Don't Miss!
- Technology
ಏರ್ಟೆಲ್ ಜೊತೆಗೆ ಕೈ ಮಿಲಾಯಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
- Automobiles
ರೀ ಎಂಟ್ರಿ ಕೊಡಲಿವೆಯೇ ಮಿಂಚಿ ಮರೆಯಾದ ಲೆಜೆಂಡರಿ ಕಾರುಗಳು?: ಹೊಸ ವಿನ್ಯಾಸ, ಎಂಜಿನ್ ಬದಲಾವಣೆ!
- News
ರೈಲಿನಲ್ಲಿ ಹೋಗಿ ನಂದಿ ಬೆಟ್ಟ, ಆದಿಯೋಗಿ ಪ್ರತಿಮೆ, ಕೆಂಪೇಗೌಡ ಪ್ರತಿಮೆ ನೋಡಿ; ರೈಲ್ವೆಯಿಂದ ಪ್ರವಾಸ ಪ್ಯಾಕೇಜ್
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತದತ್ತ ಪ್ರಯಾಣ ಆರಂಭಿಸಿದ ಆಸಿಸ್ ಆಟಗಾರರು
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Finance
Budget 2023: ರಾಷ್ಟ್ರಪತಿ ಭಾಷಣದೊಂದಿಗೆ ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾನಿಟರ್ ಪ್ಲೀಸ್.. ಪ್ರೋಬ್.. 360.. ಆಕ್ಷನ್: ಉಪ್ಪಿ 'ಯುಐ' ರಿಲೀಸ್ ಯಾವಾಗ?
ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ಹೇಳಿದ್ರೆ, ಆ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡೋದು ಗ್ಯಾರಂಟಿ. ಈಗ ಬಹಳ ದಿನಗಳ ಬಳಿಕ ಉಪ್ಪಿ ಮತ್ತೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಸಿನಿಪ್ರಿಯರು ಈ ಸಿನಿಮಾವನ್ನು ನೋಡುವುದಕ್ಕೆ ಎದುರು ನೋಡುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ಉಪ್ಪಿ ಕೂಡ ಅಖಾಡಕ್ಕೆ ಇಳಿಸಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು ಬಳಿಸಿ 'ಯುಐ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಅಮರೇಶ್ವರನ
ಮಗ
ಅರ್ಕೇಶ್ವರನ
'ಕಬ್ಜ'
ಕಥೆ..
ಬ್ರಿಟೀಷರ
ವಿರುದ್ಧ
ತಂದೆ
ಹೋರಾಟ:
ಭೂಗತ
ಲೋಕದಲ್ಲಿ
ಮಗನ
ಹಾರಾಟ!
ಹೊಸ ವರ್ಷದ ಹೊಸ್ತಿಲಲ್ಲಿ 'ಯುಐ' ಸಿನಿಪ್ರಿಯರಿಗಾಗಿ ವಿಡಿಯೋ ಒಂದನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಅದರಂತೆ ಇಂದು (ಜನವರಿ 02)ರಂದು 'ಯುಐ' ತಂಡ ಬಿಟಿಎಸ್ (BTS)ವಿಡಿಯೋವನ್ನು ರಿಲೀಸ್ ಮಾಡಿದೆ. ಮೇಕಿಂಗ್ ವಿಡಿಯೋ ಹೊಸ ಭರವಸೆಯನ್ನು ಮೂಡಿಸಿದೆ.

ಕುತೂಹಲ ಮೂಡಿಸಿದ ಉಪ್ಪಿ ಆಕ್ಷನ್ ಕಟ್
ಇಲ್ಲಿವರೆಗೂ ಉಪೇಂದ್ರ ಆಕ್ಷನ್ ಕಟ್ ಹೇಳೋ ಸಿನಿಮಾಗಳ ಕಥೆ ವಿಭಿನ್ನವಾಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತೆ. ರೆಗ್ಯೂಲರ್ ಮರ ಸುತ್ತೋ ಕಥೆಗಳ ಕಡೆಗೆ ಉಪೇಂದ್ರ ತಿರುಗಿ ಕೂಡ ನೋಡುವುದಿಲ್ಲ. ಈ ಬಾರಿ ಅಂತದ್ದೇ ವಿಶಿಷ್ಟ ಕಥೆಯೊಂದಿಗೆ ಉಪೇಂದ್ರ ಬರುತ್ತಾರೆ ಅನ್ನೋದು ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತು. ಆದರೆ ಯುಐ ಎಲ್ಲರ ಕಣ್ಣು ಅರಳಿಸಿರೋದು ತಂತ್ರಜ್ಞಾನದ ಮೇಲೆ. ಉಪ್ಪಿ ಹೊಸ ಹೊಸ ತಂತ್ರಜ್ಞಾನದ ಮೂಲಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗ ತಾನೇ ರಿಲೀಸ್ ಮಾಡಿರೋ ವಿಡಿಯೋದಲ್ಲಿ ಅದು ಎದ್ದು ಕಾಣುತ್ತಿದೆ.

ಬಿಟಿಎಸ್ (BTS)ವಿಡಿಯೋದಲ್ಲಿ ಉಪ್ಪಿ ಹೇಳಿದ್ದೇನು?
ಹೊಸ ವರ್ಷ 2023 ಸಂಭ್ರಮದಲ್ಲಿ 'ಯುಐ' ಸಿನಿಮಾ ತೆರೆ ಹಿಂದಿನ ವಿಡಿಯೋ ರಿಲೀಸ್ ಆಗಿದೆ. ಅದರಲ್ಲಿ ಉಪ್ಪಿ ಬಳಸಿರೋ ತಂತ್ರಜ್ಞಾನದ ಮಾಹಿತಿಯನ್ನು ನೀಡಲಾಗಿದೆ. "ಮಾನಿಟರ್ ಪ್ಲೀಸ್.. ಜಿಎಫ್ಎಂ.. ಪ್ರೋಬ್.. 360.. ಲೈಟ್ಸ್.. ಸ್ಮೋಕ್.. ರೋಲ್ ಕ್ಯಾಮರಾ, ಸ್ಟಡಿ ಕ್ಯಾಮ್ ಮೂವ್, ಆಕ್ಷನ್.." ಅಂತ ಉಪೇಂದ್ರ ಹೇಳಿರುವ ಮೇಕಿಂಗ್ ಝಲಕ್ ಅನ್ನು ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಉಪ್ಪಿ
'UI'
ಚಿತ್ರಕ್ಕೆ
ಕೊಡಗಿನ
ಚೆಲುವೆ
ನಾಯಕಿಯಾಗಿ
ಆಯ್ಕೆ!

ಶೇ.60ರಷ್ಟು ಶೂಟಿಂಗ್ ಕಂಪ್ಲೀಟ್
ಉಪೇಂದ್ರ 'ಯುಐ' ಸಿನಿಮಾಗೆ ಕಳೆದ ವರ್ಷದಿಂದಲೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. "ಸದ್ಯ ಯುಐ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಶೇ.60ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಇನ್ನು ಶೇ.40ರಷ್ಟು ಶೂಟಿಂಗ್ ಅನ್ನು ಆದಷ್ಟು ಬೇಗ ಮುಗಿಸಿ, ಈ ವರ್ಷದ ಮೊದಲಾರ್ಧದಲ್ಲಿಯೇ ಬಿಡುಗಡೆ ಮಾಡುವ ಆಲೋಚನೆ ಇದೆ." ಎಂದು ಯುಐ ನಿರ್ಮಾಪಕ ಕೆ ಪಿ ಶ್ರೀಕಾಂತ್ ಫಿಲ್ಮಿಬೀಟ್‌ಗೆ ತಿಳಿಸಿದ್ದಾರೆ.

ಅಜನೀಶ್ ಲೋಕನಾಥ್ ಸೇರ್ಪಡೆ
'ಯುಐ' ತಂಡಕ್ಕೆ 'ಕಾಂತಾರ' ಖ್ಯಾತಿಯ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಸೇರ್ಪಡೆಯಾಗಿದ್ದಾರೆ. ಉಪ್ಪಿ ಸಿನಿಮಾಗೆ ಅಜನೀಶ್ ಮ್ಯೂಸಿಕ್ ಕಂಪೋಸ್ ಮಾಡುತ್ತಿರೋದಾಗಿ ನಿರ್ಮಾಪಕ ಕೆ ಪಿ ಶ್ರೀಕಾಂತ್ ತಿಳಿಸಿದ್ದಾರೆ. ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟಡೆ ಸಿನಿಮಾಗಳಲ್ಲಿ 'ಯುಐ' ಕೂಡ ಇದೆ. ಈ ಮಧ್ಯೆ ಉಪೇಂದ್ರ ಅಭಿನಯದ ಮತ್ತೊಂದು ಪ್ಯಾನ ಇಂಡಿಯಾ ಸಿನಿಮಾ 'ಕಬ್ಜ' ಕೂಡ ಸೇರಿದೆ. ಹೀಗಾಗಿ 'ಯುಐ' ಮೊದಲು ರಿಲೀಸ್ ಆಗುತ್ತಾ 'ಕಬ್ಜ' ಮೊದಲು ರಿಲೀಸ್ ಆಗುತ್ತಾ? ಅನ್ನೋ ಕುತೂಹಲವಂತೂ ಇದ್ದೇ ಇದೆ.