ಕಾಮನ್ ಡಿಸ್ಪ್ಲೇ ಪಿಕ್ಚರ್‌ಅನ್ನು ಬಿಡುಗಡೆ ಮಾಡಲಾಗುತ್ತದೆ. ರಮೇಶ್ ಅರವಿಂದ್, ರಿಷಬ್ ಶೆಟ್ಟಿ, ನಿರ್ದೇಶಕ ಸುನಿ, ನಟಿ ಶಾನ್ವಿ ಶ್ರೀವಾಸ್ತವ್, ಪವನ್ ಒಡೆಯರ್, ರಘು ದೀಕ್ಷಿತ್, ಸಂತೋಷ್ ಆನಂದ್ ರಾಮ್, ಅಜನೀಶ್ ಲೋಕನಾಥ್ ಮುಂತಾದವರು ಸಿಡಿಪಿ ಬಿಡುಗಡೆ ಮಾಡಲಿದ್ದಾರೆ.

  ಸೆಲೆಬ್ರಿಟಿ ಲಾಂಚ್ ಪೋಸ್ಟರ್

  ಸೆಲೆಬ್ರಿಟಿ ಲಾಂಚ್ ಪೋಸ್ಟರ್

  ಈಗಾಗಲೇ ಪ್ರತಿ ದಿನ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸೆಲೆಬ್ರಿಟಿ ಲಾಂಚ್ ಪೋಸ್ಟರ್‌ಅನ್ನು ಫ್ಯಾನ್ಸ್ ಪೇಜ್‌ಗಳು ಬಿಡುಗಡೆ ಮಾಡುತ್ತಿವೆ. ಈ ಮೂಲಕ ಟ್ವಿಟ್ಟರ್‌ನಲ್ಲಿ 'ಓಂ' ಚಿತ್ರವನ್ನು ದೊಡ್ಡಮಟ್ಟದಲ್ಲಿ ಟ್ರೆಂಡ್ ಮಾಡಲಾಗುತ್ತಿದೆ.

  English summary
  Upendra directed, Shivaraj Kumar starrer Om movie completing 25 years on this may 19. Fans want to trend it on twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X